BlackBerry OS ಯುಗಾಂತ್ಯ: ಜನವರಿ 4 ರಿಂದ ಕ್ಲಾಸಿಕ್ ಫೋನ್ ಕಾರ್ಯನಿರ್ವಹಿಸೋದು ಡೌಟು!
ಮುಂದಿನ ವಾರದಿಂದ ಬ್ಲ್ಯಾಕ್‌ಬೆರಿ ಸ್ವಾಮ್ಯದ ಆಪರೇಟಿಂಗ್ ಸಿಸ್ಟಮ್ ಆಧಾರಿತ ಸಾಧನಗಳು ಇನ್ನು ಮುಂದೆ "ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸಲು" ಸಾಧ್ಯವಾಗುವುದಿಲ್ಲ ಎಂದು ಕಂಪನಿ ಹೇಳಿದೆ.
Tech Desk: ಬ್ಲ್ಯಾಕ್‌ಬೆರಿ (BlackBerry) ಈಗಾಗಲೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಧೂಳು ಕಚ್ಚಿದೆ ಮತ್ತು ಅದರ ಆಕರ್ಷಣೆಯನ್ನು ಕಳೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಅದರ ಅಭಿಮಾನಿಗಳು ಸಹ ಬಹುಶಃ ಐಫೋನ್ (iPhone) ಅಥವಾ ಆಂಡ್ರಾಯ್ಡ್ (Android) ಹ್ಯಾಂಡ್‌ಸೆಟ್ ಅನ್ನು ಬಳಸುತ್ತಿದ್ದಾರೆ. ಆದರೂ ಇನ್ನೂ ಕೆಲವು ಜನರು ಬ್ಲ್ಯಾಕ್‌ಬೆರಿ ಫೋನ್ ಅನ್ನು ಬಳಸುತ್ತಿರಬಹುದು. ಆದರೆ ಕ್‌ಬೆರಿ ಸ್ವಾಮ್ಯದ ಆಪರೇಟಿಂಗ್ ಸಿಸ್ಟಮ್ ಆಧಾರಿತ ಫೋನ್‌ಗಳನ್ನು ಬಳಸುತ್ತಿರುವವರಿಗೆ ಕಂಪನಿ ಕಹಿ ಸುದ್ದಿಯೊಂದ್ದನನ್ನು ನೀಡಿದೆ. ಕೆನಡಾದ ಕಂಪನಿಯು ತನ್ನ ಸಾಧನಗಳು ಮುಂದಿನ ವಾರದಿಂದ ಸೆಲ್ಯುಲಾರ್ ಮತ್ತು ವೈ-ಫೈ ಸಂಪರ್ಕದ ಮೂಲಕ ಸೇವೆಗಳನ್ನು ಬೆಂಬಲಿಸಲು ಸಾಧ್ಯವಾಗುವುದಿಲ್ಲ ಎಂದು ಪುನರುಚ್ಚರಿಸಿದೆ. ಕಂಪನಿಯು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಕ್ರಮವನ್ನು ಘೋಷಿಸಿತ್ತು ಆದರೆ ಅದರ ಸೇವೆಯನ್ನು ತನ್ನ ನಿಷ್ಠಾವಂತ ಗ್ರಾಹಕರರು ಮತ್ತು ಪಾಲುದಾರರಿಗಾಗಿ ವಿಸ್ತರಿಸಿತ್ತು. ಆದರೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತ ಬ್ಲ್ಯಾಕ್‌ಬೆರಿ ಫೋನ್‌ಗಳಿಗೆ ಈ ಅಪ್‌ಡೇಟ್ ಅನ್ವಯಿಸುವುದಿಲ್ಲ.
ಜನವರಿ 4 ರಿಂದ, BlackBerry 7.1 OS ಮತ್ತು ಹಿಂದಿನ, BlackBerry 10 ಸಾಫ್ಟ್‌ವೇರ್, BlackBerry PlayBook OS 2.1 ಮತ್ತು ಹಿಂದಿನ ಆವೃತ್ತಿಗಳನ್ನು ಆಧರಿಸಿದ ಸಾಧನಗಳು ಇನ್ನು ಮುಂದೆ "ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸಲು" ಸಾಧ್ಯವಾಗುವುದಿಲ್ಲ ಎಂದು ಕಂಪನಿಯು ತನ್ನ ವೆಬ್‌ಸೈಟ್ ಟಿಪ್ಪಣಿಯಲ್ಲಿ ತಿಳಿಸಿದೆ. ಇದರರ್ಥ ಸೆಲ್ಯುಲಾರ್ ಅಥವಾ ವೈ-ಫೈ ಸಂಪರ್ಕದಲ್ಲಿರುವ ಬ್ಲ್ಯಾಕ್‌ಬೆರಿ ಫೋನ್‌ಗಳು ಡೇಟಾ ಬಳಕೆ ಅನುಮತಿಸಲು, ಫೋನ್ ಕರೆಗಳನ್ನು ಮಾಡಲು, ಪಠ್ಯ ಸಂದೇಶಗಳನ್ನು ಕಳುಹಿಸಲು ಮತ್ತು ತುರ್ತು 911 ಕಾರ್ಯವನ್ನು ಸಹ ಅನುಮತಿಸುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. 2010 ರ ದಶಕದ ಆರಂಭದಲ್ಲಿ ಬ್ಲ್ಯಾಕ್‌ಬೆರಿ ತನ್ನ ನೆಲೆಯನ್ನು ಕಳೆದುಕೊಂಡಿದ್ದರಿಂದ ಇದರಲ್ಲಿ ಆಶ್ಚರ್ಯವೇನಿಲ್ಲ.
2015 ರಲ್ಲಿ ಆಂಡ್ರಾಯ್ಡ್‌ಗೆ ಬದಲಾಗಿದ್ದ ಬ್ಲ್ಯಾಕ್‌ಬೆರಿ!
ಕೆನಡಾದ ವಾಟರ್ಲೂನ ಒಂಟಾರಿಯೊನಲ್ಲಿ ಬ್ಲ್ಯಾಕ್‌ಬೆರಿ ಪ್ರಧಾನ ಕಛೇರಿಯಿದ್ದು ಕಂಪನಿಯು ಆಕರ್ಷಣೆಯನ್ನು ಮರಳಿ ಪಡೆಯಲು ಶ್ರಮಿಸಿತ್ತು. ಆದರೆ 2013 ರಲ್ಲಿ, ಇದು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರನ್ನು ಆಕರ್ಷಿಸಲು ಬ್ಲ್ಯಾಕ್‌ಬೆರಿ ಓಎಸ್‌ನ ಬದಲಿಯಾಗಿ ಬ್ಲ್ಯಾಕ್‌ಬೆರಿ 10 ಅನ್ನು ತಂದಿತು. ಕಂಪನಿಯು ಅಂತಿಮವಾಗಿ 2015 ರಲ್ಲಿ ಆಂಡ್ರಾಯ್ಡ್‌ಗೆ ಸ್ಥಳಾಂತರಗೊಂಡಿತು. ಇದಲ್ಲದೆ ಆಪಲ್ ಮತ್ತು ಸ್ಯಾಮ್‌ಸಂಗ್‌ನ ಫ್ಲ್ಯಾಗ್‌ಶಿಪ್‌ಗಳ ಜತೆ ಸ್ಪರ್ಧಿಸಲು ಬ್ಲ್ಯಾಕ್‌ಬೆರಿ ಪ್ರೈವ್ (BlackBerry Priv) ಅನ್ನು ಹೊಸ ಸ್ಲೈಡರ್ ಫೋನ್‌ನಂತೆ ತಂದಿತು. ಆದಾಗ್ಯೂ, ಅದೆಲ್ಲವೂ ಯಾವುದೇ ಯಶಸ್ಸನ್ನು ಗಳಿಸಲು ಸಹಾಯ ಮಾಡಲಿಲ್ಲ.
ಇದನ್ನೂ ಓದಿ: FACT Check ಸ್ಕ್ರೀನ್‌ಶಾಟ್ ಪತ್ತೆ ಹಚ್ಚಲು WhatsAppನಿಂದ 3ನೇ ಬ್ಲೂಟಿಕ್, ಸತ್ಯಾಂಶವೇನು?
2016 ರಲ್ಲಿ ತನ್ನ ಬ್ರ್ಯಾಂಡ್ ಹೆಸರನ್ನು ಥರ್ಡ ಪಾರ್ಟಿ ಸಾಧನಗಳೊಂದಿಗೆ ಉಳಿಸಿಕೊಳ್ಳಲು, ಬ್ಲ್ಯಾಕ್‌ಬೆರಿ ಅಂತಿಮವಾಗಿ ಜಾಗತಿಕ ಮಾರುಕಟ್ಟೆಗಳಿಗಾಗಿ TCL Communication ಮತ್ತು ಭಾರತದಲ್ಲಿ Optiemus Infracom ಸೇರಿದಂತೆ ಪರವಾನಗಿ ಪಾಲುದಾರರನ್ನು ತಂದಿತು. ಪರವಾನಗಿ ಪಾಲುದಾರರು BlackBerry KeyOne ಮತ್ತು Key2 ಸೇರಿದಂತೆ ಮಾದರಿಗಳನ್ನು ಪರಿಚಯಿಸಿದ್ದರು.
ಬ್ಲ್ಯಾಕ್‌ಬೆರಿ ಬ್ರ್ಯಾಂಡ್ ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲ!
ಆದಾಗ್ಯೂ, ಫೆಬ್ರವರಿ 2020 ರಲ್ಲಿ TCL ಇನ್ನು ಮುಂದೆ BlackBerry ಫೋನ್‌ಗಳನ್ನು ಉತ್ಪಾದಿಸುವುದಿಲ್ಲ ಎಂದು ಘೋಷಿಸಿತು. ಇತರ ಬ್ರ್ಯಾಂಡ್ ಪರವಾನಗಿದಾರರು ಸಹ ಅಕ್ಟೋಬರ್ 2018 ರಿಂದ ಮೌನವನ್ನು ಕಾಯ್ದುಕೊಂಡಿದ್ದಾರೆ BlackBerry Key2 LE ಬ್ರಾಂಡ್‌ನ ಅಡಿಯಲ್ಲಿ ತಂದ ಕೊನೆಯ ಫೋನ್ ಆಗಿದೆ. 2020 ರಲ್ಲಿ ಟೆಕ್ಸಾಸ್ ಮೂಲದ ಸ್ಟಾರ್ಟ್‌ಅಪ್ ಆನ್‌ವರ್ಡ್‌ಮೊಬಿಲಿಟಿ 2021 ರಲ್ಲಿ 5G ಬ್ಲ್ಯಾಕ್‌ಬೆರಿ ಫೋನ್ ಅನ್ನು ಪ್ರಾರಂಭಿಸಲು ಚಿಂತನೆ ನಡೆಸಿತ್ತು. ಆದರೂ ಆ ಮಾದರಿ ಇನ್ನೂ ಹೊರಹೊಮ್ಮಿಲ್ಲ.
ಇದನ್ನೂ ಓದಿ: Telegram New Features: ಹೊಸ ವರ್ಷಕ್ಕೆ 3 ಹೊಸ ಫೀಚರ್ಸ್ ಬಿಡುಗಡೆ ಮಾಡಿದ ಮೇಸೆಜಿಂಗ್ ಪ್ಲಾಟಫಾರ್ಮ್!
ಬ್ಲ್ಯಾಕ್‌ಬೆರಿ ಫೋನ್‌ಗಳಿಂದ ಲೆಗಸಿ ಸೇವೆಗಳ ನಿರ್ಗಮನವು ಬ್ಲ್ಯಾಕ್‌ಬೆರಿ ಬ್ರ್ಯಾಂಡ್ ಸಂಪೂರ್ಣವಾಗಿ ಸತ್ತಿದೆ ಎಂದು ಅರ್ಥವಲ್ಲ. ಕಂಪನಿಯು ಪ್ರಸ್ತುತ ಪ್ರಪಂಚದಾದ್ಯಂತದ ವಿವಿಧ ಉದ್ಯಮಗಳು ಮತ್ತು ಸರ್ಕಾರಗಳಿಗೆ ತನ್ನ ಭದ್ರತಾ ಸಾಫ್ಟ್‌ವೇರ್ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ.