- ವಿಂಗ್‌ ಕಮಾಂಡರ್‌ ಸುದರ್ಶನ

ಈ ಕಂಪನಿ ತಯಾರಿಸುವುದು ಮಿಸೈಲುಗಳನ್ನು!

ಹೌದು, ಹೈದರಾಬಾದಿನಲ್ಲಿರುವ ಈ ಕಂಪನಿಯ ಹೆಸರು ‘ಭಾರತ್‌ ಡೈನಮಿಕ್ಸ್‌ ಲಿಮಿಟೆಡ್‌’.

ಬೋಫೋರ್ಸ್‌ ಗನ್ನುಗಳಿಂದ ಬರಾಕ್‌ ಮಿಸೈಲುಗಳವರೆಗೆ ರಕ್ಷಣಾ ಸಾಮಗ್ರಿಗಳ ವ್ಯವಹಾರಗಳಲ್ಲಿ ಬರೀ ಅವ್ಯವಹಾರ, ಭ್ರಷ್ಟಾಚಾರ, ದಲ್ಲಾಳಿಗಳ, ರಾಜಕಾರಣಿಗಳ ಕೈವಾಡದ ಬಗ್ಗೆಯೇ ಕೇಳಿ ಬೇಸತ್ತವರಿಗೆ ಇಂತಹಾ ಬದಲಾವಣೆಯ ಸಮಾಚಾರದಿಂದ ಸಂತೋಷವೆನಿಸುವುದಲ್ಲವೇ, ಬದಲಾಗಿದೆ ಭಾರತ ಎನಿಸುವುದಿಲ್ಲವೇ, ದೇಶ ಆತ್ಮನಿರ್ಭರವಾಗುತ್ತಿದೆ ಎನ್ನುವ ಭರವಸೆ ಬರುತ್ತಿದೆಯಲ್ಲವೇ?

1970 ರಲ್ಲಿ ಪ್ರಾರಂಭವಾದ ಈ ಚಿಕ್ಕ ಕಂಪನಿ, ಮುಂದೆ 1982ರಲ್ಲಿ ಡಾಕ್ಟರ್‌ ಅಬ್ದುಲ್‌ ಕಲಾಮ್‌ ಅವರ ನೇತೃತ್ವದಲ್ಲಿ ಐ್ಞಠಿಛಿಜ್ಟaಠಿಛಿd ಎ್ಠಜಿdಛಿd ಋಜಿssಜ್ಝಿಛಿ ಈಛಿvಛ್ಝಿಟpಞಛ್ಞಿಠಿ P್ಟಟಜ್ಟaಞ (ಐಎಋಈP) ಪ್ರಾರಂಭವಾದಾಗ ಕ್ಷಿಪಣಿಯ ಬಿಡಿಭಾಗಗಳನ್ನು ತಯಾರಿಸುವ ಘಟಕವಾಗಿ ಕೆಲಸ ಪ್ರಾರಂಭಿಸಿತ್ತು. ಇದರ ಕಾರ್ಯವೈಖರಿಯನ್ನು ಮೆಚ್ಚಿದ ಅಬ್ದುಲ್‌ ಕಲಾಮ್‌ ಪೃಥ್ವಿ ಕ್ಷಿಪಣಿಗಳ ಸಂಪೂರ್ಣ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಟ್ಟರು.

1988 ರಲ್ಲಿ ಪ್ರಪ್ರಥಮವಾಗಿ, ಯಶಸ್ವಿಯಾಗಿ ಪೃಥ್ವಿ ಮಿಸೈಲಿನ ಪ್ರಾಯೋಗಿಕ ಉಡಾಣ ನಡೆಸಿದ ಮೇಲೆ ಈ ಕಂಪನಿಯ ಗತಿಯೇ ಬದಲಾಯಿತು. ಮುಂಬರುವ ಎಲ್ಲಾ ಕ್ಷಿಪಣಿಗಳ ತವರುಮನೆಯಾಗಿ ಬೆಳೆಯತೊಡಗಿತು. ಭೂಮಿಯಿಂದ ಆಕಾಶಕ್ಕೆ ಹಾರಿಸುವ ಕ್ಷಿಪಣಿ, ಯುದ್ಧದ ಟ್ಯಾಂಕುಗಳನ್ನು ಭೇದಿಸುವ ಕ್ಷಿಪಣಿಗಳನ್ನು ತಯಾರಿಸುವ ಏಕೈಕ ಕಾರ್ಖಾನೆಯಾಗಿ ಬೆಳೆಯತೊಡಗಿತು. ಕಂಪನಿಯ ದಕ್ಷತೆಗೆ ರಾಷ್ಟ್ರಪತಿಯವರ ಮಿನಿ ರತ್ನ ಪುರಸ್ಕಾರವೂ ದೊರೆತಿತು. ಭಾನೂರು ಮತ್ತು ವಿಶೇಷವಾಗಿ ಜಲಾಂತರ್ಗಾಮಿ ಕ್ಷಿಪಣಿಗಳನ್ನು ತಯಾರಿಸಲೆಂದೇ ವಿಶಾಖಪಟ್ಟಣದಲ್ಲೂ ಕಂಪನಿಯ ಶಾಖೆಗಳನ್ನು ಪ್ರಾರಂಭಿಸಲಾಯಿತು.

ದಕ್ಷಿಣ ಭಾರತದ ಮೊದಲ ಸುಖೋಯ್ ಪಡೆ ಕಾರ್ಯಾರಂಭ!

ಈಗ ಮಹಾರಾಷ್ಟ್ರದ ಅಮರಾವತಿ ಜಿಲ್ಲೆ ಮತ್ತು ತೆಲಂಗಾಣದ ಇಬ್ರಾಹಿಂ ಪಟ್ಟಣದಲ್ಲಿ ಹೊಸ ಶಾಖೆಗಳನ್ನು ತೆರೆಯಲಿದೆ.

ಭೂಸೈನ್ಯ ಮತ್ತು ವಾಯುಸೇನೆಗೆ ಆಕಾಶ್‌ ಕ್ಷಿಪಣಿಗಳನ್ನು ಅವರ ಬೇಡಿಕೆಗಳು ಬಂದಂತೆ ಪೂರೈಸಲಾಯಿತು. 2013 ರಲ್ಲಿ ಕಂಪನಿಯ ಒಟ್ಟು ಮಾರಾಟ 1000 ಕೋಟಿಯಷ್ಟುಇದ್ದದ್ದು ಈಗ 75,000 ಕೋಟಿಯಷ್ಟುಆರ್ಡರುಗಳು ಬಂದಿವೆಯಂತೆ. ಈಗ ಅರ್ಥವಾಯಿತೇ..ಯಾಕೆ ಈ ಕಂಪನಿಯ ಶೇರುಗಳ ಬೆಲೆ ತಾನು ತಯಾರಿಸುತ್ತಿರುವ ಕ್ಷಿಪಣಿಗಳಂತೆ ಉತ್ತರಕ್ಕೆ ಉಪಕ್ರಮಿಸುತ್ತಿದ್ದಾವೆ ಎಂದು.

ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು ಈಗಿನ ಸರ್ಕಾರ ಸೈನ್ಯದ ಅಂಗಗಳಿಗೆ ಕೊಟ್ಟಿರುವ ಸ್ವಾಯತ್ತತೆ. ನಿಮಗೆ ಅವಶ್ಯಕತೆ ಇರುವ ಸಾಮಗ್ರಿಗಳನ್ನು ಸಂಕೋಚವಿಲ್ಲದೆ ತರಿಸಿಕೊಳ್ಳಿ ಎಂದು ರಕ್ಷಣಾಮಂತ್ರಿಯವರಿಗೆ 2000 ಕೋಟಿಯಷ್ಟುಖರ್ಚುಮಾಡುವ ಅಧಿಕಾರ ಕೊಟ್ಟಿದೆ. ಭ್ರಷ್ಟಾಚಾರರಹಿತ ವಾತಾವರಣದಲ್ಲಿ ನಿರ್ಭಿಡೆಯಿಂದ ವ್ಯವಹಾರಗಳು ನಡೆಯುತ್ತಿವೆ. ಚೀನಾ ಮತ್ತು ಪಾಕಿಸ್ತಾನದ ದುರ್ನಡತೆಯಿಂದ ಏಕಕಾಲಕ್ಕೆ ಇಬ್ಬದಿಯಿಂದ ನಡೆಯಬಹುದಾದ ದಾಳಿಗೆ ಸೈನ್ಯಗಳು ತಮ್ಮ ರಣತಂತ್ರದಲ್ಲಿ ಮಾರ್ಪಾಡು ಮಾಡುತ್ತಿವೆ, ಹಾಗಾಗಿ ಕ್ಷಿಪಣಿಗಳ ಅವಶ್ಯಕತೆ ಮತ್ತು ಬೇಡಿಕೆ ಹೆಚ್ಚಾಗುತ್ತಿವೆ.

ಎರಡನೆಯ ಅಂಶ ಭಾರತದಲ್ಲೇ ನಿರಂತರವಾಗಿ ನಡೆಯುತ್ತಿರುವ ಅನುಸಂಧಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿನ ವಿಕಾಸ. ರಷ್ಯಾದ ಜೊತೆ ನಡೆಯುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳ ಮತ್ತು ಇಸ್ರೇಲಿನ ಜೊತೆಗಿನ ಬರಾಕ್‌ ಕ್ಷಿಪಣಿಗಳ ಜಂಟಿ ಕಾರ್ಯಾಚರಣೆಗಳು ಕ್ಷಿಪಣಿ ವಿಜ್ಞಾನದಲ್ಲಿ ಭಾರತವನ್ನು ವಿಶ್ವದಲ್ಲೇ ಉನ್ನತ ಮಟ್ಟಕ್ಕೇರಿಸಿದೆ. ಹಾಗಾಗಿ ಇತರೆ ದೇಶಗಳಿಂದ ಕ್ಷಿಪಣಿಗಳ ಬೇಡಿಕೆ ಬರಲಾರಂಭಿಸಿದೆ. ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಈಗ ವಿದೇಶಗಳಿಗೆ ರಫ್ತು ಮಾಡುವ ಸ್ಥಿತಿಯತ್ತ ದೌಡಾಯಿಸುತ್ತಿದೆ.

ಆತ್ಮ ನಿರ್ಭರವಾಗುತ್ತಿದೆ ಭಾರತ.

ಬತ್ತಳಿಕೆಯಲ್ಲಿನ ಬ್ರಹ್ಮಾಸ್ತ್ರಗಳು

ಭಾಗವತ ಪುರಾಣದಲ್ಲಿ ವಿವರಿಸಲಾದ ಏಳು ಲೋಕಗಳೆಂದರೆ: ಅತಳ, ವಿತಳ, ಸುತಳ, ತಲಾತಳ, ಮಹಾತಳ, ರಸಾತಳ, ಮತ್ತು ಪಾತಾಳ.. ಅಕಸ್ಮಾತ್ತಾಗಿ ಈ ಎಲ್ಲಾ ಲೋಕಗಳು ಈಗಲೂ ಇದ್ದರೆ ಎಲ್ಲಾ ಲೋಕಗಳಿಗೆ ನುಗ್ಗಿ ಶತ್ರುಗಳ ಧ್ವಂಸ ಮಾಡುವ ಶಕ್ತಿ ಭಾರತದಲ್ಲಿ ತಯಾರಿಸಿದ ಕ್ಷಿಪಣಿಗಳಿಗೆ ಇದೆ. ಇನ್ನು ಚೀನಾ, ಪಾಕಿಸ್ತಾನ ಯಾವ ಲೆಕ್ಕಾ.

4 ವರ್ಷದ ಹಿಂದೆಯೇ #BrahMos ಮಾಹಿತಿ ಕದ್ದಿದ್ದೆ: ನಿಶಾಂತ್‌ ಒಪ್ಪಿಗೆ

ಸ್ವಲ್ಪ ಜಾಸ್ತಿ ಹೇಳಿಬಿಟ್ಟೆನೇ?

ಇಲ್ಲ, ಅವುಗಳ ಸರತಿಸಾಲು ನೋಡಿ ಹೇಗಿದೆ... ಪೃಥ್ವಿ, ಆಕಾಶ, ಅಗ್ನಿ, ಸಾಗರಿಕ, ಶೌರ್ಯ, ಪ್ರಹಾರ, ಧನುಷ್‌, ನಿರ್ಭಯ, ನಾಗ, ಅಸ್ತ್ರ, ಬ್ರಹ್ಮೋಸ್‌...ಇನ್ನೂ ಬರುತ್ತಲೇ ಇವೆ. ಇವುಗಳನ್ನು ನೆಲ, ಜಲ, ಆಕಾಶ ಎಲ್ಲಿಂದರಲ್ಲಿಂದಲೇ ಪ್ರಯೋಗಿಸಬಹುದು. ಸುಮಾರು 5000 ಕಿಮೀ ದೂರದ ನಗರ, ನೂರಾರು ಮೈಲಿಗಳಷ್ಟುದೂರದ ಜಲಾಂತರ್ಗಾಮಿ ಹಡಗು, ಬಿಲ್ಡಿಂಗ್‌, ಪರ್ವತ ಶಿಖರದ ಮೇಲಿನ ಗುಹೆ, ಸೂಪರ್‌ ಸೋನಿಕ್‌ ವೇಗದಲ್ಲಿ ಹಾರುತ್ತಿರುವ ವಿಮಾನ ಈ ಎಲ್ಲಾ ಟಾರ್ಗೆಟ್ಟುಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗಳಿಗೆ ಇದೆ. ಇವೆಲ್ಲವೂ ಬಹುತೇಕ ಭಾರತದಲ್ಲೇ ತಯಾರಾದ ಕ್ಷಿಪಣಿಗಳು ಮತ್ತು ಇವುಗಳ ಕಾರಣಕರ್ತೃ ಮಿಸೈಲ್‌ ಮ್ಯಾನ್‌ ಎಂದೇ ಪ್ರಸಿದ್ಧರಾದ ಡಾಕ್ಟರ್‌ ಎ.ಪಿ.ಜೆ ಅಬ್ದುಲ್‌ ಕಲಾಮ್‌.

17 ಡಿಸೆಂಬರ್‌ 2019ರಲ್ಲಿ ಭಾರತ ನಡೆಸಿದ ಒಂದು ಪ್ರಯೋಗದಿಂದ, ಇಡೀ ಪ್ರಪಂಚದಲ್ಲೇ ಇಂತಹ ಯಶಸ್ವಿ ಪ್ರಯತ್ನ ನಡೆಸಿದ ಮೊಟ್ಟಮೊದಲ ದೇಶ ಎನ್ನುವ ಹೆಗ್ಗಳಿಕೆಗೆ ಮತ್ತು ಈರ್ಷ್ಯೆಗೆ ಪಾತ್ರವಾಯಿತು.

ಏನಾಯಿತು ಅವತ್ತು?

ಬೆಳಗ್ಗೆ ಎಂಟೂವರೆ ಸಮಯಕ್ಕೆ ಒಡಿಯಾದ ಸಮುದ್ರ ತಟದಲ್ಲಿರುವ ಚಾಂದಿಪುರ ರೇಂಜಿನಿಂದ ಒಂದು ಬ್ರಹ್ಮೋಸ್‌ ಕ್ಷಿಪಣಿಯನ್ನು ಹಾರಿಸಲಾಯಿತು. ಸಮುದ್ರವನ್ನು ಅಪ್ಪಿಕೊಂಡು, ಸೂಪರ್‌ ಸೋನಿಕ್‌ ವೇಗದಿಂದ ಮುನ್ನುಗ್ಗಿ, ನೂರಾರು ಕಿಮೀಗಳಷ್ಟುದೂರದಲ್ಲಿದ್ದ ಒಂದು ಹಡಗಿನ ಮಾದರಿಯನ್ನು ಧ್ವಂಸಗೊಳಿಸಿತು. ಅಲ್ಲಿಯವರೆಗು ಉಸಿರು ಬಿಗಿಹಿಡಿದುಕೊಂಡು ವೀಕ್ಷಿಸುತ್ತಿದ್ದ ಡಿಆರ್‌ಡಿಓ ವಿಜ್ಞಾನಿಗಳ ಮುಖದಲ್ಲಿ ಮುಗುಳ್ನಗೆ ಮೂಡಿ ಒಬ್ಬರನ್ನೊಬ್ಬರು ಪರಸ್ಪರ ಅಭಿನಂದಿಸತೊಡಗಿದರು, ನೋಡೋಣ ಮಧ್ಯಾಹ್ನ ಏನಾಗುತ್ತದೆ ಎಂದುಕೊಳ್ಳುತ್ತಾ. ಅವರುಗಳ ಮುಖದಲ್ಲಿ ಆವರಿಸಿದ್ದ ಆತಂಕ ನೋಡಿದರೆ, ಮಧ್ಯಾಹ್ನ ಏನೋ ದೊಡ್ಡದೇ ನಡೆಯುತ್ತಿರಬಹುದು.

ಮಧ್ಯಾಹ್ನ ಏನಾಯಿತೆಂದರೆ, ಪಶ್ಚಿಮ ಬಂಗಾಳದ ಕಲೈಕುಂಡ ವಾಯುನೆಲೆಯಿಂದ ಒಂದು ಸುಖೋಯ್‌- 30 ವಿಮಾನ ಗಗನಕ್ಕೇರಿ ಬಂಗಾಳಕೊಲ್ಲಿಯ ಕಡೆ ಹಾರಿತು. ಒಂದು ನಿರ್ದಿಷ್ಟಸ್ಥಳಕ್ಕೆ ತಲುಪಿ ತಾನು ಕಟ್ಟಿಕೊಂಡು ಬಂದಿದ್ದ 2500 ಕೆಜಿಯಷ್ಟುಭಾರದ ಬ್ರಹ್ಮೋಸ್‌ ಕ್ಷಿಪಣಿಯನ್ನು ಹಾರಿಸಿತು. ಶರವೇಗದಲ್ಲಿ ಈ ಕ್ಷಿಪಣಿ ಬಂಗಾಳ ಕೊಲ್ಲಿಯಲ್ಲಿ ಸುಮಾರು 290 ಕಿಮೀ ದೂರದ ಒಂದು ಹಡಗಿನ ಮಾದರಿಯನ್ನು ಠಿಟಿಠಿsಟಿಣ ಚಿಛಿಛಿOಡಿಚಿಛಿಥಿ ಯಿಂದ ಧ್ವಂಸಗೊಳಿಸಿತು. ಸುಮಾರು 3000 ಕಿಮೀ ವೇಗದಲ್ಲಿ ಬಂದು ಅಪ್ಪಳಿಸಿದ್ದಕ್ಕೇ ಆ ಹಡಗು ಚೂರುಚೂರಾಯಿತು, ಇನ್ನು 300 ಕೆಜಿಯಷ್ಟುಸಿಡಿತಲೆ ಸ್ಪೋಟಗೊಂಡಾಗ ನಾಮಾವಶೇಷವಿಲ್ಲದಂತೆ ಸಮುದ್ರದಲ್ಲಿ ಮುಳುಗೇ ಹೋಯಿತು. ಇದನ್ನೆಲ್ಲಾ ನೋಡುತ್ತಿದ್ದ ಡಿಆರ್‌ಡಿಓದ ವಿಜ್ಞಾನಿಗಳು, ಸದ್ಯ ಇದು ಒಂದು ಪ್ರಯೋಗ ಯಶಸ್ವಿಯಾಯಿತು ಎಂದು ಸಂತಸದ ನಿಟ್ಟುಸಿರು ಬಿಟ್ಟರು. ಅವರ ಆತಂಕಕ್ಕೆ ಕಾರಣವಾದ ವಿಷಯವೇನೆಂದರೆ ಪ್ರಪಂಚದಲ್ಲಿ ಮೊಟ್ಟಮೊದಲ ಸಲ ಒಂದು ಸೂಪರ್‌ ಸೋನಿಕ್‌ ವೇಗದ ಕ್ರೂಯ್‌್ಸ ಮಿಸೈಲನ್ನು ಒಂದು ಯುದ್ಧವಿಮಾನದಿಂದ ಪ್ರಯೋಗ ಮಾಡುತ್ತಿರುವುದು. ಈ ಪ್ರಯೋಗದ ಯಶಸ್ಸು ಯುದ್ಧದ ತಂತ್ರಕುಶಲತೆಗೆ ಒಂದು ಹೊಸ ಆಯಾಮವನ್ನೇ ಸೃಷ್ಟಿಸುತ್ತದೆ. ಅದು ಹಾಗೇ ಆಯಿತು, ಕೇವಲ ಭಾರತೀಯ ವಾಯುಸೇನೆಯ ಬಳಿ ಮಾತ್ರ ಇಂತಹಾ ಸಾಮರ್ಥ್ಯವಿರುವುದು, ವಿಮಾನದಿಂದ ಕ್ರೂಯ್‌್ಸ ಮಿಸೈಲನ್ನು ಹಾರಿಸುವುದು. ಈಗಾಗಲೇ ಬ್ರಹ್ಮೋಸ್‌ ಮಿಸೈಲನ್ನು ನೆಲದಿಂದ, ಸಮುದ್ರದ ಒಳಗಿನಿಂದ, ಹಡಗುಗಳಿಂದ, ಬಂಕರುಗಳಿಂದ, ನೆಲಮಾಳಿಗೆಗಳಿಂದ, ಎಲ್ಲಾ ಕಡೆಯಿಂದ ಯಶಸ್ವಿಯಾಗಿ ಹಾರಿಸಲಾಗಿದೆ. ಈ ವಿಮಾನದಿಂದ ಹಾರಿಸಿದ ಪ್ರಯೋಗದಿಂದ ವಾಯುಸೇನೆಯ ಬತ್ತಳಿಕೆಗೆ ಬ್ರಹ್ಮಾಸ್ತ್ರ ಒಂದು ಸೇರಿಕೊಂಡ ಬಲ ಬಂದಿದೆ, ಇದರ ಅರ್ಥ, ಮುಂದೊಮ್ಮೆ ಬಾಲಾಕೋಟ್‌ -2 ಸರ್ಜಿಕಲ್‌ ದಾಳಿ ನಡೆದರೆ ಭಾರತದ ಗಡಿಯೊಳಗೆ ಇದ್ದುಕೊಂಡೇ ಸುಖೋಯ್‌ ವಿಮಾನ ಬ್ರಹ್ಮೋಸ್‌ ಮಿಸೈಲಿನಂದ ಉಗ್ರರ ತಾಣವನ್ನು ಮಟಾಷ್‌ ಮಾಡಬಹುದು.

ಏನಿದು ಬ್ರಹ್ಮೋಸ್‌?

ಅಸಲಿಗೆ ಇದರ ಸಾಮರ್ಥ್ಯಕ್ಕನುಗಣವಾಗಿ ಇದಕ್ಕೆ ಬ್ರಹ್ಮಾಸ್ತ್ರ ಎಂದೇ ಹೆಸರಿಡಬೇಕಾಗಿತ್ತು. ಭಾರತ ಮತ್ತು ರಷ್ಯಾದ ಸಹಭಾಗಿತ್ವದಿಂದ ಸೃಷ್ಟಿಸಿದ ಈ ಕ್ಷಿಪಣಿಗಳಿಗೆ ಭಾರತದ ಬ್ರಹ್ಮಪುತ್ರ + ರಷ್ಯಾದ ಮೋಸ್‌ ಕ್ವಾ ನದಿಗಳ ಹೆಸರಿನ ಜೋಡಣೆಯೇ ಬ್ರಹ್ಮೋಸ್‌. ಈ ತರಹದ ಮಿಸೈಲುಗಳನ್ನು ದೃಷ್ಟಿವಲಯದಿಂದ ದೂರವಿರುವ ಟಾರ್ಗೆಟ್ಟುಗಳನ್ನು ಹೊಡೆದುರುಳಿಸಲು ಪ್ರಯೋಗಿಸಲಾಗುತ್ತದೆ. ಇವನ್ನು ಫೈರ್‌ ಆ್ಯಂಡ್‌ ಫಾರ್‌ಗೆಟ್‌ ಮಿಸೈಲ್‌ ಎಂದೂ ಕರೆಯಲಾಗುತ್ತದೆ. ಒಂದು ಪೂರ್ವ ನಿರ್ದಿಷ್ಟಟಾರ್ಗೆಟ್ಟಿನ ವಿವರಗಳನ್ನು ಇದರ ಕಂಪ್ಯೂಟರಿನಲ್ಲಿ ಅಳವಡಿಸಲಾಗಿರುತ್ತದೆ. ಅದಕ್ಕೆ ಅವಶ್ಯವಾಗುವಷ್ಟುಇಂಧನವನ್ನು ತುಂಬಲಾಗುತ್ತದೆ. ಕಂಪ್ಯೂಟರ್‌ನಲ್ಲಿ ಅಳವಡಿಸಿರುವ ಮಾರ್ಗದರ್ಶನದ ಪ್ರಕಾರ ಸಾವಿರಾರು ಮೈಲಿಗಳಷ್ಟುದೂರದ ಟಾರ್ಗೆಟ್ಟುಗಳನ್ನು ಸಮುದ್ರದ ಮೇಲೆ, ಬೆಟ್ಟಗಳನ್ನು ದಾಟಿಕೊಂಡು, ಶತ್ರುಗಳ ರಾಡಾರಿನ ಕಣ್ಣಿಗೆ ಕಾಣದಂತೆ, ಶಬ್ದವೇಗದ ಮೂರು ಪಟ್ಟು ವೇಗದಲ್ಲಿ ಹುಡುಕಿಕೊಂಡು ಹೋಗಿ ಅಪ್ಪಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದಕ್ಕೇ ಇದನ್ನು ಬ್ರಹ್ಮಾಸ್ತ್ರ ಎನ್ನಬೇಕಾಗಿರುವುದು. ಇನ್ನು ಸದ್ಯದಲ್ಲಿಯೇ ವಾಯುಸೇನೆಗೆ ಸೇರ್ಪಡೆಯಾಗಲಿರುವ ರಫೇಲ್‌ ವಿಮಾನಗಳು ಬಂದಮೇಲೆ ಭಾರತದ ಸಶಸ್ತ್ರ ಸೇನೆಗೆ ಆನೆಬಲ ಬರಲಿದೆ.