ಸಚಿವ ಆರ್. ಅಶೋಕ್ ಅವರು ಮದ್ದೂರು ತಾಲೂಕು ಕಚೇರಿಯಲ್ಲಿ ಇಬ್ಬರು ಸಿಬ್ಬಂದಿಯನ್ನು ಸ್ಥಳದಲ್ಲಿಯೇ ಅಮಾನತು ಮಾಡಿದ್ದಾರೆ. ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಡುತ್ತಾರೆಂದು ಸಾರ್ವಜನಿಕರು ಆರೋಪಿಸಿದ್ದರು. ಈ ನಿಟ್ಟಿನಲ್ಲಿ ಸಚಿವರು ಕಚೇರಿಯನ್ನು ಪರಿಶೀಲಿಸಿದ್ದಾರೆ.

ಮಂಡ್ಯ(ಅ.17): ಭೂದಾಖಲೆಗಳನ್ನು ಕೋರಿ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಲಂಚಕ್ಕೆ ಬೇಡಿಕೆ ಇಟ್ಟು ವಿಳಂಬ ಮಾಡುತ್ತಿದ್ದ ತಾಲೂಕು ಕಚೇರಿಯ ಇಬ್ಬರು ನೌಕರರನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಸ್ಥಳದಲ್ಲೇ ಅಮಾನತು ಮಾಡಿದ ಘಟನೆ ಬುಧವಾರ ನಡೆದಿದೆ.

ಬುಧವಾರ ಮಂಡ್ಯದ ಮದ್ದೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ಕೊಟ್ಟ ಸಚಿವ ಆರ್. ಅಶೋಕ್ ಕಚೇರಿ ಪರಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಲಂಚಕ್ಕೆ ಬೇಡಿಜೆ ಇಡುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಬ್ಯಾಗ್, ಲಾಕರ್‌ಗಳನ್ನೂ ಪರಿಶೀಲಿಸಿದ್ದಾರೆ.

ತಾಲೂಕು ಕಚೇರಿಗೆ ಸಚಿವರ ದಿಢೀರ್‌ ಭೇಟಿ; ಬ್ಯಾಗ್, ಲಾಕರ್ ಚೆಕ್ ಮಾಡಿದ್ರು ಆರ್. ಅಶೋಕ್

ಮದ್ದೂರು ತಾಲೂಕು ಕಚೇರಿಯ ಭೂ ದಾಖಲೆ ವಿಭಾಗದ ಗುಮಾಸ್ತ ಅಕ್ಬರ್‌ ಹಾಗೂ ಡಿ. ಗ್ರೂಪ್‌ ನೌಕರ ವೆಂಕಟೇಶ್‌ ಅವರನ್ನು ಸಚಿವರು ಅಮಾನತ್ತು ಮಾಡಿದರು. ಭೂ ದಾಖಲೆಗಳನ್ನು ನೀಡುವ ಇಬ್ಬರು ನೌಕರರು ಲಂಚ ಕೇಳುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಕೇಳಿಬಂದ ದೂರಿನ ಹಿನ್ನಲೆಯಲ್ಲಿ ನೌಕರರಾದ ವೆಂಕಟೇಶ್‌, ಅಕ್ಬರ್‌ ಅವರನ್ನು ಸ್ಥಳಕ್ಕೆ ಕರೆಸಿಕೊಂಡ ಅಶೋಕ್‌, ಸಾರ್ವಜನಿಕರು ಮತ್ತು ಅಧಿಕಾರಿಗಳ ಎದುರೇ ಛೀಮಾರಿ ಹಾಕಿದ್ದಾರೆ.

'ಸುಮಲತಾ ಹಳಿ ಕೆಲ್ಸ ಮುಗಿಸಿದ್ರೆ ಮೋದಿ ಜೊತೆ ಮಾತಾಡಿ ರೈಲಿಗೆ ಫೋಟೋ ಹಾಕಿಸ್ತೀನಿ'..!

ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಅವರಿಗೆ ಇಬ್ಬರು ನೌಕರರನ್ನು ಅಮಾನತ್ತು ಮಾಡುವಂತೆ ಸೂಚನೆ ನೀಡಿದರು. ನ್ಯಾಯಾಲಯದ ಪ್ರಕರಣ ಮತ್ತು ವಿವಾದಿತ ಜಮೀನು ದಾಖಲೆ ಹೊರತುಪಡಿಸಿ, ಉಳಿದ ಜಮೀನುಗಳ ದಾಖಲೆಗಳನ್ನು ಅಧಿಕಾರಿಗಳು ತ್ವರಿತವಾಗಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

10 ವರ್ಷದ ಬಳಿಕ ಸತತ 50 ದಿನ ಕೆಆರ್ ಎಸ್ ಭರ್ತಿ

ಅಮಾನತುಗೊಂಡ ಇಬ್ಬರು ನೌಕರರನ್ನು ಇಲಾಖೆ ತನಿಖೆ ಕಾಯ್ದಿರಿಸುವಂತೆ ಸೂಚನೆ ನೀಡಿದರು. ಜೊತೆಗೆ ತಾಲೂಕು ಕಚೇರಿ ಭ್ರಷ್ಟಾಚಾರ ಕುರಿತಂತೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಅಶೋಕ್‌ ತಾಕೀತು ಮಾಡಿದ್ದಾರೆ.