ಸ್ಮಾರ್ಟ್‌ಫೋನ್ ಖರೀದಿಸುವಾಗ ಅದರ ಧೂಳು ಮತ್ತು ನೀರಿನ ಸುರಕ್ಷತೆಯನ್ನು ಪರಿಗಣಿಸುವುದು ಮುಖ್ಯ. IP ರೇಟಿಂಗ್ ಈ ಸುರಕ್ಷತೆಯನ್ನು ಸೂಚಿಸುತ್ತದೆ, ಇದರಲ್ಲಿ IP69 ಅತ್ಯುನ್ನತ ಮಟ್ಟವಾಗಿದೆ. ಈ ಲೇಖನದಲ್ಲಿ IP69 ರೇಟಿಂಗ್ ಹೊಂದಿರುವ ಒನ್‌ಪ್ಲಸ್ ಮತ್ತು ಒಪ್ಪೋ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಬಹುತೇಕರು ಮಾರ್ಟ್‌ಫೋನ್ ಖರೀದಿ ವೇಳೆ ಕ್ಯಾಮೆರಾ ಮತ್ತು ಬ್ಯಾಟರಿ ಬ್ಯಾಕಪ್ ಮಾತ್ರ ನೋಡ್ತಾರೆ. ಈ ಅಂಶಗಳನ್ನು ಹೊರತಾಗಿಯೂ ನಿಮ್ಮ ಮೊಬೈಲ್ ಧೂಳು ಮತ್ತು ನೀರಿನಲ್ಲಿ ಎಷ್ಟು ಸುರಕ್ಷಿತ ಎಂಬುದನ್ನು ಗಮನಿಸಬೇಕು. ಧೂಳು ಮತ್ತು ನೀರಿನಲ್ಲಿ ಬಿದ್ದರೂ ಮೊಬೈಲ್ ಸುರಕ್ಷಿತವಾಗಿರಲು ಕಂಪನಿಗಳು IP ರೇಟಿಂಗ್ ಸುಧಾರಿಸುತ್ತಿವೆ.
IP ರೇಟಿಂಗ್ ಎಂದರೇನು?
ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನಲ್ಲಿ ಎಷ್ಟು ಸುರಕ್ಷಿತವಾಗಿರುತ್ತೆ ಎಂಬುದನ್ನು ಐಪಿ ರೇಟಿಂಗ್ ಸೂಚಿಸುತ್ತದೆ. ಸದ್ಯ IP69 ಸುಧಾರಿತ ಸೇಫ್ಟಿ ರೇಟಿಂಗ್ ಆಗಿದೆ. IP69 ರೇಟಿಂಗ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಧೂಳು-ನಿರೋಧಕ ಮಾತ್ರವಲ್ಲ, ಹೆಚ್ಚಿನ ಒತ್ತಡ ಮತ್ತು ಬಿಸಿನೀರಿನ ಸ್ಪ್ಲಾಶ್‌ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಈಗ ಭಾರತದಲ್ಲಿ ಐಪಿ69-ರೇಟೆಡ್ ಹೊಂದಿರುವ ಸ್ಮಾರ್ಟ್‌ಫೋನ್ ಮಾಹಿತಿ ಇಲ್ಲಿದೆ.
ಒನ್‌ಪ್ಲಸ್ ನಾರ್ಡ್ 6 (OnePlus Nord 6)
ಈ ಸ್ಮಾರ್ಟ್‌ಫೋನ್ IP66, IP68, IP69 ಮತ್ತು IP69K ರೇಟಿಂಗ್ ಹೊಂದಿದೆ.
6.78-ಇಂಚಿನ ಡಿಸ್‌ಪ್ಲೇ ಒಳಗೊಂಡಿದ್ದು, 1.5K AMOLED, 165Hz ರಿಫ್ರೆಶ್ ದರವಿದೆ.
ಪ್ರೊಸೆಸರ್: ಸ್ನಾಪ್‌ಡ್ರಾಗನ್ 8s ಜೆನ್ 4
RAM ಮತ್ತು ಸ್ಟೋರೇಜ್: 12GB ವರೆಗೆ LPDDR5X RAM ಮತ್ತು 256GB UFS 4.1 ಸ್ಟೋರೇಜ್
ಪ್ರೈಮರಿ ಕ್ಯಾಮೆರಾ: 50MP + 8MP ಅಲ್ಟ್ರಾ-ವೈಡ್
ಸೆಲ್ಫಿ ಕ್ಯಾಮೆರಾ: 32MP
ಬ್ಯಾಟರಿ: 9,000mAh, 80W ಸಪೋರ್ಟ್ ಚಾರ್ಜಿಂಗ್
ಒಪ್ಪೋ ಎಫ್33 ಪ್ರೊ 5ಜಿ (Oppo F33 Pro 5G)
IP66, IP68 ಮತ್ತು IP69 ರೇಟಿಂಗ್
6.57-ಇಂಚಿನ ಡಿಸ್‌ಪ್ಲೇ, HD+ AMOLED, 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ
ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 6360 ಮ್ಯಾಕ್ಸ್ (6nm)
RAM ಮತ್ತು ಸ್ಟೋರೇಜ್: 8GB LPDDR4X RAM, 256GB UFS 2.2 ಸ್ಟೋರೇಜ್
ಪ್ರೈಮರಿ ಕ್ಯಾಮೆರಾ: 50MP + 2MP
ಸೆಲ್ಫಿ ಕ್ಯಾಮೆರಾ: 50MP
ಬ್ಯಾಟರಿ: 80W ವೇಗದ ಚಾರ್ಜಿಂಗ್ ಜೊತೆ 7,000mAh
ಒನ್‌ಪ್ಲಸ್ 15 (OnePlus 15)
IP66, IP68, IP69 ಮತ್ತು IP69K ರೇಟಿಂಗ್
ಡಿಸ್‌ಪ್ಲೇ: 6.78-ಇಂಚಿನ QHD+ AMOLED, 165Hz ರಿಫ್ರೆಶ್ ದರ
ಪ್ರೊಸೆಸರ್: ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 (3nm)
RAM ಮತ್ತು ಸಂಗ್ರಹಣೆ: 16GB ವರೆಗೆ LPDDR5X ಅಲ್ಟ್ರಾ+ RAM ಮತ್ತು 512GB UFS 4.1 ಸಂಗ್ರಹಣೆ
ಪ್ರೈಮರಿ ಕ್ಯಾಮೆರಾ: 50MP + 50MP + 50MP ಟ್ರಿಪಲ್ ಕ್ಯಾಮೆರಾ
ಸೆಲ್ಫಿ ಕ್ಯಾಮೆರಾ: 32MP
ಬ್ಯಾಟರಿ: 7,300mAh
ಚಾರ್ಜಿಂಗ್: 120W ವೇಗದ ಚಾರ್ಜಿಂಗ್
ಇದನ್ನೂ ಓದಿ: Tecno Camon 50 Ultra ಲಾಂಚ್; 50MP ಕ್ಯಾಮೆರಾ, 6500mAh ಬ್ಯಾಟರಿಯ ಸ್ಮಾರ್ಟ್‌ಫೋನ್


