ಹೀಗೊಂದು ಕನ್‌ಫೆಶನ್‌

ನಾನೊಬ್ಬ ಯುನಿವರ್ಸಿಟಿ ಹುಡುಗ. ಈ ವರ್ಷ ನಮ್ಮ ಕಾಲೇಜ್‌ಗೆ ಒಬ್ರು ಹೊಸ ಲೇಡಿ ಬಂದರು. ಆಕೆ ಅಕೌಂಟ್ಸ್‌ ಡಿಪಾರ್ಟ್‌ಮೆಂಟ್‌ನಲ್ಲಿದ್ದರು. ಸಖತ್‌ ಕ್ಯೂಟ್‌ ಆಗಿದ್ದ ಆಕೆ ಹುಡುಗರ ಆಕರ್ಷಣೆಯ ಕೇಂದ್ರವಾಗಿದ್ದರು. ಆದರೆ ಸ್ವಲ್ಪ ದಿನಕ್ಕೇ ಆಕೆ ವಿವಾಹಿತೆ ಅಂತ ಗೊತ್ತಾಯ್ತು. ನಮ್ಗೆಲ್ಲ ನಿರಾಸೆ. ಜೊತೆಗೆ ವಿವಾಹಿತೆ ಅನ್ನೋದನ್ನು ಪ್ರಕಟಿಸೋ ಯಾವ ಚಿಹ್ನೆಗಳೂ ಇಲ್ಲದ ಕಾರಣ ಕುತೂಹಲವೂ ಇತ್ತು. ಇಂಥಾ ಟೈಮ್‌ನಲ್ಲೇ ಆಕೆ ನಮ್ಮ ಕಾಲೇಜ್‌ಗೆ ಹೊಸದಾಗಿ ಒಬ್ರು ಸ್ಮಾರ್ಟ್‌ ಪ್ರೊಫೆಸರ್‌ ಬಂದ್ರು. ಅವರ ಜೊತೆಗೆ ಈಕೆ ಬಹಳ ಆಪ್ತವಾಗಿ ಮಾತಾಡೋದು ಕಣ್ಣಿಗೆ ಬಿತ್ತು. ಊಟಕ್ಕೆ ಅವರ ಜೊತೆ ಹೋಗೋದನ್ನೂ ನೋಡಿದ್ವಿ.

ಹೊಸ ವರ್ಷಕ್ಕೆ ತಯಾರಾಗಲು ಇಲ್ಲಿದೆ ಸಿಂಪಲ್ 20 ಟಿಪ್ಸ್!

ಒಂದಿನ ಸರಿ, ಎರಡು ದಿನ ಸರಿ. ಆದ್ರೆ ದಿನಾ ಹೀಗೆ ಜೊತೆಯಾಗಿ ಓಡಾಡ್ತಿದ್ರೆ ಡೌಟ್‌ ಬರಲ್ವಾ.. ನಮ್‌ ಹುಡುಗ್ರ ವಲಯದಲ್ಲೆಲ್ಲ ಆಕೆಯ ಬಗ್ಗೆ ಗಾಸಿಪ್‌ ಕ್ರಿಯೇಟ್‌ ಆಯ್ತು. ಹುಡುಗೀರೂ ಗಾಸಿಪ್‌ ಮಾಡೋದ್ರಲ್ಲಿ ಹಿಂದೆ ಬೀಳಲಿಲ್ಲ. ಆಕೆ ಈಗೀಗ ಸಂಜೆ ಕೆಲಸ ಮುಗಿಸಿ ಅವರಿಗೋಸ್ಕರ ಕಾಯೋದು, ಅವರು ಬಂದ ಮೇಲೆ ಅವರ ಜೊತೆಗೇ ಕಾರ್‌ನಲ್ಲಿ ಹೋಗೋದು ಇತ್ಯಾದಿ ಚಟುವಟಿಕೆಗಳು ಶುರುವಾದವು. ಅವರಿಬ್ಬರ ಸಂಬಂಧದ ಬಗ್ಗೆ ಗಾಸಿಪ್‌ ರೆಕ್ಕೆ ಪುಕ್ಕ ಹಚ್ಕೊಂಡು ಹಾರಾಡ್ತಿದ್ವು. ಈ ಟೈಮ್‌ನಲ್ಲೇ ಒಂದು ಘಟನೆ ನಡೀತು. ನಮ್ಮ ಕಾಲೇಜ್‌ ಹುಡುಗಿ ಒಬ್ಬಳ ಮದುವೆ. ನಾವೆಲ್ಲ ಹೋಗಿದ್ವಿ. ಇವರಿಬ್ಬರೂ ಬಂದಿದ್ರು. ಅಲ್ಲಿ ಮದುಮಕ್ಕಳಿಗೆ ಪರಿಚಯಿಸುವಾಗ ಒಂದು ಆಘಾತಕರ ಸುದ್ದಿ ಹೊರಬಿತ್ತು, ಅವರಿಬ್ಬರೂ ಗಂಡ ಹೆಂಡತಿ ಆಗಿದ್ದರು!

ಅವರ ಬಗ್ಗೆ ಕೆಟ್ಟದಾಗಿ ಗುಲ್ಲು ಹಬ್ಬಿಸಿದ್ದ ನಮಗೆ ತಲೆ ಎತ್ತಲೂ ನಾಚಿಕೆ. ಯಾಕೋ ತಡೆಯಲಾಗಲಿಲ್ಲ. ಮನೆಗೆ ಬಂದು ಇದನ್ನೆಲ್ಲ ಕಾಗದದ ಮೇಲೆ ಬರೀತಿದ್ದೇನೆ. ಇನ್ನೊಬ್ಬರ ಬದುಕಿನ ಬಗ್ಗೆ ಕೆಟ್ಟದಾಗಿ ಮಾತನಾಡುವ ಯಾವ ಹಕ್ಕೂ ನನಗಿಲ್ಲ. ಇದನ್ನೆಲ್ಲ ಆ ಲೇಡಿ ಹತ್ರ ಹೇಳಿದ್ರೆ ಸುಮ್ನೇ ಅವರಿಗೆ ಹರ್ಟ್‌ ಆಗುತ್ತೆ, ನಮ್ಮ ಸಂಬಂಧವೂ ಹಾಳಾಗುತ್ತೆ. ಆದರೆ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವ, ಗಾಳಿ ಸುದ್ದಿ ಹಬ್ಬಿಸುವ ನಮ್ಮ ಚಟ ಈ ವರ್ಷಕ್ಕೇ ಕೊನೆಯಾಗಲಿ. ಮುಂದಿನ ವರ್ಷದ ಮುಂಜಾನೆಗೆ ಕೆಟ್ಟ ಯೋಚನೆಗಳ ದುರ್ಗಂಧ ಹತ್ತದೇ ಇರಲಿ, ಅದು ತಾಜಾವಾಗಿರಲಿ, ಯಾವ ಕಲ್ಮಶವೂ ಇಲ್ಲದೇ ಇರಲಿ ಅನ್ನೋದು ನನ್ನ ಹಾರೈಕೆ.

ಹೊಸ ವರ್ಷದಲ್ಲಿ ಈ ಸಿಂಪಲ್ ರೂಲ್ ಫಾಲೋ ಮಾಡಿ, ಸೇವಿಂಗ್ಸ್ ಹೆಚ್ಚಿಸಿ!

*ಯಾಕೆ ಮಾಡ್ಬೇಕು ಕನ್‌ಫೆಶನ್ನು

ಮನಸ್ಸು ಅಂದಮೇಲೆ ಅಲ್ಲಿ ಒಳ್ಳೆಯದು ಕೆಟ್ಟದ್ದು ಎಲ್ಲಾ ಇರುತ್ತೆ. ಮನೆಯಲ್ಲಿ ಮೂಲೆ ಮೂಲೆಗಳಲ್ಲಿ ಕಸ, ಹಾಳಾದ ಆಹಾರವೋ, ಸಾಮಗ್ರಿಯೋ ಇರುವ ಹಾಗೆ. ಒಬ್ಬ ಸಾಧಕಿ ಹೇಳ್ತಿದ್ರಿದ್ರು. ಸತ್ತ ಇಲಿಯನ್ನು ಎಷ್ಟು ದಿನ ಮನೆಯಲ್ಲಿ ಇಟ್ಟುಕೊಳ್ತೀರಿ, ಅದನ್ನು ಮೊದಲು ಹೊರಗೆಸೆಯಿರಿ ಅಂತ. ಮಾಡಿದ ತಪ್ಪುಗಳೂ ಸತ್ತ ಇಲಿಯ ಹಾಗೆ ಮನಸ್ಸಿನ ಮೂಲೆಯಲ್ಲಿ ಕೂತು ದುರ್ಗಂಧ ಬೀರುತ್ತಿರುತ್ತವೆ. ಅವುಗಳನ್ನು ಹೊರಗೆಸೆಯದಿದ್ದರೆ ಅವು ದುರ್ವಾಸನೆ ಬೀರುತ್ತಲೇ ಇರುತ್ತವೆ. ಇದರಿಂದ ನಿಮಗೆ ಯಾವುದರಲ್ಲೂ ಸರಿಯಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗದು. ಫ್ರೆಶ್‌ ಆದ ಹೊಸ ಯೋಚನೆಗಳು ನಿಮ್ಮಿಂದ ದೂರವೇ ಉಳಿಯಬಹುದು.

ಅಸಹನೆ, ಕೋಪ, ಹೇವರಿಕೆ ಇತ್ಯಾದಿಗಳೆಲ್ಲ ಆ ತಪ್ಪಿನ ಪರಿಣಾಮ ನಿಮ್ಮ ಮನಸ್ಸಿಗೆ ಕೊಡಬಾರದ ಹಿಂಸೆ ಕೊಡುತ್ತಾ ಇರಬಹುದು. ಹೀಗಾಗಿ ನಿಮ್ಮ ಮನಸ್ಸಿನಲ್ಲಿರುವ ನೀವು ಮಾಡಿರುವ ತಪ್ಪುಗಳನ್ನು ಪ್ರಾಂಜಲವಾಗಿ ಒಪ್ಪಿಕೊಂಡು ಒಂದು ಹಾಳೆಯಲ್ಲಿ ಬರೆದಿಡಿ. ಅದು ಅನ್ಯರ ಕೈಗೆ ಸಿಗಬಾರದು ಅಂತಿದ್ದರೆ ಹರಿದು ಬಿಸಾಕಿ. ಇದಾಗಲ್ಲ ಅಂತಿದ್ರೆ ನಿಮಗೆ ಬಹಳ ಆಪ್ತರಾದವರ ಅಂದರೆ ಅಮ್ಮ, ಅಜ್ಜಿ, ಸಂಗಾತಿ ಇಂಥವರ ಬಳಿ ಮಾಡಿದ ತಪ್ಪುಗಳನ್ನು ನಿವೇದಿಸಿಕೊಳ್ಳಿ. ಇದರಿಂದ ಆಚೆ ಬನ್ನಿ.

2020ರೊಳಗೆ ವಿಜ್ಞಾನಿಗಳು ಹೇಳಿದ್ದೆಲ್ಲ ನಿಜವಾಯ್ತಾ? ಏನೆಲ್ಲಾ ಹೇಳಿದ್ರು

ನ್ಯೂ ಇಯರ್‌ನ ಖುಷಿ ಕ್ಲೀನ್‌ ಆಗಿರೋ ನಿಮ್ಮ ಮನಸ್ಸನ್ನೆಲ್ಲ ಆವರಿಸಿ ಆಹ್ಲಾದ ಹರಡಲಿ.