Asianet Suvarna News Asianet Suvarna News

ಕೈಗೆಟುಕವ ಬೆಲೆಯಲ್ಲಿ ನೋಕಿಯಾ ಸಿ22 ಸ್ಮಾರ್ಟ್‌ಫೋನ್ ಬಿಡುಗಡೆ, ಬಂಪರ್ ಕೊಡುಗೆ!

ಭಾರತದ ಮಾರುಕಟ್ಟೆಯಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಲು ನೋಕಿಯಾ ತಯಾರಿ ನಡೆಸಿದೆ. ಇದೀಗ ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಬೆಲೆ, ಫೀಚರ್ಸ್ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
 

Nokia c22 affordable smartphone launch in India performance and features ckm
Author
First Published May 11, 2023, 8:29 PM IST

ನವದೆಹಲಿ(ಮೇ.11): ಭಾರತದಲ್ಲಿ ಮೊಬೈಲ್ ಫೋನ್‌ನಲ್ಲಿ ಕ್ರಾಂತಿ ಮಾಡಿದ್ದ ನೋಕಿಯಾ ಬಳಿಕ ಭಾರಿ ಪೈಪೋಟಿಯಿಂದ ಮಾರುಕಟ್ಟೆಯಲ್ಲಿ ಸಿಂಹಪಾಲು ಕಳೆದುಕೊಂಡಿತ್ತು. ಇದೀಗ ನೋಕಿಯಾ ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯತ್ತಮ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಮೂಲಕ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಲು ಮುಂದಾಗಿದೆ.  ನೋಕಿಯಾ ಸಿ22 ಫೋನ್ ಬೆಲೆ 7,999 ರಿಂದ ಆರಂಭಗೊಳ್ಳುತ್ತಿದೆ. 

ನೋಕಿಯಾ ಸಿ22 ಸ್ಮಾರ್ಟ್ಫೋನ್ ಇಂದಿನಿಂದ ಭಾರತದಲ್ಲಿ ಚಾರ್ಕೋಲ್, ಸ್ಯಾಂಡ್ ಮತ್ತು ಪರ್ಪಲ್ ಬಣ್ಣಗಳಲ್ಲಿ ಲಭ್ಯ ಇರಲಿದೆ. ಬೆಲೆಗಳು ₹ 7999 ರಿಂದ ಪ್ರಾರಂಭವಾಗುತ್ತವೆ. 4ಜಿಬಿ (2ಜಿಬಿ + 2ಜಿಬಿ ವರ್ಚುವಲ್ ರ್ಯಾಮ್) ಮತ್ತು 6ಜಿಬಿ (4ಜಿಬಿ + 2ಜಿಬಿ ವರ್ಚುವಲ್ ರ್ಯಾಮ್) ಜೊತೆಗೆ 64ಜಿಬಿ ಸಂಗ್ರಹ ಸಾಮರ್ಥ್ಯದೊಂದಿಗೆ (256 ಜಿಬಿವರೆಗಿನ ಹೆಚ್ಚುವರಿ ಸ್ಮರಣ ಬೆಂಬಲ) ಬರಲಿದೆ. ಜಿಯೊ ಪಾಲುದಾರ ಕೊಡುಗೆ: ₹ 399 ಯೋಜನೆಯಲ್ಲಿ ಜಿಯೊ ಪ್ಲಸ್ (ಪೋಸ್ಟ್ಪೇಯ್ಡ್) ಬಳಕೆದಾರರಿಗೆ ನೋಕಿಯಾ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಇದು 75ಜಿಬಿ ಮಾಸಿಕ ಡೇಟಾ + 3 ಆ್ಯಡ್-ಆನ್ ಸಿಮ್ಗಳನ್ನು ಒದಗಿಸುತ್ತದೆ. ಗ್ರಾಹಕರು ಮನೆ ಬಾಗಿಲಲ್ಲಿ  ಜಿಯೊ ಸಿಮ್ ಪಡೆಯುವುದಕ್ಕೆ 70000 70000 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು. ಜಿಯೊ ಪ್ಲಸ್ (ಪೋಸ್ಟ್ಪೇಯ್ಡ್) ನೋಕಿಯಾ ಫೋನ್ ಬಳಕೆದಾರರು ₹ 1,000 ಬೆಲೆಯ ₹ 3,500 ವರೆಗಿನ ಮೌಲ್ಯದ ವಿಶೇಷ ಪ್ರಯೋಜನಗಳನ್ನು 100 ಜಿಬಿ ಹೆಚ್ಚುವರಿ ಡೇಟಾ ರೂಪದಲ್ಲಿ (10 ತಿಂಗಳವರೆಗೆ 10 ಜಿಬಿ ಹೆಚ್ಚುವರಿ ಮಾಸಿಕ ಡೇಟಾ) ಪಡೆಯುತ್ತಾರೆ. ಜೊತೆಗೆ ₹ 2500ವರೆಗಿನ ಮೌಲ್ಯದ ಹೆಚ್ಚುವರಿ ಕೂಪನ್ ಪಡೆಯುವ ಅವಕಾಶವಿದೆ.

6,999 ರೂ ಬೆಲೆಗೆ ನೋಕಿಯಾ C12 ಪ್ರೋ ಫೋನ್ ಬಿಡುಗಡೆ, ಕೈಗೆಟುಕುವ ದರದ ಸ್ಮಾರ್ಟ್‌ಫೋನ್!

ಎಚ್ಎಂಡಿ ಗ್ಲೋಬಲ್ನ ಉತ್ಪನ್ನಗಳ ಮಾರುಕಟ್ಟೆ ಮುಖ್ಯಸ್ಥ ಆ್ಯಡಂ ಫರ್ಗುಸನ್ ಅವರು ಪ್ರತಿಕ್ರಿಯಿಸಿ, ‘ನೋಕಿಯಾ ಸಿ-ಸರಣಿಯು ಯಾವಾಗಲೂ ಉತ್ತಮ ಬಳಕೆದಾರ ಅನುಭವ ನೀಡುವ ವಿಶ್ವಾಸಾರ್ಹ, ಕೈಗೆಟುಕುವ ಸ್ಮಾರ್ಟ್ಫೋನ್ಗಳನ್ನು ಒದಗಿಸುತ್ತಿದೆ. ನೋಕಿಯಾ ಸಿ22, ಸ್ಮಾರ್ಟ್ಫೋನ್ ಆಕಸ್ಮಿಕವಾಗಿ ಕೈಜಾರುವುದರ ವಿರುದ್ಧ ಉತ್ತಮ ಬಾಳಿಕೆ ನೀಡಲಿದೆ. ಸದೃಢ ಸಾಧನದಲ್ಲಿ ನೀವು ಸುದೀರ್ಘ ಸಮಯದವರೆಗೆ ನಂಬಿಕೆ ಇರಿಸಲು ಮತ್ತು ಬಳಿಯಲ್ಲಿ ಇರಿಸಿಕೊಳ್ಳುವುದರಲ್ಲಿ ದೃಢ ವಿಶ್ವಾಸ ಇರಿಸಬಹುದು’ ಎಂದು ಹೇಳಿದ್ದಾರೆ.

ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಟ್ಟಿರುವ ಗಟ್ಟಿ ವಿನ್ಯಾಸ
ಆಕಸ್ಮಿಕವಾಗಿ ಕೈಜಾರಿ ಬೀಳುವ ಪರೀಕ್ಷೆಗಳಲ್ಲಿ ಸ್ಪರ್ಧೆ  ಮೀರಿಸುವ ಮೂಲಕ ನೋಕಿಯಾ ಸಿ22 ಸ್ಮಾರ್ಟ್ಫೋನ್, ದೈನಂದಿನ ಜೀವನದಲ್ಲಿ ಘಟಿಸುವ ಅನಿರೀಕ್ಷಿತ ಕ್ಷಣಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಿದೆ. ಐಪಿ52 ಪ್ಲ್ಯಾಷ್ ಮತ್ತು ದೂಳಿನ ರಕ್ಷಣೆಯು ಉಜ್ಜುವಿಕೆ ಮತ್ತು ಗೀರುಗಳ ವಿರುದ್ಧ  ರಕ್ಷಣೆ ನೀಡಲಿದೆ. ಕಠಿಣ ಸ್ವರೂಪದ 2.5ಡಿ ಡಿಸ್ಪ್ಲೇ ಗಾಜು ಮತ್ತು ಗಟ್ಟಿ ಲೋಹದ ಹೊರಮೈಯಲ್ಲಿ ಸದೃಢ ಪಾಲಿಕಾರ್ಬೊನೇಟ್ ಯುನಿಬಾಡಿ ವಿನ್ಯಾಸ ಒಳಗೊಂಡಿದೆ. ಸ್ಮಾರ್ಟ್ಫೋನ್ ಸುರಕ್ಷತೆಗೆ ಇದು ಸಾಲದಿದ್ದರೆ, ಸದ್ಯಕ್ಕೆ ನೋಕಿಯಾದ ಖಾತರಿದಾಯಕ ಭರವಸೆಯಾಗಿರುವ ಒಂದು ವರ್ಷದ ಒಳಗೆ ಬದಲಿ ಸ್ಮಾರ್ಟ್ಫೋನ್ ನೀಡುವ ವಾಗ್ದಾನ ಒಳಗೊಂಡಿರಲಿದೆ. 

ಗೂಗಲ್ ಚಾಲಿತ ಕ್ಯಾಮೆರಾ ಇರುವ Nokia C31 ಫೋನ್ ಲಾಂಚ್

13ಎಂಪಿ ಡ್ಯುಯಲ್ ಹಿಂಬದಿ ಮತ್ತು 8ಎಂಪಿ ಮುಂಭಾಗದ ಕ್ಯಾಮೆರಾಗಳಿಂದ ಹೆಚ್ಚಿನದನ್ನು ಪಡೆಯಲು, ನೋಕಿಯಾ ಸಿ22 ಸುಧಾರಿತ ಇಮೇಜಿಂಗ್ ಅಲ್ಗಾರಿದಮ್ ಒಳಗೊಂಡಿದೆ. ಇದು ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ  ಸ್ಪಷ್ಟ ಚಿತ್ರಗಳನ್ನು ನೀಡುತ್ತದೆ. ಸುಂದರವಾಗಿ ಮಸುಕಾದ ಹಿನ್ನೆಲೆಗಳೊಂದಿಗೆ ಕೇಂದ್ರೀಕರಿಸಿದ ಭಾವಚಿತ್ರಗಳ  ಶಾಟ್ಗಳನ್ನು ತೆಗೆದುಕೊಳ್ಳಬಹುದು. ಹೊಸ, ಬೆಸ್ಪೋಕ್ ನೈಟ್ ಮೋಡ್ ಅಲ್ಗೊರಿದಮ್, ರಾತ್ರಿ-ಸಮಯದ ಚಿತ್ರಣವು ಸಮಪ್ರಮಾಣದ ಪ್ರಮಾಣದ ಬೆಳಕು ಮತ್ತು ವ್ಯತಿರಿಕ್ತತೆ  ಒಳಗೊಂಡಿರುವುದಕ್ಕೆ ನೆರವಾಗಲಿದೆ. ಹೆಚ್ಚುವರಿ ಸ್ಪಷ್ಟತೆಗೆ ಸ್ವಯಂಚಾಲಿತ ಎಚ್ಡಿಆರ್ ಬೆಂಬಲದೊಂದಿಗೆ, 6.5” ಎಚ್ಡಿ+ ಡಿಸ್ಪ್ಲೇನಲ್ಲಿ ಬೆರಗುಗೊಳಿಸುವ ಗುಣಮಟ್ಟದಲ್ಲಿ ಜೀವನದ ಪ್ರಮುಖ ಕ್ಷಣಗಳನ್ನು ಸೆರೆಹಿಡಿಯಲಿದೆ.

ಸುಧಾರಿತ ದಕ್ಷತೆಗೆ ಹೊಸ ಸೌಲಭ್ಯಗಳು
ಅನಪೇಕ್ಷಿತ ಸಾಫ್ಟ್ವೇರ್ ಇಲ್ಲದ ಸುವ್ಯವಸ್ಥಿತ ಕಾರ್ಯಾಚರಣಾ ವ್ಯವಸ್ಥೆಯು (ಒಎಸ್) ನಿಮ್ಮ ಸಂಗ್ರಹಣೆ ಸಾಮರ್ಥ್ಯ ಮತ್ತು ಮೊಬೈಲ್ ಡೇಟಾ ಯೋಜನೆಯನ್ನು ಮತ್ತಷ್ಟು ವಿಸ್ತರಿಸುತ್ತದೆ. ಸ್ಮರಣ ಸಾಮರ್ಥ್ಯ ವಿಸ್ತರಣೆಯು ಬಳಕೆಯಾಗದ ಶೇಖರಣಾ ಸ್ಥಳವನ್ನು ಹೆಚ್ಚುವರಿ 2ಜಿಬಿ ವರ್ಚುವಲ್ ಮೆಮೊರಿ (ಆರ್ಎಎಂ)v, ಆಗಿ ಪರಿವರ್ತಿಸುತ್ತದೆ. ಇದು ಬಹುಬಗೆಯ ಕಾರ್ಯವಿಧಾನವನ್ನು ಇನ್ನಷ್ಟು ಸರಳ ಮತ್ತು ಸುಗಮಗೊಳಿಸಲಿದೆ.

ಸುದೀರ್ಘ ಬಾಳಿಕೆಗೆ ಸುರಕ್ಷಿತ ಮತ್ತು ಸದೃಢ ತಯಾರಿಕೆ
ಡಿಜಿಟಲ್ ವಂಚನೆ ಪ್ರಕರಣಗಳಲ್ಲಿ ಶೇ 60ಕ್ಕೂ ಹೆಚ್ಚು ಪ್ರಕರಣಗಳಿಗೆ ಮೊಬೈಲ್ ಸಾಧನಗಳೇ ಕಾರಣವಾಗಿರುತ್ತವೆ.   ನೋಕಿಯಾ ಸಿ22  ಸ್ಮಾರ್ಟ್ಫೋನ್, ನಿಮ್ಮನ್ನು ಸುರಕ್ಷಿತವಾಗಿರಿಸಲು ಕನಿಷ್ಠ ಎರಡು ವರ್ಷಗಳವರೆಗೆ ನಿಯಮಿತವಾಗಿ ಸುರಕ್ಷತಾ ನವೀಕರಣಗಳನ್ನು ಪಡೆಯುತ್ತದೆ. ಹೊಸ ಸೈಬರ್ ಬೆದರಿಕೆಗಳಿಂದ ನಿಮ್ಮನ್ನು ರಕ್ಷಿಸಲು ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಫೇಸ್ ಅನ್ಲಾಕ್ ಮತ್ತು ಹಿಂಭಾಗದ ಫಿಂಗರ್ಪ್ರಿಂಟ್ ಸಂವೇದಕದೊಂದಿಗೆ ನಿಮ್ಮ ಫೋನ್ ಅನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಅನ್ಲಾಕ್ ಮಾಡಬಹುದು.

ಶಕ್ತಿಶಾಲಿ 5000 ಎಂಎಎಚ್ ಬ್ಯಾಟರಿಯು ನೋಕಿಯಾ ಫೋನ್ಗಳಿಗೆ ವಿಶಿಷ್ಟವಾದ ಬ್ಯಾಟರಿ ಉಳಿಸುವ ವೈಶಿಷ್ಟ್ಯದಿಂದ ಬೆಂಬಲಿತವಾಗಿದೆ. ಆದ್ದರಿಂದ ನೀವು ಸ್ಮಾರ್ಟ್ಫೋನ್ ಚಾರ್ಜ್ ಮಾಡುವ ಬಗ್ಗೆ ಚಿಂತಿಸದೆ ಮೂರು ದಿನಗಳನ್ನು ನಿಶ್ಚಿಂತೆಯಿಂದ ಕಳೆಯಬಹುದು. 

Follow Us:
Download App:
  • android
  • ios