ಹಳೆ ಫೋನ್‌ ಸೇಲ್ ಮಾಡೋ ಮುನ್ನ ಈ ಮಿಸ್ಟೇಕ್ ಮಾಡ್ಬೇಡಿ : ಕಂಬಿ ಎಣಿಸ್ಬೇಕಾಗುತ್ತೆ ಹುಷಾರ್

ಹಳೆಯ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಮೊದಲು 'ಸೇಲ್ ಅಗ್ರಿಮೆಂಟ್' ಸಿದ್ಧಪಡಿಸುವುದು ಅತ್ಯಗತ್ಯ. ಖರೀದಿದಾರರು ಫೋನ್ ಬಳಸಿ ಅಪರಾಧ ಕೃತ್ಯ ಎಸಗಿದರೆ, ಐಎಂಇಐ (IMEI) ಸಂಖ್ಯೆಯ ಮೂಲಕ ಪೊಲೀಸರು ನಿಮ್ಮ ಮನೆ ಬಾಗಿಲಿಗೆ ಬರಬಹುದು.

Dont do this mistake while selling your old phone which made you sit behind the bar

ಇತ್ತೀಚಿನ ದಿನಗಳಲ್ಲಿ ಹಳೆ ಫೋನನ್ನು ಮಾರಿ  ಹೊಸ ಫೋನ್‌ಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ.  ಹೆಚ್ಚಿನ ಜನರು ತಮ್ಮ ಫೋನನ್ನು ಹೆಚೆಂದರೆ ಎರಡು ವರ್ಷ ಬಳಸುತ್ತಾರೆ. ನಂತರ ಹೊಸ ಫೋನ್ ಖರೀದಿಸುತ್ತಾರೆ. ಈ ವೇಳೆ ಅವರು ಹಳೇ ಫೋನನ್ನು ಸ್ನೇಹಿತರಿಗೋ, ಕುಟುಂಬ ಸದಸ್ಯರಿಗೋ ನೀಡುತ್ತಾರೆ. ಅಥವಾ ಮಾರ್ಕೆಟ್‌ನಲ್ಲಿ ಸೇಲ್ ಮಾಡ್ತಾರೆ. ಕೆಲವು ಪ್ರಕರಣಗಳಲ್ಲಿ ನೀವು ಫೋನ್‌ ಸೇಲ್ ಮಾಡಿದಾಗ ಅದನ್ನು ಖರೀದಿಸಿದ ವ್ಯಕ್ತಿ ಏನು ಮಾಡುತ್ತಾನೆ ಎಂಬುದು ನಿಮಗೆ ಗೊತ್ತಿರುವುದಿಲ್ಲ, ಆತ ನಿಮ್ಮ ಫೋನ್ ಬಳಸಿ ಮಾಡುವ ಕೆಲ ಕ್ರಿಮಿನಲ್ ಕೆಲಸಗಳು ನಿಮ್ಮನ್ನು ಕಂಬಿ ಹಿಂದೆ ಕೂರುವಂತೆ ಮಾಡಬಹುದು. ಹಾಗಿದ್ರೆ ಫೋನನ್ನು ಅಪರಿಚಿತರಿಗೆ ಮಾರುವ ಮುನ್ನ ನಾವೇನು ಮಾಡ್ಬೇಕು ಇಲ್ಲಿದೆ ಡಿಟೇಲ್ ಸ್ಟೋರಿ.

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ಯಾರಿಗಾದರೂ ಮಾರಾಟ ಮಾಡಿದ್ದೀರಿ ಮತ್ತು ಆ ಫೋನ್ ಖರೀದಿಸಿದವರು ಯಾವುದೋ ತಪ್ಪು ಉದ್ದೇಶಕ್ಕಾಗಿ ಬಳಸಿದ್ದಾರೆ ಎಂದು ಭಾವಿಸಿ, ಉದಾಹರಣೆಗೆ ಆ ಫೋನ್‌ನಿಂದ ಯಾರಿಗಾದರೂ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಲ್ಲಿ ಅಥವಾ ಯಾವುದಾದರು ದೊಡ್ಡ ವಂಚನೆ ಕೃತ್ಯಕ್ಕೆ ಅದನ್ನು ಬಳಸಿಕೊಂಡಿದ್ದಾರೆ.  ಅಂತಹ ಸಂದರ್ಭದಲ್ಲಿ, ಆ ಫೋನ್‌ನ ಐಎಂಇಐ (IMEI) ಸಂಖ್ಯೆಯನ್ನು ಟ್ರ್ಯಾಕ್ ಮಾಡುವ ಮೂಲಕ ಪೊಲೀಸರು ನೇರವಾಗಿ ನಿಮ್ಮ ಮನೆಗೆ ತಲುಪುತ್ತಾರೆ.

ಕ್ಲೌಡ್ ಬ್ಯಾಕ್ಅಪ್ ಇಲ್ಲದೆ ಹಳೇ ಫೋನ್‌ನಿಂದ ಹೊಸ ಫೋನ್‌ಗೆ ಚಾಟ್ಸ್ ಟ್ರಾನ್ಸ್‌ಫರ್‌ಗೆ WhatsApp ಅವಕಾಶ!

ಏಕೆಂದರೆ ಆ ಫೋನನ್ನು ನೀವು ಮಾರಾಟ ಮಾಡಿದ್ದರು. ಆ ಫೋನ್‌ನ ಐಎಂಇಐ ನಂಬರ್ ಇನ್ನೂ ನಿಮ್ಮ ಹೆಸರಿನಲ್ಲೇ ರಿಜಿಸ್ಟ್ರೇಷನ್ ಆಗಿರುತ್ತದೆ. ಹೀಗಾಗಿ ಪೊಲೀಸರು ಫೋನ್ ಇನ್ನೂ ನಿಮ್ಮ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿರುವುದರಿಂದ, ಈ ಅಪರಾಧದಲ್ಲಿ ಪೊಲೀಸರು ನಿಮ್ಮನ್ನು ತಪ್ಪಿತಸ್ಥರೆಂದು ಪರಿಗಣಿಸಬಹುದು. ಈ ವೇಳೆ ನೀವು ಫೋನ್ ಮಾರಾಟ ಮಾಡಿದ್ದರೂ, ನೀವು ಫೋನ್ ಮಾರಾಟ ಮಾಡಿದ್ದೀರಿ ಎಂದು ಸಾಬೀತುಪಡಿಸಲು ನಿಮ್ಮ ಬಳಿ ಯಾವುದೇ ಕಾನೂನು ಪುರಾವೆಗಳಿರುವುದಿಲ್ಲ ಹೀಗಾಗಿ, ನೀವು ನಿರಪರಾಧಿ ಎಂದು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ, ನೀವು ಜೈಲಿಗೆ ಹೋಗಬೇಕಾಗಬಹುದು.

ಹೀಗಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಮೊದಲು ಸ್ಟಾಂಪ್ ಪೇಪರ್‌ನಲ್ಲಿ 'ಸೇಲ್ ಅಗ್ರಿಮೆಂಟ್' ಸಿದ್ಧಪಡಿಸುವುದು ಬಹಳ ಮುಖ್ಯ. ಈ ಡಾಕ್ಯುಮೆಂಟ್‌ನಲ್ಲಿ ನಿಮ್ಮ ಮತ್ತು ಖರೀದಿದಾರರ ಸಂಪೂರ್ಣ ವಿವರಗಳು, ಫೋನ್‌ನ IMEI ಸಂಖ್ಯೆ, ಮಾದರಿ ಸಂಖ್ಯೆ, ಮಾರಾಟದ ದಿನಾಂಕ ಮತ್ತು ಪಾವತಿಯ ವಿಧಾನವನ್ನು ಸ್ಪಷ್ಟವಾಗಿ ನಮೂದಿಸಬೇಕು. ಈ ಡಾಕ್ಯುಮೆಂಟ್ ಯಾವುದೇ ಕಾನೂನು ಸಮಸ್ಯೆಗಳಿಂದ ನಿಮ್ಮನ್ನು ಉಳಿಸುತ್ತದೆ. ಹೀಗಾಗಿ ಹಳೆ ಫೋನ್ ಮಾರಾಟ ಮಾಡುವ ಮೊದಲು ಇಂತಹ ಸೇಲ್ ಅಗ್ರಿಮೆಂಟ್‌ನ್ನು ಮಾಡಿಕೊಳ್ಳಿ, ಕಾನೂನು ತೊಂದರೆಗೊಳಗಾಗುವುದರಿಂದ ತಪ್ಪಿಸಿಕೊಳ್ಳಿ, ಈ ವಿಚಾರವನ್ನು ನಿಮ್ಮ ಆಪ್ತರಿಗೂ ತಿಳಿಸಿ.

50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್‌ 16 ಖರೀದಿ ಮಾಡೋದು ಹೇಗೆ?

Latest Videos
Follow Us:
Download App:
  • android
  • ios