Asianet Suvarna News Asianet Suvarna News

Motorola 200MP Camera ಪ್ಲ್ಯಾಗ್‌ಶಿಪ್‌ ಮೊಬೈಲ್ ಮತ್ತಷ್ಟು ಮಾಹಿತಿ ಲೀಕ್: ಜುಲೈ ಬಿಡುಗಡೆ ಪಕ್ಕಾ?

ಮೊಟೊರೊಲಾ ಶೀಘ್ರದಲ್ಲೇ ತನ್ನ ಪ್ರಸ್ತುತ ಫ್ಲ್ಯಾಗ್‌ಶಿಪ್ ಮೊಬೈಲ್‌ಗಳನ್ನು ಫ್ಲ್ಯಾಗ್‌ಶಿಪ್  ಚಿಪ್‌ಸೆಟ್ ಮತ್ತು ಶಕ್ತಿಯುತ ಕ್ಯಾಮೆರಾ ವಿಶೇಷಣಗಳೊಂದಿಗೆ ಅಪ್‌ಗ್ರೇಡ್ ಮಾಡಲಿದ್ದು ಹೊಸ ಸ್ಮಾರ್ಟ್‌ಫೋನ್ 200 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರ್‌ನೊಂದಿಗೆ ಬರುವ ನಿರೀಕ್ಷೆಯಿದೆ.

Motorola Frontier 22 200mp Rear 60mp front Camera flagship phone new leaks may launch in July mnj
Author
Bengaluru, First Published Jan 26, 2022, 3:47 PM IST

Tech Desk: ಮೊಟೊರೊಲಾ ಚೀನಾದಲ್ಲಿ ತನ್ನ ಇತ್ತೀಚಿನ ಫ್ಲ್ಯಾಗ್‌ಶಿಪ್ ಸಾಧನವಾಗಿ Edge X30 ಅನ್ನು ಬಿಡುಗಡೆ ಮಾಡಿತ್ತು. ಮೊಟೊರೊಲಾ ಶೀಘ್ರದಲ್ಲೇ ತನ್ನ ಪ್ರಸ್ತುತ ಫ್ಲ್ಯಾಗ್‌ಶಿಪ್ ಮೊಬೈಲ್ ಫ್ಲ್ಯಾಗ್‌ಶಿಪ್   ಚಿಪ್‌ಸೆಟ್ ಮತ್ತು ಶಕ್ತಿಯುತ ಕ್ಯಾಮೆರಾ ವಿಶೇಷಣಗಳೊಂದಿಗೆ ಬದಲಾಯಿಸಬಹುದು. ಮೊಟೊರೊಲಾದ  ಮುಂಬರುವ ಪ್ರಮುಖ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಕೋಡ್‌ನೇಮ್  "ಫ್ರಾಂಟಿಯರ್ 22" ಆಗಿದ್ದು ಇದು Snapdragon 8 Gen 1 ನ ಪ್ಲಸ್ ಮಾದರಿ ಪ್ರೊಸೆಸರ್‌ ಹೊಂದಿರಲಿದೆ ಎಂದು ವಿನ್‌ಫ್ಯೂಚರ್ (WinFuture) ವರದಿ ಮಾಡಿದೆ.  Snapdragon 8 Gen 1 ಪ್ರೊಸೆಸರ್ ಅನ್ನು ಹೊಂದಿರುವ  Motorola Edge X30 ಜಾಗತಿಕ ಮಾರುಕಟ್ಟೆಗಳಲ್ಲಿ Moto Edge 30 Pro ಹೆಸರಿನಲ್ಲಿ ಬಿಡುಗಡೆಯಾಗಲಿದೆ. 

ವಿನ್‌ಫ್ಯೂಚರ್ ಮುಂಬರುವ ಮೊಟೊರೊಲಾ ಸ್ಮಾರ್ಟ್‌ಫೋನ್‌ನ ಕೆಲವು ರೆಂಡರ್‌ಗಳನ್ನು ಸಹ ಹಂಚಿಕೊಂಡಿದೆ. ಫ್ರಾಂಟಿಯರ್ 22 ತೆಳುವಾದ ಮೇಲ್ಭಾಗ ಮತ್ತು ಕೆಳಭಾಗದ ಬೆಜೆಲ್‌ಗಳೊಂದಿಗೆ ಡ್ಯುಯಲ್-ಕರ್ವ್ ಡಿಸ್‌ಪ್ಲೇ ಹೊಂದಿದೆ. ಸೆಲ್ಫಿ ಕ್ಯಾಮೆರಾಗಾಗಿ ಪಂಚ್-ಹೋಲ್ ಕಟೌಟ್ ಇದೆ.

ಇದು ಮೆಟಲ್ ಟೆಕ್ಸ್ಚರ್ಡ್ ರಿಯರ್ ಪ್ಯಾನೆಲ್ ಅನ್ನು ಒಳಗೊಂಡಿರುವಂತೆ ಕಂಡುಬರುತ್ತದೆ. ಇದು ಎರಡು ಇತರ ಸೆನ್ಸರ್‌ಗಳೊಂದಿಗೆ ದೊಡ್ಡ ಕ್ಯಾಮೆರಾ ಸೆನ್ಸರ್ ಹೊಂದಿದೆ. ಕ್ಯಾಮರಾ ಸೆಟಪ್‌ನಲ್ಲಿ ಎಲ್ಇಡಿ ಫ್ಲ್ಯಾಷ್ಲೈಟ್ ಕೂಡ ಸೇರಿಸಲಾಗಿದೆ. ಹಿಂದಿನ ಪ್ಯಾನೆಲ್‌ನ ಮಧ್ಯದಲ್ಲಿ ಕ್ಲಾಸ್ ಬ್ಯಾಟ್‌ವಿಂಗ್ ಮೋಟೋ ಲೋಗೋವನ್ನು ಇರಿಸಲಾಗಿದೆ ಆದರೆ ಲೋಗೋ ಜತೆಗೆ ಫಿಂಗರ್‌ಪ್ರಿಂಟ್ ಸೆನ್ಸರ್‌ ಇರುವಂತೆ ತೋರುತ್ತಿಲ್ಲ.

ಇದನ್ನೂ ಓದಿ: Moto Tab G70 LTE: ಭಾರತದಲ್ಲಿ ಹೊಸ ಮೊಟೊರೊಲಾ ಟ್ಯಾಬ್ ಬಿಡುಗಡೆ, ಬೆಲೆ ಎಷ್ಟು?

60-ಮೆಗಾಪಿಕ್ಸೆಲ್ ಕ್ಯಾಮೆರಾ ಸೆಲ್ಫಿ ಕ್ಯಾಮೆರಾ: ಇತರ ವೈಶಿಷ್ಟ್ಯಗಳನ್ನು ಗಮನಿಸುವದಾದರೆ ಫೋನ್ FHD+ ರೆಸಲ್ಯೂಶನ್‌ನೊಂದಿಗೆ 6.67-ಇಂಚಿನ OLED ಡಿಸ್ಪ್ಲೇ ಒಳಗೊಂಡಿರುವ ನಿರೀಕ್ಷೆಯಿದೆ ಎಂದು ವರದಿ ಹೇಳುತ್ತದೆ. ಇದು 144Hz ನ ಹೆಚ್ಚಿನ ರಿಫ್ರೆಶ್ ದರವನ್ನು ಮತ್ತು 20:9 ರ ಅಸ್ಪೆಕ್ಟ್‌ ರೇಶ್ಯೋ ಬೆಂಬಲಿಸಬಹುದು.

ಮೊಟೊರೊಲಾದ ಫ್ರಾಂಟಿಯರ್ 22 ಶಕ್ತಿಶಾಲಿ ಕ್ಯಾಮೆರಾದೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ, ಇದು 200-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2x ಜೂಮ್‌ನೊಂದಿಗೆ 12MP ಟೆಲಿಫೋಟೋ ಲೆನ್ಸನ್ನು ಒಳಗೊಂಡಿರುತ್ತದೆ. ಮುಂಭಾಗದಲ್ಲಿ, ಮೋಟೋ ಫ್ರಾಂಟಿಯರ್ 22 ಸೆಲ್ಫಿಗಳಿಗಾಗಿ ಬೃಹತ್ 60-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: Moto G71 5G: ಟ್ರಿಪಲ್‌ ಕ್ಯಾಮೆರಾ, ಕೈಗೆಟುಕುವ ಬೆಲೆ: ಮೊಟೊರೊಲಾದ ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಲಭ್ಯ!

ಫೋನ್ 125W ವೈರ್ಡ್ ಚಾರ್ಜಿಂಗ್ ಮತ್ತು 50W ಚಾರ್ಜಿಂಗ್ ಬೆಂಬಲದೊಂದಿಗೆ 4500mAh ಬ್ಯಾಟರಿಯನ್ನು ಹೊಂದಿದೆ. ಇದು ಸ್ಟಿರಿಯೊ ಸ್ಪೀಕರ್‌ಗಳು, ಉತ್ತಮ ಕರೆ ಗುಣಮಟ್ಟಕ್ಕಾಗಿ ಟ್ರಿಪಲ್ ಮೈಕ್ರೊಫೋನ್ ಸಿಸ್ಟಮ್ ಮತ್ತು ವೈ-ಫೈಗೆ ಬೆಂಬಲವನ್ನು ಹೊಂದಿದೆ ಎಂದು ವರದಿಯಾಗಿದೆ. ಫೋನ್  ಆಂಡ್ರಾಯ್ಡ್ 12 ಮೇಲೆ ರನ್ ಆಗುವ ನಿರೀಕ್ಷೆಯಿದೆ. ಈ ವರ್ಷ ಜುಲೈ 2022 ರಲ್ಲಿ ಫೋನ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ವರದಿ ಹೇಳುತ್ತದೆ.

Moto Edge 30 Pro Global Launch: ಮತ್ತೊಂದೆಡೆ ಮೊಟೊರೊಲಾ ಜಾಗತಿಕ ಮಾರುಕಟ್ಟೆಗಳಲ್ಲಿ Moto Edge 30 Pro ಹೆಸರಿನಲ್ಲಿ Edge X30 ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. Moto Edge X30 2400×1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.7-ಇಂಚಿನ OLED FHD+ ಡಿಸ್ಪ್ಲೇಯೊಂದಿಗೆ ಬರುತ್ತದೆ ಮತ್ತು 144Hz ನ ಹೆಚ್ಚಿನ ರಿಫ್ರೆಶ್ ದರ ಮತ್ತು 576Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಬರುತ್ತದೆ.  

ಡಿಸ್ಪ್ಲೇ ಪಂಚ್-ಹೋಲ್ ಕಟೌಟ್ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. EdgeX30 ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 Gen1 ಚಿಪ್‌ಸೆಟ್ ಜೊತೆಗೆ 12GB RAM ಮತ್ತು 512GB ಸಂಗ್ರಹಣೆಯೊಂದಿಗೆ ಚಾಲಿತವಾಗಿದೆ. Moto Edge X30 Android 12 OS ನಲ್ಲಿ MyUI 3.0 ಕ್ಲೀನ್ ಸ್ಟಾಕ್ UI ಜೊತೆಗೆ ರನ್ ಆಗುತ್ತದೆ.

Follow Us:
Download App:
  • android
  • ios