Telegram New Features: ಹೊಸ ವರ್ಷಕ್ಕೆ 3 ಹೊಸ ಫೀಚರ್ಸ್ ಬಿಡುಗಡೆ ಮಾಡಿದ ಮೇಸೆಜಿಂಗ್ ಪ್ಲಾಟಫಾರ್ಮ್!
ಟೆಲಿಗ್ರಾಮ್ ಬಳಕೆದಾರರು ಈಗ ಎಮೋಜಿ ಮೂಲಕ ಸಂದೇಶಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಈಗಾಗಲೇ iMessage, Facebook Messenger ಮತ್ತು Instagram ನಲ್ಲಿ ಲಭ್ಯವಿದೆ.
Tech Desk: ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ 2021 ರ ಕೊನೆಯ ದಿನದಂದು ಇಂಟರಸ್ಟಿಂಗ್ ಫೀಚರ್ಸ್ಗಳನ್ನು ಹೊರತಂದಿದೆ. ಟೆಲಿಗ್ರಾಮ್ ಮೇಸೆಜ್‌ನ ಕೆಲವ ಭಾಗಗಳನ್ನು ಮರೆಮಾಡಲು ಆಸಕ್ತಿದಾಯಕ ವೈಶಿಷ್ಟ್ಯದೊಂದಿಗೆ iMessage-ರೀತಿಯ ರಿಯಾಕ್ಟ್ ಫೀಚರ್ ಪಡೆದಿದೆ. ಈ ವೈಶಿಷ್ಟ್ಯವನ್ನು ಸ್ಪಾಯ್ಲರ್ (Spoiler) ಎಂದು ಹೆಸರಿಸಲಾಗಿದೆ. ಮೆಸೇಜಿಂಗ್ ಅಪ್ಲಿಕೇಶನ್ ಪಡೆದಿರುವ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ಸಂದೇಶ ಅನುವಾದ (Transaltion).
ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಅನುವಾದ ಫೀಚರ್ ನೀಡುತ್ತಿರುವ ಮೊದಲ ಅಪ್ಲಿಕೇಶನ್ ಇಅದಾಗಿದೆ. ವಾಟ್ಸಾಪ್, ಸಿಗ್ನಲ್ ಸೇರಿದಂತೆ ಯಾವುದೇ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳು ಸಂದೇಶ ಅನುವಾದ ವೈಶಿಷ್ಟ್ಯವನ್ನು ಹೊಂದಿಲ್ಲ.
Message Reaction Features
ಟೆಲಿಗ್ರಾಮ್ ಬಳಕೆದಾರರು ಈಗ ಎಮೋಜಿ (Emoji) ಮೂಲಕ ಸಂದೇಶಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಈಗಾಗಲೇ iMessage, Facebook Messenger ಮತ್ತು Instagram ನಲ್ಲಿ ಲಭ್ಯವಿದೆ . "ಟೆಲಿಗ್ರಾಮ್ ಅನಿಮೇಟೆಡ್ ಮತ್ತು ಸಂವಾದಾತ್ಮಕ ಎಮೋಜಿಗಳನ್ನು ಸೇರಿಸುವ ಮೊದಲ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದೆ, ಇದು ಬಳಕೆದಾರರಿಗೆ ಚಾಟ್‌ಗಳಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಸಾಟಿಯಿಲ್ಲದ ಮಾರ್ಗಗಳನ್ನು ನೀಡುತ್ತದೆ. ಇಂದು ಈ ಕೆಲವು ಎಮೋಜಿಗಳು ಯಾವುದೇ ಸಂದೇಶಗಳನ್ನು ಕಳುಹಿಸದೆ ಕೇವಲ ಇಮೋಜಿ ಬಳಸಿ ಭಾವನೆಗಳನ್ನು ಮತ್ತು ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲು ಪ್ರತಿಕ್ರಿಯೆಯಾಗಿ ಲಭ್ಯವಿವೆ" ಎಂದು ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: FACT Check ಸ್ಕ್ರೀನ್‌ಶಾಟ್ ಪತ್ತೆ ಹಚ್ಚಲು WhatsAppನಿಂದ 3ನೇ ಬ್ಲೂಟಿಕ್, ಸತ್ಯಾಂಶವೇನು?
ಎಮೋಜಿಯನ್ನು ಬಳಸಿಕೊಂಡು ಸಂದೇಶಕ್ಕೆ ಪ್ರತಿಕ್ರಿಯಿಸಲು ಅಥವಾ ಮತ್ತೊಂದು ಎಮೋಜಿಯನ್ನು ಕಳುಹಿಸಲು, ಸಂದೇಶವನ್ನು ಒಮ್ಮೆ ಟ್ಯಾಪ್ ಮಾಡಿ ಮತ್ತು ನೀವು ಕಳುಹಿಸಲು ಬಯಸುವ ಎಮೋಜಿಗಳ ಪಟ್ಟಿಯಿಂದ ಆಯ್ಕೆಮಾಡಿ. ಪ್ರತಿಕ್ರಿಯೆ ವೈಶಿಷ್ಟ್ಯವನ್ನು ಖಾಸಗಿ ಚಾಟ್‌ಗಳು, ಗುಂಪುಗಳು ಮತ್ತು ಚಾನಲ್‌ಗಳಲ್ಲಿ ಬಳಸಬಹುದು. ರಿಯಾಕ್ಟ್ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸುವುದನ್ನು ಗುಂಪಿನ ನಿರ್ವಾಹಕರು (Admin) ನಿರ್ಧರಿಸುತ್ತಾರೆ.
Spoiler
ಸ್ಪಾಯ್ಲರ್ ವೈಶಿಷ್ಟ್ಯವನ್ನು ಬಳಸಿಕೊಂಡು, ಬಳಕೆದಾರರು ಟೈಪ್ ಮಾಡುವಾಗ ತಮ್ಮ ಪಠ್ಯದ ಯಾವುದೇ ಭಾಗವನ್ನು ಆಯ್ಕೆ ಮಾಡಬಹುದು ಮತ್ತು ಹೊಸ 'ಸ್ಪಾಯ್ಲರ್' ಫಾರ್ಮ್ಯಾಟಿಂಗ್ ಅನ್ನು ಆಯ್ಕೆ ಮಾಡಬಹುದು. ನೀವು ಸ್ಪಾಯ್ಲರ್ ಆಯ್ಕೆ ಮಾಡಿದಾಗ, ನೀವು ಸಂದೇಶದ ಆಯ್ದ ಭಾಗಗಳನ್ನು ಚಾಟ್‌ನಲ್ಲಿ, ಹಾಗೆಯೇ ಚಾಟ್ ಲಿಸ್ಟ್ ಮತ್ತು ನೋಟಿಫಿಕೇಶನ್‌ಗಳಲ್ಲಿ ಮರೆಮಾಡಬಹುದು.
Message Translate Features
ಸಂದೇಶ ಅನುವಾದವು ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್‌ನಲ್ಲಿ ಇದುವರೆಗೆ ಹೊರತಂದಿರುವ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇದನ್ನು ಬಿಡುಗಡೆ ಮಾಡಿರುವ ಮೊದಲ ಅಪ್ಲಿಕೇಶನ್ ಟೆಲಿಗ್ರಾಮ್ ಆಗಿದೆ. ಈಗ ಬಳಕೆದಾರರು ಯಾವುದೇ ಸಂದೇಶವನ್ನು ಇನ್ನೊಂದು ಭಾಷೆಗೆ ಅನುವಾದಿಸಬಹುದು. ನೀವು Settings>Languages ಅನುವಾದ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದು.
ಸಂದೇಶವನ್ನು ಆಯ್ಕೆ ಮಾಡಿದಾಗ ಮೆನುವಿನಲ್ಲಿ ಹೊಸ ಅನುವಾದ ಬಟನ್ ಅನ್ನು ಸೇರಿಸಲಾಗುತ್ತದೆ. ಟೆಲಿಗ್ರಾಮ್ ಅನ್ನು ಬೆಂಬಲಿಸುವ ಎಲ್ಲಾ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅನುವಾದ ಲಭ್ಯವಿದೆ ಆದರೆ ಈ ವೈಶಿಷ್ಟ್ಯವನ್ನು ಬಳಸಲು Apple ಬಳಕೆದಾರರಿಗೆ iOS 15+ನ ಅಗತ್ಯವಿರುತ್ತದೆ.