MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Mobiles
  • ಭಾರತದಲ್ಲಿ ಬಾಗಿಲು ಮುಚ್ಚುತ್ತಿದೆ ಒನ್‌ಪ್ಲಸ್ , ಇನ್ಮುಂದೆ ಖರೀದಿಗೆ ಸಿಗಲ್ಲ ಈ ಚೈನೀಸ್ ಫೋನ್

ಭಾರತದಲ್ಲಿ ಬಾಗಿಲು ಮುಚ್ಚುತ್ತಿದೆ ಒನ್‌ಪ್ಲಸ್ , ಇನ್ಮುಂದೆ ಖರೀದಿಗೆ ಸಿಗಲ್ಲ ಈ ಚೈನೀಸ್ ಫೋನ್

ಒನ್‌ಪ್ಲಸ್ ಭಾರತದಲ್ಲಿ ಪ್ರೀಮಿಯಂ ಫೋನ್ ಮೂಲಕ ಭಾರಿ ಸಂಚಲನ ಸೃಷ್ಟಿಸಿದೆ. ಚೀನಾ ಫೋನ್‌ಗಳ ಪೈಕಿ ಅತ್ಯುತ್ತಮ ಎಂದೇ ಗುರುತಿಸಿಕೊಂಡಿರುವ ಒನ್‌ಪ್ಲಸ್ ಇದೀಗ ಭಾರತಕ್ಕೆ ಗುಡ್ ಬೈ ಹೇಳುತ್ತಿದೆ. ದಿಢೀರ್ ನಿರ್ಧಾರಕ್ಕೆ ಕಾರಣವೇನು?

2 Min read
Author : Chethan Kumar
Published : Jul 16 2026, 11:53 AM IST
Share this Photo Gallery
  • FB
  • TW
  • Linkdin
  • Whatsapp
16
ಭಾರತಕ್ಕೆ ಗುಡ್ ಬೈ ಹೇಳುತ್ತಿದೆ ಒನ್‌ಪ್ಲಸ್
Image Credit : X

ಭಾರತಕ್ಕೆ ಗುಡ್ ಬೈ ಹೇಳುತ್ತಿದೆ ಒನ್‌ಪ್ಲಸ್

ಭಾರತದಲ್ಲಿ ಚೀನಾ ಫೋನ್‌ಗಳದ್ದೇ ಕಾರುಬಾರು. ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್, ಕ್ವಾಲಿಟಿ ಕ್ಯಾಮೆರಾ ಸೇರಿದಂತೆ ಹಲವು ವಿಶೇಷತೆ ಹೊಂದಿರುವ ಚೀನಾ ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಹುಪಾಲು ಹೊಂದಿದೆ. ಈ ಪೈಕಿ ಒನ್‌ಪ್ಲಸ್ ಕೂಡ ಒಂದು. ಚೀನಾ ಫೋನ್ ಪೈಕಿ ಒನ್‌ಪ್ಲಸ್ ಉತ್ತಮ ಗುಣಮಟ್ಟದ ಫೋನ್ ಎಂದೇ ಗುರುತಿಸಿಕೊಂಡಿದೆ. ಇದೀಗ ಭಾರತಕ್ಕೆ ಗುಡ್ ಬೈ ಹೇಳಲು ಒನ್‌ಪ್ಲಸ್ ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಯೂರೋಪ್, ಅಮೆರಿಕದಲ್ಲೂ ಬಾಗಿಲು ಕ್ಲೋಸ್
Image Credit : Getty

ಯೂರೋಪ್, ಅಮೆರಿಕದಲ್ಲೂ ಬಾಗಿಲು ಕ್ಲೋಸ್

ಭಾರತದಿಂದ ಮಾತ್ರವಲ್ಲ ಒನ್‌ಪ್ಲಸ್ ಯೂರೋಪ್, ಅಮೆರಿಕದಿಂದಲೂ ಹೊರಹೋಗುತ್ತಿದೆ. ಹೌದು, ಒನ್‌ಪ್ಲಸ್ ಹಲವು ದೇಶಗಳಲ್ಲಿ ಅಧಿಪತ್ಯ ಸಾಧಿಸಿದೆ. ಇದೀಗ ಹಂತ ಹಂತವಾಗಿ ಎಲ್ಲಾ ದೇಶಗಳಿಂದ ಹೊರನಡೆಯುತ್ತಿದೆ. ಇನ್ನು ಒನ್‌ಪ್ಲಸ್ ಕೇವಲ ಚೀನಾದಲ್ಲಿ ಮಾತ್ರ ಲಭ್ಯವಾಗಲಿದೆ. ಇನ್ನುಳಿದ ಯಾವುದೇ ದೇಶಗಳಲ್ಲಿ ಒನ್‌ಪ್ಲಸ್ ಫೋನ್ ಇರುವುದಿಲ್ಲ.

Related Articles

Related image1
ಐಫೋನ್, ಸ್ಯಾಮ್‌ಸಂಗ್‌ಗೆ ನಡುಕ ಹುಟ್ಟಿಸಿದ ಒಪ್ಪೊ ಫೈಂಡ್ X10 ಪ್ರೊ ಮ್ಯಾಕ್ಸ್: ಮೂರು 200MP ಕ್ಯಾಮೆರಾ ಮೊಬೈಲ್!
Related image2
ಐಫೋನ್, ಸ್ಯಾಮ್ಸಂಗ್ ಗ್ಯಾಲಕ್ಸಿಗೆ ಸೆಡ್ಡು ಹೊಡೆದ ರೆಡ್‌ಮಿ, ಕಡಿಮೆ ಬೆಲೆ ನೋಟ್ 17 , 17 ಪ್ರೋ ಲಾಂಚ್
36
2027ರಲ್ಲಿ ಭಾರತದಲ್ಲಿ ಸಂಪೂರ್ಣ ಬಂದ್
Image Credit : OnePlus Website

2027ರಲ್ಲಿ ಭಾರತದಲ್ಲಿ ಸಂಪೂರ್ಣ ಬಂದ್

ಭಾರತಿಂದ ಒನ್‌ಪ್ಲಸ್ 2027ರಲ್ಲಿ ಸಂಪೂರ್ಣವಾಗಿ ಕ್ಲೋಸ್ ಆಗಲಿದೆ. ಇದೇ ವಾರದಿಂದ ಕ್ಲೋಸಿಂಗ್ ಪ್ರಕ್ರಿಯೆಗಳು ಶುರುವಾಗುತ್ತಿದೆ. ಈ ವಾರ ಅಮೆರಿಕ ಹಾಗೂ ಯೂರೋಪ್ ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿರುವುದಾಗಿ ಒನ್‌ಪ್ಲಸ್ ಘೋಷಣೆ ಮಾಡಲಿದೆ. ಇನ್ನು 2027ರ ಆರಂಭದಲ್ಲಿ ಭಾರತದಲ್ಲಿ ಈ ಘೋಷಣೆ ಮಾಡಲಿದೆ. ಬಳಿಕ 2027ರ ಮಧ್ಯದ ಸಮಯದಲ್ಲಿ ಒನ್‌ಪ್ಲಸ್ ಸಂಪೂರ್ಣವಾಗಿ ಭಾರತದಿಂದ ಹೊರನಡೆಯಲಿದೆ.

46
ಮಾರುಕಟ್ಟೆ ಕುಸಿತ, ತೀವ್ರ ಪೈಪೋಟಿ
Image Credit : OnePlus Community

ಮಾರುಕಟ್ಟೆ ಕುಸಿತ, ತೀವ್ರ ಪೈಪೋಟಿ

ಭಾರತದಲ್ಲಿ ಒನ್‌ಪ್ಲಸ್ ಮಾರುಕಟ್ಟೆ ಕುಸಿತ ಕಂಡಿದೆ. ಇನ್ನೂ ಯೂರೋಪ್, ಅಮೆರಿಕ ಸೇರಿದಂತೆ ಇತರ ದೇಶಗಳಲ್ಲೂ ಒನ್‌ಪ್ಲಸ್ ಬೇಡಿಕೆ ಕುಸಿದಿದೆ. ತೀವ್ರ ಪೈಪೋಟಿ ಹಾಗೂ ಒನ್‌ಪ್ಲಸ್ ಪೇರೇಟಿಂಗ್ ಕಂಪನಿಯ ಇತರ ಫೋನ್‌ಗಳು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇಟ್ಟುಕೊಂಡಿದೆ. ಆದರೆ ಒನ್‌ಪ್ಲಸ್ ಕುಸಿತ ಕಂಡಿದೆ. ಹೀಗಾಗಿ ಬಾಗಿಲು ಕ್ಲೋಸ್ ಮಾಡುತ್ತಿದೆ.

56
ಒಪ್ಪೋದ ಸಿಸ್ಟರ್ ಕಂಪನಿ ಒನ್‌ಪ್ಲಸ್, ರಿಯಲ್‌ಮಿ
Image Credit : Asianet News

ಒಪ್ಪೋದ ಸಿಸ್ಟರ್ ಕಂಪನಿ ಒನ್‌ಪ್ಲಸ್, ರಿಯಲ್‌ಮಿ

ಚೀನಾದ ಅತೀ ದೊಡ್ಡ ಮೊಬೈಲ್ ಬ್ರ್ಯಾಂಡ್ ಒಪ್ಪೋ ಪೇರೆಂಟಿಂಗ್ ಕಂಪನಿಯಾಗಿದೆ. ಇದರ ಸಿಸ್ಟರ್ ಕಂಪನಿಯಾಗಿ ಒನ್‌ಪ್ಲಸ್ ಹಾಗೂ ರಿಯಲ್‌ಮಿ. ಒಪ್ಪೋ ಹಾಗೂ ರಿಯಲ್‌ಮಿ ಭಾರತ ಸೇರಿದಂತೆ ಇತರ ದೇಶಗಳ ಮಾರುಕಟ್ಟೆಯಲ್ಲಿ ಮುಂದುವರಿಯಲಿದೆ. ಆದರೆ ಒನ್‌ಪ್ಲಸ್ ಬಾಗಿಲು ಮುಚ್ಚುತ್ತಿದೆ.

66
ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ತಟ್ಟಿದ ಬಿಸಿ
Image Credit : AI Generated Image

ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ತಟ್ಟಿದ ಬಿಸಿ

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಎದುರಾಗಿದೆ. ನೂರಕ್ಕೂ ಹೆಚ್ಚು ಪ್ರಸಿದ್ಧ ಬ್ರ್ಯಾಂಡ್‌ಗಳು ಹೊಸ ಹೊಸ ಫೋನ್ ಬಿಡುಗಡೆ ಮಾಡುತ್ತಿದೆ. ಇತ್ತ ಚಿಪ್ ಕೊರತೆಯಿಂದ ಉತ್ಪಾದನೆ ವೆಚ್ಚ ಹೆಚ್ಚಾಗುತ್ತಿದೆ.ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಿಯಮಗಳು ಕಠಿಣಗೊಳ್ಳುತ್ತಿದೆ. ಇವೆಲ್ಲವೂ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹಲವು ಹೊಡೆತ ನೀಡಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಸ್ಮಾರ್ಟ್‌ಫೋನ್
ಮೊಬೈಲ್
ಭಾರತ ಸುದ್ದಿ
ಚೀನಾ

Latest Videos
Recommended Stories
Recommended image1
Motorola Edge 70 Max: ಭಾರತಕ್ಕೆ ಕಾಲಿಟ್ಟ ಮೋಟೋ ಎಡ್ಜ್ 70 ಮ್ಯಾಕ್ಸ್: 7,100mAh ಬ್ಯಾಟರಿ, ಬೆಲೆ ಎಷ್ಟು?
Recommended image2
ಐಫೋನ್, ಸ್ಯಾಮ್ಸಂಗ್ ಗ್ಯಾಲಕ್ಸಿಗೆ ಸೆಡ್ಡು ಹೊಡೆದ ರೆಡ್‌ಮಿ, ಕಡಿಮೆ ಬೆಲೆ ನೋಟ್ 17 , 17 ಪ್ರೋ ಲಾಂಚ್
Recommended image3
ಐಫೋನ್, ಸ್ಯಾಮ್‌ಸಂಗ್‌ಗೆ ನಡುಕ ಹುಟ್ಟಿಸಿದ ಒಪ್ಪೊ ಫೈಂಡ್ X10 ಪ್ರೊ ಮ್ಯಾಕ್ಸ್: ಮೂರು 200MP ಕ್ಯಾಮೆರಾ ಮೊಬೈಲ್!
Related Stories
Recommended image1
ಐಫೋನ್, ಸ್ಯಾಮ್‌ಸಂಗ್‌ಗೆ ನಡುಕ ಹುಟ್ಟಿಸಿದ ಒಪ್ಪೊ ಫೈಂಡ್ X10 ಪ್ರೊ ಮ್ಯಾಕ್ಸ್: ಮೂರು 200MP ಕ್ಯಾಮೆರಾ ಮೊಬೈಲ್!
Recommended image2
ಐಫೋನ್, ಸ್ಯಾಮ್ಸಂಗ್ ಗ್ಯಾಲಕ್ಸಿಗೆ ಸೆಡ್ಡು ಹೊಡೆದ ರೆಡ್‌ಮಿ, ಕಡಿಮೆ ಬೆಲೆ ನೋಟ್ 17 , 17 ಪ್ರೋ ಲಾಂಚ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved