ರಿಯಲ್‌ಮಿ ಡಿಝೋ ಸ್ಮಾರ್ಟ್‌ವಾಚ್ ಲಾಂಚ್, ಸಖತ್ ಫೀಚರ್ಸ್!

ಚೀನಾ ಮೂಲದ ರಿಯಲ್‌ಮಿ ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಪ್ರಭಾವವನ್ನು ಹೊಂದಿದೆ. ಕಂಪನಿಯು ಇದೇ ಮೊದಲ ಬಾರಿಗೆ ಭಾರತದಲ್ಲಿ ರಿಯಲ್‌ಮಿ ಡಿಝೋ ಎಂಬ ಸ್ಮಾರ್ಟ್‌ ವಾಚ್ ಲಾಂಚ್ ಮಾಡಿದೆ. ಈ ವಾಚ್‌ ಬಹಳಷ್ಟು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ.

Realme Dizo smart watch launched to the Indian market

ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ತನ್ನದೇ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿರುವ ಚೀನಾ ಮೂಲದ ರಿಯಲ್‌ಮಿ ಇದೀಗ ಮತ್ತೊಂದು ಗ್ಯಾಜೆಟ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಈ ವರೆಗೆ ಸ್ಮಾರ್ಟ್‌ಫೋನ್‌ಗಳನ್ನಷ್ಟೇ ಉತ್ಪಾದಿಸಿ ಮಾರಾಟ ಮಾಡುತ್ತಿದ್ದ ರಿಯಲ್‌ಮೀ ಇದೇ ಮೊದಲ ಬಾರಿಗೆ ಸ್ಮಾರ್ಟ್‌ವಿಯರೇಬಲ್‌ ಸೆಗ್ಮೆಂಟ್‌ಗೂ ಕಾಲಿಟ್ಟಿದೆ. ರಿಯಲ್‌ಮೀ ಭಾರತೀಯ ಮಾರುಕಟ್ಟೆಗೆ ರಿಯಲ್‌ಮಿ ಡಿಝೋ ಎಂಬ ಹೆಸರಿನ ಸ್ಮಾರ್ಟ್‌ ವಾಚ್ ಲಾಂಚ್ ‌ಮಾಡಿದೆ. ಈ ಸ್ಮಾರ್ಟ್‌ವಾಚ್ ಕೂಡ ಕೈಗೆಟುಕುವ ದರದಲ್ಲಿ ಇರುತ್ತದೆ ಎಂದು ಮತ್ತೆ ಹೇಳಬೇಕಿಲ್ಲ.

ಬಹುನಿರೀಕ್ಷಿತ ರೆಡ್‌ಮಿ ಬುಕ್ 15 ಬೆಲೆ ಹದಿನೈದು ಸಾವಿರ ರೂಪಾಯಿನಾ?

ನಿರೀಕ್ಷೆಯಂತೆ ಈ ರಿಯಲ್‌ಮಿ ಡಿಝೋ ಸ್ಮಾರ್ಟ್‌ವಾಚ್ ತೀರಾ ತುಟ್ಟಿಯೇನಲ್ಲ. ಈ ಸ್ಮಾರ್ಟ್‌ ವಾಚ್ ಬೆಲೆ 3,499 ರೂಪಾಯಿ ಇದ್ದು, ಆರಂಭಿಕ ಬೆಲೆಯಾಗಿ ಕಂಪನಿಯು 2,999 ರೂ.ಗೆ ಮಾರಾಟ ಮಾಡಲು ಮುಂದಾಗಿದೆ.

ಕೈಗೆಟುಕುವ ದರದಲ್ಲಿರುವ ವಾಚ್ ಅನೇಕ ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿವೆ. ಈ ಸ್ಮಾರ್ಟ್‌ವಾಚ್‌ನಲ್ಲಿರುವ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 12 ದಿನಗಳ ಕಾಲ ಬಾಳಿಕೆ ಬರುತ್ತದೆ. 90ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್‌ಗಳನ್ನು ಆಫರ್ ಮಾಡುವ ಈ ಸ್ಮಾರ್ಟ್‌ವಾಚ್, ಲೈವ್ ವಾಚ್ ಫೇಸಸ್, ಬ್ಲಡ್ ಆಕ್ಸಿಜನ್ ಮತ್ತು ಹಾರ್ಟ್ ರೇಟ್ ಮಾನಿಟರ್ ಮಾಹಿತಿಯನ್ನು ಒದಗಿಸುತ್ತದೆ. 

ರಿಯಲ್‌ಮೀ ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಿರುವ ಈ ಡಿಝೋ ಸ್ಮಾರ್ಟ್‌ವಾಚ್, ನಾಯ್ಸ್ ಕಲರ್‌ಫಿಟ್, ಅಮೇಜ್‌ಫಿಟ್ ಬಿಪ್ ಯು ಸೇರಿದಂತೆ ಇನ್ನಿತರ ಕಂಪನಿಗಳ ಸ್ಮಾರ್ಟ್‌ ವಾಚ್‌ಗಳಿಗೆ ಸಖತ್ ಪೈಪೋಟಿ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಭಾರತೀಯ ಮಾರುಕಟ್ಟೆಗೆ ರಿಯಲ್‌ಮೀ ಡಿಝೋ ಸ್ಮಾರ್ಟ್‌ವಾಚ್ ಆಗಸ್ಟ್ 2ರಂದು ಬಿಡುಗಡೆಯಾಗಿದ್ದರೂ ಅದರ ಮಾರಾಟವು ಆಗಸ್ಟ್ 6ರಿಂದ ಆರಂಭವಾಗಲಿದೆ. ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ ಈ ವಾಚ್ ಕಾರ್ಬನ್ ಗ್ರೇ ಮತ್ತು ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. ಆ ನಂತರ ಈ ಸ್ಮಾರ್ಟ್‌ವಾಚ್ ಆಯ್ದ ಕೆಲವು ರಿಟೇಲರ್ ಸ್ಟೋರ್‌ಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ. ಕಂಪನಿಯು ಸ್ಮಾರ್ಟ್‌ ಬೆಲೆಯನ್ನು 3,499 ರೂ. ಎಂದು ನಿಗದಿಪಡಿಸಿದೆ. ಆದರೆ, ಆರಂಭದಲ್ಲಿ ಇದು 2,999 ರೂ.ಗೆ ಸಿಗಲಿದೆ.

ರಿಯಲ್‌ಮಿ ಡಿಝೋ ಸ್ಮಾರ್ಟ್‌ವಾಚ್ ಅನೇಕ ವಿಶಿಷ್ಟವಾಗಿರುವ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ ವಾಚ್, 1.4 ಇಂಚ್ ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ ವಾಚ್‌ನಲ್ಲಿ, ರಿಯಲ್‌ಟೈಮ್ ಹಾರ್ಟ್ ರೇಟಿಂಗ್ ಮಾಹಿತಿ ಪಡೆಯುವುದಕ್ಕಾಗಿ ನೀವು ಪಿಪಿಜಿ ಸೆನ್ಸರ್‌ಗಳಿರುವುದನ್ನು ಕಾಣಬಹುದು. ಜೊತೆಗೆ, ಬ್ಲಟ್ ಆಕ್ಸಿಜನ್ ಮಾನಿಟರಿಂಗ್ ಕೂಡ ಮಾಡಬಹುದು. 

ನೋಕಿಯಾದಿಂದ ಮೊದಲ ಟ್ಯಾಬ್ಲೆಟ್! ನೋಕಿಯಾ ಟಿ20 ಟ್ಯಾಬ್ ವಿಶೇಷತೆಗಳೇನು?

ಆಕ್ಟಿವಿಟಿ ಟ್ರ್ಯಾಕಿಂಗ್ ಬಗ್ಗೆ ಹೇಳುವುದಾದರೆ ಈ ವಾಚ್ ಹೆಚ್ಚು ಗಮನ ಸೆಳೆಯುತ್ತದೆ. ಈ ವಾಚ್ 90ಕ್ಕೂ ಅಧಿಕ ಟ್ರಾಕಿಂಗ್ ಆಕ್ಟಿವಿಟಿಗಳನ್ನು ಹೊಂದಿದೆ. ರನ್ನಿಂಗ್, ವಾಕಿಂಗ್, ಸೈಕ್ಲಿಂಗ್, ಸ್ಪಿನ್ನಿಂಗ್, ಹೈಕಿಂಗ್, ಬಾಸ್ಕೆಟ್ ಬಾಲ್, ಯೋಗ, ರೋವಿಂಗ್, ಕ್ರಿಕೆಟ್, ಸ್ಟ್ರೆಂಥ್ ಟ್ರೇನಿಂಗ್, ಫ್ರೀ ವರ್ಕೌಟ್ ಸೇರಿದಂತೆ ಅನೇಕ ಆಕ್ಟಿವಿಟಿಗಳನ್ನು ಟ್ರ್ಯಾಕ್ ಮಾಡಬಹುದು. ಹಾಗೆಯೇ, ವಾಚ್ ಆಕ್ಟಿವಿಟಿಗಳನ್ನು ಎಷ್ಟು ಸಮಯದವರೆಗೆ ಮಾಡಿದ್ದೀರಿ ಮತ್ತು ಎಷ್ಟು ಕ್ಯಾಲೋರಿ ಬರ್ನ್ ಆಗಿದೆ ಎಂಬ ಮಾಹಿತಿಯನ್ನು ನಿತ್ಯ ಹಾಗೂ ವಾರದ ಲೆಕ್ಕದಲ್ಲೂ ಸ್ಟೋರ್ ಮಾಡುತ್ತದೆ. 

ಡಿಝೋ ವಾಚ್‌ ರಿಯಲ್‌ಮಿ ಲಿಂಕ್ ಆಪ್‌ನೊಂದಿಗೆ ಸಂಯೋಜಿಸಬಹುದು. ಈ ಆಪ್ ಆಂಡ್ರಾಯ್ಡ್ ಮತ್ತು ಐಒಎಸ್‌ ಎರಡೂ ಸಾಧನಗಳಿಗೆ ಸಪೋರ್ಟ್ ಮಾಡುತ್ತದೆ. ಈ ಸ್ಮಾರ್ಟ್‌ ವಾಚ್ ಬಳಸಿಕೊಂಡೇ ಬಳಕೆದಾರರು ರಿಯಲ್‌ಮಿ ಮತ್ತು ಡಿಝೋ ಇಯರ್‌ಬಡ್‌ಗಳನ್ನು ನಿಯಂತ್ರಿಸಬಹುದಾಗಿದೆ. 

ಒಪ್ಪೋ ವಾಚ್ 2 ಸ್ಮಾರ್ಟ್‌ವಾಚ್ ಅನಾವರಣ, ಏನೆಲ್ಲ ವಿಶೇಷತೆಗಳಿವೆ?

ಈ ವಾಚ್‌ನಲ್ಲಿ 315 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದೆ. ಬ್ಲೂಟೂಥ್ ವಿ.50 ಕನೆಕ್ಟಿವಿಟಿ ಇದೆ. ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ಫೀಚರ್‌ಗಳು ಈ ಸ್ಮಾರ್ಟ್‌ ವಾಚ್ ಅನ್ನು ಇತರ ಸ್ಮಾರ್ಟ್‌ ವಾಚ್‌ಗಳಿಗಿಂತಲೂ ಭಿನ್ನವಾಗಿ ನಿಲ್ಲಿಸಿದೆ.

Latest Videos
Follow Us:
Download App:
  • android
  • ios