6,999 ರೂ ಬೆಲೆಗೆ ನೋಕಿಯಾ C12 ಪ್ರೋ ಫೋನ್ ಬಿಡುಗಡೆ, ಕೈಗೆಟುಕುವ ದರದ ಸ್ಮಾರ್ಟ್‌ಫೋನ್!

ಭಾರತದ ಮೊಬೈಲ್ ಫೋನ್ ದುನಿಯಾದ ಆರಂಭಿಕ ದಿನದಲ್ಲಿ ನೋಕಿಯಾ ಮಾಡಿದ ಮೋಡಿ ಸಾಮಾನ್ಯದಲ್ಲ. ಇದೀಗ ನೋಕಿಯಾ ಮತ್ತೆ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಕೈಗೆಟುಕುವ ದರದ ಅತ್ಯುತ್ತಮ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. 

HMD Global launch Nokia c12 pro most affordable smartphone with Starting price RS  6999 ckm

ನವದೆಹಲಿ(ಮಾ.21) ಭಾರತದಲ್ಲಿ ಮೊಬೈಲ್ ಫೋನ್ ಕ್ರಾಂತಿಯಲ್ಲಿ ನೋಕಿಯಾ ಕೊಡುಗೆ ಪ್ರಮುಖವಾಗಿದೆ. ಆರಂಭಿಕ ದಿನಗಳಲ್ಲಿ ನೋಕಿಯಾ 1100 ಫೋನ್‌ನಿಂದ ಹಿಡಿದು ಹಲವು ಫೋನ್‌ಗಳ ಮೂಲಕ ಭಾರತದಲ್ಲಿ ಸಂಚಲನ ಸೃಷ್ಟಿಸಿದ ನೋಕಿಯಾ ಇದೀಗ ಮತ್ತೆ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಭಾರತದಲ್ಲಿ ನೋಕಿಯಾ ಇದೀಗ 6,999 ರೂಪಾಯಿಗೆ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ನೋಕಿಯಾ C12 ಫೋನ್ ಬಿಡುಗಡೆ ಮಾಡಿದೆ. ಹೆಚ್ಚು ಬಾಳಿಕೆ, ಸುರಕ್ಷತೆ ಸೇರಿದಂತೆ ಹಲವು ವಿಶೇಷತೆಗಳು ಈ ಫೋನ್‌ನಲ್ಲಿದೆ. ನೋಕಿಯಾ ಸಿ12 ಪ್ರೊ, ಆಕ್ಟಾ ಕೋರ್ ಪ್ರೊಸೆಸರ್, 2ಜಿಬಿ ವರ್ಚುವಲ್ RAM, ಆಪರೇಟಿಂಗ್ ಸಿಸ್ಟಮ್,  ಫ್ರಂಟ್ ಹಾಗೂ ಬ್ಯಾಕ್ ಕ್ಯಾಮಾರಗಳಿಗೆ ನೈಟ್ ಪ್ರೋಟ್ರೇಟ್ ಮೊಡ್ ಸೇರಿದಂತೆ ಹಲವು ವಿಶೇಷತೆಗಳು ಈ ಫೋನ್‌ನಲ್ಲಿದೆ.

ನೋಕಿಯಾ C12  ಪ್ರೊ ಫೋನ್ ರಿಟೇಲ್ ಮಳಿಗೆ, ಪ್ರಮುಖ ಇ-ಕಾಮರ್ಸ್, ನೋಕಿಯಾ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯವಿದೆ.   6,999 ರೂಪಾಯಿಗೆ ನೂತನ ಫೋನ್ ಲಭ್ಯವಿದೆ.  ನೋಕಿಯಾ C12 ಪ್ರೊ  –4/64GB (2GB RAM+ 2GB ವರ್ಚುವಲ್ RAM),  5/64GB (3GB RAM + 2GB ವರ್ಚುವಲ್ RAM) ಫೋನ್‌ಗೆ ಕ್ರಮವಾಗಿ 6,999 ರೂಪಾಯಿ ಹಾಗೂ  7,499 ರೂಪಾಯಿಗೆ ಲಭ್ಯವಿದೆ. 

ಗೂಗಲ್ ಚಾಲಿತ ಕ್ಯಾಮೆರಾ ಇರುವ Nokia C31 ಫೋನ್ ಲಾಂಚ್

ಶಕ್ತಿಯುತ ಬೆಸ್ಪೋಕ್ ಇಮೇಜಿಂಗ್ ಸಪೋರ್ಟ್ ಮಾಡಬಲ್ಲ ಕ್ಯಾಮೆರಾ ಫೀಚರ್ಸ್ ಇದರಲ್ಲಿದೆ.ದೃಶ್ಯಗಳನ್ನು ಸುಂದರವಾಗಿ ಸೆರೆಹಿಡಿಯಬಹುದು. ಜೊತೆಗೆ ವರ್ಧಿತ ಇಮೇಜಿಂಗ್ ಅನುಭವ ಪಡೆಯಲು ಸಾಧ್ಯವಿದೆ. ಹಿಂಬದಿಯ 8MP ಹಾಗೂ ಮುಂಭಾಗದ 5MP ಕ್ಯಾಮೆರಾದಲ್ಲಿ ರಾತ್ರಿ ಮತ್ತು ಪೋರ್ಟ್ರೇಟ್ ಮೋಡ್‌ನಲ್ಲಿ ಫೋಟೋ ಕ್ಲಿಕ್ ಮಾಡಲು ಅವಕಾಶವಿದೆ. 

ಆಂಡ್ರೈಡ್ ಟಿಎಂ 12  (ಗೊ ಆವೃತ್ತಿ) ಒಳಗೊಂಡಿರುವ ನೋಕಿಯಾ ಸಿ– ಸರಣಿಯ ಸ್ಮಾರ್ಟ್ಫೋನ್, ಸರಾಸರಿ ಶೇ 20ರಷ್ಟು ಹೆಚ್ಚಿನ ಉಚಿತ ಸಂಗ್ರಹಣಾ1 ಸಾಮರ್ಥ್ಯ ಒದಗಿಸಲಿದೆ. ಇದರಿಂದಾಗಿ ನೀವು ಸಾವಿರಕ್ಕೂ ಹೆಚ್ಚು ಹಾಡುಗಳು ಅಥವಾ ಚಿತ್ರಗಳನ್ನು ಅಥವಾ ಕೆಲವು ಗಂಟೆಗಳವರೆಗಿನ ಎಚ್ಡಿ ವಿಡಿಯೊ ಸಂಗ್ರಹಿಸಬಹುದು. ಸ್ಮರಣ ಸಾಮರ್ಥ್ಯದ ವಿಸ್ತರಣೆಯು2 ನಿಮಗೆ 2ಜಿಬಿ  ಹೆಚ್ಚುವರಿ ವರ್ಚುವಲ್   ರ್ಯಾಮ್ ನೀಡುತ್ತದೆ. ನಿಮ್ಮ ಮೆಚ್ಚಿನ ಅಪ್ಲಿಕೇಷನ್ಗಳ ನಡುವೆ ನೀವು ಇನ್ನೂ ವೇಗವಾಗಿ ಚಲಿಸಬಹುದು. ಈ ಸಮಯದಲ್ಲಿ ಇತರರು ನಿಮ್ಮನ್ನು ನಿಧಾನಗೊಳಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಹೆಚ್ಚು ದಕ್ಷತೆಯ ಕಾರ್ಯಕ್ಷಮತೆಯು– ಹಿನ್ನೆಲೆಯಲ್ಲಿ ಚಾಲನೆಯಲ್ಲಿರುವ ಅನಗತ್ಯ ಅಪ್ಲಿಕೇಷನ್ಗಳನ್ನು ಸ್ವಚ್ಛಗೊಳಿಸುತ್ತದೆ,  ಯಾವುದೇ ಡೇಟಾ ವ್ಯರ್ಥವಾಗುವುದಿಲ್ಲ ಎಂಬುದನ್ನು ‘ನೋಕಿಯಾ ಸಿ12 ಪ್ರೊ’  ಖಚಿತಪಡಿಸುತ್ತದೆ. ಸಂಪನ್ಮೂಲ ಮುಕ್ತಗೊಳಿಸಿ ಮತ್ತು ಡೇಟಾ ಉಳಿಸುವುದರೊಂದಿಗೆ, ನಿಮ್ಮ ಮೊಬೈಲ್ ಬಳಕೆಯ ಪ್ಲ್ಯಾನ್ ಮತ್ತಷ್ಟು ಮುಂದುವರಿಯಲಿದೆ.

 

4,999 ರೂಪಾಯಿಗೆ Nokia 4ಜಿ ಫೀಚರ್ ಫೋನ್, ವೈಯರ್ಲೆಸ್ ಇಯರ್ಬಡ್ಸ್ ಉಚಿತ!

ಯಾವಾಗಲೂ ಸುರಕ್ಷಿತ ಮತ್ತು ಸುಭದ್ರ
ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ‘ನೋಕಿಯಾ ಸಿ12 ಪ್ರೊ’  ವಿನ್ಯಾಸಗೊಳಿಸಲಾಗಿದೆ. ಬೆದರಿಕೆಗಳಿಂದ ನಿಮ್ಮನ್ನು ರಕ್ಷಿಸಲು ಈ ಸ್ಮಾರ್ಟ್ಫೋನ್ ಕನಿಷ್ಠ ಎರಡು ವರ್ಷಗಳ ನಿಯಮಿತ ಭದ್ರತಾ ಪ್ಯಾಚ್ಗಳನ್ನು ಖಾತ್ರಿಗೊಳಿಸುತ್ತದೆ. ‘ನೋಕಿಯಾ ಸಿ12 ಪ್ರೊ’  ಸಹ 12 ತಿಂಗಳ ಬದಲಿಸಿಕೊಡುವ ಖಾತರಿಯ ಭರವಸೆಯೊಂದಿಗೆ ಹೆಚ್ಚುವರಿ ಮನಃಶಾಂತಿ ನೀಡುತ್ತದೆ.
 

Latest Videos
Follow Us:
Download App:
  • android
  • ios