Gionee G13 Pro: iPhone 13 ರೀತಿಯ ಫ್ಲಾಟ್ ಫ್ರೇಮ್ ವಿನ್ಯಾಸದೊಂದಿಗೆ ಬಿಡುಗಡೆ!
Gionee G13 Pro ಶುಕ್ರವಾರ ಜನವರಿ 28 ರಂದು ಚೀನಾದಲ್ಲಿ ಬಿಡುಗಡೆಯಾಗಿದೆ. ಸ್ಮಾರ್ಟ್‌ಫೋನ್ Apple iPhone 13 ನಂತೆಯೇ ಫ್ಲಾಟ್ ಫ್ರೇಮ್, ಕ್ಯಾಮೆರಾ ಮಾಡ್ಯೂಲ್ ಮತ್ತು ಸೆಲ್ಫಿ ಕ್ಯಾಮೆರಾಕ್ಕಾಗಿ ನಾಚ್ ವಿನ್ಯಾಸವನ್ನು ಹೊಂದಿದೆ
Tech Desk: Gionee G13 Pro ಶುಕ್ರವಾರ ಜನವರಿ 28 ರಂದು ಚೀನಾದಲ್ಲಿ ಬಿಡುಗಡೆಯಾಗಿದೆ. ಸ್ಮಾರ್ಟ್‌ಫೋನ್ Apple iPhone 13 ನಂತೆಯೇ ಫ್ಲಾಟ್ ಫ್ರೇಮ್, ಕ್ಯಾಮೆರಾ ಮಾಡ್ಯೂಲ್ ಮತ್ತು ಸೆಲ್ಫಿ ಕ್ಯಾಮೆರಾಕ್ಕಾಗಿ ನಾಚ್ ವಿನ್ಯಾಸವನ್ನು ಹೊಂದಿದೆ. Gionee G13 Pro ಸ್ಮಾರ್ಟ್‌ಫೋನ್ HarmonyOS ರನ್ ಮಾಡುತ್ತದೆ ಮತ್ತು Unisoc T310 SoC ನಿಂದ ಚಾಲಿತವಾಗಿದೆ. ಇದನ್ನು 4GB RAM ಮತ್ತು 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. Gionee G13 Pro, ಎಲ್ಡರ್ಲಿ ಮೋಡ್ (Elderly Mode) ಮತ್ತು ಸ್ಮಾರ್ಟ್ ಮೋಡನ್ನು ಸಹ ಹೊಂದಿದೆ. ಎಲ್ಡರ್ಲಿ ಮೋಡ್ ಹೆಸರೇ ಸೂಚಿಸುವಂತೆ, ವಯಸ್ಸಾದವರಿಗೆ ಸ್ಮಾರ್ಟ್‌ಫೋನ್ ಬಳಸಲು ಸುಲಭವಾಗುತ್ತದೆ. ಇದು ವಯಸ್ಸಾದವರಿಗೆ ಮತ್ತು ದೃಷ್ಟಿಹೀನರಿಗೆ ದೊಡ್ಡ ಫಾಂಟ್‌ಗಳು ಮತ್ತು ಬಟನ್‌ಗಳು ವೈಶಿಷ್ಟ್ಯವನ್ನು ನೀಡುತ್ತದೆ.
Gionee G13 Pro ಬೆಲೆ, ಲಭ್ಯತೆ: ಹೊಸದಾಗಿ ಬಿಡುಗಡೆಯಾದ Gionee G13 Pro ಬೇಸ್ 4GB + 32GB ಸ್ಟೋರೇಜ್ ರೂಪಾಂತರಕ್ಕಾಗಿ CNY 529 (ಸುಮಾರು ರೂ. 6,200) ಬೆಲೆಯಲ್ಲಿ ಚೀನಾದಲ್ಲಿ ಲಭ್ಯವಿದೆ. ಇದದರ 4GB + 128GB ಸ್ಟೋರೇಜ್ ರೂಪಾಂತರದ ಬೆಲೆ CNY 699 (ಸುಮಾರು ರೂ. 8,200) ಆಗಿದೆ. ಇದನ್ನು ಮೂರು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ ಫರ್ಸ್ಟ್ ಸ್ನೋ ಕ್ರಿಸ್ಟಲ್ (First Snow Crystal), ಸೀ ಬ್ಲೂ (Sea Blue) ಮತ್ತು ಸ್ಟಾರ್ ಪಾರ್ಟಿ ಪರ್ಪಲ್ (Star Party Purple).
ಇದನ್ನೂ ಓದಿ: Motorola 200MP Camera ಪ್ಲ್ಯಾಗ್‌ಶಿಪ್ ಮೊಬೈಲ್ ಮತ್ತಷ್ಟು ಮಾಹಿತಿ ಲೀಕ್: ಜುಲೈ ಬಿಡುಗಡೆ ಪಕ್ಕಾ?
Gionee G13 Pro specifications: Gionee G13 Pro ಹಾರ್ಮೋನಿಓಎಸ್ ಔಟ್-ಆಫ್-ದಿ-ಬಾಕ್ಸ್ ರನ್ ಮಾಡುತ್ತದೆ. ಇದು 6.26-ಇಂಚಿನ Full-HD ಡಿಸ್ಪ್ಲೇಯನ್ನು ಹೊಂದಿದೆ. ಮೊಬೈಲ್ Unisoc T310 SoC ನಿಂದ ಚಾಲಿತವಾಗಿದ್ದು 4GB RAM ಮತ್ತು 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಫೋಟೋಗ್ರಾಓಇಗಾಗಿ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ, ಇದು 13-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಮತ್ತು ದ್ವಿತೀಯ ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಸೆಲ್ಫಿಗಳಿಗಾಗಿ, ಇದು 5-ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆಯುತ್ತದೆ.
Gionee G13 Pro ನಲ್ಲಿನ ಸಂಪರ್ಕ ಆಯ್ಕೆಗಳು 4G LTE, Wi-Fi, ಬ್ಲೂಟೂತ್, USB ಟೈಪ್-C ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಒಳಗೊಂಡಿವೆ. ಮೊದಲೇ ಹೇಳಿದಂತೆ, Gionee G13 Pro ಎಲ್ಡರ್ಲಿ ಮೋಡ್ ಮತ್ತು ಸ್ಮಾರ್ಟ್ ಮೋಡನ್ನು ಒಳಗೊಂಡಿದೆ. ಎಲ್ಡರ್ಲಿ ಮೋಡ್ ಫಾಂಟ್ ಮತ್ತು ಐಕಾನ್‌ಗಳ ಗಾತ್ರವನ್ನು ಹೆಚ್ಚಿಸುವ ಮೂಲಕ ವಯಸ್ಸಾದವರಿಗೆ ಬಳಸಲು ಸ್ಮಾರ್ಟ್‌ಫೋನನ್ನು ಸುಲಭಗೊಳಿಸುತ್ತದೆ. ಇದು ಆರೋಗ್ಯ ಕೋಡ್‌ಗಳು, ಪಾವತಿ ಕೋಡ್‌ಗಳನ್ನು ಸಹ ಕಳುಹಿಸುತ್ತದೆ ಮತ್ತು ಅದನ್ನು ಬಳಸಲು ಹೆಚ್ಚು ಪ್ರಾಯೋಗಿಕವಾಗಿಸುತ್ತದೆ. UI ಅನುಭವದ ಅಗತ್ಯವಿರುವ ಯುವಜನತೆಗ ಅಥವಾ ಕಚೇರಿಗೆ ಹೋಗುವ ಬಳಕೆದಾರರಿಗೆ ಸ್ಮಾರ್ಟ್ ಮೋಡ್ ಸೂಕ್ತವಾಗಿದೆ ಎಂದು ಹೇಳಲಾಗುತ್ತದೆ. ಭದ್ರತೆಗಾಗಿ ಸ್ಮಾರ್ಟ್ಫೋನ್ ಫೇಸ್ ಅನ್ಲಾಕ್ ಬೆಂಬಲ ಹೊಂದಿದೆ.
ಇದನ್ನೂ ಓದಿ: Lenovo Legion Y90 ಜಗತ್ತಿನ ಮೊದಲ 22GB RAM ಸ್ಮಾರ್ಟ್‌ಫೋನ್!
Gionee G13 Pro ಒಂದಕ್ಕಿಂತ ಹೆಚ್ಚು ಸಾಫ್ಟ್‌ವೇರ್ ತೆರೆಯುವಿಕೆಗಳನ್ನು ಬೆಂಬಲಿಸುತ್ತದೆ ಮತ್ತು ಅನೇಕ WeChat ಖಾತೆಗಳನ್ನು ಏಕಕಾಲದಲ್ಲಿ ತೆರೆಯಲು ಅನುಮತಿಸುತ್ತದೆ. ಇದು ಸ್ಪ್ಲಿಟ್‌ಸ್ಕ್ರೀನನ್ನು ಸಹ ಬೆಂಬಲಿಸುತ್ತದೆ. ಇದು ಬಳಕೆದಾರರಿಗೆ ಏಕಕಾಲದಲ್ಲಿ ಏರಡು ಬೇರೆ ಬೇರೆ ಆಪ್ ಓಪನ್ ಮಾಡಲು ಅವಕಾಶ ನೀಡುತ್ತದೆ. ಇದಲ್ಲದೆ, ಇದು Huawei HMS Ecosystem ಕೂಡ ಬೆಂಬಲಿಸುತ್ತದೆ. ಜಿಯೋನಿ ಸ್ಮಾರ್ಟ್‌ಫೋನ್ ಸರೌಂಡ್ ಸೌಂಡ್‌ನೊಂದಿಗೆ ಸ್ಟಿರಿಯೊ ಸ್ಪೀಕರ್ ಸೆಟಪನ್ನು ಒಳಗೊಂಡಿದೆ. ಇದು 3,500mAh ಬ್ಯಾಟರಿಯನ್ನು ಹೊಂದಿದ್ದು ಸ್ಮಾರ್ಟ್ಫೋನ್ 158x76x9.2mm ಅಳತೆ ಮತ್ತು 195 ಗ್ರಾಂ ತೂಗುತ್ತದೆ.