Asianet Suvarna News Asianet Suvarna News

ಕ್ಲೌಡ್ ಬ್ಯಾಕ್ಅಪ್ ಇಲ್ಲದೆ ಹಳೇ ಫೋನ್‌ನಿಂದ ಹೊಸ ಫೋನ್‌ಗೆ ಚಾಟ್ಸ್ ಟ್ರಾನ್ಸ್‌ಫರ್‌ಗೆ WhatsApp ಅವಕಾಶ!

ವ್ಯಾಟ್ಸ್ಆ್ಯಪ್ ಇದೀಗ ಬಳಕೆದಾರರಿಗೆ ಮತ್ತೊಂದು ಕೊಡುಗೆ ನೀಡುತ್ತಿದೆ. ಹಳೇ ಫೋನ್‌ನಿಂದ ಹೊಸ ಫೋನ್‌ಗೆ ಚಾಟ್ಸ್ ಟ್ರಾನ್ಸ್‌ಫರ್ ಮಾಡಲು ಕ್ಲೌಡ್ ಬ್ಯಾಕ್ಅಪ್ ಮೊರೆ ಹೋಗಬೇಕಾದಿಲ್ಲ. ಕ್ಲಾಡ್ ಬ್ಯಾಕ್ಅಪ್ ಇಲ್ಲದೆ ಸಂಪೂರ್ಣ ಚಾಟ್ಸ್ ಹೊಸ ಫೋನ್‌ಗೆ ವರ್ಗಾಯಿಸಲು ಸಾಧ್ಯವಿದೆ. ಈ ಕುರಿತ ಮಾಹಿತಿ ಇಲ್ಲಿದೆ.

Chat Transfer feature WhatsApp allows users to transfer chats from old phone to New phone without cloud backup ckm
Author
First Published Jul 4, 2023, 12:22 PM IST

ನವದೆಹಲಿ(ಜು.04) ವ್ಯಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹತ್ತು ಹಲವು ಫೀಚರ್ಸ್ ಈಗಾಗಲೇ ಬಿಡುಗಡೆ ಮಾಡಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಕೆಲ ಫೀಚರ್ಸ್ ಅಪ್‌ಗ್ರೇಡ್ ಮಾಡಲಾಗಿದೆ. ಇದೀಗ ಬಳಕೆದಾರರಿಗೆ  ಮತ್ತೊಂದು ಕೊಡುಗೆ ನೀಡಿದೆ. ಕ್ಲೌಡ್ ಬ್ಯಾಕ್ಅಪ್ ಇಲ್ಲದೇ ಹಳೆಯ ಫೋನ್‌ನಿಂದ ಹೊಸ ಫೋನ್‌ಗೆ ಚಾಟ್ಸ್ ವರ್ಗಾಯಿಸಲು ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಅವಕಾಶ ನೀಡಿದೆ. ಇದರಿಂದ ಬಳಕೆದಾರರು ಸುಲಭವಾಗಿ ತಮ್ಮ ಡೇಟಾವನ್ನು ಟ್ರಾನ್ಸ್‌ಫರ್ ಮಾಡಲು ಸಾಧ್ಯವಿದೆ.

ಕ್ಲಾಡ್‌ ಬ್ಯಾಕ್ಅಪ್ ಅವಲಂಬನೆಯನ್ನು ವ್ಯಾಟ್ಸ್ಆ್ಯಪ್ ತೆಗೆದುಹಾಕುತ್ತದೆ. ಅಪರೇಟಿಂಗ್ ಸಿಸ್ಟಮ್‌ನಲ್ಲಿ ಚಾಲನೆಯಲ್ಲಿರುವ ವ್ಯಾಟ್ಸ್ಆ್ಯಪ್ ಡೇಟಾವನ್ನು ಒಂದು ಫೋನ್‌ನಿಂದ ಮತ್ತೊಂದು ಫೋನ್‌ಗೆ ವರ್ಗಾಯಿಸಲು ಅನುವು ಮಾಡಿಕೊಟ್ಟಿದೆ.  ಇದರಿಂದ ಗೂಗಲ್ ಕ್ಲೌಡ್ ಬ್ಯಾಕ್ಅಪ್ ಅವಲಂಬನೆ ಇಲ್ಲದೆ ಡೇಟಾ ಟ್ರಾನ್ಸ್‌ಫರ್ ಆಗಲಿದೆ. ಚಾಟ್ ಇತಿಹಾಸವನ್ನು  iCloud ಅಥವಾ Google ಡ್ರೈವ್‌ಗೆ ಬ್ಯಾಕಪ್ ಹಾಗೂ ಹೊಸ ಆಪರೇಟಿಂಗ್ ಸಿಸ್ಟಮ್‌ಗೆ ಡೌನ್‌ಲೋಡ್ ಮಾಡುವುದು ಒಳಗೊಂಡಿರುತ್ತದೆ. ಕ್ಲೌಡ್ ಸ್ಟೋರೇಜ್ ಮಿತಿ ಹೆಚ್ಚಿದರ್ರೆ ಸಮಸ್ಯೆ ಎದುರಾಗುವುದಿಲ್ಲ. 

1 ತಿಂಗಳಲ್ಲಿ ಭಾರತದ 65 ಲಕ್ಷ ವ್ಯಾಟ್ಸ್ಆ್ಯಪ್ ಖಾತೆಗೆ ನಿರ್ಬಂಧ, ಐಟಿ ನಿಯಮ ಉಲ್ಲಂಘಿಸಿದರೆ ಅಪಾಯ!

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಫೇಸ್‌ಬುಕ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ವ್ಯಾಟ್ಸ್ಆ್ಯಪ್ ಚಾಟ್ಸ್ ಹೊಸ ಫೋನ್‌ಗೆ ಟ್ರಾನ್ಸ್‌ಫರ್ ಮಾಡಲು ಬಯಸಿದರೆ ಸುಲಭವಾಗಿ, ಖಾಸಗಿಯಾಗಿ ಮಾಡಬಹುದು ಎಂದು ಮಾರ್ಕ್ ಜುಕರ್‌ಬರ್ಗ್ ಬರೆದಿದ್ದಾರೆ. ಈ ಕುರಿತ ಸಣ್ಣ ವಿಡಿಯೋವನ್ನು ಮಾರ್ಕ್ ಪೋಸ್ಟ್ ಮಾಡಿ ನೂತನ ಫೀಚರ್ ಕುರಿತು ಹೆಚ್ಚಿನ ಬೆಳಕು ಚೆಲ್ಲಿದ್ದಾರೆ. ಆಂಡ್ರಾಯ್ಡ್‌ನಿಂದ ಆಂಡ್ರಾಯ್ಡ್‌ಗೆ ಅಥವಾ ಐಫೋನ್‌ನಿಂದ ಐಫೋನ್‌ಗೆ ಚಾಟ್‌ಗಳನ್ನು ವರ್ಗಾಯಿಸಬಹುದು.

ಹಳೇ ಫೋನ್:
ಹಳೇ ಫೋನ್‌ನಲ್ಲಿ ವ್ಯಾಟ್ಸ್ಆ್ಯಪ್ ಆನ್ ಮಾಡಿ
ಸೆಟ್ಟಿಂಗ್ ಮೆನು ಆಯ್ಕೆಗೆ ಹೋಗಿ ಸ್ಕ್ರೀನ್ ಬಲಭಾಗ ಮೇಲಿರುವ ಮೂರು ಚುಕ್ಕೆಯನ್ನು ಟ್ಯಾಪ್ ಮಾಡಿ
ಸೆಟ್ಟಿಂಗ್ ಮೆನುವಿನಲ್ಲಿ ಚಾಟ್ಸ್ ಆಪ್ಶನ್ ಆಯ್ಕೆ ಮಾಡಿ
ಚಾಟ್ ಸೆಟ್ಟಿಂಗ್‌ನಲ್ಲಿನ ಲೋಕೆಟ್‌ಗೆ ತೆರಳಿ ಚಾಟ್ ಟ್ರಾನ್ಸ್‌ಫರ್ ಆಪ್ಶನ್ ಆಯ್ಕೆ ಮಾಡಿ
ಟ್ರಾನ್ಸ‌ಫರ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದೇ ವೇಳೆ ವ್ಯಾಟ್ಸ್ಆ್ಯಪ್ ಕ್ಯೂಆರ್ ಕೋಡ್ ಜನರೇಟ್ ಮಾಡಲಿದೆ. 

ಅಪರಿಚಿತ ಕಾಲ್ ಕಿರಿ ಕಿರಿ ತಪ್ಪಿಸಲು ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್,ಈಡೇರಿತು ಬಳಕೆದಾರರ ಬೇಡಿಕೆ!

ಹೊಸ ಫೋನ್:
ಹೊಸ ಫೋನ್‌ನಲ್ಲಿ ವ್ಯಾಟ್ಸ್ಆ್ಯಪ್ ಡೌನ್ಲೋಡ್ ಮಾಡಿಕೊಂಡು ಅದೇ ನಂಬರ್‌ನಲ್ಲಿ ನೋಂದಣಿ ಮಾಡಿ
ಹೊಸ ಫೋನ್ ಮೂಲಕ ನಿಮ್ಮ ಹಳೇ ಫೋನ್‌ನಲ್ಲಿ ಜನರೇಟ್ ಮಾಡಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಇದೇ ವೇಳೆ ಚಾಟ್ಸ್ ಆಯ್ಕೆಗೆ ಕ್ಲಿಕ್ ಮಾಡಿದರೆ ಅಲ್ಲೂ ಕೂಡ ಬ್ಯಾಕ್ಆಪ್ ಹಾಗೂ ಕ್ಯೂಆರ್ ಕೋಡ್ ತೆರೆದುಕೊಲ್ಳಲಿದೆ
ಕ್ಯೂಆರ್ ಕೋಡ್ ಸ್ಕಾನ್ ಮಾಡಿದರೆ ಚಾಟ್ ಟ್ರಾನ್ಸ್‌ಫರ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಚಾಟ್ ಸೈಜ್ ಹಾಗೂ ಇಂಟರ್ನೆಟ್ ಕಾರಣದಿಂದ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ
ಚಾಟ್ ಟ್ರಾನ್ಸ್‌ಫರ್ ಪ್ರಕ್ರಿಯೆ ವೇಳೆ ನಿಮ್ಮ ಹಳೇ ಫೋನ್ ಹಾಗೂ ಹೊಸ ಫೋನ್ ಇಂಟರ್ನೆಟ್ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಿ
ಟ್ರಾನ್ಸ್‌ಫರ್ ಸಂಪೂರ್ಣವಾದ ಬಳಿಕ ಹಳೇ ಫೋನ್‌ನಲ್ಲಿದ್ದ ಎಲ್ಲಾ ಚಾಟ್ಸ್ ಹೊಸ ಫೋನ್‌ನಲ್ಲಿ ಲಭ್ಯವಾಗಲಿದೆ.
 

Follow Us:
Download App:
  • android
  • ios