ಬೇಸಿಗೆಯಲ್ಲಿ ಟೊಮಾಟೊ ಬೆಳೆಯುವವರಿಗಾಗಿ ಒಂದಿಷ್ಟುಮಾಹಿತಿ!
ಟೊಮಾಟೊ ರೈತನಿಗೆ ಒಂಥರಾ ಲಾಟರಿ ಇದ್ದ ಹಾಗೆ, ಯಾವಾಗ ಕಾಸು ತರುತ್ತೊ, ಯಾವಾಗ ಲಾಸು ಮಾಡುತ್ತೊ ಹೇಳೋಕಾಗಲ್ಲ. ಬೆಲೆ ಹೆಚ್ಚಿದೆ ಅಂತ ಬೆಳೆಯಲು ಹೋದರೆ ಕೊಯ್ಲಿಗೆ ಬರುವಷ್ಟರಲ್ಲಿ ದರ ಬಿದ್ದೋಗಿರುತ್ತದೆ. ಕಳೆದ ವರ್ಷ ಬೇಸಿಗೆಯಲ್ಲಿ ಒಳ್ಳೆ ರೇಟ್ ಸಿಕ್ಕಿದೆ ಅಂತ ಈ ವರ್ಷ ಬೇಸಿಗೆಯಲ್ಲೂ ಹಾಗೇ ಆಗುತ್ತದೆ ಅನ್ನುವಂತಿಲ್ಲ. ಆದ್ದರಿಂದ ಜಮೀನನ್ನು ಭಾಗ ಭಾಗ ಮಾಡಿ ಒಂದು ಸಲಕ್ಕೆ ಮೂರ್ನಾಲ್ಕು ತರಕಾರಿ ಬೆಳೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು.
-ಎಸ್.ಕೆ ಪಾಟೀಲ್
ಆದ್ದರಿಂದ ಜಮೀನನ್ನು ಭಾಗ ಭಾಗ ಮಾಡಿ ಒಂದು ಸಲಕ್ಕೆ ಮೂರ್ನಾಲ್ಕು ತರಕಾರಿ ಬೆಳೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇನ್ನು ಬೇಸಿಗೆಯಲ್ಲಿ ತರಕಾರಿ ಬೆಳೆಯುವುದು ಸವಾಲಿನ ಸಂಗತಿ, ಬಿಸಿಲಿನ ತಾಪದ ಜೊತೆಗೆ ಹಲವು ಕೀಟ ಕಾಟ ಮತ್ತು ರೋಗಬಾಧೆ ಜಾಸ್ತಿ. ಇಳುವರಿ ಕೂಡ ಕಡಿಮೆ, ರೇಟ್ ಸ್ವಲ್ಪ ಚೆನ್ನಾಗಿ ಸಿಗುತ್ತದೆ, ಹಾಗಾಗಿ ಮಾಮೂಲಾಗಿ ಬೇಸಿಗೆಯಲ್ಲಿ ಟೊಮಾಟೊ ಬೆಳೆದಾಗ ನಷ್ಟವಾಗುವ ಆತಂಕ ಕಮ್ಮಿ.
ನಂಜುರೋಗ
ಥ್ರಿಫ್ಸ್ ಕೀಟದಿಂದ ಹರಡುವ ನಂಜುರೋಗ ಇತ್ತೀಚೆಗೆ ಬಹುತೇಕ ಎಲ್ಲ ಬೆಳೆಗೂ ಆವರಿಸಿಕೊಳ್ಳುತ್ತಿದೆ. ಈ ರೋಗಬಾಧಿತ ಗಿಡಗಳಲ್ಲಿ ಎಲೆಗಳು ಹಳದಿಯಾಗಿ, ಸೊರಗಿದಂತೆ ಕಾಣುತ್ತವೆ. ಉಂಗುರಾಕಾರದ ಚುಕ್ಕೆಗಳು ಕಾಣಿಸುತ್ತವೆ. ನಂತರ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ, ಹಣ್ಣುಗಳ ಗಾತ್ರ ಕೂಡ ಕಡಿಮೆಯಾಗಿ ಸಾಕಷ್ಟುನಷ್ಟಉಂಟುಮಾಡುತ್ತದೆ.
ಸ್ಟ್ರಾಬೆರಿ ಬೆಳೆದು ಭರ್ಜರಿ ಲಾಭ ಮಾಡುತ್ತಿರುವ ಚಿಕ್ಕಬಳ್ಳಾಪುರದ ರೈತ ಸತೀಶ್ ರೆಡ್ಡಿ!
ನಿರ್ವಹಣೆ
ನರ್ಸರಿಯಲ್ಲಿ ಬೆಳೆದ ಸದೃಢÜ ಸಸಿಗಳನ್ನೇ ನಾಟಿ ಮಾಡಬೇಕು. ಟೊಮಾಟೊ ಜಮೀನಿನ ಸುತ್ತ ನಾಲ್ಕು ಸಾಲು ಮೆಕ್ಕೆಜೋಳವನ್ನು ಬೆಳೆಸಬೇಕು. ಹಳದಿ ಹಾಗೂ ನೀಲಿ ಅಂಟಿನ ಟ್ರ್ಯಾಪ್ ಗಳನ್ನು ನಿಲ್ಲಿಸಬೇಕು. ಟೊಮಾಟೊ ಬೆಳೆಯ ಸುತ್ತ ಇರುವ ಕಸ ಕಡ್ಡಿ ತಗೆದು ಸ್ವಚ್ಚವಾಗಿಡಬೇಕು. ಸಸಿ ನಾಟಿಮಾಡಿದ 15, 30, 45 ದಿನಗಳ ನಂತರದಲ್ಲಿ ಕ್ರಮವಾಗಿ ಡೈಮಿಥೋಯೇಟ್, ಇಮಿಡಾಕ್ಲೋಪ್ರಿಡ್, ಮತ್ತು ಡೈಪೆಂಥಿಯುರಾನ್ ಸಿಂಪಡಿಸಬೇಕು.
ಹೂವು ಉದುರುವಿಕೆ
ಟೊಮಾಟೊ ಬೆಳೆಯ ಇಳುವರಿ ಕಡಿಮೆಯಾಗಲು ಹೂವುಗಳು ಕಾಯಿ ಆಗುವ ಮೊದಲೇ ಉದುರಿಹೋಗುವುದು ಮುಖ್ಯ ಕಾರಣವಾಗುತ್ತದೆ. ಪರಾಗಸ್ಪರ್ಶ ಕ್ರಿಯೆಯು ಮುಂಜಾನೆ ಎಂಟು ಗಂಟೆಯಿಂದ ಹನ್ನೊಂದು ಗಂಟೆಯವರೆಗೆ ನಡೆಯುತ್ತದೆ. ಈ ಹಂತದಲ್ಲಿ ಸೂಕ್ತ ವಾತಾವರಣ ಹಾಗೂ ಅಗತ್ಯ ಪೋಷಕಾಂಶ ಲಭ್ಯವಿರದಿದ್ದರೆ ಹೂವು ಉದುರುವ ಸಮಸ್ಯೆ ಉಂಟಾಗುತ್ತದೆ. ಅತಿಯಾದ ತಂಪು ಹಾಗೂ ಅತಿಯಾದ ಬಿಸಿಲು (30 ಸೆ.ಗಿಂತ ಹೆಚ್ಚು) ಹೂವು ಉದುರಲು ಕಾರಣವಾಗುತ್ತದೆ.
ನಿಯಂತ್ರಣ
ಪ್ರತಿ ಹದಿನಾರು ಟೊಮಾಟೊ ಸಾಲುಗಳಿಗೆ ಒಂದು ಸಾಲು ಆಫ್ರಿಕನ್ ಚೆಂಡು ಹೂವಿನ ಸಸಿ ನಾಟಿ ಮಾಡಿ. ಇದರಿಂದ ಹಲವು ಕೀಟ ಕಾಟ ಕಮ್ಮಿಯಾಗುವುದರ ಜೊತೆಗೆ ಪರಾಗಸ್ಪರ್ಶ ಚೆನ್ನಾಗಿ ನಡೆದು ಹೂವು ಉದುರುವಿಕೆ ಕಮ್ಮಿಯಾಗುತ್ತದೆ. ಗೊಬ್ಬರಗಳನ್ನು ಬೇಕಾಬಿಟ್ಟಿಕೊಡದೇ ಶಿಫಾರಸ್ಸಿನಂತೆ ಸಾರಜನಕ, ರಂಜಕ, ಪೊಟ್ಯಾಷ್ ರಸಗೊಬ್ಬರ ನೀಡಬೇಕು. ಹೂ ಬಿಡುವ ಹಂತದಲ್ಲಿ ಸಾಕಷ್ಟುಪ್ರಮಾಣದಲ್ಲಿ ನೀರು ಪೂರೈಸಬೇಕು, ಅದರಲ್ಲೂ ಬೇಸಿಗೆಯಲ್ಲಿ ಸಾಕಷ್ಟುನೀರು ಒದಗಿಸಬೇಕು.
35ಕ್ಕೂ ಹೆಚ್ಚು ಹೊಸ ಕೃಷಿ ಯಂತ್ರ ಸಂಶೋಧನೆ; ಕೃಷಿ ಯಂತ್ರಕರ್ತೆ ಶೈಲಜಾ ವಿಠಲ್!
ಮಲ್ಚಿಂಗ್
ಬೇಸಿಗೆಯಲ್ಲಿ ಟೊಮಾಟೊವನ್ನು ಮಲ್ಚಿಂಗ್ ವ್ಯವಸ್ಥೆಯಲ್ಲಿಯೇ ಬೆಳೆಯಬೇಕು. ತಂಪಿನಾಂಶ ಹೆಚ್ಚು ದಿನ ಉಳಿಯುವುದಲ್ಲದೇ, ಮಲ್ಚಿಂಗ್ ಶೀಟ್ ಮೇಲೆ ಬೀಳುವ ಬಿಸಿಲು ರಿಫ್ಲೆಕ್ಟ್ ಆಗಿ ಎಲೆಗಳ ಕೆಳಗೆ ಆಶ್ರಯ ಪಡೆಯುವ ಕೀಟಗಳನ್ನು ಕೊಲ್ಲುತ್ತದೆ. ಮಲ್ಚಿಂಗ್ ವ್ಯವಸ್ಥೆ ಇದ್ದರೆ ಒಳ್ಳೆಯದು. ಹಾಗೆಯೇ ಸಸಿ ನಾಟಿ ಮಾಡುವ ಮೊದಲು ಬೆಡ್ ಗೆ ಸಾಕಷ್ಟುಎರೆಹುಳು ಗೊಬ್ಬರವನ್ನು ಕೊಟ್ಟರೆ ತುಂಬಾ ಒಳ್ಳೆಯದು. ಇದರಿಂದ ಸದೃಡವಾಗಿ ಬೆಳೆಯುವ ಸಸಿಗಳು ಬಿಸಿಲಿನ ತಾಪ ತಡೆದುಕೊಂಡು ಅಧಿಕ ಇಳುವರಿ ನೀಡಬಲ್ಲವು.
ಕೊನೆಯದಾಗಿ ಬೇಸಿಗೆ ವಾತಾವರಣಕ್ಕೆ ಸೂಕ್ತವಿರುವ ತಳಿಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು.