ಭಾರತದಲ್ಲೇ ತಯಾರಾಗ್ತಿದೆ ಆ್ಯಪಲ್ ಫೋನ್‌: ಶೀಘ್ರದಲ್ಲೇ ನಿಮ್ಮ ಕೈಸೇರುತ್ತೆ ಮೇಡ್ ಇನ್ ಇಂಡಿಯಾ ಐಫೋನ್ 15!

ತಮಿಳುನಾಡಿನ ಶ್ರೀಪೆರಂಬದೂರಿನ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಸ್ಥಾವರವು ಚೀನಾದ ಕಾರ್ಖಾನೆಗಳಿಂದ ಸಾಗಿಸಲು ಪ್ರಾರಂಭಿಸಿದ ಕೆಲವೇ ವಾರಗಳ ನಂತರ ಹೊಸ ಸಾಧನಗಳನ್ನು ತಲುಪಿಸಲು ತಯಾರಿ ನಡೆಸುತ್ತಿದೆ. 

production of iphone 15 apple s biggest update in 3 years begins in india ash

ನವದೆಹಲಿ (ಆಗಸ್ಟ್‌ 17, 2023): Apple Inc. ಯ ಮುಂದಿನ ಪೀಳಿಗೆಯ ಐಫೋನ್‌ 15 ತಮಿಳುನಾಡಿನಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುತ್ತಿದೆ. ಈ ಮೂಲಕ ಭಾರತದಲ್ಲಿ ಕಾರ್ಯಾಚರಣೆಗಳು ಮತ್ತು ಚೀನಾದಲ್ಲಿನ ಮುಖ್ಯ ಉತ್ಪಾದನಾ ನೆಲೆಯ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡುವ ಪ್ರಯತ್ನದಲ್ಲಿದೆ. 

ತಮಿಳುನಾಡಿನ ಶ್ರೀಪೆರಂಬದೂರಿನ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಸ್ಥಾವರವು ಚೀನಾದ ಕಾರ್ಖಾನೆಗಳಿಂದ ಸಾಗಿಸಲು ಪ್ರಾರಂಭಿಸಿದ ಕೆಲವೇ ವಾರಗಳ ನಂತರ ಹೊಸ ಸಾಧನಗಳನ್ನು ತಲುಪಿಸಲು ತಯಾರಿ ನಡೆಸುತ್ತಿದೆ. ಇದಕ್ಕೆ ಕಾರಣ ಕಂಪನಿಯು ಭಾರತದಿಂದ ಬರುವ ಹೊಸ ಐಫೋನ್‌ಗಳ ಪರಿಮಾಣವನ್ನು ತ್ವರಿತವಾಗಿ ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಇದನ್ನು ಓದಿ: ಆ್ಯಪಲ್‌ ಫೋನ್‌ ಪ್ರಿಯರಿಗೆ ಸಿಹಿ ಸುದ್ದಿ: iPhone 15 ರಿಲೀಸ್‌ ಡೇಟ್‌ ಬಹಿರಂಗ; ಹೊಸ ಫೋನ್‌ನಲ್ಲಿರಲಿದೆ ಈ ಫೀಚರ್ಸ್‌!

ಅಮೆರಿಕ ಮತ್ತು ಚೀನಾ ನಡುವಿನ ಉದ್ವಿಗ್ನತೆಯಿಂದ ವ್ಯಾಪಾರಕ್ಕೆ ಹೊಡೆತ ಬೀಳಬಹುದು, ಹಾಗೂ ತನ್ನ ಪ್ರಮುಖ ಉತ್ಪನ್ನಗಳಿಗೆ ಪೂರೈಕೆ ಸರಪಳಿಯನ್ನು ಅಪಾಯಕ್ಕೆ ತಳ್ಳುತ್ತದೆ ಅನ್ನೋ ಕಾರಣದಿಂದ ಕ್ಯುಪರ್ಟಿನೊ, ಕ್ಯಾಲಿಫೋರ್ನಿಯಾ ಮೂಲದ ಸಂಸ್ಥೆಯು ತನ್ನ ಉತ್ಪಾದನೆಯನ್ನು ಚೀನಾದಿಂದ ಬೇರೆ ಕಡೆ ಸ್ಥಳಾಂತರಿಸಲು ಹಲವು ವರ್ಷಗಳಿಂದ ಪ್ಲ್ಯಾನ್‌ ಮಾಡ್ತಿದೆ. ಇದರ ಲಾಭ ಭಾರತಕ್ಕೆ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಯುಎಸ್ ಜೊತೆ ನಿಕಟ ಸಂಬಂಧವನ್ನು ನಿರ್ಮಿಸಲು ಮತ್ತು ಸ್ವತಃ ಉತ್ಪಾದನಾ ಕೇಂದ್ರವಾಗಿ ಮಾಡಲು ಪ್ರಯತ್ನಿಸಿದೆ. 

ಐಫೋನ್ 14 ಕ್ಕಿಂತ ಮೊದಲು, ಆ್ಯಪಲ್ ಭಾರತದಲ್ಲಿ ಸ್ವಲ್ಪ ಮಾತ್ರ ಅಸೆಂಬಲ್‌ ಮಾಡುತ್ತಿತ್ತು. ಇದರಿಂದ ಉತ್ಪಾದನೆಯಲ್ಲಿ 6 -9 ತಿಂಗಳು ವಿಳಂಬ ಆಗ್ತಿತ್ತು.  ಆ ವಿಳಂಬವನ್ನು ಕಳೆದ ವರ್ಷ ತೀವ್ರವಾಗಿ ಕಡಿಮೆಗೊಳಿಸಲಾಯಿತು ಮತ್ತು ಮಾರ್ಚ್ ಅಂತ್ಯದಲ್ಲಿ ಆಪಲ್ ತನ್ನ ಐಫೋನ್‌ಗಳಲ್ಲಿ 7% ಅನ್ನು ಭಾರತದಲ್ಲಿ ಉತ್ಪಾದಿಸಿತು. ಈ ವರ್ಷದ ಗುರಿಯು ಭಾರತ ಮತ್ತು ಚೀನಾದಿಂದ ಸಾಗಣೆಯ ಸಮಯದಲ್ಲಿ ಸಮಾನತೆಗೆ ಹತ್ತಿರವಾಗುವುದು ಎಂದು ಮೂಲಗಳು ಹೇಳಿವೆ. ಐಫೋನ್ 15 ಗಾಗಿ ಭಾರತದ ಉತ್ಪಾದನೆಯ ಪ್ರಮಾಣವು ಹೆಚ್ಚಾಗಿ ಆಮದು ಮಾಡಿಕೊಳ್ಳುವ ಘಟಕಗಳ ಸಿದ್ಧ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಭಾರತದಲ್ಲಿ ಐಫೋನ್‌ ತಯಾರಿಸಲಿದೆ ಟಾಟಾ ಗ್ರೂಪ್‌: ರಾಜ್ಯದಲ್ಲೇ ಐಫೋನ್‌ 15 ಉತ್ಪಾದನೆ!

ಹೊಸ ಐಫೋನ್, ಸೆಪ್ಟೆಂಬರ್ 12 ರಂದು ಘೋಷಿಸಲ್ಪಡುವ ಸಾಧ್ಯತೆಯಿದ್ದು, ಇದು ಕಳೆದ ಮೂರು ವರ್ಷಗಳಲ್ಲಿ ಸಾಧನಕ್ಕೆ ದೊಡ್ಡ ಅಪ್‌ಡೇಟ್ ಆಗಲಿದೆ ಎಂದು ಭರವಸೆ ನೀಡಿದೆ. ಕ್ಯಾಮೆರಾ ಸಿಸ್ಟಮ್‌ಗೆ ಪ್ರಮುಖ ನವೀಕರಣಗಳನ್ನು ಒಳಗೊಂಡಿರುತ್ತದೆ ಮತ್ತು ಪ್ರೋ ಮಾದರಿಗಳು ಸುಧಾರಿತ 3- ನ್ಯಾನೋಮೀಟರ್‌ ಪ್ರೊಸೆಸರ್ ಅನ್ನು ಪಡೆಯುತ್ತವೆ ಎಮದೂ ಹೇಳಲಾಗಿದೆ. 

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಭೂಮಿ ಖರೀದಿಸಿದ ಐಫೋನ್‌ ತಯಾರಕ ಫಾಕ್ಸ್‌ಕಾನ್: 1 ಲಕ್ಷ ಉದ್ಯೋಗ ಸೃಷ್ಟಿ!

Latest Videos
Follow Us:
Download App:
  • android
  • ios