ಸ್ಟ್ರಾಬೆರಿ ಬೆಳೆದು ಭರ್ಜರಿ ಲಾಭ ಮಾಡುತ್ತಿರುವ ಚಿಕ್ಕಬಳ್ಳಾಪುರದ ರೈತ ಸತೀಶ್ ರೆಡ್ಡಿ!

ನಿರಂತರ ಬರ, ಕುಡಿಯುವ ಹನಿ ನೀರಿಗೂ ತತ್ವಾರ, ಸಿಗುವ ಅಲ್ಪ ಪ್ರಮಾಣದ ನೀರಿನಲ್ಲಿ ವಿಷಕಾರಕ ರಾಸಾಯನಿಕಗಳಿಂದಾಗಿ ಅನಾರೋಗ್ಯ, ಇದರಿಂದಾಗಿ ಕೃಷಿಯೇ ಅವಸಾನದಲ್ಲಿರುವ ಸ್ಥಿತಿ. ಪರಿಸ್ಥಿತಿ ಇಷ್ಟುಗಂಭೀರವಾಗಿದ್ದರೂ ಪಟ್ಟು ಬಿಡದಂತೆ ನಾನಾ ಬೆಳೆ ಬೆಳೆದು ರಾಜ್ಯಕ್ಕೆ ನೀಡುತ್ತಿರುವ ಕೀರ್ತಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಲ್ಲುತ್ತದೆ.

chikkaballapur farmer earns in crore by strawberry cultivatation

- ಅಶ್ವತ್ಥನಾರಾಯಣ ಎಲ್‌.

ಜಿಲ್ಲೆಯಲ್ಲಿ ಈಗಾಗಲೇ ದ್ರಾಕ್ಷಿ, ಮಾವು ಸೇರಿದಂತೆ ನಾನಾ ತೋಟಗಾರಿಕಾ ಬೆಳೆಗಳ ಮೂಲಕ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚಿಗೆ ಡ್ರ್ಯಾಗನ್‌ ಪ್ರೂಟ್‌ ಬೆಳೆಸಿ ರಾಜ್ಯದ ಗಮನ ಸೆಳೆದಿದ್ದ ರೈತರು ಇದೀಗ ಸ್ಟ್ರಾಬೆರಿ ಹಣ್ಣು ಬೆಳೆಯುವ ಮೂಲಕ ಮತ್ತೊಂದು ಮೈಲಿಗಲ್ಲು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾವು ಮತ್ತು ಗೇರು ಬೆಳೆಗಾರರಿಗೆ ಅಗತ್ಯ ಸಲಹೆಗಳು

ಎಲ್ಲಿ ಬೆಳೆಯಲಾಗಿದೆ ಸ್ಟ್ರಾಬೆರಿ?

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 7ಕ್ಕೆ ಹೊಂದಿಕೊಂಡಿರುವ ವರ್ಲಕೊಂಡ ಗ್ರಾಮದ ಸಮೀಪ ಸತೀಶ್‌ಕುಮಾರ್‌ ರೆಡ್ಡಿ ಎಂಬ ರೈತರೊಬ್ಬರು ಒಂದು ಎಕರೆ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆ ಬೆಳೆದಿದ್ದಾರೆ. ಹನಿ ನೀರಾವರಿ ಮೂಲಕ ಬೆಳೆದಿರುವ ಸ್ಟ್ರಾಬೆರಿಯಿಂದ ಉತ್ತಮ ಕಡಿಮೆ ನೀರಿನೊಂದಿಗೆ ಉತ್ತಮ ಲಾಭ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಸ್ಟ್ರಾಬೆರಿ 200ಗ್ರಾಂ.ಗೆ 35 ರಿಂದ 40 ರು.ಗೆ ಮಾರಾಟವಾಗುತ್ತಿದೆ. ಇದು ಪುಣೆಯಿಂದ ಆಮದಾದದ್ದು. ಈ ಹಣ್ಣು ಕಿತ್ತು ಮಾರುಕಟ್ಟೆಗೆ ಬರುವಾಗ ಮೂರು ದಿನ ಆಗಿರುತ್ತದೆ. ಜೊತೆಗೆ ಶೇ.20 ರಿಂದ ಶೇ.30 ರಷ್ಟುಡ್ಯಾಮೇಜ್‌ ಆಗಿರುತ್ತದೆ. ಆದರೆ ನಾವು 200 ಗ್ರಾಂ. ಹಣ್ಣನ್ನು 45 ರು. ನಿಂದ 50 ರು.ವರೆಗೆ ಮಾರುತ್ತೇವೆ. ಬೆಳಗ್ಗೆ 8.30ಕ್ಕೆ ಕಟಾವು ಮಾಡಿದ ಹಣ್ಣು ಹತ್ತೂವರೆಗೆಲ್ಲ ಹೊಸಕೋಟೆ ಸೇರುತ್ತದೆ. ಅಂದರೆ ಗಿಡದಿಂದ ಕಿತ್ತ 3 ಗಂಟೆಯೊಳಗೆ ಇದು ಮಾರುಕಟ್ಟೆತಲುಪುತ್ತೆ. ಡ್ಯಾಮೇಜ್‌ ಪ್ರಮಾಣ ಶೇ.5 ರಷ್ಟುಮಾತ್ರ. ಹಾಗಾಗಿ ಬೆಲೆ ತುಸು ಹೆಚ್ಚು.- ಸತೀಶ್‌ ರೆಡ್ಡಿ, ಸ್ಟ್ರಾಬೆರಿ ಕೃಷಿಕc

ಮಾರುಕಟ್ಟೆಹೇಗೆ?

ಸತೀಶ್‌ಕುಮಾರ್‌ ರೆಡ್ಡಿ ಒಂದು ಎಕರೆ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದಿದ್ದು, 200 ಗ್ರಾಂ ತೂಕದ ಸಾವಿರ ಪೆಟ್ಟಿಗೆಗಳು ದಿನ ಬಿಟ್ಟು ದಿನ ಮಾರುಕಟ್ಟೆಗೆ ಬರುತ್ತಿದೆ. 200 ಗ್ರಾಂ ಪೆಟ್ಟಿಗೆಯನ್ನು 50 ರುಪಾಯಿಗೆ ಮಾರಾಟ ಮಾಡುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಸ್ಟ್ರಾಬೆರಿಗಾಗಿಯೇ ಇರುವ ಪ್ರತ್ಯೇಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ದಿನ ಬಿಟ್ಟು ದಿನ ಸುಮಾರು 50 ಸಾವಿರ ರು. ಆದಾಯ ಬರುತ್ತಿದ್ದು, ಈ ರೀತಿಯ ಆದಾಯ ನಿರಂತರ ನಾಲ್ಕು ತಿಂಗಳ ಕಾಲ ಸಿಗಲಿದೆ ಎನ್ನುತ್ತಾರೆ ರೈತ ಸತೀಶ್‌. ಸ್ಟ್ರಾಬೆರಿ ಪೈರು ನಾಟಿ ಮಾಡಿದ ಒಂದೇ ತಿಂಗಳಲ್ಲಿ ಬೆಳೆ ಆರಂಭವಾಗಲಿದ್ದು, ಸತತ ನಾಲ್ಕು ತಿಂಗಳ ಕಾಲ ಫಸಲು ಕೈಗೆ ಸಿಗಲಿದೆ. ಅಲ್ಲದೆ ತೋಟಕ್ಕೆ ಹನಿ ನೀರಾವರಿ ಅಳವಡಿಸಿರುವ ಕಾರಣ ಹೆಚ್ಚಿನ ನೀರಿನ ಅಗತ್ಯವೂ ಇಲ್ಲದಿರುವುದರಿಂದ ರೈತರಿಗೆ ಹೆಚ್ಚು ಲಾಭ ಸಿಗಲಿದೆ.

ಕೀಟನಾಶಕಗಳ ವೆಚ್ಚ ಹೆಚ್ಚು

ಸ್ಟ್ರಾಬೆರಿ ಬೆಳೆಯಲು ಫಲವತ್ತಾದ ಭೂಮಿ ಮತ್ತು ಉತ್ತಮ ಗೊಬ್ಬರ ಇದ್ದರೆ ಸಾಕು, ಆದರೆ ಜಿಲ್ಲೆಯಲ್ಲಿ ಹೆಚ್ಚು ಉಷ್ಣಾಂಶದ ಜೊತೆಗೆ ಬಿಸಿಲೂ ಹೆಚ್ಚಾಗಿರುವ ಕಾರಣ ಸ್ಟ್ರಾಬೆರಿ ಬೆಳೆಗೆ ಹೆಚ್ಚು ರೋಗಗಳು ಆವರಿಸುವ ಆತಂಕವಿದೆ. ಹಾಗಾಗಿ ಕೀಟನಾಶಕಗಳನ್ನು ಹೆಚ್ಚಾಗಿ ಬಳಸಬೇಕಿದ್ದು, ಇದಕ್ಕೆ ವೆಚ್ಚವೂ ದುಬಾರಿಯಾಗಲಿದೆ.

ಕೀಟನಾಶಕ ಹೊರತುಪಡಿಸಿದರೆ ಹಣ್ಣು ಕಟಾವು ಮಾಡಲು ಆಳುಗಳಿಗೆ ಮಾತ್ರ ವೆಚ್ಚವಾಗಲಿದ್ದು, ಕಡಿಮೆ ವೆಚ್ಚದಲ್ಲಿ ದೀರ್ಘಾವಧಿಯಲ್ಲಿ ಹೆಚ್ಚು ಲಾಭ ಸಿಗುವ ಬೆಳೆಯಾಗಿರುವುದರಿಂದ ಬಯಲು ಸೀಮೆಯಲ್ಲಿ ಸ್ಟ್ರಾಬೆರಿ ಬೆಳೆಯುವುದು ರೈತರಿಗೆ ಹೊರೆಯಲ್ಲ ಎಂಬುದು ರೈತನ ಅಭಿಮತವಾಗಿದೆ.

ಸಾಗರದ ಹಿಂಡೂ ಮನೆ ತೋಟದಲ್ಲಿ ದೇಶ ವಿದೇಶದ ಹಣ್ಣುಗಳು!

ಒಟ್ಟಿನಲ್ಲಿ ತರಕಾರಿ, ಹಣ್ಣು ಮತ್ತು ಹಾಲಿನ ಮೂಲಕ ರಾಜ್ಯದಲ್ಲಿಯೇ ಖ್ಯಾತಿ ಪಡೆದಿರುವ ಜಿಲ್ಲೆ ಮತ್ತೊಂದು ಹೆಜ್ಜೆ ಮುಂದಿಟ್ಟು ಸ್ಟ್ರಾಬೆರಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟುಹಣ್ಣಿನ ಬೆಳೆಗಳು ಜಿಲ್ಲೆಯಲ್ಲಿ ಬೆಳೆಯುವ ಎಲ್ಲ ಸೂಚನೆಗಳಿವೆ.

Latest Videos
Follow Us:
Download App:
  • android
  • ios