Lenovo Legion Y90 ಜಗತ್ತಿನ ಮೊದಲ 22GB RAM ಸ್ಮಾರ್ಟ್‌ಫೋನ್!

*ಲೆನೋವೋ , ಲೀಜಿನ್ ವೈ90 ಎಂಬ ಸ್ಮಾರ್ಟ್‌ಫೋನ್ ಅಭಿವೃದ್ಧಿ
*ಸ್ಮಾರ್ಟ್‌ಫೋನ್ ಹಲವು ಮಾಹಿತಿಗಳು ಸೋರಿಕೆ
*22GB RAM ಹೊಂದಿರುವ ಗೇಮಿಂಗ್ ಮೊಬೈಲ್

Lenovo Legion Y90 worlds first 22 GB RAM Smartphone Specifications

Tech Desk: 2 ಜಿಬಿ, 3 ಜಿಬಿ, 4 ಜಿಬಿ, 8 ಜಿಬಿ RAM ಇರುವ ಸ್ಮಾರ್ಟ್‌ಫೋನ್ ಇರುವುದನ್ನು ನೋಡಿರುತ್ತೀರಿ, ಇಲ್ಲವೇ ಬಳಸುತ್ತಿರುತ್ತೀರಿ. ಆದರೆ, 22 ಜಿಬಿ RAM ಇರುವ ಸ್ಮಾರ್ಟ್‌ಫೋನ್ ಬಗ್ಗೆ ಕೇಳಿದ್ದೀರಾ? ಕೇಳಿರಲು ಸಾಧ್ಯವೇ ಇಲ್ಲ, ಯಾಕೆಂದರೆ, ಈವರೆಗೂ ಅಂಥ ಸ್ಮಾರ್ಟ್‌ಫೋನ್ ಬಂದಿಲ್ಲ. ಆದರೆ, ಇದೀಗ ಚೀನಾ ಮೂಲದ ಲೆನೋವೋ (Lenovo) ಜಗತ್ತಿನ ಮೊದಲ 22 ಜಿಬಿ RAM ಇರುವ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಹೋರಟಿದೆ. ಖಂಡಿತವಾಗಿಯೂ ಇದು ಗೇಮಿಂಗ್ ಸ್ಮಾರ್ಟ್‌ಫೋನ್ ಎಂಬುದರಲ್ಲಿ ಅನುಮಾನವೇ ಬೇಡ. ಅಂದ ಹಾಗೆ ಈ ಫೋನ್ ಹೆಸರು ಲೆನೋವೋ ಲೀಜನ್ ವೈ90 (Lenovo Legion Y90). ಈ ಫೋನ್ ವರೆಗಿನ ಜಗತ್ತಿನ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಎನಿಸಿಕೊಳ್ಳಲಿದೆ.

ಇದು ಮೆಮೊರಿಯಲ್ಲಿ ಪ್ರಪಂಚದ ಮೊದಲನೆಯದು ಮತ್ತು ಇತ್ತೀಚಿನ ಕ್ವಾಲ್ಕಾಮ್ ಪ್ರಮುಖ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಫೋನ್‌ನ ಹೆಗ್ಗಳಿಕೆಯಾಗಿದೆ. ಈ ಫೋನ್ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲವು ಟಿಪ್ಸಟರ್‌ಗಳು ಲೆನೋವೋ ಲೀಜನ್ ವೈ90 ಬಗ್ಗೆ ಹಲವು ಮಾಹಿತಿ ಷೇರ್ ಮಾಡಿಕೊಂಡಿರುವುದರಿಂದ ನಿರೀಕ್ಷೆಯ ಜತೆಗೆ ಕುತೂಹಲ ಕೂಡ ಹೆಚ್ಚಿದೆ.

ಇದನ್ನೂ ಓದಿ: Google Pixel Watch: ಮೇನಲ್ಲಿ ಬಿಡುಗಡೆಯಾಗಲಿದೆ ಪಿಕ್ಸೆಲ್ ವಾಚ್, ಏನೆಲ್ಲ ವಿಶೇಷತೆ ಇದೆ?

ಇತ್ತೀಚಿನ ಮಾಹಿತಿಯ ಸೋರಿಕೆಯ ಪ್ರಕಾರ, ಲಿನೋವೋ ಲೀಜಿನ್ ವೈ 90 ( Lenovo Legion Y90) 6.92-ಇಂಚಿನ  ಇ4 ಸ್ಯಾಮ್ಸಂಗ್ ಅಮೋಎಲ್ಇಡಿ ( E4 Samsung AMOLED) ಪ್ರದರ್ಶಕದೊಂದಿಗೆ ಬರಬಹುದು. ಈಪ್ರದರ್ಶಕವು 144Hz ರಿಫ್ರೆಶ್ ದರ ಮತ್ತು ಗೇಮಿಂಗ್‌ಗಾಗಿ 720Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿರುವ ಸಾಧ್ಯತೆ ಇದೆ. ಈ ಸ್ಮಾರ್ಟ್‌ಫೋನ್ 176 x 78.8 x 10.5mm ಅಳತೆ ಮತ್ತು 268 ಗ್ರಾಂ ತೂಕವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಲೆನೋವೋ ಲೀಜಿನ್ ವೈ90 ಭಾರೀ ಡಿವೈಎಸ್ ಆಗಿರಬಹುದು ಎಂದು ನಿರೀಕ್ಷಿಸಬಹುದಾಗಿದೆ. 

ಲೆನೋವೋ ಲೀಜಿನ್ ವೈ90 ಸ್ಮಾರ್ಟ್‌ಫೋನ್‌ಗೆ ಕ್ವಾಲಂಕಾಮ್ ಸ್ನಾಪ್‌ಡ್ರಾಗನ್ 8 ಜೆನ್1 (Qualcomm Snapdragon 8 Gen 1) ಪವರ್ ನೀಡುತ್ತಿದ್ದು, ಇದನ್ನು 22 GB RAM ಗೆ ಜೋಡಿಸಲಾಗುತ್ತದೆ. ಈ RAM 18GB ಭೌತಿಕ RAM ಜೊತೆಗೆ 4GB ವರ್ಚುವಲ್ RAM ಅನ್ನು ಒಳಗೊಂಡಿರುತ್ತದೆ. 512 GB ಮತ್ತು 128 GB ಯ ಎರಡು ವಿಭಿನ್ನ ಸ್ಟೋರೇಜ್ ಚಿಪ್‌ಗಳೊಂದಿಗೆ ಸಂಗ್ರಹಣೆಯು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ, ಈ ಫೋನಿನ ಒಟ್ಟಾರೆ ಸ್ಟೋರೇಜ್ ಸಾಮರ್ಥ್ಯವು 640 ಜಿಬಿ ಆಗಿರುತ್ತದೆ. 

ಟಿಪ್ಸಟರ್‌ಗಳು ಸೋರಿಕೆ ಮಾಡಿರುವ ಮಾಹಿತಿಯ ಪ್ರಕಾರ, ಈ ಹೊಸ ಫೋನಿನಲ್ಲಿ ಕಂಪನಿಯು 5,600mAh ಬ್ಯಾಟರಿಯನ್ನು ಬಳಸುತ್ತಿದ್ದು, ಇದು 68 ವ್ಯಾಟ್ ವೇಗ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಲೆನೋವೋ ಲೀಜಿನ್ ವೈ 90 ಬಳಸಲಾಗಿರುವ ಕ್ಯಾಮೆರಾಗಳು ಕೂಡ ಗಮನಾನರ್ಹವಾಗಿವೆ. 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 16-ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಅನ್ನು ಒಳಗೊಂಡಿರ ಸಾಧ್ಯತೆ ಇಧೆ. ಇದು ಸರಳ ಡ್ಯುಯಲ್-ಲೆನ್ಸ್ ಕ್ಯಾಮೆರಾ ಸೆಟಪ್ ಅನ್ನು ರೂಪಿಸುತ್ತದೆ. ಮುಂಭಾಗದಲ್ಲಿ, 44-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರುವ ನಿರೀಕ್ಷೆ ಇದೆ.

 ಇದನ್ನೂ ಓದಿ: Space Film Studio: ಜಗತ್ತಿನ ಮೊದಲ ಸ್ಪೇಸ್ ಫಿಲ್ಮ್ ಸ್ಟುಡಿಯೋ 2024ರಲ್ಲಿ ಶುರು!

ಬೇಸಿಕಲೀ ಇದೊಂದು ಗೇಮಿಂಗ್ ಫೋನ್ ಆಗಿರುವುದರಿಂದ ಅದಕ್ಕೆ ಬೇಕಾಗುವ ಎಲ್ಲ ಸೌಲಭ್ಯ, ವಿಶೇಷತೆಗಳನ್ನು ಇದು ಒಳಗೊಂಡಿದೆ.  Legion Y90 ಒಟ್ಟು ಆರು ಗೇಮಿಂಗ್ ಕೀಗಳನ್ನು ಹೊಂದಿರುವ ಸಾಧ್ಯತೆ ಇದೆ. ಇವು ನಾಲ್ಕು ಶೌಲ್ಡರ್ ಮ್ತತು ಎರಡು ಪ್ರೆಶರ್ ಸಂವೇದಕಗಳನ್ನು ಒಳಗೊಂಡಿರುತ್ತವೆ. ಫ್ರಾಸ್ಟ್ ಬ್ಲೇಡ್ 3.0 ಎಂಬ ಹೆಸರಿನಿಂದ ಕೂಲಿಂಗ್ ಸಿಸ್ಟಮ್ ಇರಲಿದೆ. ಅದು ಹೆಚ್ಚಿನ ಶಾಖ ಪ್ರಸರಣವನ್ನು ತಡೆಯುವುದಕ್ಕಾಗಿ ಡ್ಯುಯಲ್ ಫ್ಯಾನ್‌ಗಳನ್ನು ಬಳಸಿಕೊಳ್ಳುತ್ತದೆ. 

Latest Videos
Follow Us:
Download App:
  • android
  • ios