ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಕ್ರೋಮಾ ಸಹಯೋಗದೊಂದಿಗೆ ಹೊಸ ಐಫೋನ್ ಖರೀದಿಯ ಮೇಲೆ ₹35,000 ವರೆಗೆ ಉಳಿತಾಯ ಮಾಡುವ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯಲ್ಲಿ ನೇರ ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಬೋನಸ್ ಸೇರಿದ್ದು, ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಇದನ್ನು ಕ್ಲೇಮ್ ಮಾಡಬಹುದು.

ಬೆಂಗಳೂರು (ಆ.17): ನೀವು ಏರ್‌ಟೆಲ್ ಗ್ರಾಹಕರಾಗಿದ್ದು, ಹೊಸ ಐಫೋನ್ (iPhone) ಖರೀದಿಸುವ ಆಲೋಚನೆಯಲ್ಲಿದ್ದರೆ ನಿಮಗೊಂದು ಸಿಹಿ ಸುದ್ದಿ. ಏರ್‌ಟೆಲ್ ತನ್ನ ಬಳಕೆದಾರರಿಗಾಗಿ ಕ್ರೋಮಾ (Croma) ಸಹಯೋಗದೊಂದಿಗೆ ಅತ್ಯಾಕರ್ಷಕ ಕೊಡುಗೆಯೊಂದನ್ನು ಘೋಷಿಸಿದೆ. ಈ ವಿಶೇಷ ಆಫರ್ ಅಡಿಯಲ್ಲಿ ಗ್ರಾಹಕರು ಹೊಸ ಐಫೋನ್ ಖರೀದಿಯ ಮೇಲೆ ಗರಿಷ್ಠ ₹35,000 ವರೆಗೆ ಉಳಿತಾಯ ಮಾಡಬಹುದಾಗಿದೆ. ಇದರಲ್ಲಿ ನೇರ ರಿಯಾಯಿತಿ (Instant Discount) ಹಾಗೂ ಎಕ್ಸ್‌ಚೇಂಜ್ ಬೋನಸ್ (Exchange Bonus) ಎರಡೂ ಸೇರಿವೆ.

ರಿಯಾಯಿತಿಯ ಲೆಕ್ಕಾಚಾರ ಹೇಗೆ?

ಕ್ರೋಮಾ ನೀಡಿರುವ ಈ ಆಫರ್‌ನಲ್ಲಿ ಏರ್‌ಟೆಲ್ ಗ್ರಾಹಕರಿಗೆ ಆಯ್ಕೆಮಾಡಿದ ಐಫೋನ್ ಮಾದರಿಗಳ ಮೇಲೆ ₹23,000 ವರೆಗೆ ನೇರ ರಿಯಾಯಿತಿ ಸಿಗಲಿದೆ. ಇದರೊಂದಿಗೆ, ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಮೂಲಕ ಹೆಚ್ಚುವರಿಯಾಗಿ ₹12,000 ವರೆಗೆ ಎಕ್ಸ್‌ಚೇಂಜ್ ಬೋನಸ್ ಪಡೆಯಬಹುದು. ಅಂದರೆ ಒಟ್ಟಾರೆಯಾಗಿ ₹35,000 ವರೆಗೆ ಕಡಿತ ಸಿಗಲಿದೆ. ₹12,000 ದ ಹೆಚ್ಚುವರಿ ಎಕ್ಸ್‌ಚೇಂಜ್ ಬೋನಸ್ ಸೌಲಭ್ಯವು ಕೇವಲ 'ಕ್ರೋಮಾ'ದ ಆಫ್‌ಲೈನ್ ಸ್ಟೋರ್‌ಗಳಲ್ಲಿ (Offline Stores) ಮಾತ್ರ ಲಭ್ಯವಿದ್ದು, ಆನ್‌ಲೈನ್ ಖರೀದಿಗೆ ಅನ್ವಯಿಸುವುದಿಲ್ಲ.

ಯಾವೆಲ್ಲಾ ಐಫೋನ್ ಮಾಡೆಲ್‌ಗಳಿಗೆ ಈ ಆಫರ್ ಲಭ್ಯ?

ಕ್ರೋಮಾ ತನ್ನ ಆನ್‌ಲೈನ್ ವೆಬ್‌ಸೈಟ್ ಹಾಗೂ ಆಫ್‌ಲೈನ್ ಸ್ಟೋರ್‌ಗಳೆರಡರಲ್ಲೂ ಈ ಕೊಡುಗೆಯನ್ನು ನೀಡುತ್ತಿದ್ದು, ಸುಲಭ ಕಂತುಗಳ (EMI) ಆಯ್ಕೆಯನ್ನೂ ಒದಗಿಸಿದೆ. ಈ ಕೊಡುಗೆಯು ಐಫೋನ್ 15 (iPhone 15), ಐಫೋನ್ 16 (iPhone 16), ಐಫೋನ್ ಏರ್ (iPhone Air), ಐಫೋನ್ 17 (iPhone 17), ಐಫೋನ್ 17 ಪ್ರೊ (iPhone 17 Pro) ಹಾಗೂ ಐಫೋನ್ 17 ಪ್ರೊ ಮ್ಯಾಕ್ಸ್ (iPhone 17 Pro Max) ಮಾದರಿಗೆ ಸಿಗಲಿದೆ. ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಸಾಮಾನ್ಯ ಮಾದರಿಯಿಂದ ಹಿಡಿದು ಹೈ-ಎಂಡ್ 'ಪ್ರೊ ಮ್ಯಾಕ್ಸ್' ಮಾದರಿಯವರೆಗಿನ ಫೋನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಆಫರ್ ಕ್ಲೇಮ್ ಮಾಡುವುದು ಹೇಗೆ?

  • ಮೊದಲು ನಿಮ್ಮ ಮೊಬೈಲ್‌ನಲ್ಲಿ 'ಏರ್‌ಟೆಲ್ ಥ್ಯಾಂಕ್ಸ್' (Airtel Thanks) ಆಪ್ ಓಪನ್ ಮಾಡಿ.
  • ಆಪ್‌ನಲ್ಲಿರುವ 'Profile' ಐಕಾನ್ ಮೇಲೆ ಕ್ಲಿಕ್ ಮಾಡಿ, ನಂತರ 'Rewards' ವಿಭಾಗಕ್ಕೆ ತೆರಳಿ.
  • ಅಲ್ಲಿ ನಿಮಗೆ 'iPhone Offer' ಎಂಬ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ ಆಫರ್ ಕ್ಲೇಮ್ ಮಾಡಿ.

ಕ್ಲೇಮ್ ಮಾಡಿದ ನಂತರ ಸಿಗುವ ರಿಯಾಯಿತಿ/ಕೂಪನ್ ಕೋಡ್ ಅನ್ನು ಕ್ರೋಮಾ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಖರೀದಿ ವೇಳೆ ಅಥವಾ ನೇರವಾಗಿ ಕ್ರೋಮಾ ಸ್ಟೋರ್‌ಗೆ ಭೇಟಿ ನೀಡಿ ಬಳಸಬಹುದು. ಈ ಆಫರ್ ಅನ್ನು ಕ್ಲೇಮ್ ಮಾಡಲು 2026 ರ ಸೆಪ್ಟೆಂಬರ್ 5 ಕೊನೆಯ ದಿನಾಂಕವಾಗಿದೆ.