Largest companies In the World: ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ಜಗತ್ತಿನ ಟಾಪ್-10 ಕಂಪನಿಗಳಿವು!
ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಕಂಪನಿಗಳಿವೆ. ಆದರೆ, ಮಾರುಕಟ್ಟೆ ಮೌಲ್ಯದಲ್ಲಿ ಜಗತ್ತಿನ ಅಗ್ರ 10 ಕಂಪನಿಗಳು ಯಾವುದು ಎನ್ನುವ ಕುತೂಹಲ ನಿಮಗೆ ಯಾವಾಗಲಾದರೂ ಬಂದಿದ್ಯಾ? ಹಾಗಿದ್ದಲ್ಲಿ ಇಲ್ಲಿದೆ ನೋಡಿ ಜಗತ್ತಿನ ಅಗ್ರ 10 ಬೃಹತ್ ಕಂಪನಿಗಳು
Eli Lilly: ಅಮೆರಿಕದ ಫಾರ್ಮಾಸ್ಯುಟಿಕಲ್ ದಿಗ್ಗಜ ಕಂಪನಿ. ಇಂಡಿಯಾನಾದ ಇಂಡಿಯಾಪೊಲಿಸ್‌ನಲ್ಲಿ ಇದರ ಪ್ರಧಾನ ಕಚೇರಿ ಇದ್ದು, ಕಂಪನಿಯ ಮಾರುಕಟ್ಟೆ ಮೌಲ್ಯ 43 ಲಕ್ಷ ಕೋಟಿ ರೂಪಾಯಿ. ವಿಶ್ವದ 10ನೇ ಅಗ್ರ ಕಂಪನಿ ಎನಿಸಿದೆ.
Tesla: ಅಮೆರಿಕದ ಮಲ್ಟಿನ್ಯಾಷನಲ್ ಆಟೋಮೇಟಿವ್ ಮತ್ತು ಕ್ಲೀನ್ ಎನರ್ಜಿ ಕಂಪನಿ. ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಪ್ರಧಾನ ಕಚೇರಿ ಇದ್ದು, ಇದರ ಮಾರುಕಟ್ಟೆ ಮೌಲ್ಯ 62 ಲಕ್ಷ ಕೋಟಿ ರೂಪಾಯಿ. ವಿಶ್ವದ ಅಗ್ರ 10 ಕಂಪನಿಗಳ ಲಿಸ್ಟ್‌ನಲ್ಲಿ 9ನೇ ಸ್ಥಾನದಲ್ಲಿದೆ.
Meta: ಫೇಸ್‌ಬುಕ್ ಹೆಸರಿನಲ್ಲಿ ಆರಂಭವಾಗಿದ್ದ ಮೆಟಾ ಕಂಪನಿ ಟೆಕ್ನಾಲಜಿ ದೈತ್ಯ. ಸೋಶಿಯಲ್ ಮೀಡಿಯಾ ದೈತ್ಯವಾದರೂ, ಬೇರೆ ಬೇರೆ ವಿಭಾಗಗಳಲ್ಲಿ ಕಂಪನಿ ವಿಸ್ತರಿಸುತ್ತಿದೆ. ಇದರ ಮಾರುಕಟ್ಟೆ ಮೌಲ್ಯ 62.57 ಲಕ್ಷ ಕೋಟಿ ರೂಪಾಯಿ.
Berkshire: ಅಮೆರಿಕದ ಮಲ್ಟಿನ್ಯಾಷನಲ್ ಹೂಡಿಕೆ ಕಂಪನಿ. ವಾರೆನ್ ಬಫೆಟ್ ಮಾಲೀಕತ್ವದ ಈ ಕಂಪನಿಯ ಪ್ರಧಾನ ಕಚೇರಿ ನೆಬ್ರಸ್ಕಾದ ಒಮಾಹಾದಲ್ಲಿದೆ. ಇದರ ಮಾರುಕಟ್ಟೆ ಮೌಲ್ಯ 64 ಲಕ್ಷ ಕೋಟಿ ರೂಪಾಯಿ
NVIDIA: ಅಮೆರಿಕದ ಮಲ್ಟಿನ್ಯಾಷನಲ್ ಟೆಕ್ನಾಲಜಿ ಕಂಪನಿ ಎನ್ವಿಡಿಯಾ ಕ್ಯಾಲಿಫೋರ್ನಿಯಾದ ಸ್ಯಾಂಟಾ ಕ್ಲಾರಾದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಇದರ ಮಾರುಕಟ್ಟೆ ಮೌಲ್ಯ 96 ಲಕ್ಷ ಕೋಟಿ ರೂಪಾಯಿ
Amazon: ಜೆಫ್ ಬೆಜೋಸ್ ಮಾಲೀಕತ್ವದ ಅಮೆಜಾನ್, ಈ ಕಾಮರ್ಸ್, ಕ್ಲೌಡ್ ಕಂಪ್ಯೂಟಿಂಗ್, ಎಐ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿದೆ. ಇದರ ಮಾರುಕಟ್ಟೆ ಮೌಲ್ಯ 115 ಲಕ್ಷ ಕೋಟಿ ರೂಪಾಯಿ
Alphabet: ಟೆಕ್ ದೈತ್ಯ ಗೂಗಲ್‌ನ ಮಾತೃ ಸಂಸ್ಥೆ. ಗೂಗಲ್‌ಅನ್ನೇ ಪರಿಷ್ಕರಿಸಿ ಆಲ್ಫಾಬೆಟ್ ಕಂಪನಿಯನ್ನಾಗಿ ಮಾಡಲಾಗಿದೆ. ಇದರ ಮಾರುಕಟ್ಟೆ ಮೌಲ್ಯ 138 ಲಕ್ಷ ಕೋಟಿ ರೂಪಾಯಿ
Saudi Aramco: ಸೌದಿ ಅರೇಬಿಯನ್ ಆಯಿಲ್ ಗ್ರೂಪ್. ಸೌದಿ ಸರ್ಕಾರದ ಮಾಲೀಕತ್ವದಲ್ಲಿರುವ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಂಪನಿ. ಇದರ ಪ್ರಧಾನ ಕಚೇರಿ ದಹರನ್‌ನಲ್ಲಿದೆ. ಇದರ ಮಾರುಕಟ್ಟೆ ಮೌಲ್ಯ 184 ಲಕ್ಷ ಕೋಟಿ ರೂಪಾಯಿ.
Microsoft: ಅಮೆರಿಕದ ಮತ್ತೊಂದು ಮಲ್ಟಿನ್ಯಾಷನಲ್ ಟೆಕ್ನಾಲಜಿ ಕಂಪನಿ. ವಾಷಿಂಗ್ಟನ್‌ನ ರೆಡ್ಮಂಡ್‌ನಲ್ಲಿ ಇದರ ಪ್ರಧಾನ ಕಚೇರಿ ಇದೆ. ಇದರ ಮಾರುಕಟ್ಟೆ ಮೌಲ್ಯ 200 ಲಕ್ಷ ಕೋಟಿ. ವಿಶ್ವದ 2ನೇ ಅತ್ಯಂತ ಮೌಲ್ಯಯುತ ಕಂಪನಿ.
Apple: ಕಂಪ್ಯೂಟರ್, ಮೊಬೈಲ್ ಸೇರಿದಂತೆ ವಿವಿಧ ಟೆಕ್ನಾಲಜಿ ಉತ್ಪನ್ನಗಳ ದೈತ್ಯ ಆಪಲ್ ಕಂಪನಿ ವಿಶ್ವದ ಅತ್ಯಂತ ಶ್ರೀಮಂತ ಕಂಪನಿ. ಕುಪರ್ಟಿನೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಕಂಪನಿಯ ಮಾರುಕಟ್ಟೆ ಮೌಲ್ಯ 234 ಲಕ್ಷ ಕೋಟಿ ರೂಪಾಯಿ.