Asianet Suvarna News Asianet Suvarna News

ಲೆನೋವೋ ಐಡಿಯಾಪ್ಯಾಡ್ ಸ್ಲಿಮ್ 5ಪ್ರೋ ಲ್ಯಾಪ್‌ಟ್ಯಾಪ್ ಬಿಡುಗಡೆ

ಲ್ಯಾಪ್‌ಟ್ಯಾಪ್ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಚೀನಾ ಮೂಲದ ಲೆನೋವೋ ಕಂಪನಿಯು ಭಾರತೀಯ ಮಾರುಕಟ್ಟೆಗೆ ಐಡಿಯಾಪ್ಯಾಡ್ ಸರಣಿಯಲ್ಲಿ ಮತ್ತೊಂದು ಹೊಸ ಸ್ಲಿಮ್ 5 ಪ್ರೊ ಎಂಬ ಲ್ಯಾಪ್‌ಟ್ಯಾಪ್ ಅನ್ನು ಬಿಡುಗಡೆ ಮಾಡಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಲ್ಯಾಪ್‌ಟ್ಯಾಪ್ ಅನ್ನು ಸ್ಟ್ರೀಮಿಂಗ್‌ಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. 

Lenovo IdeaPad Slim 5 Pro laptop launched to Indian market
Author
Bengaluru, First Published Sep 7, 2021, 5:31 PM IST

ಚೀನಾ ಮೂಲದ ಲೆನೋವೋ ಕಂಪನಿಯ ಐಡಿಯಾಪ್ಯಾಡ್ ಸರಣಿಯ ಲ್ಯಾಪ್‌ಟ್ಯಾಪ್‌ಗಳು ಹೆಚ್ಚು ಗಮನ ಸೆಳೆದಿವೆ. ಬಳಕೆದಾರರಿಂದಲೂ ಉತ್ತಮ ಪ್ರತಿಕ್ರಿಯೆ ಇದೆ. ಹಾಗಾಗಿ, ಕಂಪನಿಯು ಈ ಸರಣಿಯಲ್ಲಿ ಅನೇಕ ಲ್ಯಾಪ್‌ಟ್ಯಾಪ್‌ಗಳನ್ನು ಮಾರಾಟ ಮಾಡಿದೆ. ಈಗ ಲೆನೋವೋ ಭಾರತೀಯ ಮಾರುಕಟ್ಟೆಗೆ ಐಡಿಯಾಪ್ಯಾಡ್ ಸರಣಿಯಲ್ಲಿ ಹೊಸ ಲ್ಯಾಪ್‌ಟ್ಯಾಪ್ ಲಾಂಚ್ ಮಾಡಿದೆ.

IT ನಿಯಮದಡಿ 30 ಲಕ್ಷಕ್ಕೂ ಅಧಿಕ ಖಾತೆ ನಿಷೇಧಿಸಿದ ವಾಟ್ಸಾಪ್!

ಲೆನೋವೋ ಐಡಿಯಾಪ್ಯಾಡ್  ಸ್ಲಿಮ್ 5 ಪ್ರೋ. ಇದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾದ ಲೆನೋವೋ ಕಂಪನಿಯ ಹೊಸ ಲ್ಯಾಪ್‌ಟ್ಯಾಪ್. ಐಡಿಯಾಪ್ಯಾಡ್‌ ಸರಣಿಯ ಈ ಹೊಸ ಮಾಡೆಲ್‌ನ ಲ್ಯಾಪ್‌ಟ್ಯಾಪ್‌ನ ವಿಶೇಷತೆ ಏನೆಂದರೆ, ಇದು ಸ್ಟ್ರೀಮಿಂಗ್ ಹೆಚ್ಚು ಸಪೋರ್ಟ್ ಮಾಡುವಂತೆ ವಿನ್ಯಾಸ ಮಾಡಲಾಗಿದೆ ಹಾಗೂ 2.2ಕೆ ಐಪಿಎಸ್ ಪ್ರದರ್ಶಕವನ್ನು ನೀಡಲಾಗಿದೆ. ಇದರಿಂದಾಗಿ ಇದು ವಿಶಿಷ್ಟ ಲ್ಯಾಪ್‌ಟ್ಯಾಪ್ ಆಗಿ ಹೊರಹೊಮ್ಮಿದೆ.

ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ವಿಶೇಷ ಫೀಚರ್‌ಗಳನ್ನು ತಾವು ಗಮನಿಸಬಹುದು. ಡಾಲ್ಬಿ ಆಟ್ಮೋಸ್ ಆಡಿಯೋ ಟೆಕ್ನಾಲಜಿ, ಝೀರೋ ಟಚ್ ಲಾಗಿನ್, ಡುಯಲ್ ಆರೇ ಮೈಕ್ರೋಫೋನ್ಸ್ ಫೀಚರ್‌ಗಳಿವೆ. 11ನೇ ಜನರೇಷನ್‌ನ ಇಂಟೆಲ್ ಕೋರ್ ಮತ್ತು ಎಎಂಡಿ ರಾಯ್ಜೆನ್ ಪ್ರೊಸೆರ್‌ ಅನ್ನು ನೀವು ಈ ಲೆನೋವೋ ಐಡಿಯಾ ಪ್ಯಾಡ್ ಸ್ಲಿಮ್ 5 ಪ್ರೋ ಲ್ಯಾಪ್‌ಟಾಪ್‌ನಲ್ಲಿ ಕಾಣಬಹುದಾಗಿದೆ.

ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಲೆನೋವೋ ಐಡಿಯಾಪ್ಯಾಡ್ ಸ್ಲಿಮ್ 5 ಪ್ರೋ ಲ್ಯಾಪ್‌ಟ್ಯಾಪ್ ನಿಮಗೆ ಗ್ರೇ ಬಣ್ಣದಲ್ಲಿ ಸಿಗಲಿದೆ. ಲೆನೋವೋ ಕಂಪನಿಯ ಅಧಿಕೃತ ವೆಬ್ಸೈಟ್, ಇ-ಕಾಮರ್ಸ್ ತಾಣಗಳು ಹಾಗೂ ದೇಶಾದ್ಯಂತ ಇರುವ ಆಫ್‌ಲೈನ್‌ ಸ್ಟೋರ್‌ಗಳಲ್ಲಿ  ಈ ಲ್ಯಾಪ್‌ಟಾಪ್ ಮಾರಾಟಕ್ಕೆ ಸಿಗಲಿದೆ. ಭಾರತದಲ್ಲಿ ಈ ಐಡಿಯಾಪ್ಯಾಡ್ ಸ್ಲಿಮ್ 5 ಪ್ರೋ ಲ್ಯಾಪ್‌ಟ್ಯಾಪ್  ಬೆಲೆ 77990 ರೂ.ನಿಂದ ಆರಂಭವಾಗುತ್ತದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಎಷ್ಟಿದೆ?

ಇನ್ನು ಲೆನೋವೋ ಐಡಿಯಾಪ್ಯಾಡ್ ಸ್ಲಿಮ್ 5 ಪ್ರೋ ವಿಶೇಷತೆಗಳ ಬಗ್ಗೆ ಹೇಳುವುದಾರೆ, ಹಲವು ಹೊಸತನಗಳನ್ನು ಕಾಣಬಹುದಾಗಿದೆ. ಈ ಲ್ಯಾಪ್‌ಟ್ಯಾಪ್ ವಿಂಡೋಸ್ 10 ಆಧರಿತವಾಗಿದ್ದು, ನೀವಿದನ್ನು ವಿಂಡೋಸ್ 11ಕ್ಕೆ ಅಪ್‌ಗ್ರೇಡ್ ಕೂಡ ಮಾಡಬಹುದು. ಇದು 14 ಇಂಚ್ 2.2 ಕೆ ಮತ್ತು 16 ಇಂಚ್ ಡಬ್ಲ್ಯೂಕ್ಯೂಎಕ್ಸ್‌ಜಿಎ ಐಪಿಎಸ್ ಆಂಟಿ ಗ್ಲೇರ್ ಡಿಸ್‌ಪ್ಲೇ ವರ್ಷನ್ ಹೊಂದಿದೆ. ಹಾಗೆಯೇ ಇದು 11ನೇ ಜನರೇಷನ್ ಇಂಟೆಲ್ ಕೋರ್ ಐ5 ಮತ್ತು ಕೋರ್ ಐ7 ಜೊತೆಗೆ ಎಎಂಡಿ ರಾಯ್ಜೆನ್ 7 ಆಯ್ಕೆಗಳಲ್ಲಿ ದೊರೆಯಲಿದೆ. 16 ಇಂಚ್ ಲ್ಯಾಪ್‌ಟ್ಯಾಪ್ 350 ನಿಟ್ಸ್ ಪೀಕ್ ಬ್ರೈಟ್ನೆಸ್ ಹೊಂದಿದ್ದರೆ, 14 ಇಂಚ್ 300 ನಿಟ್ಸ್ ಪೀಕ್‌ ಬ್ರೈಟ್ನೆಸ್ ಹೊಂದಿದೆ.

ಲೆನೋವೋ ಈ ಲ್ಯಾಪ್‌ಟ್ಯಾಪಿಗೆ 16 ಜಿಬಿಯ ಡಿಡಿಆರ್4 ರ್ಯಾಮ್ ಮತ್ತು ಎಸ್ಎಸ್‌ಡಿ ಎಂ.2 ಪಿಸಿಎಲ್ಇನ 1 ಟಿಬಿವರೆಗೆ ಸ್ಟೋರೇಜ್‌ ಅನ್ನು ಒದಗಿಸುತ್ತದೆ. ಐಡಿಯಾಪ್ಯಾಡ್ ಸ್ಲಿಮ್ 5 ಪ್ರೊ ಇಂಟೆಲ್ ಐರಿಸ್ Xe, ಇಂಟಿಗ್ರೇಟೆಡ್ AMD ರೇಡಿಯನ್ ಮತ್ತು Nvidia GeForce ಗ್ರಾಫಿಕ್ಸ್ ಸಪೋರ್ಟ್ ಕೂಡ ಹೊಂದಿದೆ. ಇನ್ನು ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ ಲೆನೋವೋ ಐಡಿಯಾಪ್ಯಾಡ್ ಸ್ಲಿಮ್ 5 ಪ್ರೋ ಲ್ಯಾಪ್‌ಟ್ಯಾಪ್ ವೈಫೈ 6, ಬ್ಲೂಟೂಥ್ ವಿ 5.1 ಜೊತೆಗೆ ಇನ್ನಿತರ ಪೋರ್ಟ್ಸ್ ಮತ್ತು ಕನೆಕ್ಟರ್‌ಗಳನ್ನು ಕಾಣಬಹುದಾಗಿದೆ.

ಹಬ್ಬಕ್ಕೆ ಭಾರತೀಯ ಮಾರುಕಟ್ಟೆಗೆ ಏಸರ್ ಸ್ಮಾರ್ಟ್‌ ಟಿವಿ ಲಾಂಚ್

ಈ ಲ್ಯಾಪ್‌ಟ್ಯಾಪ್‌ನಲ್ಲಿ ನೀವು 720ಪಿ  ವೆಬ್‌ಕ್ಯಾಮ್ ಇರುವುದನ್ನು ಕಾಣಬಹುದು. ಈ ವೆಬ್‌ಕ್ಯಾಮ್ ಟೈಮ್ ಆಫ್ ಫೈಟ್(ಟಿಒಎಫ್) ಮತ್ತು ವಿಂಡೋಸ್ ಹೆಲ್ಲೋ ಮೂಲಕ ಫಿಷಿಯಲ್ ರೆಕಗ್ನೇಷನ್ ಸಕ್ರಿಯಕ್ಕಾಗಿ ಐಆರ್‌ ಸೆನ್ಸೆರ್‌ನೊಂದಿಗೆ ಇದು ಬರುತ್ತದೆ. ಈ ಲ್ಯಾಪ್‌ಟ್ಯಾಪ್ ಲೆನೋವೋ ಝೀರೋ ಟಚ್ ಲಾಗಿನ್ ಫೀಚರ್ ಅನ್ನು ಸೇರಿಸಿದೆ. ಅಂದರೆ, ನೀವು ಲ್ಯಾಪ್‌ಟ್ಯಾಪ್‌ನ ಲಿಡ್ ಅನ್ನು ಸುಮ್ಮನೆ ತೆರೆದರೂ ಸಾಕು ಬಳಕೆದಾರರು ಲ್ಯಾಪ್‌ಟ್ಯಾಪ್ ಶುರುವಾಗುತ್ತದೆ. ಹೀಗೆ ಹಲವು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿರುವ ಈ ಲ್ಯಾಪ್‌ಟ್ಯಾಪ್ ಬಳಕೆದಾರರನ್ನು ಯಾವ ರೀತಿ ಸೆಳೆಯಲಿದೆ ನೋಡಬೇಕು.

Follow Us:
Download App:
  • android
  • ios