ಜಿಯೋಫೋನ್ ನೆಕ್ಸ್ಟ್‌ ಖರೀದಿಗೆ ಮುಂದಿನ ವಾರದಿಂದ ಬುಕ್ಕಿಂಗ್?

ರಿಲಯನ್ಸ್ ಕಂಪನಿಯ ಬಹು ನಿರೀಕ್ಷಿತ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಬಿಡುಗಡೆಯ ಬಗ್ಗೆ ಮತ್ತೆ ಸುದ್ದಿಯಾಗುತ್ತಿದೆ. ರಿಲಯನ್ಸ್ ಮತ್ತು ಗೂಗಲ್ ಜತೆಗೂಡಿ ಅಭಿವೃದ್ಧಿಪಡಿಸಿರುವ ಈ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಗೆ ಮುಂದಿನ ವಾರದಿಂದ ಬುಕ್ಕಿಂಗ್ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

JioPhone Next pre-booking may from next week

ಜಿಯೋ ಟೆಲಿಕಾಂ ಸೇವೆ ಮೂಲಕ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಕಂಪನಿ ಇದೀಗ ಸ್ಮಾರ್ಟ್‌ಫೋನ್ ತಯಾರಿಕೆಗೆ ಮುಂದಾಗಲಿದೆ. ಗೂಗಲ್ ಜತೆಗೂಡಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಗಣೇಶ ಹಬ್ಬಕ್ಕೆ ಬಿಡುಗಡೆ ಮಾಡಲಿದೆ.

ರಿಲಯನ್ಸ್ ಕಂಪನಿ ಕಂಪನಿ ಬಿಡುಗಡೆ ಮಾಡಲಿರುವ ಸ್ಮಾರ್ಟ್‌ಫೋನ್ ಹೆಸರು ಜಿಯೋಫೋನ್ ನೆಕ್ಸ್ಟ್. ಸದ್ಯದಲ್ಲೇ ಲಾಂಚ್ ಆಗಲಿರುವ ಈ ಫೋನ್‌ಗೆ ಕಂಪನಿ ಮುಂದಿನ ವಾರದಿಂದ ಮುಂಗಡ ಬಕ್ಕಿಂಗ್ ಆರಂಭಿಸುವ ಸಾಧ್ಯತೆ ಇದೆ. ಈ ಸ್ಮಾರ್ಟ್‌ಫೋನ್ ಅನ್ನು ರಿಲಯನ್ಸ್ ಜಿಯೋ ಮತ್ತು ಮತ್ತು ಗೂಗಲ್ ಗಳೆರಡೂ ಸೇರಿ ಅಭಿವೃದ್ಧಿಪಡಿಸಿವೆ. ಈ ಜಿಯೋ ನೆಕ್ಸ್ಟ್ ಸ್ಮಾರ್ಟ್‌ಫೋನ್ ವಿಶೇಷತೆ ಏನೆಂದರೆ, ಎಲ್ಲರಿಗೂ ಕೈಗೆಟುಕುವ ದರದಲ್ಲಿ ಸಿಗಲಿದೆ. ತೀರಾ ಅಗ್ಗದ ದರದಲ್ಲಿ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಒದಗಿಸುವುದು ಕಂಪನಿಯ ಗುರಿಯಾಗಿದೆ. 

ಸೆ.3ಕ್ಕೆ ರೆಡ್‌ಮಿ 10 ಪ್ರೈಮ್ ಸ್ಮಾರ್ಟ್‌ಫೋನ್ ಲಾಂಚ್ ಫಿಕ್ಸ್

ಕಳೆದ ಜೂನ್ ತಿಂಗಳಲ್ಲಿ ರಿಲಯನ್ಸ್ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ನಡೆದಿತ್ತು. ಈ ವೇಳೆ ರಿಲಯನ್ಸ್ ಕಂಪನಿ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಅಗ್ಗದ ಸ್ಮಾರ್ಟ್‌ಫೋನ್ ಜಿಯೋಫೋನ್ ನೆಕ್ಸ್ಟ್ ಲಾಂಚ್ ಮಾಡುವ ಬಗ್ಗೆ ಮಾಹಿತಿ ನೀಡಿದ್ದರು. ಜೊತೆಗೆ, ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸುವುದನ್ನು ಖಚಿತಪಡಿಸಿದ್ದರು. ಆದರೆ, ಈ ಬಗ್ಗೆ ಇನ್ನೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಹೀಗಿದ್ದಾಗ್ಯೂ, ಕಂಪನಿ ಈಗ ಫೋನ್ ಲಾಂಚ್‌ಗೆ ಸನ್ನದ್ಧವಾಗಿದ್ದು, ಮುಂದಿನವಾರದಿಂದ ಬುಕ್ಕಿಂಗ್ ಆರಂಭವಾಗುವ ಸಾಧ್ಯತೆದೆ. 

ಕೆಲವು ಸುದ್ದಿತಾಣಗಳ ವರದಿಗಳ ಪ್ರಕಾರ, ಮುಂದಿನ ವಾರದಿಂದ ಮುಂಗಡ  ಬುಕ್ಕಿಂಗ್ ಆರಂಭವಾಗಲಿದೆ. ಈ ಬುಕ್ಕಿಂಗ್ ಆರ್ಡರ್ ಸ್ವೀಕರಿಸುವ ಸಂಬಂಧ ರಿಟೇಲ್ ಪಾರ್ಟರ್ನರ್ ಜತೆಗೆ ರಿಲಯನ್ಸ್ ಜಿಯೋ ಮಾತುಕತೆ ನಡೆಸಿದೆ ಎನ್ನಲಾಗಿದೆ. 
 

JioPhone Next pre-booking may from next week

ರಿಲಯನ್ಸ್ ಕಂಪನಿ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಅನ್ನು ಕೈಗೆಟುಕುವ ದರದಲ್ಲಿ ನೀಡಲಿದೆ ಎಂದು ಹೇಳಲಾಗುತ್ತಿದೆಯಾದರೂ, ನಿಖರವಾಗಿ ಅದರ ಬೆಲೆ ಎಷ್ಟಿರಲಿದೆ ಎಂಬುದನ್ನು ಕಂಪನಿಯೂ ಇದುವರೆಗೂ ಮಾಹಿತಿ ನೀಡಿಲ್ಲ. ಭಾರತ ಮಾತ್ರವಲ್ಲದೇ ಇಡೀ ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಲಿದೆ ಎಂದು ಜಿಯೋ ಹೇಳಿಕೊಂಡಿದೆ. ಕೆಲವು ಟಿಪ್ಸಟರ್‌ಗಳ ಪ್ರಕಾರ, ಈ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಬೆಲೆ ಅಂದಾಜು 3,499 ರೂ. ಇರಬಹುದು ಎಂದು ಹೇಳಲಾಗುತ್ತದೆ. ಆದರೆ, ಈ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ನೀಡಿಲ್ಲ.

ವಿವೋನಿಂದ ಮತ್ತೊಂದು ಫೋನ್ ಲಾಂಚ್. ಎಷ್ಟು ಬೆಲೆ, ಏನೆಲ್ಲ ವಿಶೇಷತೆಗಳಿವೆ?

ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ 11 ಒಎಸ್‌ನಿಂದ ರನ್ ಆಗಲಿದೆ. ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ಇರಬಹುದು. ಎಚ್‌ಡಿ ಡಿಸ್‌ಪ್ಲೇ ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ಫೋನ್ ಮಾಡೆಲ್ LS-5701-J ನಂಬರ್ ಹೊಂದಿದೆ. ಗೂಗಲ್‌ನ ಗೋ ಎಡಿಷನ್ ಆಂಡ್ರಾಯ್ಡ್ 11 ಒಎಸ್, 720x1,440 ಪಿಕ್ಸೆಲ್ ಪ್ರದರ್ಶಕ, ಕ್ವಾಲಕಾಂ QM215 ಎಸ್ಒಸಿ ಅನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದು 64-ಬಿಟ್, ಕ್ವಾಡ್ ಕೋರ್ ಮೊಬೈಲ್ ಪ್ರೊಸೆಸರ್ ಜೊತೆಗೆ ಕ್ವಾಲಕಾಮ್ ಅಡ್ರಿನೊ 308 ಜಿಪಿಯು ಹೊಂದಿದೆ. ಇದನ್ನು ಕಡಿಮೆ-ಮಟ್ಟದ ಸಾಧನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಂತರ್ನಿರ್ಮಿತ ಕ್ವಾಲಕಾಮ್ ಸ್ನಾಪ್‌ಡ್ರಾಗನ್ X5 LTE ಮೋಡೆಮ್‌, ಬ್ಲೂಟೂತ್ v4.2, GPS, 1080ಪಿ ವಿಡಿಯೋ ರೆಕಾರ್ಡಿಂಗ್, ಎಲ್‌ಡಿಪಿಆರ್ 3 ರ್ಯಾಮ್, ಮತ್ತು ಇಎಂಎಂಸಿ 4.5 ಸ್ಟೋರೇಜ್ ಹೊಂದಿರುವ ಸಾಧ್ಯತೆ ಇದೆ.

Made in Pakistan ಸ್ಮಾರ್ಟ್‌ಫೋನ್ ರಫ್ತು ಆರಂಭಿಸಿದ ಪಾಕ್

ಇಷ್ಟೆಲ್ಲ ಫೀಚರ್‌ಗಳ ಜೊತೆಗೆ, ಜಿಯೋಫೋನ್‌ ನೆಕ್ಸ್ಟ್ ಹಿಂಬದಿಯಲ್ಲಿ ಒಂದೇ ಕ್ಯಾಮೆರಾ ಹೊಂದಿರಬಹುದು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಇತ್ತೀಚಿನ ಎಲ್ಲ ಸ್ಮಾರ್ಟ್‌ಫೋನ್‌ಗಳು ಕನಿಷ್ಠ ಎರಡು ಕ್ಯಾಮೆರಾಗಳಾದರೂ ಇರುತ್ತವೆ. ಆದರೆ, ಜಿಯೋಫೋನ್‌ನೆಕ್ಸ್ಟ್ ಸ್ಮಾರ್ಟ್‌ಫೋನ್‌ನಲ್ಲಿ 13 ಮೆಗಾ ಪಿಕ್ಸೆಲ್ ಸಿಂಗಲ್ ಕ್ಯಾಮೆರಾ ಹಿಂಬದಿಯಲ್ಲಿ ಇರಲಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗೆ ನೆರವಾಗಲು 8 ಮೆಗಾ ಪಿಕ್ಸೆಲ್ ಇರಲಿದೆ ಎಂಬ ಮಾಹಿತಿ ಸೋರಿಕೆಯಾಗಿದೆ. ಸ್ನ್ಯಾಪ್‌ಚಾಟ್ ಇಂಟಿಗ್ರೇಷನ್ ಜತೆಗೆ ಗೂಗಲ್ ಕ್ಯಾಮೆರಾ ಗೋನ ಹೊಸ ವರ್ಷನ್ ಪ್ರಿ ಇನ್ಸ್‌ಟಾಲ್ ಆಗಿ ಬರಲಿದೆ. 

Latest Videos
Follow Us:
Download App:
  • android
  • ios