iPhone 15 launch: ಐಫೋನ್-15 ಅನಾವರಣಕ್ಕೆ ಡೇಟ್ ಫಿಕ್ಸ್ ಮಾಡಿದ ಆಪಲ್, ಹೊಸ ಫೋನ್‌ನಲ್ಲಿ ಏನಿರಲಿದೆ ವಿಶೇಷತೆ!
ಹಲವು ತಿಂಗಳ ಕಾಯುವಿಕೆಯ ಬಳಿಕ Apple ಅಧಿಕೃತವಾಗಿ iPhone 15 ಬಿಡುಗಡೆ ಕಾರ್ಯಕ್ರಮವನ್ನು ಘೋಷಿಸಿದೆ. ಸೆಪ್ಟೆಂಬರ್ 12 ರಂದು ಈ ಕಾರ್ಯಕ್ರಮ ನಡೆಯಲಿದ್ದು, ಹೊಸ ಸರಣಿಯ ಐಫೋನ್ ಜೊತೆಗೆ ಇತರ ಉತ್ಪನ್ನಗಳು ಕೂಡ ಬಿಡುಗಡೆಯಾಗಲಿದೆ.
ನವದೆಹಲಿ (ಆ.31): ಐಫೋನ್ ಪ್ರಿಯರು ಪ್ರತಿ ವರ್ಷ ಅತ್ಯಂತ ಕುತೂಹಲದಿಂದ ಕಾಯುವ ಕಾರ್ಯಕ್ರಮ, ಐಫೋನ್ ಲಾಂಚ್ ಇವೆಂಟ್. ಆಪಲ್ ಕಂಪನಿಯ ಅತಿದೊಡ್ಡ ವಾರ್ಷಿಕ ಕಾರ್ಯಕ್ರಮ ಇದಾಗಿದ್ದು, ಟೆಕ್ನಾಲಜಿ, ಮೊಬೈಲ್ ಹಾಗೂ ಆಪಲ್ ಕಂಪನಿಯ ಉತ್ಪನ್ನಗಳ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳು ಇದಕ್ಕಾಗಿ ಕುತೂಹಲದಿಂದ ಕಾಯುತ್ತಾರೆ. ಈಗಾಗಲೇ ಆಪಲ್ ಕಂಪನಿ, ಈ ವರ್ಷ ಐಫೋನ್ ಸರಣಿಯ iPhone 15 ಅನ್ನು ಅನಾವರಣ ಮಾಡಲಿದ್ದೇವೆ ಎಂದು ತಿಳಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಐಫೋನ್ 15ನಲ್ಲಿ ಇರಬಹುದಾದ ಹೊಸ ಹೊಸ ವೈಶಿಷ್ಟ್ಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಕೆಲವೊಂದು ಊಹಾಪೋಹಗಳು ಕೂಡ ಹರಿದಾಡುತ್ತಿದೆ. ಡೈನಾಮಿಕ್ ಐಲ್ಯಾಂಡ್ ನಾಚ್ ಪಡೆಯುವ ಪ್ರತಿಯೊಂದು ಮಾದರಿಯಿಂದ ಬಹು ನಿರೀಕ್ಷಿತ ಟೈಪ್-ಸಿ ಚಾರ್ಜಿಂಗ್ ವರೆಗೆ, ಜನರು ಉತ್ಸುಕರಾಗಿರುವ ಹಲವು ವೈಶಿಷ್ಟ್ಯಗಳಿವೆ. ಮತ್ತು ಇತ್ತೀಚೆಗೆ, ಆಪಲ್ ಅಧಿಕೃತವಾಗಿ ಬಿಡುಗಡೆ ಕಾರ್ಯಕ್ರಮದ ದಿನಾಂಕವನ್ನು ಘೋಷಣೆ ಮಾಡಿದೆ. ಸೆಪ್ಟೆಂಬರ್ 12ರ ಮಂಗಳವಾರದಂದು ಈ ಕಾರ್ಯಕ್ರಮ ಅಧಿಕೃತವಾಗಿ ನಡೆಯಲಿದೆ ಎಂದು ತಿಳಿಸಿದ್ದು, ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ ಈ ಲಾಂಚ್ ಇವೆಂಟ್ ನಿಗದಿಯಾಗಿದೆ. ಇನ್ನು ಹೊಸ ಐಫೋನ್ 15 ಲಾಂಚ್ ಇವೆಂಟ್‌ನಲ್ಲಿ ಏನೆಲ್ಲಾ ಇರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಆ ಕುರಿತಾದ ಮಾಹಿತಿ ಇಲ್ಲಿದೆ.
- ನೂತನ ಐಫೋನ್ 15 ಅನಾವರಣ ಕಾರ್ಯಕ್ರಮ ಸೆಪ್ಟೆಂಬರ್ 12 ರ ಮಂಗಳವಾರ ರಾತ್ರಿ 10.30ಕ್ಕೆ ನಡೆಯಲಿದೆ. ಇದನ್ನು ಆಪಲ್ ಕಂಪನಿ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಿದೆ.
- ಐಫೋನ್-15 ಸಿರೀಸ್‌ನ ಸರಣಿಯ ಫೋನ್‌ಗಳು ಮಾತ್ರವಲ್ಲದೆ, ಆಪಲ್ ಕಂಪನಿ ಆಪಲ್ ವಾಚ್ ಸಿರೀಸ್ 9 ಕೂಡ ಅನಾವರಣ ಮಾಡಬಹುದು. ನಾವು ಆಪಲ್ ವಾಚ್ ಅಲ್ಟ್ರಾದ ಹೊಸ ಆವೃತ್ತಿಯನ್ನು ಸಹ ನಿರೀಕ್ಷೆ ಮಾಡಬಹುದು. ಅದಲ್ಲದೆ, ಆಪಲ್ M3 ಪ್ರೊಸೆಸರ್‌ನೊಂದಿಗೆ ಹೊಸ ಸಾಧನವನ್ನು ಸಹ ಪ್ರಾರಂಭ ಮಾಡುವ ನಿರೀಕ್ಷೆ ಇದೆ.
- ಇತ್ತೀಚಿನ ಬ್ಲೂಮ್‌ಬರ್ಗ್ ವರದಿಯು ಐಫೋನ್ 15 ರ ಉತ್ಪಾದನೆಯು ಭಾರತದ ತಮಿಳುನಾಡಿನಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ತಿಳಿಸಿದೆ. ಶ್ರೀಪೆರಂಬದೂರಿನಲ್ಲಿರುವ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನ ಘಟಕವು ಹೊಸ ಸರಣಿಯ ಐಫೋನ್‌ಗಳನ್ನು ತಯಾರಿಸಲು ಸಜ್ಜಾಗಿದೆ. ಚೀನಾದಂತಹ ಕಾರ್ಖಾನೆಗಳಿಂದ ಸಾಗಿಸಲು ಪ್ರಾರಂಭಿಸಿದ ಕೆಲವೇ ವಾರಗಳ ನಂತರ ಭಾರತೀಯ ಘಟಕವು ತನ್ನ ಸಾಧನಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ ವರದಿಯಾಗಿದೆ. ಭಾರತದಿಂದ ಬರುವ ಐಫೋನ್‌ಗಳ ಪ್ರಮಾಣವನ್ನು ಹೆಚ್ಚಿಸಲು ಕಂಪನಿಯು ಪ್ರಯತ್ನಿಸುತ್ತಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
- ಭಾರತದಲ್ಲಿನ ಇತರ ಪೂರೈಕೆದಾರರು, ಪೆಗಾಟ್ರಾನ್ ಕಾರ್ಪೊರೇಷನ್ ಮತ್ತು ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಂಡಿರುವ ವಿಸ್ಟ್ರಾನ್ ಕಾರ್ಪೊರೇಷನ್ ಫ್ಯಾಕ್ಟರಿ ಕೂಡ ಶೀಘ್ರದಲ್ಲೇ ಭಾರತದಲ್ಲಿ ಐಫೋನ್ 15 ಉತ್ಪಾದನೆಯನ್ನು ಪ್ರಾರಂಭಿಸುತ್ತದೆ. ಹಾಗಿದ್ದರೂ, ಹೊಸ ಫೋನ್‌ಗಳ ಉತ್ಪಾದನೆಯ ಪ್ರಮಾಣದ ಮೇಲೆ ಪ್ರಶ್ನೆ ಮೂಡಿದೆ. ವರದಿಯ ಪ್ರಕಾರ, ಪ್ರಮುಖವಾಗಿ ಆಮದು ಮಾಡಿಕೊಳ್ಳುವ ಘಟಕಗಳ ಲಭ್ಯತೆಯ ಮೇಲೆ ಪ್ರಮಾಣವು ಅವಲಂಬಿತವಾಗಿರುತ್ತದೆ.
- ಮುಂಬರುವ ಐಫೋನ್‌ಗಳ ಕುರಿತು ಆನ್‌ಲೈನ್‌ನಲ್ಲಿ ವಿವಿಧ ಊಹಾಪೋಹಗಳು ಹಾಗೂ ಸೋರಿಕೆ ಆಗಿರುವ ಚಿತ್ರಗಳ ಅನುಸಾರ, ಆಪಲ್ ಹೊಸ ಫೋನ್‌ಗಳೊಂದಿಗೆ ಕೆಲವು ದೊಡ್ಡ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ.
- ಐಫೋನ್ 15 ರ ಎಲ್ಲಾ ಮಾದರಿಗಳು ಡೈನಾಮಿಕ್ ಐಲ್ಯಾಂಡ್ ನಾಚ್ ವಿನ್ಯಾಸವನ್ನು ಹೊಂದಿವೆ ಎನ್ನುವ ಊಹಾಪೋಹವಿದೆ. ಪ್ರಸ್ತುತ, ಡೈನಾಮಿಕ್ ಐಲ್ಯಾಂಡ್ ನಾಚ್ ಐಫೋನ್ 14 ಪ್ರೊ ಮಾದರಿಗಳ ಒಂದು ಭಾಗವಾಗಿದೆ.
- ಇದರ ಜೊತೆಗೆ, ಹೊಸ ಐಫೋನ್‌ಗಳು ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಸಪೋರ್ಟ್ ಮಾಡಬಹುದು ಎನ್ನಲಾಗಿದೆ. ಇದು ಆಪಲ್ ಫೋನ್‌ಗಳ ಪಾಲಿಗೆ ಹೊಸ ಅಂಶವಾಗಿದೆ.
- ಐಫೋನ್ 15 ರ ಕ್ಯಾಮೆರಾವು ಕೆಲವು ಪ್ರಮುಖ ವಿಶೇಷತೆಯನ್ನು ಸಹ ಪಡೆಯುತ್ತದೆ ಮತ್ತು ಕಡಿಮೆ-ಬೆಳಕಿನ ಕ್ಯಾಮೆರಾ ಕಾರ್ಯಕ್ಷಮತೆಯು ಭಾರಿ ಸುಧಾರಣೆಯನ್ನು ಕಾಣಬಹುದು ಎಂದು ವರದಿಗಳು ಹೇಳಿವೆ. ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಸಹ ನವೀಕರಿಸಿದ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ಗಳೊಂದಿಗೆ ಬರಲಿದೆ ಎಂದು ಕೆಲವು ವರದಿಗಳು ಹೇಳಿವೆ. ಐಫೋನ್ 14 12 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಹಾಗಾಗಿ ಐಫೋನ್ 15 ಕ್ಯಾಮೆರಾ ದೊಡ್ಡ ಅಪ್‌ಗ್ರೇಡ್ ಪಡೆಯುವ ಸಾಧ್ಯತೆ ಇದೆ.
Largest companies In the World: ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ಜಗತ್ತಿನ ಟಾಪ್-10 ಕಂಪನಿಗಳಿವು!
- ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, iPhone 15 A17 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿರಲಿದೆ ಎನ್ನುವ ಮಾಹಿತಿ ಇದೆ. ಇದು iPhone 14 ಗಿಂತ ಬೃಹತ್ ಅಪ್‌ಗ್ರೇಡ್ ಆಗಿರುತ್ತದೆ.
ಭಾರತದಲ್ಲೇ ತಯಾರಾಗ್ತಿದೆ ಆ್ಯಪಲ್ ಫೋನ್: ಶೀಘ್ರದಲ್ಲೇ ನಿಮ್ಮ ಕೈಸೇರುತ್ತೆ ಮೇಡ್ ಇನ್ ಇಂಡಿಯಾ ಐಫೋನ್ 15!
- ಐಫೋನ್ 15 ಪ್ರೊ ಮಾದರಿಗಳ ಬೆಲೆ ಈ ವರ್ಷ ಹೆಚ್ಚು ದುಬಾರಿಯಾಗಬಹುದು. ಆದರೆ, ಸಾಮಾನ್ಯ ಹಾಗೂ ಪ್ಲಸ್ ವರ್ಶ್‌ಗಳ ಐಫೋನ್‌ಗಳು ಹಳೆಯ ದರದಲ್ಲಿಯೇ ಸಿಗಬಹುದು. ಬಿಡುಗಡೆಯ ದಿನಾಂಕ ಸಮೀಪಿಸಿದಾಗ ನಾವು ಈ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.