ಐ ಫೋನ್‌ 14 ಮಾಡೆಲ್‌ ಅನ್ನು ಭಾರತದಲ್ಲಿ ಬಿಡುಗಡೆಯಾಗುವ ನಿರ್ಧಾರ ಮಾಡಿದ ಉದ್ಯಮಿ ಧೀರಜ್‌ ಪಲ್ಲಿಯಿಲ್ ದುಬೈಗೆ ಹಾರಿ, ಎಲ್ಲರಿಗಿಂತ ಮೊದಲೇ ಐ ಫೋನ್‌ ಖರೀದಿಸಿದ್ದಾರೆ. ಈ ಹಿಂದೆಯೂ 3 ಬಾರಿ ಅವರು ದುಬೈಗೆ ಹೋಗಿ ಮೊದಲ ದಿನವೇ ಐ ಫೋನ್‌ ಹೊಸ ಮಾಡೆಲ್‌ಗಳನ್ನು ಖರೀದಿಸಿದ್ದರಂತೆ. 

ಇತ್ತೀಚೆಗಷ್ಟೇ ಹೊಸ ಐ ಫೋನ್‌ 14 ಮಾಡೆಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಸೆಪ್ಟೆಂಬರ್ 16, 2022 ರಂದು ಈ ಹೊಸ ಫೋನ್‌ಗಳನ್ನು ಲಾಂಚ್ ಮಾಡಲಾಗಿದೆ. ಇನ್ನು, ದೇಶದಲ್ಲಿ ಸಾಕಷ್ಟು ಐ ಫೋನ್‌ ಪ್ರಿಯರಿದ್ದು, ಹೊಸ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದ ತಕ್ಷಣ ಅದನ್ನು ಕೊಳ್ಳಲು ಕಾತುರದಿಂದ ಕಾಯುವವರ ಸಂಖ್ಯೆಯೂ ಇದೆ. ಇದಕ್ಕೆ ಉತ್ತಮ ಉದಾಹರಣೆ, ಕೇರಳದ ಕೊಚ್ಚಿ ಮೂಲದ ಈ ಉದ್ಯಮಿ. ಗುರುವಾರ ಸಂಜೆ, ಕೊಚ್ಚಿ ಮೂಲದ ಉದ್ಯಮಿ ಧೀರಜ್ ಪಲ್ಲಿಯಿಲ್ ಅವರು ಹೊಸ ಮಾಡೆಲ್‌ ಐಫೋನ್‌ನ ಭಾರತದ ಮೊದಲ ಮಾಲೀಕರಾಗಲು ಕೊಚ್ಚಿಯಿಂದ ದುಬೈಗೆ ಹಾರಿದರು. ಶುಕ್ರವಾರ ಬೆಳಗ್ಗೆ ಅಂದರೆ ಸೆಪ್ಟೆಂಬರ್‌ 16 ರಂದು ಬೆಳಗ್ಗೆ 7 ಗಂಟೆಗೆ, ಅವರು ದುಬೈನ ಮಿರ್ಡಿಫ್ ಸಿಟಿ ಸೆಂಟರ್‌ನಲ್ಲಿ ಪ್ರೀಮಿಯಂ ಮರುಮಾರಾಟಗಾರರಿಂದ ಹೊಚ್ಚ ಹೊಸ iPhone 14 Pro ಅನ್ನು ಖರೀದಿಸಿದರು ಮತ್ತು ಈ ಗ್ಯಾಜೆಟ್ ಖರೀದಿಸಲು Apple ಸ್ಟೋರ್‌ನ ಹೊರಗೆ ಕುತೂಹಲದಿಂದ ಕಾಯುತ್ತಿದ್ದ ನೂರಾರು ಜನರಲ್ಲಿ ಮೊದಲ ವ್ಯಕ್ತಿಯಾಗಿದ್ದಾರೆ.

ಇನ್ನು, ಡೇರ್ ಪಿಕ್ಚರ್ ಡಿಜಿಟಲ್ ಕನ್ಸಲ್ಟೆನ್ಸಿಯ ನಿರ್ದೇಶಕರಾದ 28 ವರ್ಷದ ಧೀರಜ್ ಪಲ್ಲಿಯಿಲ್ ಅವರು ದುಬೈಗೆ ಪ್ರಯಾಣಿಸಿದ ನಂತರ ಐ ಫೋನ್‌ ಹೊಸ ಮಾಡೆಲ್‌ ಮಾರಾಟದ ಮೊದಲ ದಿನದಂದು ಹೊಸ ಆವೃತ್ತಿಯನ್ನು ಖರೀದಿಸುತ್ತಿರುವುದು ಸತತ 4ನೇ ಬಾರಿಯಾಗಿದೆ. ಭಾರತದಲ್ಲಿ ಈ ಹೊಸ ಆವೃತ್ತಿಯ ಮಾರಾಟ ಪ್ರಾರಂಭವಾಗುವ ಗಂಟೆಗಳ ಮೊದಲು ಸುಮಾರು 1,29,000 (5,949 AED) ಬೆಲೆಯ ಹೊಸ ಐಫೋನ್‌ನ ಡೀಪ್‌ ಪರ್ಪಲ್‌ ಬಣ್ಣದ 512 GB ಸ್ಟೋರೇಜ್ ಮಾದರಿಯನ್ನು ಖರೀದಿಸಲು ಟಿಕೆಟ್ ದರ ಮತ್ತು ವೀಸಾ ಶುಲ್ಕಕ್ಕಾಗಿ ಸುಮಾರು 40,000 ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಧೀರಜ್ ಪಲ್ಲಿಯಿಲ್ ಹೇಳಿದ್ದಾರೆ. 

ಇದನ್ನು ಓದಿ: iPhone 14: ನೂತನ ಫೋನ್‌ಗಳ ಬಿಡುಗಡೆ ವಿರುದ್ಧ ಕಿಡಿ ಕಾರಿದ ಸ್ಟೀವ್‌ ಜಾಬ್ಸ್‌ ಪುತ್ರಿ

"2017 ರಲ್ಲಿ ಐಫೋನ್ 8 ಬಿಡುಗಡೆಯ ಸಮಯದಲ್ಲಿ ನಾನು ಅದನ್ನು ಖರೀದಿಸಲು ಮೊದಲು ದುಬೈಗೆ ಬಂದಿದ್ದೆ. 2019 ರಲ್ಲಿ ಸಹ ದುಬೈನಲ್ಲಿ ಮಾರಾಟ ಪ್ರಾರಂಭವಾದಾಗ, ಭಾರತದಲ್ಲಿ ಮಾಡೆಲ್‌ನ ಬಿಡುಗಡೆಯಾಗುವ ವಾರಗಳಿಗೂ ಮುಂಚೆಯೇ ನಾನು ಮಿರ್ಡಿಫ್ ಸಿಟಿ ಸೆಂಟರ್‌ನಲ್ಲಿ ಅದೇ ಮಾರಾಟಗಾರರಿಂದ ಐಫೋನ್ 11 ಪ್ರೋ ಮ್ಯಾಕ್ಸ್ ಅನ್ನು ಮೊದಲು ಖರೀದಿಸಿದೆ. ಅಲ್ಲದೆ, ದುಬೈನಲ್ಲಿ ಐಫೋನ್ 12 ಮತ್ತು ಐಫೋನ್ 13 ಮಾರಾಟ ಪ್ರಾರಂಭವಾದಾಗಲೂ ನಾನು ಮೊದಲ ಗ್ರಾಹಕನಾಗಿದ್ದೆ" ಎಂದು ಉದ್ಯಮಿ ಧೀರಜ್‌ ಪಲ್ಲಿಯಿಲ್ ಹೇಳಿದರು.

ಈ ಹಿಂದೆ, ದುಬೈನಲ್ಲಿ ಐಫೋನ್ ಮಾರಾಟವು ಭಾರತದಲ್ಲಿ ಮಾರಾಟ ಪ್ರಾರಂಭವಾಗುವ ವಾರಗಳ ಮೊದಲು ಆರಂಭವಾಗುತ್ತಿತ್ತು. ಹಾಗಾಗಿ, ಹೊಸ ಆವೃತ್ತಿಯ ಐಫೋನ್‌ಗಳನ್ನು ಹೊಂದಲು ದುಬೈಗೆ ಹಾರಿದ್ದು ವಿಭಿನ್ನ ಅನುಭವ. ಈಗ, ದುಬೈ ಮತ್ತು ಭಾರತದಲ್ಲಿ ಒಂದೇ ದಿನದಲ್ಲಿ ಐ ಫೋನ್‌ ಹೊಸ ಮಾಡೆಲ್‌ಗಳ ಮಾರಾಟ ಪ್ರಾರಂಭವಾಗುತ್ತದೆ. ಆದರೂ, ಭಾರತದಲ್ಲಿ ಮಾರಾಟ ಪ್ರಾರಂಭವಾಗುವ ಗಂಟೆಗಳ ಮೊದಲು ನಾನು ದುಬೈನಿಂದ ಖರೀದಿಸಲು ನಿರ್ಧರಿಸಿದೆ. "ಸಾವಿರಾರು ಜನರು ಅಂಗಡಿಯ ಹೊರಗೆ ಕಾಯುತ್ತಿರುವಾಗ ನೀವು ಫೋನ್ ಅನ್ನು ಮೊದಲ ಗ್ರಾಹಕರಾಗಿ ಖರೀದಿಸಿದಾಗ ಇದು ನಿಮಗೆ ವಿಶೇಷ ಭಾವನೆಯನ್ನು ನೀಡುತ್ತದೆ" ಎಂದು ಕೇರಳದ ಕೊಚ್ಚಿ ಮೂಲದ ಉದ್ಯಮಿ ಧೀರಜ್‌ ಪಲ್ಲಿಯಿಲ್ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: IPhone 14ರ ಬೆಲೆಯಲ್ಲಿ ನೀವು ಈ ದೇಶಗಳನ್ನು ಸುತ್ಬೋದು