15 ವರ್ಷದ ಹಿಂದೆ ಲಾಂಚ್ ಆದ ಐಫೋನ್ 32 ಲಕ್ಷಕ್ಕೆ ಈಗ ಹರಾಜು... ಅಂತದ್ದೇನಿದೆ ಇದ್ರಲ್ಲಿ?
2007 ರಲ್ಲಿ ಬಿಡುಗಡೆಯಾದ , ಫ್ಯಾಕ್ಟರಿ ಚಿಹ್ನೆ ಇರುವ, ಅಂದು 49,305 ರೂಪಾಯಿ ಪ್ರೈಸ್ ಟ್ಯಾಗ್ ಇದ್ದ, ಬಾಕ್ಸ್ ತೆರೆದಿರದ ಮೊದಲ ತಲೆಮಾರಿನ ಐಫೋನ್ ಒಂದು ಬರೋಬ್ಬರಿ 15 ವರ್ಷಗಳ ಬಳಿಕ ಸುಮಾರು 32 ಲಕ್ಷ ರೂಪಾಯಿಗಳಿಗೆ ಹರಾಜಾಗಿದೆ.
ಮುಂಬೈ: 2007 ರಲ್ಲಿ ಬಿಡುಗಡೆಯಾದ ಮೊದಲ ತಲೆಮಾರಿನ, ಫ್ಯಾಕ್ಟರಿ ಚಿಹ್ನೆ ಇರುವ, ಅಂದು 49,305 ರೂಪಾಯಿ ಪ್ರೈಸ್ ಟ್ಯಾಗ್ ಇದ್ದ, ಬಾಕ್ಸ್ ತೆರೆದಿರದ ಐಫೋನ್ ಒಂದು ಬರೋಬ್ಬರಿ 15 ವರ್ಷಗಳ ಬಳಿಕ ಸುಮಾರು 32 ಲಕ್ಷ ರೂಪಾಯಿಗಳಿಗೆ ಹರಾಜಾಗಿದೆ. ಹರಾಜಿನಲ್ಲಿ ಕೊನೆಯದಾಗಿ ಈ ಫೋನ್ ಅನ್ನು 39.339.60 ಡಾಲರ್‌ಗೆ ಕೂಗಲಾಗಿದ್ದು, ಈ ಬೆಲೆಯೂ ಈ ಐಫೋನ್‌ನ ಮೂಲ ಬೆಲೆಗಿಂತ 65 ಪಟ್ಟು ಹೆಚ್ಚು. 8ಜಿಬಿ ಸ್ಟೋರೇಜ್ ಜೊತೆ 2 ಮೆಗಾಫಿಕ್ಸೆಲ್ ಕ್ಯಾಮರಾವನ್ನು ಈ ಫೋನ್ ಹೊಂದಿದೆ. ಈ ಫೋನ್ ಅನ್ನು ಮೊದಲ ಬಾರಿಗೆ ಅಮೆರಿಕಾದಲ್ಲಿ 2007ರಲ್ಲಿ 599 ಡಾಲರ್ ಅಂದರೆ 49,305 ರೂಪಾಯಿ ಬೆಲೆಗೆ ಮೊದಲ ಬಾರಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು.
ಆದರೆ ಈ ಫೋನ್ ಇತ್ತೀಚೆಗೆ ನಡೆದ ಹರಾಜಿನಲ್ಲಿ ತನ್ನ ಮೂಲ ಬೆಲೆಗಿಂತ 65 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ. ಮೊದಲಿಗೆ ಈ ಐಫೋನ್ ಹರಾಜಿನಲ್ಲಿ(auction) ಭಾಗಿಯಾದವರು 2,500 ಡಾಲರ್‌ಗೆ ಹರಾಜು ಕೂಗಿದರು ನಂತರ ಅದು 10 ಸಾವಿರ ಡಾಲರ್‌ಗೆ ಏರಿಕೆ ಆಯ್ತು. ಎರಡು ದಿನ ಇದೇ ಬೆಲೆಯಲ್ಲಿ ನಿಂತಿತ್ತು. ಎರಡು ದಿನ ಕಳೆದಂತೆ 28 ಬಾರಿ ಬೇರೆ ಬೇರೆ ಮೊತ್ತದೊಂದಿಗೆ ಹರಾಜು ಕೂಗುತ್ತಾ ಹೋಗಿದ್ದರಿಂದ ಇದರ ದರ ಏರಿಕೆ ಆಗುತ್ತಾ ಹೋಗಿದ್ದು, ಶೀಘ್ರವಾಗಿ ಇದರ ಬೆಲೆ ಒಮ್ಮೆಲೆ ಡಾಲರ್‌ನಲ್ಲಿಯೇ ಐದು ಅಂಕಿಯನ್ನು ದಾಟಿತ್ತು.
IPhone 14: ಹೊಸ ಐಫೋನ್ ಮಾಡೆಲ್ ಖರೀದಿಸಲು ಕೊಚ್ಚಿಯಿಂದ ದುಬೈಗೆ ಹಾರಿದ ಉದ್ಯಮಿ
ಈ ಐಫೋನ್ ಅನ್ನು ಪ್ಯಾಕ್ ಮಾಡಿದ ನಂತರ ತೆರೆದೇ ಇಲ್ಲ ಎಂಬುದನ್ನು ಖಚಿತಪಡಿಸಲು ಈ ಹರಾಜು ವೆಬ್‌ಸೈಟ್ (website), ಇದು ದೋಷರಹಿತ ಸ್ಥಿತಿಯಲ್ಲಿ ಇದೆ ಎಂದು ಹೇಳಿದೆ. ಇದರ ಪ್ಯಾಕ್ ಮೇಲಿರುವ ಫ್ಯಾಕ್ಟರಿ ಸೀಲ್, ಸರಿಯಾದ ಸೀಮಾ ವಿವರಗಳು ಬಾಕ್ಸ್‌ನ ಬಿಗಿತ ಎಲ್ಲವೂ ಸುಸ್ಥಿತಿಯಲ್ಲಿದೆ. ಅಲ್ಲದೇ ಬಾಕ್ಸ್ ಮೇಲಿರುವ ಲೇಬಲ್‌ಗಳು ಮೂಲದಲ್ಲಿರುವಂತೆಯೇ ಇದ್ದು, ಮಾರುಕಟ್ಟೆಗೆ ಹೋದ ನಂತರದ (aftermarket stickers) ಯುಪಿಸಿ ಸ್ಟಿಕ್ಕರ್‌ಗಳಾಗಲಿ ಸೀಲ್‌ಗಳಾಗಲಿ ಇದರ ಮೇಲಿಲ್ಲ. ಬ್ರಾಂಡ್ ಹೊಸದರಂತೆ ಇದ್ದು ಎಂದು ಕೂಡ ಇದನ್ನು ಸಕ್ರಿಯಗೊಳಿಸಿಲ್ಲ ಎಂದು ಈ ಹರಾಜು ವೆಬ್‌ಸೈಟ್ ಹೇಳಿಕೊಂಡಿದೆ.
ಮೊದಲ ಐಫೋನ್ ಅನ್ನು ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು ಜನವರಿ 9, 2007 ರಂದು ಬಿಡುಗಡೆಗೊಳಿಸಿದ್ದರು. ಇದು ಬಿಡುಗಡೆಯಾದ ಐದು ತಿಂಗಳ ನಂತರ ಮಾರಾಟಕ್ಕೆ ಲಭ್ಯವಾಯಿತು. ಈ ಐಫೋನ್ ಬಿಡುಗಡೆಯನ್ನು ಸ್ಮಾರ್ಟ್‌ಫೋನ್ ಉದ್ಯಮ (smartphone industry) ಜಗತ್ತಿನಲ್ಲಿ ಗೇಮ್ ಚೇಂಜರ್ (game changer) ಎಂದೇ ಪರಿಗಣಿಸಲಾಗಿದೆ.
iPhone 14: ನೂತನ ಫೋನ್‌ಗಳ ಬಿಡುಗಡೆ ವಿರುದ್ಧ ಕಿಡಿ ಕಾರಿದ ಸ್ಟೀವ್ ಜಾಬ್ಸ್ ಪುತ್ರಿ
ಈ ಐಫೋನ್(iPhone) ಅನ್ನು ಸೆಪ್ಟೆಂಬರ್ 30 ರಂದು LCGಯಲ್ಲಿ ಹರಾಜಿಗಿಡಲಾಗಿತ್ತು ಭಾನುವಾರ ಹರಾಜು ಮುಕ್ತಾಯಗೊಂಡಾಗ ಅಚ್ಚರಿ ಕಾದಿತ್ತು. ಹರಾಜು ಬ್ಲಾಕ್‌ನಲ್ಲಿ $30,000 ಡಾಲರ್ ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ 24,61,662 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಹರಾಜಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಊಹೆಗೂ ಮೀರಿ ಅದು 32 ಲಕ್ಷ ರೂಪಾಯಿಗೆ ಹರಾಜಾಗಿದೆ. ಇದು ಫೋನ್ ಮೊದಲು ಹೊರಬಂದಾಗ ಇದ್ದ ಮಾರಾಟದ ಮೂಲ ಬೆಲೆಗಿಂತ 65 ಪಟ್ಟು ಹೆಚ್ಚು.
15 ವರ್ಷಗಳ ಹಿಂದೆ ಇದನ್ನು ಅನಾವರಣಗೊಳಿಸಿದ ಆಪಲ್ ಸಹ-ಸಂಸ್ಥಾಪಕ (Apple co-founder) ಮತ್ತು ಸಿಇಒ ದಿವಂಗತ ಸ್ಟೀವ್ ಜಾಬ್ಸ್ (Steve Jobs) ಇದನ್ನು ಐಪಾಡ್, ಫೋನ್ ಮತ್ತು ಇಂಟರ್ನೆಟ್ ಸಂವಹನಕಾರ ಎಂದು ಕರೆದಿದ್ದರು. ಮೊದಲ ತಲೆಮಾರಿನ ಈ ಐಫೋನ್ (first-generation iPhone)3.5-ಇಂಚಿನ ಪರದೆ, 2 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಸಫಾರಿ ವೆಬ್ ಬ್ರೌಸರ್ ಹೊಂದಿತ್ತು. ಇದು ಆರಂಭದಲ್ಲಿ ಕೇವಲ 4 GB ಅಥವಾ 8 GB ಸಂಗ್ರಹಣೆ ಸಾಮರ್ಥ್ಯದೊಂದಿಗೆ ಲಭ್ಯವಿತ್ತು. ನಂತರ 16 GB ಆಯ್ಕೆಯನ್ನು ಹೊಂದಿತ್ತು. ಇಂದು ಆಪಲ್ ಐಫೋನ್ ಉದ್ಯಮ ಬಹಳ ದೂರ ಸಾಗಿ ಬಂದಿದ್ದು, ಇಂದಿನ ಹೊಸ ಐಫೋನ್ iPhone 14, 6.1 ಇಂಚಿನ ಸ್ಕ್ರೀನ್ ಹೊಂದಿದ್ದು, 12 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 512 GB ವರೆಗೆ ಸಂಗ್ರಹಣೆ ಸಾಮರ್ಥ್ಯವನ್ನು ಹೊಂದಿದೆ. ಇದು $799 ಡಾಲರ್‌ಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.