Asianet Suvarna News Asianet Suvarna News

ಗೂಗಲ್ ಪಿಕ್ಸೆಲ್ 6, ಪಿಕ್ಸೆಲ್ 6 ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ ಪಕ್ಕಾ

ಗೂಗಲ್ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಬಹಳ ದಿನದಿಂದಲೂ ಸುದ್ದಿ ಇದೆ. ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಸ್ಮಾರ್ಟ್‌ಫೋನ್‌ಗಳ ಫೀಚರ್‌ಗಳ ಬಗ್ಗೆ ಆಗಾಗ ಮಾಹಿತಿ ಸೋರಿಕೆಯಾಗಿ ಕುತೂಹಲ ಹೆಚ್ಚಾಗಲು ಕಾರಣವಾಗಿದೆ. ಈಗ ಗೂಗಲ್ ‌ಕಂಪನಿಯೇ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯ ಬಗ್ಗೆ ಅಧಿಕೃತವಾಗಿ ತಿಳಿಸಿದೆ.

Google confirmed launch of pixel 6 and pixel 6 Pro smartphone
Author
Bengaluru, First Published Aug 3, 2021, 4:48 PM IST
  • Facebook
  • Twitter
  • Whatsapp

ಗೂಗಲ್ ಅಧಿಕೃತ  ಘೋಷಣೆಯೊಂದಿಗೆ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಸ್ಮಾರ್ಟ್ ಫೋನ್‌ಗಳ ಬಿಡುಗಡೆಯ ಪಕ್ಕಾ ಆಗಿದೆ. ಕಂಪನಿಯು ಈ ವರ್ಷಾಂತ್ಯದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ. ಜೊತೆಗೆ, ಸ್ಮಾರ್ಟ್‌ಫೋನ್‌ಗಳ ಇಮೇಜ್‌ಗಳನ್ನು ಬಿಹಿರಂಗ ಮಾಡಿದೆ.  ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಸ್ಮಾರ್ಟ್‌ಫೋನ್‌ಗಳು ಈ ಹಿಂದೆ ಬಿಡುಗಡೆಯಾಗಿದ್ದ ಪಿಕ್ಸೆಲ್‌ ಫೋನುಗಳಿಗೆ ಹೋಲಿಸಿದರೆ ತುಂಬ ವಿಭಿನ್ನವಾಗಿವೆ. 

ಹೊಸ ವಿನ್ಯಾಸದ ಜೊತೆಗೆ ಕಂಪನಿಯು ಈ ಫೋನುಗಳಿಗೆ ಆಪಲ್ ರೂಟ್ ಮತ್ತು ಫೋನ್‌ಗೆ ಶಕ್ತಿ ಒದಗಿಸುವ ತನ್ನದೇ ಆದ ಸ್ವಂತ ಟೆನ್ಸಾರ್ ಎಂಬ ಎಸ್ಒಎಸ್ ಸೇರಿಸಿದೆ. ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 12ನೊಂದಿಗೆ ಬರಲಿವೆ.

ಬಹುನಿರೀಕ್ಷಿತ ರೆಡ್‌ಮಿ ಬುಕ್ 15 ಬೆಲೆ ಹದಿನೈದು ಸಾವಿರ ರೂಪಾಯಿನಾ?

ಗೂಗಲ್‌ನ ಡಿವೈಸಸ್ ಮತ್ತು ಸರ್ವೀಸಸ್ ಹಿರಿಯ ಉಪಾಧ್ಯಕ್ಷ ರಿಕ್ ಒಸ್ಟರ್ಲೋಹ್ ಅವರು ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೋ ಸ್ಮಾರ್ಟ್‌ಫೋನ್‌  ಬಿಡುಗಡೆಗೆ ಸಂಬಂಧಿಸಿದ ಮಾಹಿತಿಯನ್ನು ಬ್ಲಾಗ್‌ಪೋಸ್ಟ್ ಮೂಲಕ ಷೇರ್ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಗೂಗಲ್ ಎಕ್ಸ್ಎಲ್ ಮಾಡೆಲ್ ಪರಿಚಯಿಸುತ್ತಿತು. ಈ ಬಾರಿ ಎಕ್ಸ್ಎಲ್ ಮಾಡೆಲ್ ಬದಲಿಗೆ ಪ್ರೋ ಮಾಡೆಲ್ ಅನ್ನು ಪರಿಚಯಿಸುತ್ತಿದೆ. ಈ ಬದಲಾವಣೆಯನ್ನು ಕೂಡ ಗಮನಿಸಬಹುದಾಗಿದೆ.

ಈ ಹೊಸ ಫೋನ್‌ಗಳ ವಿನ್ಯಾಸದಲ್ಲಿ ಮತ್ತೊಂದು ಗಮನಿಸಬಹುದಾದ ಸಂಗತಿ ಎಂದರೆ, ಕ್ಯಾಮೆರಾ ಸೆಟ್‌ಅಪ್. ಗೂಗಲ್ ಫೋನ್ ಹಿಂಬದಿಯಲ್ಲಿ ಸ್ಟ್ರಿಪ್‌ವೊಂದನ್ನು ಸೇರಿಸಲಾಗಿದೆ. ಇದೇ ಸ್ಟ್ರಿಪ್‌ನಲ್ಲಿ ಕ್ಯಾಮೆರಾಗಳನ್ನು ಪಿಕ್ಸ್ ಮಾಡಲಾಗಿದೆ. ಕಂಪನಿಯು  ಈ ಸ್ಟ್ರಿಪ್ ಅನ್ನು ಕ್ಯಾಮೆರಾ ಬಾರ್ ಎಂದು ಕರೆದಿದೆ. 

ಪಿಕ್ಸೆಲ್ ಫೋನುಗಳು ಡುಯಲ್ ಟೋನ್ ವಿನ್ಯಾಸವನ್ನು ಹೊಂದಿದ್ದು, ಬಲ ಬದಿಯಲ್ಲಿ ಪವರ್ ಮತ್ತು ವಾಲೂಮ್ ಬಟನ್‌ಗಳಿದ್ದರೆ, ಎಡು ಬದಿ ಸಂಪೂರ್ಣವಾಗಿ ಖಾಲಿ ಬಿಡಲಾಗಿದೆ. ಪಿಕ್ಸೆಲ್ 6 ಪ್ರೋ ಮಾಡೆಲ್, ಪಾಲಿಸ್ಡ್ ಅಲ್ಯುಮಿನಿಯಂ  ಫ್ರೇಮ್ ಹೊಂದಿದರೆ, ನಾನ್ ಪ್ರೋ ಮಾಡೆಲ್ ಪಿಕ್ಸೆಲ್ ಮೇಟ್ ಅಲ್ಯುಮಿನಿಯಂ ಫಿನಿಶ್‌ನೊಂದಿಗೆ ಬರುತ್ತದೆ. ಸೆಲ್ಫಿ ಕ್ಯಾಮೆರಾಗಾಗಿ ಕೇಂದ್ರ ಭಾಗದಲ್ಲಿ ಸಿಂಗಲ್ ಹೋಲ್ ಪಂಚ್ ಕಟೌಟ್ ಇರುವುದನ್ನು ಗಮನಿಸಬಹುದು. ಹಾಗೆಯೇ, ಪ್ರತಿ ಮಾಡೆಲ್‌ ಗ್ರಾಹಕರಿಗೆ ಮೂರು ಬಣ್ಣಗಳ ಆಯ್ಕೆಯಲ್ಲಿ ದೊರೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. 

ನೋಕಿಯಾದಿಂದ ಮೊದಲ ಟ್ಯಾಬ್ಲೆಟ್! ನೋಕಿಯಾ ಟಿ20 ಟ್ಯಾಬ್ ವಿಶೇಷತೆಗಳೇನು?

ಟೆನ್ಸರ್ ಎಂಬ ಎಸ್‌ಒಎಸ್ ಅನ್ನು ಗೂಗಲ್ ಅಭಿವೃದ್ಧಿಪಡಿಸಿದ್ದು, ಇದೇ ಎಸ್ಒಎಸ್ ಅನ್ನು ಕಂಪನಿಯು ಹೊಸ ಪಿಕ್ಸೆಲ್ ಫೋನುಗಳಲ್ಲಿ ಬಳಸಿದೆ. ಟೆನ್ಸರ್ ಕಂಪ್ಯೂಟೇಶನಲ್ ಫೋಟೋಗ್ರಫಿ ಮಾದರಿಗಳಿಗೆ ಬಂದಾಗ ಸಂಪೂರ್ಣವಾಗಿ ಹೊಸ ವೈಶಿಷ್ಟ್ಯಗಳು, ಜೊತೆಗೆ ಅಸ್ತಿತ್ವದಲ್ಲಿರುವ ವೈಶಿಷ್ಟ್ಯಗಳಿಗೆ ಸುಧಾರಣೆಗಳನ್ನು ಅನುಮತಿಸುತ್ತದೆ. ಇದು ಹೊಸ ಸೆಕ್ಯುರಿಟಿ ಕೋರ್ ಮತ್ತು ಟೈಟಾನ್ ಎಂ 2 ಸೆಕ್ಯುರಿಟಿ ಚಿಪ್‌ನೊಂದಿಗೆ ಬರುತ್ತದೆ, ಇದು ಕಂಪನಿಯು ಪಿಕ್ಸೆಲ್ 6 ಸರಣಿಯನ್ನು ಯಾವುದೇ ಫೋನ್‌ನಲ್ಲಿ ಹಾರ್ಡ್‌ವೇರ್ ಭದ್ರತೆಯ ಹೆಚ್ಚಿನ ಪದರಗಳನ್ನು ನೀಡುತ್ತದೆ ಎಂದು ಗೂಗಲ್ ಹೇಳಿಕೊಂಡಿದೆ.

ಆಪರೇಟಿಂಗ್ ಸಾಫ್ಟ್ ವೇರ್ ಬಗ್ಗೆ ಹೇಳುವುದಾದರೆ ಪಿಕ್ಸೆಲ್ 6 ಸರಣಿ ಫೋನುಗಳಲ್ಲಿ ಕಂಪನಿಯು ಮಟಿರಿಯಲ್ ಯು ವಿನ್ಯಾಸದೊಂದಿಗೆ ಆಂಡ್ರಾಯ್ಡ್ 12 ಒಎಸ್ ಬಳಸಲಾಗಿದೆ. ಪಿಕ್ಸೆಲ್ 6 ಫೋನು 6.7 ಇಂಚ್  ಕ್ಯೂಎಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ.

ಹಿಂಬದಿಯಲ್ಲಿ  ಸೆಟಪ್ ಹೊಸ ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ, ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಹೊಂದಿರುವ ಸೆಕೆಂಡರಿಕ್ಯಾಮೆರಾ ಮತ್ತು 4X ಆಪ್ಟಿಕಲ್-ಜೂಮ್ ಮಡಿಸಿದ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಮುಖ್ಯ ವೈಡ್-ಆಂಗಲ್ ಕ್ಯಾಮೆರಾ150 ಪ್ರತಿಶತ ಹೆಚ್ಚು ಬೆಳಕನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಒಪ್ಪೋ ವಾಚ್ 2 ಸ್ಮಾರ್ಟ್‌ವಾಚ್ ಅನಾವರಣ, ಏನೆಲ್ಲ ವಿಶೇಷತೆಗಳಿವೆ?

ಇನ್ನುಪಿಕ್ಸೆಲ್ 6 ಸ್ಮಾರ್ಟ್‌ಫೋನು ಕೂಡ 6.4 ಇಂಚ್ ಫುಲ್ ಎಚ್‌ಡಿ ಪ್ಲಸ್ ಫ್ಲ್ಯಾಟ್ ಸ್ಕ್ರೀನ್ ಒಳಗೊಂಡಿದೆ. ಈ ಫೋನ್‌ನ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ನೀಡಲಾಗಿದೆ. ಈ ಎರಡೂ ಫೋನುಗಳಲ್ಲಿ ಇನ್ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್‌ಗಳಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

Follow Us:
Download App:
  • android
  • ios