ಮೊಬೈಲ್‌ನ ಬಿಳಿ ಚಾರ್ಜರ್ ಹಳದಿಯಾಗೋದು ಏಕೆ?

ಹೊಸ ಮೊಬೈಲ್ ಜೊತೆ ತಂದ ಚಾರ್ಜರ್ ಅನೇಕ ದಿನಗಳ ನಂತ್ರ ಬಣ್ಣ ಬದಲಿಸಲು ಶುರುವಾಗುತ್ತದೆ. ಆಗ ಬೆಳ್ಳಗಿದ್ದ ಚಾರ್ಜರ್ ಬಣ್ಣ ಈಗ ಹಳದಿಯಾಗ್ತಿರುತ್ತದೆ. ಎಷ್ಟು ಧೂಳಾಗಿದೆ ನೋಡು ಎನ್ನುತ್ತ ನಾವು ಅದನ್ನು ಬಳಕೆ ಮಾಡ್ತೇವೆ. ಆದ್ರೆ ಯಾಕೆ ಬಣ್ಣ ಬದಲಾಗುತ್ತೆ ಗೊತ್ತಾ?
 

Mobile Laptop White Charger Turning Yellow Know Reason Behind This roo

ಕೈನಲ್ಲಿ ಮೊಬೈಲ್ ಇದೆ, ಚಾರ್ಜರ್ ಇಲ್ಲ ಅಂದ್ರೆ ಪ್ರಯೋಜನ ಇಲ್ಲ. ಮೊಬೈಲ್ ಜೊತೆ ಚಾರ್ಜರ್ ಇದ್ರೆ ಜೀವ ಇದ್ದಂತೆ.  ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್, ಬ್ಯಾಟರಿ ಮುಂತಾದವುಗಳನ್ನು ಚಾರ್ಜ್ ಮಾಡಲು ಚಾರ್ಜರ್ ಬಹಳ ಅವಶ್ಯಕ. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ನಾವು ಮೊಬೈಲ್ ಅನ್ನು ಚಾರ್ಜ್ ಗೆ ಹಾಕ್ತೇವೆ. ಕೆಲವರು ಅದಕ್ಕೂ ಹೆಚ್ಚಿನ ಬಾರಿ ಚಾರ್ಜ್ ಮಾಡ್ತಾರೆ. ಆಯಾ ಉಪಕರಣದ ಬ್ಯಾಟರಿ ಹೇಗಿರುತ್ತದೆ ಎನ್ನುವುದರ ಮೇಲೆ ಚಾರ್ಜ ಮಾಡುವುದು ಅನಿವಾರ್ಯವಾಗುತ್ತದೆ. ಒಟ್ಟಿನಲ್ಲಿ ಚಾರ್ಜರ್ ಅಂತು ಬೇಕೆ ಬೇಕು.

ಕೆಲವು ಚಾರ್ಜರ್ (Charger) ಗಳು ಕಪ್ಪು ಬಣ್ಣದ್ದಾಗಿರುತ್ತವೆ, ಇನ್ಕೆಲವು ಬಿಳಿ ಬಣ್ಣದ ಚಾರ್ಜರ್ ಗಳಾಗಿರುತ್ತವೆ. ಬಿಳಿ (White) ಬಣ್ಣದ ಚಾರ್ಜರ್ ಗಳು ಕೆಲ ಸಮಯದ ನಂತರ ಹಳದಿ ಬಣ್ಣಕ್ಕೆ ತಿರುಗುತ್ತದೆ. ನಾವು ನಿಯಮಿತವಾಗಿ ಬಳಸುವುದರಿಂದ ಬಿಳಿಯ ಚಾರ್ಜರ್ ಗಳು ಹಳದಿ ಬಣ್ಣಕ್ಕೆ ತಿರುಗಿರಬಹುದು ಅಥವಾ ಅದರ ಮೇಲೆ ಧೂಳು (Dust) ಕೂತು ಹಳದಿ ಬಣ್ಣಕ್ಕೆ ತಿರುಗಿರಬಹುದೆಂದು ನಾವು ಅಂದುಕೊಳ್ತೇವೆ. ಆದರೆ ಚಾರ್ಜರ್ ಹಾಗೆ ಹಳದಿ (Yellow) ಬಣ್ಣಕ್ಕೆ ತಿರುಗಲು ಅನೇಕ ಕಾರಣಗಳಿವೆ.

ಇಬ್ಬರು ಹಿಂದೂ ಪತ್ನಿಯರಿಗೆ ಡಿವೋರ್ಸ್​ ಕೊಟ್ಟ ಆಮೀರ್​ ಖಾನ್​ ಬಾಳಲ್ಲಿ 3ನೇ ಎಂಟ್ರಿ ಈ ನಟಿ?

ಚಾರ್ಜರ್ ಹಳೆಯದಾದಾಗ ಮಾತ್ರ ಹಳದಿ ಬಣ್ಣಕ್ಕೆ ತಿರುಗುವುದಿಲ್ಲ. ಹೀಗೆ ಚಾರ್ಜರ್ ಹಳದಿ ಬಣ್ಣಕ್ಕೆ ತಿರುಗುವುದು ಬಹಳ ಡೇಂಜರಸ್ ಎಂದು ರೆಡಿಟ್ (Reddit) ಯೂಸರ್ ಒಬ್ಬರು ಹೇಳಿದ್ದಾರೆ. ಚಾರ್ಜರ್ ಹೀಗೆ ಹಳದಿ ಬಣ್ಣಕ್ಕೆ ತಿರುಗುವುದರ ಕುರಿತು ಅನೇಕ ಮಂದಿ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಒಬ್ಬರು ನಾವು ಚಾರ್ಜರ್ ಅನ್ನು ಹೆಚ್ಚು ಹೆಚ್ಚು ಬಳಸೋದ್ರಿಂದ ಅದು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಚಾರ್ಜರ್ ಗೆ ಬೆಂಕಿ ತಗಲುವ ಅಪಾಯ ಕೂಡ ಇದೆ. ಆದ್ದರಿಂದ ಹಳದಿ ಬಣ್ಣಕ್ಕೆ ತಿರುಗಿದ ಚಾರ್ಜರ್ ಅನ್ನು ಬೇಗ ಬದಲಿಸುವುದು ಅಗತ್ಯ ಎಂದಿದ್ದಾರೆ.

ಚಾರ್ಜರ್ ಅನ್ನು ಹೀಗೆ ಬಳಸಿ : ನಾವು ಚಾರ್ಜರ್ ಗಳನ್ನು ಹೇಗೆ ಬಳಸುತ್ತೇವೆ ಎನ್ನುವುದರ ಮೇಲೂ ಅದರ ಬಾಳಿಕೆ ಅವಲಂಬಿತವಾಗಿರುತ್ತದೆ. ಚಾರ್ಜರ್ ಗಳನ್ನು ಅನ್ ಪ್ಲಗ್ ಮಾಡುವಾಗ ಅದರ ಕೇಬಲ್ ಹಿಡಿದು ಅದನ್ನು ತೆಗೆಯಬಾರದು. ಯಾವಾಗಲೂ ಚಾರ್ಜರ್ ಅನ್ನು ತೆಗೆಯುವಾಗ ಅದರ ಕನೆಕ್ಟರ್ ಅನ್ನು ಹಿಡಿದು ತೆಗೆಯಬೇಕು. ಚಾರ್ಜರ್ ಕೇಬಲ್ ಅನ್ನು ಹಿಡಿದು ತೆಗೆಯುವುದರಿಂದ ಚಾರ್ಜರ್ ಬೇಗ ಹಾಳಾಗುತ್ತದೆ ಮತ್ತು ಅದು ಶಾಖವನ್ನು ಹೊರಹಾಕುವ ಸಾಧ್ಯತೆ ಇರುತ್ತದೆ.

ವೀರ್ಯದ ಸಂಖ್ಯೆ ಕಡಿಮೆಯಾಗಲು ಇವೆಲ್ಲ ಕಾರಣ ಎನ್ನುತ್ತೆ ಅಧ್ಯಯನ

ಚಾರ್ಜರ್ ಅನ್ನು ಫೋಲ್ಡ್ ಮಾಡಿ ಇಡುವುದರಿಂದ ಅದರ ಒಳಗಿನ ತಾಮ್ರದ ತಂತಿಯ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಹೆಚ್ಚಿನ ಒತ್ತಡದಿಂದ ಚಾರ್ಜರ್ ತುಂಡಾಗಬಹುದು ಎಂದು ಒಬ್ಬ ರೆಡಿಟ್ ಬಳಕೆದಾರರು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಆ್ಯಪಲ್ ಕಂಪನಿಯ ಕೇಬಲ್ ನಲ್ಲಿ ಕೂಡ ಈ ರೀತಿಯ ಸಮಸ್ಯೆಗಳು ಕಂಡುಬರುತ್ತವೆ ಎಂದಿದ್ದಾರೆ. ಇದರಲ್ಲಿರುವ ಇನ್ಸುಲೇಶನ್ ಕೇಬಲ್ ಸವೆದುಹೋಗಿ ಅದರಿಂದ ಶಾಖವು ಬಿಡುಗಡೆಯಾಗುತ್ತದೆ. ಹೆಚ್ಚಿನ ಶಾಖದಿಂದ ಕೇಬಲ್ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ ಎಂದಿದ್ದಾರೆ.

ಕೆಲವೊಮ್ಮೆ ವೋಲ್ಟೇಜ್ ಸಮಸ್ಯೆಗಳಿಂದಲೂ ಕೇಬಲ್ ಬಣ್ಣ ಬದಲಾಗುವುದು, ಚಾರ್ಜರ್ ಬಿಸಿಯಾಗುವುದು ಅಥವಾ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ. ಹೀಗೆ ಚಾರ್ಜರ್ ಬಣ್ಣ ಬದಲಾಗಲು ಅನೇಕ ಮಂದಿ ಹಲವಾರು ಕಾರಣಗಳನ್ನು ಹೇಳಿದ್ದಾರೆ. ಹಾಗಾಗಿ ಚಾರ್ಜಿಂಗ್ ಕೇಬಲ್ ಬಣ್ಣ ಹಳದಿ ಬಣ್ಣಕ್ಕೆ ತಿರುಗಿದ ತಕ್ಷಣ ನಿಮ್ಮ ಚಾರ್ಜರ್ ಅನ್ನು ಬದಲಾಯಿಸಿಕೊಳ್ಳುವುದು ಒಳ್ಳೆಯದು. ಇಲ್ಲವಾದಲ್ಲಿ ಚಾರ್ಜರ್ ಸಮಸ್ಯೆಯಿಂದ ನಿಮಗೆ ಅಥವಾ ನಿಮ್ಮ ಮೊಬೈಲ್ ಗೆ ಹಾನಿಯಾಗಬಹುದು.
 

Latest Videos
Follow Us:
Download App:
  • android
  • ios