FACT Check ಸ್ಕ್ರೀನ್‌ಶಾಟ್ ಪತ್ತೆ ಹಚ್ಚಲು WhatsAppನಿಂದ 3ನೇ ಬ್ಲೂಟಿಕ್, ಸತ್ಯಾಂಶವೇನು?
- ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ WhatsApp ಹೊಸ ಫೀಚರ್ಸ್
- ಸ್ಕ್ರೀನ್‌ಶಾಟ್ ಪತ್ತೆ ಹಚ್ಚಲು 3ನೇ ಬ್ಲೂಟಿಕ್ ಎಂದು ವೈರಲ್
- 3ನೇ ಬ್ಲೂಟಿಕ್ ಅಭಿವೃದ್ಧಿಪಡಿಸಿಲ್ಲ, ಸುಳ್ಳು ಸುದ್ದಿ ಎಂದ WhatsApp
ನವದೆಹಲಿ(ಡಿ.30): ವಿಶ್ವದಲ್ಲಿ ಅತೀ ಹೆಚ್ಚು ಮಂದಿ ಬಳಸುತ್ತಿರುವ ಮೆಸೆಂಜರ್ ಪ್ಲಾಟ್‌ಫಾರ್ಮ್ WhatsApp ಕಾಲ ಕಾಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಸ್(whatsapp features) ಪರಿಚಯಿಸುತ್ತಲೇ ಬಂದಿದೆ. ಬಳಕೆದಾರರ ಅನುಕೂಲಕ್ಕಾಗಿ ವ್ಯಾಟ್ಸ್ಆ್ಯಪ್ ಈಗಾಗಲೇ ಹತ್ತು ಹಲವು ಫೀಚರ್ಸ್ ಪರಿಚಯಿಸಿದೆ. ಇದೀಗ ವ್ಯಾಟ್ಸ್‌ಆ್ಯಪ್ 3ನೇ ಬ್ಲೂಕ್ ಟಿಕ್(third blue check) ಪರಿಚಯಿಸುತ್ತಿದೆ ಅನ್ನೋ ಸುದ್ದಿ ವೈರಲ್ ಆಗಿದೆ. ಇಷ್ಟೇ ಅಲ್ಲ ಭಾರಿ ಚರ್ಚೆ ನಡೆಯುತ್ತಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ವ್ಯಾಟ್ಸ್‌ಆ್ಯಪ್ ಸ್ಪಷ್ಟನೆ ನೀಡಿದೆ. 3ನೇ ಬ್ಲೂಟಿಕ್ ಪರಿಚಯಿಸುತ್ತಿಲ್ಲ ಎಂದು ಖಚಿತಪಡಿಸಿದೆ.
WhatsApp ಮೆಸೆಂಜರ್ ಸ್ಕ್ರೀನ್‌ಶಾಟ್ ಪತ್ತೆಹಚ್ಚಲು ಮೂರನೇ ನೀಲಿ ಟಿಕ್ ಪರಿಚಯಿಸಲು ಸಜ್ಜಾಗಿದೆ ಅನ್ನೋ ಸುದ್ದಿ ಸುಳ್ಳಿ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ(Fake News) ಎಂದು ವ್ಯಾಟ್ಸ್ಆ್ಯಪ್ ನ್ಯೂಸ್ ಟ್ರಾಕರ್ WABetaInfo ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ಈ ಮೂಲಕ ಬಳಕೆದಾರರಲ್ಲಿ ಎದ್ದ ಗೊಂದಲಕ್ಕೆ WhatsApp ತೆರೆ ಎಳೆದಿದೆ.
WhatsApp group admin ಸದಸ್ಯರ ಆಕ್ಷೇಪಾರ್ಹ ಪೋಸ್ಟ್‌ಗೆ ಗ್ರೂಪ್ ಆಡ್ಮಿನ್ ಹೊಣೆಯಲ್ಲ; ಆತಂಕ ದೂರ ಮಾಡಿದ ಹೈಕೋರ್ಟ್!
WhatsApp ಸಂಸ್ಥೆ ಸ್ಪಷ್ಟನೆಗೂ ಮೊದಲು 3ನೇ ಬ್ಲೂ ಟಿಕ್ ಭಾರಿ ಸದ್ದು ಮಾಡಿತ್ತು. WhatsApp ಬಳಕೆದಾರರು ತಮ್ಮ ಸಂದೇಶಗಳ ಸ್ಕ್ರೀನ್‌ಶಾಟ್ ತೆಗೆದಿದ್ದಾರೆ ಎಂಬುದನ್ನು 3ನೇ ಬ್ಲೂಟಿಕ್ ಖಚಿತಪಡಿಸಲಿದೆ. ಸದ್ಯ ರವಾನಿಸಿದ ಸಂದೇಶ ಕಳುಹಿಸಿದ ವ್ಯಕ್ತಿಯ ವ್ಯಾಟ್ಸ್‌ಆ್ಯಪ್ ರಿಸೀವ್ ಆಗಿ ಆ ವ್ಯಕ್ತಿ ನೋಡಿದರೆ ಎರಡು ನೀಲಿ ಟಿಕ್ ಗೋಚರಿಸುತ್ತಿದೆ. ಇದೇ ಜಾಗದಲ್ಲಿ ಅದೆ ಸಂದೇಶದ ಸ್ಕ್ರೀನ್‌ಶಾಟ್ ತೆಗೆದರೆ 3ನೇ ಟಿಕ್ ಗೋಚರಿಸಲಿದೆ ಅನ್ನೋ ಸಂದೇಶ ಭಾರಿ ವೈರಲ್ ಆಗಿತ್ತು.
ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಟ್ಸ್‌ಆ್ಯಪ್ ನೂತನ ಫೀಚರ್ಸ್ 3ನೇ ಬ್ಲೂಟಿಕ್ ಪರ ವಿರೋಧದ ಚರ್ಚೆಯು ನಡೆದಿತ್ತು. ಹಲವರು ಇದು ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಎಂದು ವಾದಿಸಿದ್ದರು. ಇದರಿಂದ ಬಳಕೆದಾರರ ಸ್ಕ್ರೀನ್‌ಶಾಟ್ ತೆಗೆದರೆ ಅದು ಬಹಿರಂಗವಾಗಲಿದೆ. ಹೀಗಾಗಿ ಖಾಸಗಿತನಕ್ಕೆ ಧಕ್ಕೆ ಎಂದಿದ್ದರು. ಮತ್ತೆ ಕೆಲವರು ಹೊಸ ಫೀಚರ್ಸ್‌ನಿಂದ ಉಪಯೋಗ ಹೆಚ್ಚಿದೆ ಎಂದು ವಾದಿಸಿದ್ದರು. ಗೊಂದಲ, ಚರ್ಚೆ ಹೆಚ್ಚಾಗುತ್ತಿದ್ದಂತೆ ವ್ಯಾಟ್ಸ್‌ಆ್ಯಪ್ ಸ್ಪಷ್ಟನೆ ನೀಡಿದೆ.
WhatsApp Privacy: ಗೌಪ್ಯತೆ ಕಾಪಾಡಲು ವಾಟ್ಸಪ್ ಹೊಸ ಅಪ್ಡೇಟ್ಸ: ಥರ್ಡ್ ಪಾರ್ಟಿ ಆ್ಯಪ್‌ಗಳಿಗಿಲ್ಲ ಪ್ರವೇಶ!
ಶೆಡ್ಯೂಲ್ ಮೆಸೆಜ್ ಫೀಚರ್ಸ್
ವ್ಯಾಟ್ಸ್ಆ್ಯಪ್ ಇತ್ತೀಚೆಗೆ ಶೆಡ್ಯೂಲ್ ಮೆಸೇಜ್ ಫೀಚರ್ಸ್ ಪರಿಚಿಯಸಿದೆ. ಈ ಫೀಚರ್ಸ್ ಮೂಲಕ ಸಂದೇಶಗಳನ್ನು ಟೈಪ್ ಮಾಡಿ ಎಷ್ಟು ಗಂಟೆಗೆ ಗೆಳೆಯರಿಗೆ ಅಥವಾ ಸಂದೇಶ ಸ್ವೀಕರಿಸುವವರಿಗೆ ರವಾನೆಯಾಗಬೇಕು ಅನ್ನೋ ಶೆಡ್ಯೂಲ್ ಫೀಚರ್ ಇದಾಗಿದೆ. ಗೆಳೆಯರ, ಆಪ್ತರ ಹುಟ್ಟುಹಬ್ಬಗಳಿಗೆ ಮಧ್ಯರಾತ್ರಿ 12ಗಂಟೆಗೆ ಎದ್ದು ಹ್ಯಾಪಿ ಬರ್ತ್‌ಡೆ ಎಂದು ಸಂದೇಶ ಕಳುಹಿಸುವ ಅಗತ್ಯವಿಲ್ಲ. ಇದರ ಬದಲು ಮೊದಲೇ ಟೈಪ್ ಮಾಡಿ ಶೆಡ್ಯೂಲ್ ಮಾಡಿದರೆ ಸಾಕು. ನೀವು ನಿಗದಿಪಡಿಸಿದ ಸಮಯಕ್ಕ, ನಿಗಿದಿತ ವ್ಯಕ್ತಿಗೆ ಸಂದೇಶ ರವಾನೆಯಾಗಲಿದೆ. ಇದಕ್ಕಾಗಿ ವ್ಯಾಟ್ಸ್ಆ್ಯಪ್ ಮತ್ತೊಂದು ಆ್ಯಪ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಈ ಫೀಚರ್ಸ್ ಬಳಸಲು ಮತ್ತೊಂದು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕಿದೆ.
ಗ್ರೂಪ್ ಆಡ್ಮಿನ್‌ಗೆ ಮುಕ್ತಿ ನೀಡಿದ ತೀರ್ಪು
ಇತ್ತೀಚೆಗೆ ಭಾರತದಲ್ಲಿ ಬಾಂಬೆ ಹೈಕೋರ್ಟ್, ಮದ್ರಾಸ್ ಹೈಕೋರ್ಟ್ ವ್ಯಾಟ್ಸ್ಆ್ಯಪ್ ಗ್ರೂಪ್ ಕುರಿತು ಮಹತ್ವದ ತೀರ್ಪು ನೀಡಿದೆ. ವ್ಯಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಸದಸ್ಯರು ಹಾಕುವ ಪೋಸ್ಟ್‌ಗಳಿಗೆ ಗ್ರೂಪ್ ಆಡ್ಮಿನ್ ಹೊಣೆಯಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಈ ಕುರಿತು ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಕೋರ್ಟ್, ಮಹತ್ವದ ತೀರ್ಪ ನೀಡಿತ್ತು. ಗ್ರೂಪ್ ಸದಸ್ಯರ ಹಾಕುವ ಪೋಸ್ಟ್‌ಗಳ ಹಿಂದೆ ಗ್ರೂಪ್ ಅಡ್ಮಿನ್ ಕೈವಾಡವಿಲ್ಲದಿದ್ದರೆ ಅಡ್ಮಿನ್ ಹೊಣೆಯಾಗಲ್ಲ ಎಂದು ಕೋರ್ಟ್ ಹೇಳಿದೆ.