UPI ಪಾವತಿ ಫೀಚರ್, ನೋಕಿಯಾ 105,105 4ಜಿ ಫೋನ್ ಬಿಡುಗಡೆ, ಬೆಲೆ 1,299 ರೂ ಮಾತ್ರ!
ನೋಕಿಯಾ ಹೊಚ್ಚ ಹೊಸ 105 ಹಾಗೂ 106 ಫೋನ್ ಬಿಡುಗಡೆ ಮಾಡಿದೆ. ಕೇವಲ 1,299 ರೂಪಾಯಿ ಬೆಲೆಯ ಈ ಫೋನ್ ಮೂಲಕ ಯುಪಿಐ ಪಾವತಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ನೂತ 4ಜಿ ಫೋನ್ ಕುರಿತು ಮಾಹಿತಿ ಇಲ್ಲಿದೆ.
ನವದೆಹಲಿ(ಮೇ.20): ನೋಕಿಯಾ ಫೋನ್ ಇದೀಗ ಹೊಚ್ಚ ಹೊಸ 105 ಹಾಗೂ 106 ಫೋನ್ ಬಿಡುಗಡೆ ಮಾಡಿದೆ. ನೂತನ 4ಜಿ ಫೋನ್ ಹಲವು ವಿಶೇಷತೆ ಹೊಂದಿದೆ. ಈ ಫೋನ್‌ನಲ್ಲಿ ಯುಪಿಐ ಪಾವತಿ ಮಾಡಲು ಸಾಧ್ಯವಿದೆ. ಸ್ಮಾರ್ಟ್‌ಫೋನ್ ಇಲ್ಲದೆಯೂ ಡಿಜಿಟಲ್ ವಹಿವಾಟು ಮಾಡಲು ಅನೂಕೂಲ ಮಾಡಿಕೊಡುವ ಈ ಫೋನ್ ಆರಂಭಿಕ ಬೆಲೆ ಕೇವಲ 1,299 ರೂಪಾಯಿ ಮಾತ್ರ. ನೋಕಿಯಾ 105 ಫೋನ್ ಬೆಲೆ 1,2999 ರೂಪಾಯಿ ಹಾಗೂ 105 ಫೋನ್ ಬೆಲೆ 2,199 ರೂಪಾಯಿ. ಹಲವು ಆಕರ್ಷಕ ಬಣ್ಣದಲ್ಲಿ ನೂತನ ಫೋನ್ ಲಭ್ಯವಿದೆ.
UPI 123PAY – ಇದು ಫೀಚರ್ ಫೋನ್ ಬಳಕೆದಾರರು ಸುರಕ್ಷಿತ ವಿಧಾನದಲ್ಲಿ ಹಣ ಪಾವತಿಸುವುದಕ್ಕೆ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಸ್ಪೇಸ್ (UPI) ಬಳಸುವುದಕ್ಕೆ ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ಅಭಿವೃದ್ಧಿಪಡಿಸಿರುವ ವ್ಯವಸ್ಥೆ. UPI 123PAY ಮೂಲಕ, ಫೀಚರ್ ಫೋನ್ ಬಳಕೆದಾರರು ಸ್ವಯಂಚಾಲಿತ ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್ (IVR) ಸಂಖ್ಯೆಗೆ ಕರೆ ಮಾಡುವುದು, ಫೀಚರ್ ಫೋನ್‌ನಲ್ಲಿನ ಅಪ್ಲಿಕೇಷನ್ (ಆ್ಯಪ್) ಕಾರ್ಯನಿರ್ವಹಣೆ, ಮಿಸ್ಡ್ ಕಾಲ್-ಆಧಾರಿತ ಸೌಲಭ್ಯ ಬಳಕೆ ಮತ್ತು ಸಮೀಪದಲ್ಲಿನ ಧ್ವನಿ ಆಧಾರಿತ ಪಾವತಿಗಳಂತಹ ನಾಲ್ಕು ತಂತ್ರಜ್ಞಾನ ಪರ್ಯಾಯಗಳ ಆಧಾರದ ಮೇಲೆ ಹಲವಾರು ವಹಿವಾಟುಗಳನ್ನು ಸುಲಭವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ.
ಕೈಗೆಟುಕವ ಬೆಲೆಯಲ್ಲಿ ನೋಕಿಯಾ ಸಿ22 ಸ್ಮಾರ್ಟ್‌ಫೋನ್ ಬಿಡುಗಡೆ, ಬಂಪರ್ ಕೊಡುಗೆ!
ಬ್ಯಾಟರಿ ಬಾಳಿಕೆ, ಸರಳತೆ ಮತ್ತು ಕೈಗೆಟುಕುವ ಬೆಲೆ ಒಳಗೊಂಡಿರುವ ಈ ಎರಡೂ ಫೋನ್ ನೋಕಿಯಾ ಫೋನ್‌ನಿಂದ ನಿರೀಕ್ಷಿತ ಭರವಸೆ ಮತ್ತು ವಿಶ್ವಾಸಾರ್ಹತೆಯನ್ನು ನೀಡಲಿವೆ.ನೋಕಿಯಾ 105 – ನವೀಕರಿಸಿದ 1000 ಎಂಎಎಚ್ ಬ್ಯಾಟರಿ ಹೊಂದಿದೆ. ಇದು ಇದರ ಹಿಂದಿನದಕ್ಕಿಂತ ಶೇ 25ರಷ್ಟು ದೊಡ್ಡದಾಗಿದೆ. ಇದು ವಿಸ್ತೃತ ಸ್ಟ್ಯಾಂಡ್ಬೈ ಸಮಯ ಒದಗಿಸುತ್ತದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಡಚಣೆಯಿಲ್ಲದ ಸಂಭಾಷಣೆಗಳಿಗೆ ಅವಕಾಶ ಒದಗಿಸುತ್ತದೆ.
ನೋಕಿಯಾ 106 4ಜಿ ಕಠಿಣ ಸ್ವರೂಪದ ಬಾಳಿಕೆ ಪರೀಕ್ಷೆಗೆ ಒಳಪಟ್ಟಿದೆ, ಇದು ಕಠಿಣ ಪರಿಸರವನ್ನು ಸಹ ತಡೆದುಕೊಳ್ಳುತ್ತದೆ, ಯಾವುದೇ ಸಂದರ್ಭಗಳಲ್ಲಿಯೂ ಅಡಚಣೆ ಇಲ್ಲದ ಸಂಪರ್ಕವನ್ನು ಖಾತ್ರಿಪಡಿಸುತ್ತದೆ. ಕೀಮ್ಯಾಟ್ನಲ್ಲಿನ ಪ್ರತಿಯೊಂದು ಬಟನ್ ಮಧ್ಯೆ ಎಚ್ಚರಿಕೆಯಿಂದ ಪರಿಗಣಿಸಲಾದ ಅಂತರವು ಕತ್ತಲೆಯಲ್ಲಿಯೂ ಸಹ ಕರೆ ಮಾಡಲು ಹಾಗೂ ಸಂದೇಶ ಟೈಪ್ ಮಾಡುವುದನ್ನು ಸುಲಭಗೊಳಿಸಲಿದೆ. ಐಪಿಎಸ್ ಡಿಸ್ಪ್ಲೇ ತಂತ್ರಜ್ಞಾನವು, ನೀವು ಪಠ್ಯ ಸಂದೇಶ ಕಳುಹಿಸುತ್ತಿದ್ದರೆ, ಅಂತರ್ಜಾಲ ಜಾಲಾಡುತ್ತಿದ್ದರೆ ಅಥವಾ ಗೇಮಿಂಗ್ ಆಡುತ್ತಿದ್ದರೆ ಉತ್ತಮ ವೀಕ್ಷಣಾ ಕೋನಗಳು ಮತ್ತು ಬಣ್ಣಗಳ ಪುನರುತ್ಪಾದನೆಯೊಂದಿಗೆ ಸ್ಪಷ್ಟವಾದ ವೀಕ್ಷಣೆ ಸೌಲಭ್ಯ ಒದಗಿಸಲಿದೆ.
ದಕ್ಷತೆಯಿಂದ ರೂಪಿಸಿರುವ ನೋಕಿಯಾ 105 ನ ವಿನ್ಯಾಸ ಮತ್ತು ಕಾಂಪ್ಯಾಕ್ಟ್ ಆಕಾರವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕೈಯಲ್ಲಿ ಹಿಡಿದಿರುವಾಗ ಉತ್ತಮ ಅನುಭವ ನೀಡಲಿದೆ. ನೀವು ಪ್ರಯಾಣದಲ್ಲಿರುವಾಗ ನಿಮ್ಮ ಜೇಬಿನಲ್ಲಿ ಸುಲಭವಾಗಿ ಇರಿಸಿಕೊಳ್ಳಬಹುದು.
ನೋಕಿಯಾ 106 4ಜಿ ಹೆಚ್ಚಿದ 1450 ಎಂಎಎಚ್ ಬ್ಯಾಟರಿ ಹೊಂದಿದೆ ಮತ್ತು ಗಂಟೆಗಳ ಕಾಲ ಮಾತನಾಡುವ ಅವಧಿ ನೀಡುತ್ತದೆ. ಸ್ಟ್ಯಾಂಡ್ಬೈ ಮೋಡ್ನಲ್ಲಿ ವಾರಗಳವರೆಗೆ ಸಂಪರ್ಕದಲ್ಲಿರಲು ಬಳಕೆದಾರರು ನೋಕಿಯಾ 106 4ಜಿ ಅನ್ನು ಅವಲಂಬಿಸಬಹುದು. ಆಗಾಗ್ಗೆ ರೀಚಾರ್ಜ್ ಮಾಡುವ ಬಗ್ಗೆ ಚಿಂತಿಸದೆ ತಮ್ಮೆಲ್ಲ ಸಂವಹನ ಅಗತ್ಯಗಳನ್ನು ಪೂರೈಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
6,999 ರೂ ಬೆಲೆಗೆ ನೋಕಿಯಾ C12 ಪ್ರೋ ಫೋನ್ ಬಿಡುಗಡೆ, ಕೈಗೆಟುಕುವ ದರದ ಸ್ಮಾರ್ಟ್‌ಫೋನ್!
ನೋಕಿಯಾ 105 ಮತ್ತು 106 4ಜಿ ಬಳಕೆದಾರರಿಗೆ ಮನರಂಜನೆ ಮತ್ತು ಹೆಚ್ಚು ಪ್ರಯೋಜನಕಾರಿಯಾಗಿ ಇರಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಸೌಲಭ್ಯಗಳನ್ನೂ ಒಳಗೊಂಡಿದೆ. ಇದು ವೈರ್ಲೆಸ್ ಎಫ್ಎಂ ರೇಡಿಯೊ ಹೊಂದಿದ್ದು, ಹೆಡ್ಸೆಟ್ ಅಗತ್ಯವಿಲ್ಲದೇ ಬಳಕೆದಾರರು ತಮ್ಮ ನೆಚ್ಚಿನ ಕೇಂದ್ರಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ನೋಕಿಯಾ 106 4ಜಿ ಅಂತರ್ನಿರ್ಮಿತ ಎಂಪಿ3 ಪ್ಲೇಯರ್ ಸಹ ಹೊಂದಿದೆ, ಬಳಕೆದಾರರು ಎಲ್ಲಿಗೆ ಹೋದರೂ ತಾವು ಇಷ್ಟಪಟ್ಟಿರುವ ಸಂಗೀತದ ವಿವರಗಳನ್ನು ತೆಗೆದುಕೊಂಡು ಹೋಗಲು ಅನುವು ಮಾಡಿಕೊಡುತ್ತದೆ.
ಬಾಳಿಕೆಯ ಮಹತ್ವವನ್ನು ನೋಕಿಯಾ ಚೆನ್ನಾಗಿ ಅರ್ಥಮಾಡಿಕೊಂಡಿದೆ. ಪ್ರತಿ ನೋಕಿಯಾ ಫೋನ್ ದೈನಂದಿನ ಬಳಕೆಯ ಸವಾಲುಗಳನ್ನು ತಡೆದುಕೊಳ್ಳಬಲ್ಲದು ಎಂಬುದನ್ನು ಖಚಿತಪಡಿಸಿಕೊಳ್ಳಲು ಸೂಕ್ಷ್ಮವಾಗಿ ಪರೀಕ್ಷಿಸಲಾಗುತ್ತದೆ. ನೋಕಿಯಾ 105 ಮತ್ತು ನೋಕಿಯಾ 106 ಇದಕ್ಕೆ ಹೊರತಾಗಿಲ್ಲ. ಹೆಚ್ಚಿನ ಶ್ರದ್ಧೆಯಿಂದಲೇ ಈ ಎರಡೂ ಫೀಚರ್ ಫೋನ್ಗಳನ್ನು ತಯಾರಿಸಲಾಗಿದೆ. ಅತ್ಯಂತ ಬೇಡಿಕೆಯ ಸಂದರ್ಭಗಳಲ್ಲಿಯೂ ಸಹ ಅಸಾಧಾರಣ ಕಾರ್ಯಕ್ಷಮತೆ ನೀಡುವ ಬಗೆಯಲ್ಲಿ ಇವುಗಳ ವಿನ್ಯಾಸ ರೂಪಿಸಲಾಗಿದೆ.