Asianet Suvarna News Asianet Suvarna News

OnePlus Smart TV: ಭಾರತದಲ್ಲಿ ಒನ್‌ಪ್ಲಸ್‌ನಿಂದ 32, 43 ಇಂಚ್ ಸ್ಮಾರ್ಟ್‌ಟಿವಿ ಲಾಂಚ್ ಸಾಧ್ಯತೆ!

*ಸ್ಮಾರ್ಟ್‌ಫೋನ್‌ ತಯಾರಿಕಾ ಒನ್‌ಪ್ಲಸ್ ಎರಡು ಹೊಸ ಟಿವಿ ಬಿಡುಗಡೆ ಮಾಡುವ ಸಾಧ್ಯತೆ
*ಈ ಎರಡೂ ಟಿವಿಗಳು 32 ಮತ್ತು 43 ಇಂಚಿನ ಟಿವಿಗಳಾಗಿರಬಹುದು ಎನ್ನಲಾಗುತ್ತಿದೆ.
*ಜನವರಿಯಲ್ಲಿ ಒನ್‌ಪ್ಲಸ್ ಕಂಪನಿಯು ಹೊಸ ಸ್ಮಾರ್ಟ್‌ಫೋನ್‌ ಕೂಡ ಲಾಂಚ್ ಮಾಡಲಿದೆ.

OnePlus may launch 32 Inch and 43 Inch smart tv into Indian market
Author
Bengaluru, First Published Dec 27, 2021, 4:04 PM IST

Tech Desk: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಬೃಹತ್ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿರುವ ಒನ್‌ಪ್ಲಸ್ (OnePlus), ಸ್ಮಾರ್ಟ್‌ ಟಿವಿಗಳ ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಕೆಲವು ಮೂಲಗಳ ಪ್ರಕಾರ, ಒನ್‌ಪ್ಲಸ್, ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ ಟಿವಿ (Smart TV)ಯನ್ನು ಲಾಂಚ್ ಮಾಡುವ ಉಮೇದಿನಲ್ಲಿದೆ. ಕೆಲವು ವರದಿಗಳ ಪ್ರಕಾರ, ಒನ್ ಪ್ಲಸ್ ಕಂಪನಿಯು 32 ಇಂಚ್ ಮ್ತತು 43 ಇಂಚ್ ಮಾಡೆಲ್‌ಗಳ ಟಿವಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ತನ್ನ ಸ್ಮಾರ್ಟ್‌ಫೋನ್ ಟಿವಿ ಸರಣಿಗೆ ಹೊಸ ಉತ್ಪನ್ನಗಳನ್ನು ಸೇರಿಸಲಿದೆ ಎಂದು ಹೇಳಬಹುದು.

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಟಿವಿಗಳ ಮೂಲಕ ಸಾಕಷ್ಟು ಗ್ರಾಹಕರನ್ನು ಸೃಷ್ಟಿಸಿಕೊಂಡಿದೆ. ಹಾಗಾಗಿ, ಗ್ರಾಹಕರಲ್ಲಿ ಒನ್ ಪ್ಲಸ್ ಟಿವಿಗಳ ಬಗ್ಗೆ ಯಾವಾಗಲೂ ಕುತೂಹಲ ಇದ್ದೇ ಇರುತ್ತದೆ. ಹಾಗಾಗಿ, ಹೊಸ ಟಿವಿಗಳ ಬಗ್ಗೆ ಮತ್ತೆ ಕುತೂಹಲ ಹೆಚ್ಚಾಗಿದೆ ಎಂದು ಹೇಳಬಹುದು.ಭಾರತೀಯ ಮಾರುಕಟ್ಟೆ (Indian Market)ಗೆ ಒನ್ ಪ್ಲಸ್ ಕಂಪನಿಯು ಬಿಡುಗಡೆ ಮಾಡಲಿರುವ 32 ಮತ್ತು 43 ಇಂಚಿನ ಟಿವಿಗಳ ಬಗ್ಗೆ ಹೆಚ್ಚಿನ ಮಾಹಿತಿಯೇನೂ ಸದ್ಯಕ್ಕೆ ಗೊತ್ತಾಗಿಲ್ಲ. ಜೊತೆಗೆ, ಈ ಟಿವಿಗಳ ಯಾವಾಗ ಬಿಡುಗಡೆಯಾಗಲಿವೆ ಎಂಬ ಬಗ್ಗೆಯೂ ಖಚಿತವಾದ ಮಾಹಿತಿಗಳಲ್ಲಿ. ಆದರೆ, ಕೆಲವು ಟಿಪ್ಸ್‌ಟರ್ ಗಳ ಪ್ರಕಾರ, ಒನ್ ಪ್ಲಸ್ ಭಾರತೀಯ ಮಾರುಕಟ್ಟೆಗೆ ಹೊಸ ಟಿವಿಗಳನ್ನು ಲಾಂಚ್ ಮಾಡಲಿದೆ. 

Vivo S12, Vivo S12 Pro ಲಾಂಚ್: ಏನೆಲ್ಲ ವಿಶೇಷತೆಗಳಿವೆ, ಬೆಲೆ ಎಷ್ಟು? 

ಭಾರತೀಯ ಟಿವಿ ಮಾರುಕಟ್ಟೆಯಲ್ಲಿ ಈಗಾಗಲೇ ಒನ್‌ಪ್ಲಸ್ ಕಂಪನಿಯು ಮೂರು ಸ್ಮಾರ್ಟ್‌ಟಿವಿಗಳನ್ನು ಲಾಂಚ್ ಮಾಡಿದೆ. ಕೈಗೆಟುಕುವ ದರದ ವೈ ಸೀರೀಸ್, ಮಿಡ್ ರೇಂಜ್ ಟಿವಿಗಳಾಗಿರುವ ಯು ಸೀರೀಸ್ ಮತ್ತು ಹೈ ಎಂಡ್ ಟಿವಿ ಕ್ಯೂ ಸೀರೀಸ್‌ಗಳ ವಿಭಾಗದಲ್ಲಿ ಕಂಪನಿಯು ಟಿವಿಗಳನ್ನು ಈ ಹಿಂದೆಯೇ  ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಈ  ಟಿವಿಗಳ ಬಗ್ಗೆಯೂ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ, ಕಂಪನಿಯು ಮುಂಬರುವ ದಿನಗಳಲ್ಲಿ ಹೊಸ ಟಿವಿಗಳನ್ನು ಲಾಂಚ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತದೆ. 

ಶೀಘ್ರವೇ ಒನ್‌ಪ್ಲಸ್ ಪ್ರೋ ಲಾಂಚ್

ಒನ್‌ಪ್ಲಸ್ ಕಂಪನಿಯು,  ಒನ್‌ಪ್ಲಸ್ 10 ಪ್ರೋ (OnePlus 10 Pro) ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ. ಇದನ್ನು ಕಂಪನಿಯೇ  ಖಚಿತಪಿಡಸಿದೆ. ಒನ್‌ಪ್ಲಸ್ ಸಹ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಪೀಟ್ ಲಾವು (Pete Lau) ಅವರೇ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಹೊಸ ವರ್ಷದಲ್ಲಿ ಅಂದರೆ ಜನವರಿ ತಿಂಗಳಲ್ಲಿ ಒನ್‌ಪ್ಲಸ್ 10 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ.  ಈ ಫೋನ್ ವಿಶೇಷತೆಗಳ ಬಗ್ಗೆ ಈಗಾಗಲ ಸಾಕಷ್ಟು ಮಾಹಿತಿಗಳು ಸೋರಿಕೆಯಾಗಿದ್ದು, ಬಳಕೆದಾರರಲ್ಲಿ ಕುತೂಹಲ ಕೂಡ ಇದೆ. ಕೆಲವು ಮೂಲಗಳ ಪ್ರಕಾರ, ಒನ್‌ಪ್ಲಸ್ 10 (OnePlus 10) ಜತೆಗೇ ಒನ್‌ಪ್ಲಸ್ 10 ಪ್ರೋ (OnePlus 10 Pro) ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ ಎನ್ನಲಾಗುತ್ತಿದೆ.

ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿರುವ  ಒನ್‌ಪ್ಲಸ್ 10 ಮತ್ತು ಒನ್‌ಪ್ಲಸ್ 10 ಪ್ರೋ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಪನಿಯು ಸ್ನ್ಯಾಪ್‌ಡ್ರಾಗನ್ 8 ಜೆನ್ ಪ್ರೊಸೆಸರ್ ಬಳಸಲಿದೆ ಎನ್ನಲಾಗುತ್ತಿದೆ. ಈ ಎರಡೂ ಸ್ಮಾರ್ಟ್‌ಫೋನುಗಳ ಮಧ್ಯೆ ಸಣ್ಣಪುಟ್ಟ ವ್ಯತ್ಯಾಸಗಳು ಇರಲಿವೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದಲೂ ಒನ್‌ಪ್ಲಸ್ 10 ಸೀರೀಸ್ ಸ್ಮಾರ್ಟ್‌ಫೋನುಗಳ ಲಾಂಚ್ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು ಮತ್ತು ಇದೀಗ ಕಂಪನಿಯೇ ಬಿಡುಗಡೆಯನ್ನು ಖಚಿತಪಡಿಸಿದೆ. 

Honor Magic V: ಹೊಸ ವರ್ಷದಲ್ಲಿ ಹಾನರ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ! 

ಚೀನಾದ ಸಾಮಾಜಿಕ ಜಾತಣಾವಾಗಿರುವ Weiboನಲ್ಲಿ ಪೀಟ್ ಲಾವು ಅವರು ಜನವರಿಯಲ್ಲಿ ಒನ್ ಪ್ಲಸ್ 10 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಆಗುವ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಆದರೆ, ಜನವರಿ ತಿಂಗಳಲ್ಲಿ ಯಾವ ದಿನದಂದು ಈ ಫೋನ್ ಲಾಂಚ್ ಆಗಲಿದೆ ಎಂಬ ಮಾಹಿತಿಯನ್ನು ಮಾತ್ರ ಖಚಿತಪಡಿಸಿಲ್ಲ. ಇದರ ಹೊರತಾಗಿಯೂ ಜನವರಿ 5ರಂದು ಲಾಸ್ ವೆಗಾಸ್‌ (Las Vegas)ನಲ್ಲಿ ಲಾಂಚಿಂಗ್ ಇವೆಂಟ್ ನಡೆಯಲಿದೆ ಎನ್ನಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲೇ ಒನ್ ಪ್ಲಸ್ 10 ಸೀರೀಸ್ ಫೋನುಗಳ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಜನವರಿ ತಿಂಗಳಲ್ಲೇ ಈ ಫೋನುಗಳ ಬಿಡುಗೆಯಾದರೂ ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ 2022ರ ಮೊದಲ ತ್ರೈಮಾಸಿಕದಲ್ಲಿ ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 

Follow Us:
Download App:
  • android
  • ios