Asianet Suvarna News Asianet Suvarna News

ದೀಪಾವಳಿಗೆ ಜಿಯೋ ನೆಕ್ಸ್ಟ್ ಸ್ಮಾರ್ಟ್‌ಫೋನ್ ಲಾಂಚ್ ಪಕ್ಕಾ

ಸೆಪ್ಟೆಂಬರ್ 10ಕ್ಕೆ ಅಂದರೆ ಗಣೇಸ ಹಬ್ಬಕ್ಕೆ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಲಾಂಚ್ ಮಾಡುವುದಾಗಿ ರಿಲಯನ್ಸ್ ಕಂಪನಿ ಘೋಷಿಸಿತ್ತು. ಆದರೆ, ಇದೀಗ ಫೋನ್ ಅನ್ನು ದೀಪಾವಳಿಗೆ ಮಾಡುವುದಾಗಿ ಹೇಳಿಕೊಂಡಿದೆ. ಗೂಗಲ್‌ ಜತೆಗೂಡಿ ರಿಲಯನ್ಸ್ ಈ ಫೋನ್ ಅನ್ನು ಅಭಿವೃದ್ಧಿಪಡಿಸುತ್ತದೆ. ಹಾಗೆಯೇ, ಇದು ತೀರಾ ಅಗ್ಗದ ಬೆಲೆಗೆ ಮಾರಾಟವಾಗಲಿದೆ.

JioPhone Next will be launched to Diwali festival
Author
Bengaluru, First Published Sep 12, 2021, 11:49 AM IST

ಭಾರೀ ನಿರೀಕ್ಷೆಯ ಜಿಯೋ ಫೋನ್ ಬಿಡುಗಡೆಯ ದೀಪಾವಳಿಗೆ ಮುಂದೂಡಿಕೆಯಾಗಿದೆ. ವಾಸ್ತವದಲ್ಲಿ ಈ ಫೋನ್ ಅನ್ನು ಕಂಪನಿಯು ಗಣೇಶ ಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ರಿಲಯನ್ಸ್ ಕಂಪನಿಯು ಕಳೆದ ಜೂನ್ ತಿಂಗಳಲ್ಲಿ  ಹೇಳಿಕೊಂಡಿತ್ತು. ಫೋನ್ ಪ್ರಯೋಗ ನಡೆದಿದ್ದು, ದೀಪಾವಳಿ ಮುನ್ನವೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಈಗ ತಿಳಿಸಿದೆ.

ಈ ವರ್ಷದ ದೀಪಾವಳಿಯನ್ನು ನವೆಂಬರ್ 4ರಂದು ಆಚರಿಸಲಾಗತ್ತಿದೆ. ಹಾಗಾಗಿ ನವೆಂಬರ್ ತಿಂಗಳಲ್ಲಿ ಈ ಅಗ್ಗದ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಅನ್ನು ಬಳಕೆದಾರರು ನಿರೀಕ್ಷಿಸಬಹುದಾಗಿದೆ. ರಿಲಯನ್ಸ್ ಮತ್ತು ಗೂಗಲ್‌ಗಳೆರಡೂ ಜತೆಗೂಡಿ ಈ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಅನ್ನು ಅಭಿವೃದ್ಧಿಗೊಳಿಸುತ್ತಿವೆ.

ಲೆನೋವೋ ಐಡಿಯಾಪ್ಯಾಡ್ ಸ್ಲಿಮ್ 5ಪ್ರೋ ಲ್ಯಾಪ್‌ಟ್ಯಾಪ್ ಬಿಡುಗಡೆ

ಜಿಯೋ ಫೋನ್ ಮುಂದಿನ ಬೆಲೆ ಮತ್ತು ವಿತರಣಾ ಯೋಜನೆಗಳ ಘೋಷಣೆಯಲ್ಲಿನ ವಿಳಂಬವು ಜಾಗತಿಕ ಸೆಮಿಕಂಡಕ್ಟರ್ ಕೊರತೆಯೊಂದಿಗೆ ಬೆಸೆದುಕೊಂಡಂತಿದೆ. ಯಾಕೆಂದರೆ, ಜಿಯೋ ತನ್ನ ಪ್ರಕಟಣೆಯಲ್ಲಿ ಈಗ ತೆಗೆದುಕೊಳ್ಳಲಾಗುತ್ತಿರುವ ಹೆಚ್ಚುವರಿ ಸಮಯವು ಪ್ರಸ್ತುತ ಉದ್ಯಮದಾದ್ಯಂತ, ಜಾಗತಿಕವಾಗಿ ಎದುರಾಗಿರುವ ಸೆಮಿಕಂಡಕ್ಟರ್ ಕೊರತೆಯನ್ನು ತಗ್ಗಿಸಲು ನೆರವು ನೀಡಲಿದೆ ಎಂದು ತಿಳಿಸಿದೆ. ಅಂದರೆ, ಸೆಮಿಕಂಡಕ್ಟರ್ ಪೂರೈಕೆ ಕೊರತೆಯು ಜಿಯೋ ಫೋನ್ ವಿಳಂಬಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಬಹುದಾಗಿದೆ. 

ಸೆಪ್ಟೆಂಬರ್ 10ರಂದು ಅಂದರೆ ಗಣೇಶ ಹಬ್ಬಕ್ಕೆ ಜಿಯೋಫೋನ್ ನೆಕ್ಸ್ಟ್ ಲಾಂಚ್ ಮಾಡುವುದಾಗಿ ರಿಲಯನ್ಸ್ ಜಿಯೋ ಈ ಹಿಂದೆಯೇ ಘೋಷಿಸಿತ್ತು. ಆದರೆ, ಗಣೇಶ ಹಬ್ಬ ಮುಗಿದರೂ ಇನ್ನೂ ಫೋನ್ ಬಿಡುಗಡೆಯಾಗಿಲ್ಲ. ಹಾಗಾಗಿಯೇ ಅದು ಪ್ರಕಟಣೆ ನೀಡಿ, ದೀಪಾವಳಿ ಹೊತ್ತಿಗೆ ಫೋನ್ ಲಾಂಚ್ ಮಾಡುವುದಾಗಿ ಹೇಳಿಕೊಂಡಿದೆ. ಅಗ್ಗದ ಫೋನ್ ಎಂದು ಹೇಳಲಾಗುತ್ತಿದೆಯಾದರೂ ಅದರ ಬೆಲೆ ಎಷ್ಟಿದೆ ಎಂಬುದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ಕೆಲವು ಸೋರಿಕೆ ಮಾಹಿತಿಗಳ ಪ್ರಕಾರ, ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಬೆಲೆ 3,499 ರೂ. ಇರಲಿದೆ ಎಂದು ಹೇಳಲಾಗುತ್ತದೆ.

ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ 11 ಒಎಸ್‌ನಿಂದ ರನ್ ಆಗಲಿದೆ. ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ಇರಬಹುದು. ಎಚ್‌ಡಿ ಡಿಸ್‌ಪ್ಲೇ ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

IT ನಿಯಮದಡಿ 30 ಲಕ್ಷಕ್ಕೂ ಅಧಿಕ ಖಾತೆ ನಿಷೇಧಿಸಿದ ವಾಟ್ಸಾಪ್!

ಈ ಫೋನ್ ಮಾಡೆಲ್ LS-5701-J ನಂಬರ್ ಹೊಂದಿದೆ. ಗೂಗಲ್‌ನ ಗೋ ಎಡಿಷನ್ ಆಂಡ್ರಾಯ್ಡ್ 11 ಒಎಸ್, 720x1,440 ಪಿಕ್ಸೆಲ್ ಪ್ರದರ್ಶಕ, ಕ್ವಾಲಕಾಂ QM215 ಎಸ್ಒಸಿ ಅನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದು 64-ಬಿಟ್, ಕ್ವಾಡ್ ಕೋರ್ ಮೊಬೈಲ್ ಪ್ರೊಸೆಸರ್ ಜೊತೆಗೆ ಕ್ವಾಲಕಾಮ್ ಅಡ್ರಿನೊ 308 ಜಿಪಿಯು ಹೊಂದಿದೆ. ಇದನ್ನು ಕಡಿಮೆ-ಮಟ್ಟದ ಸಾಧನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಂತರ್ನಿರ್ಮಿತ ಕ್ವಾಲಕಾಮ್ ಸ್ನಾಪ್‌ಡ್ರಾಗನ್ X5 LTE ಮೋಡೆಮ್‌, ಬ್ಲೂಟೂತ್ v4.2, GPS, 1080ಪಿ ವಿಡಿಯೋ ರೆಕಾರ್ಡಿಂಗ್, ಎಲ್‌ಡಿಪಿಆರ್ 3 ರ್ಯಾಮ್, ಮತ್ತು ಇಎಂಎಂಸಿ 4.5 ಸ್ಟೋರೇಜ್ ಹೊಂದಿರುವ ಸಾಧ್ಯತೆ ಇದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಎಷ್ಟಿದೆ?

ಇಷ್ಟೆಲ್ಲ ಫೀಚರ್‌ಗಳ ಜೊತೆಗೆ, ಜಿಯೋಫೋನ್‌ ನೆಕ್ಸ್ಟ್ ಹಿಂಬದಿಯಲ್ಲಿ ಒಂದೇ ಕ್ಯಾಮೆರಾ ಹೊಂದಿರಬಹುದು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಇತ್ತೀಚಿನ ಎಲ್ಲ ಸ್ಮಾರ್ಟ್‌ಫೋನ್‌ಗಳು ಕನಿಷ್ಠ ಎರಡು ಕ್ಯಾಮೆರಾಗಳಾದರೂ ಇರುತ್ತವೆ. ಆದರೆ, ಜಿಯೋಫೋನ್‌ನೆಕ್ಸ್ಟ್ ಸ್ಮಾರ್ಟ್‌ಫೋನ್‌ನಲ್ಲಿ 13 ಮೆಗಾ ಪಿಕ್ಸೆಲ್ ಸಿಂಗಲ್ ಕ್ಯಾಮೆರಾ ಹಿಂಬದಿಯಲ್ಲಿ ಇರಲಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗೆ ನೆರವಾಗಲು 8 ಮೆಗಾ ಪಿಕ್ಸೆಲ್ ಇರಲಿದೆ ಎಂಬ ಮಾಹಿತಿ ಸೋರಿಕೆಯಾಗಿದೆ. ಸ್ನ್ಯಾಪ್‌ಚಾಟ್ ಇಂಟಿಗ್ರೇಷನ್ ಜತೆಗೆ ಗೂಗಲ್ ಕ್ಯಾಮೆರಾ ಗೋನ ಹೊಸ ವರ್ಷನ್ ಪ್ರಿ ಇನ್ಸ್‌ಟಾಲ್ ಆಗಿ ಬರಲಿದೆ. 

Follow Us:
Download App:
  • android
  • ios