ಶ್ರೀರಕ್ಷ ರಾವ್‌ ಪುನರೂರು

ಆಳ್ವಾಸ್‌ ಕಾಲೇಜು, ಮೂಡಬಿದಿರೆ

ತಕ್ಷಣ ನಮ್ಮೂರಿನ ಭದ್ರಕಾಳಿಯನ್ನ ನೆನಪಿಸೊಹಾಗೆ ದೊಡ್ಡಕಣ್ಣು ಬಿಟ್ಟು ಹೋ ಹೀಗ ಕಥೆ ನನಗೆ ಗೊತ್ತಿಲ್ವಾ ನಮ್ಮ ದೇವರ ಸತ್ಯ ಅಂತ ಮೂಗುಮುರಿದಳು ಅಮ್ಮಾ. ಈಗ ಇರೋ ಮೊಬೈಲೇ ನಿನಗೆ ಬೇಕದಷ್ಟುಆಯ್ತು. ಈಗಿರೋ ಮೊಬೈಲ್‌ ಹಿಡಿದುಕೊಂಡರೆ ಎದುರುಗಡೆ ದೆವ್ವ ಬಂದು ನಿಂತರು, ಪಕ್ಕದಲ್ಲಿ ಬೆಡಿ, ಬೆಡಿ ( ದೊಡ್ಡ ಗಾತ್ರದ ಪಟಾಕಿ) ಬಿಟ್ಟರು ಮೈಮೇಲೆ ಗೋಚರ ಇರಲ್ಲ ನಿನಗೆ ಇನ್ನು ಹೊಸಮೊಬೈಲ್‌ ಬೇರೆ ಹೋಗೆ ಕೊಡ್ಸೊದೆ ಇಲ್ಲ ಅಂತ ಕಡ್ಡಿ ಮುರಿದ ಹಾಗೆ ಹೇಳಿಬಿಟ್ಟರು.

ಎಷ್ಟೇ ಆದರು ನಾನು ಅಪ್ಪನ ಮುದ್ದಿನ ಮಗಳು. ಹಾಗಾಗಿ ಅವರ ಬಳಿ ಕಲ್ಲೂ ಕರಗುವ ರೀತಿಯಲ್ಲಿ ನಾಲ್ಕು ಮಾತನಾಡಿದೆ ಯಾಕೋ ಅಪ್ಪ ಬಗ್ಗುವ ರೀತಿ ಕಾಣಲಿಲ್ಲ. ಕೊನೆಗೆ ಅಪ್ಪಾ ಈ ಸೆಮ್‌ ಅಲ್ಲಿ ಫೆäಟೋಗ್ರಾಫಿ ಅಂತ ಒಂದು ಸಬ್ಜೆಕ್ಟ್ ಇದೆ ಅದರಲ್ಲಿ ಫೆäಟೋ ತೆಗಿಲಿಕೆ ಇರುತ್ತೆ. ನೋಡಿ ಅಪ್ಪಾ ಈ ಮೊಬೈಲ್‌ ಕ್ಲಾರಿಟಿನೇ ಇಲ್ಲ ಅಂತ ಬ್ಲರ್‌ ಆಗಿರೊ ಫೋಟೋನ ತೋರಿಸಿದೆ. ಈ ಮೊಬೈಲ್‌ನಲ್ಲಿ ಫೆäಟೋ ತೆಗಿಲಿಕ್ಕೆ ಆಗಲ್ಲ, ತೆಗೆದರು ನನಗೆ ಕಡಿಮೆ ಮಾರ್ಕ್ಸ್‌ ಬರುತ್ತೆ ಅಂತ ನನ್ನ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿಯೇ ಬಿಟ್ಟೆ. ಎರಡು ಹನಿ ಮೊಸಳೆ ಕಣ್ಣೀರು ಹಾಕಿದೆ. ಇದರ ನಡುವೆ ಈ ನಾಟಕಕ್ಕೇನು ಕಮ್ಮಿ ಇಲ್ಲ ಅನ್ನೋ ಅಮ್ಮನ ಚುಚ್ಚುಮಾತು ಬೇರೆ. ಆದರೆ ಯಾಕೋ ಈ ಬಾರಿ ಅಪ್ಪ ನನ್ನ ಬ್ರಹ್ಮಾಸ್ತ್ರಕ್ಕೆ ಬಲಿಯಾಗಲೇ ಇಲ್ಲ.

ಕನ್ಫ್ಯೂಷನ್ನೇ ಜಾಸ್ತಿ, ಸೊಲ್ಯೂಷನ್ನು ನಾಸ್ತಿ;ಗರ್ಲ್ ಫ್ರೆಂಡಾ, ಬೆಸ್ಟ್‌ ಫ್ರೆಂಡಾ!

ಕೊನೆಗೆ ಏನು ಮಾಡುವುದೆಂದು ಗೊತ್ತಗದೆ ಇಂಗುತಿಂದ ಮಂಗನ ತರ ಮುಖ ಮಾಡಿ ಕೂತೆ ಹಸಿವಾದರು ಮೊಬೈಲಿಗಾಗಿ ಊಟ ಬಿಟ್ಟೆ. ಕೊನೆಗೆ ಮಾತು ಬಿಟ್ಟೆ. ಅಪ್ಪನಿಗೆ ಏನು ಅನಿಸಿತೋ ಏನೊ ಹೋಗಲಿ ಬಿಡೆ ಮೊಬೈಲ್‌ ಕೊಡಿಸೋಣ ಅವಳ ಓದಿಗೆ ಬೇಕಂತಲ್ಲ ಅಂದರು. ಒಳಗಿನಿಂದ ಬಿರಬಿರನೇ ಬಂದ ಅಮ್ಮ ನೀವುಂಟು ನಿಮ್ಮ ಮಗಳುಂಟು ನನ್ನೇನು ಕೇಳೋದು ಅಂತ ಮೂತಿ ತಿವಿದರು. ಅಬ್ಬಾ ಅಂತೂ ನನ್ನ ನಾಟಕಕ್ಕೆ ಮನಸೋತ ಅಪ್ಪಾ ಮೊಬೈಲ್‌ ಕೊಡಿಸಿದರು. ಈ ಹೊಸ ಮೊಬೈಲ್‌ ಬೇಕು ಅಂತ ಹಠಮಾಡಿದರ ಹಿಂದಿದ್ದ ಕಾರಣ ಫೆäಟೋಗ್ರಾಫಿ ಸಬ್ಜೆಕ್ಟ್ ಇದೆ ಅಂತ ಖಂಡಿತವಾಗಿಯೂ ಅಲ್ಲವೇ ಅಲ್ಲಾ.

ಸಖತ್ ಮಜಾ ಕೊಡ್ತವ್ರೆ ಈ ಟಿಕ್‌ಟಾಕ್ ಸೆಲಬ್ರಿಟಿಗಳು!

ನನಗೆ ಮೊದಲಿನಿಂದಲೂ ಟಿಕ್‌ ಟಾಕ್‌ ಅಂದರೆ ತುಂಬಾ ಕ್ರೇಜ್‌. ಮತ್ತೆ ನನ್ನ ಗೆಳೆಯ ಗೆಳತಿಯರು ಟಿಕ್‌ ಟಾಕ್‌ ಅಲ್ಲಿ ಮಾಡೊ ವಿವಿಧ ಬಗೆಯ ವಿಡಿಯೋನ ನೋಡಿ ನನಗು ಟಿಕ್‌ ಟಾಕ್‌ ಅಲ್ಲಿ ವೀಡಿಯೋ ಮಾಡಬೆಕೆಂಬ ಆಸೆ ಇತ್ತು. ಆದರೆ ನನ್ನ ಹಳೆ ಮೊಬೈಲ್‌ ಸಣ್ಣದು ಮತ್ತು ಅಷ್ಟೊಂದು ಕ್ಲಾರಿಟಿನು ಇರಲಿಲ್ಲ. ಹಾಗಾಗಿಯೆ ಹೊಸಮೊಬೈಲ್‌ ಬೇಕೆ ಬೇಕೆಂದು ಹಠ ಹಿಡಿದದ್ದು. ಮೊಬೈಲ್‌ ಸಿಕ್ಕಿದ ಮಾರನೆ ದಿನವೇ ಪ್ಲೇಸ್ಟೋರ್‌ಗೆ ಹೋಗಿ ಟಿಕ್‌ಟಾಕ್‌ ಇನ್‌ಸ್ಟಾಲ್‌ ಮಾಡಿಕೊಂಡು ಟಿಕ್‌ ಟಾಕ್‌ ಸೆಲೆಬ್ರೇಟಿಗಳನ್ನ ಫಾಲೋ ಮಾಡಿದೆ. ಕೆಲವು ಪಧ್ಯಗಳಿಗೆ ನಾನು ಕೈ, ಬಾಯಿ, ಕಣ್ಣು, ಸೊಂಟ, ಕತ್ತು ತಿರುಗಿಸೋಕೆ ಪ್ರಾರಂಭಿಸಿದೆ. ನನ್ನ ಕೆಲವು ಟಿಕ್‌ಟಾಕ್‌ ವೀಡಿಯೋಗಳಿಗೆ ನಮ್ಮನೆ ಸೀಟಿ(ಬೆಕ್ಕು) ಜೊತೆಆಯ್ತು. ಕೊನೆಗೆ ಆಗಷ್ಟೆಟ್ರೆಂಡ್‌ನಲ್ಲಿದ್ದ ಶಾನೆ ಟಾಪ್‌ ಆಗವ್ಳೆ ನಮ್‌್ಮ ಹುಡುಗಿ ಅನ್ನೊ ಪದ್ಯಕ್ಕೆ ಕೈ, ಬಾಯಿ, ಕತ್ತು ಕಣ್ಣು ತಿರುಗ್ಸಿ, ಮುರುಗ್ಸಿ ಮಾಡಿದ್ದ ವೀಡಿಯೋವನ್ನ ವಾಟ್ಸಾಪ್‌ ಸ್ಟೇಟಸ್‌ಗೆ ಹಾಕಿದೆ. ಅಷ್ಟರಲ್ಲಾಗಲೆ ಯುವರ್‌ ಡೈಲಿ ಡಾಟ ಕನ್‌ಸ್ಯೂಮ್‌್ಡ 100% ಅನ್ನೋ ಮೆಸೇಜು ವಾಟ್ಸಾಪ್‌ ಪರದೆಮೇಲೆ ಮೂಡಿತು. ಟಿಕ್‌ಟಾಕ್‌ ಮಾಡಿದ ಖುಷಿಯಲ್ಲೇ ನಿದ್ದೆ ಹೋದೆ. ಬೆಳಿಗ್ಗೆ ಎದ್ದು ಮೊಬೈಲ್‌ ಡಾಟಾ ಆನ್‌ ಮಾಡಿ ವಾಟ್ಸಾಪ್‌ ನೋಡಿದರೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಗಿ ಜೀವ ಅಲ್ಲಾಡಿಹೋಯಿತು. ಯಾಕಂದ್ರೆ ನಾನು ಮಾಡಿದ ಟಿಕ್‌ ಟಾಕ್‌ ವೀಡಿಯೋದಿಂದ ಕಾಲೇಜು ವಾಟ್ಸ್ಯಾಪ್‌ ಗ್ರೂಪ್‌, ಫ್ರೆಂಡ್ಸ್‌ ಗ್ರೂಪ್‌ ಗಳಲ್ಲಿ ಫುಲ್‌ ಟ್ರೋಲ್‌ ಆಗಿಹೋಗಿದ್ದೆ.

ಲಾಸ್ಟ್‌ಬೆಂಚ್‌ಗೆ ಜೀವ ಬಂದರೆ ಏನೇನು ಹೇಳಬಹುದು?

ಕೆಲವು ಫ್ರೆಂಡ್ಸ್‌ ನಾನು ಹಾಕಿದ್ದ ಸ್ಟೇಟಸ್‌ ನ ಕದ್ದು ಅವ್ರ ಸ್ಟೇಟಸ್‌ ಅಲ್ಲಿ ಹಾಕಿ ಯೆಸ್‌ ನಮ್‌ ಹುಡ್ಗಿ ಫುಲ್‌ ಟಾಪ್‌ ಅನ್ನೋ ಕ್ಯಾಪ್ಶನ್‌ ಕೊಟ್ಟಿದ್ದರು. ಕೆಲವರು ಟಿಕ್‌-ಟಾಕ್‌ ಕ್ವೀನ್‌, ಅಭಿನಯ ಶಾರದೆ ಅಂತೆಲ್ಲಾ ಹಾಕಿ ನನ್ನ ಸಖತ್ತಾಗಿಯೇ ಕಿಚಾಯಿಸಿದರು. ನಾನು ಕಾಲೇಜಿಗೆ ಬರುವುದನ್ನೇ ಕಾಯುತ್ತಿದ್ದ ಹುಡುಗರು ನೋಡ್ರೋ ಟಾಪ್‌ ಹುಡ್ಗಿ ಬರುತ್ತಿದ್ದಾಳೆ ಅಂತ ನಾನು ಕಣ್ಣು, ಕತ್ತು, ಕೈ ತಿರುಗಿಸಿದಹಾಗೆ ಅಭಿನಯಿಸಿ ಗೋಳ್‌ ಹೊಯ್ಯುಕ್ಕೊಂಡ್ರು.

ಅವತ್ತು ಬೇರೆ ಮೀಡಿಯಾ ಮ್ಯಾನೆಜ್‌ಮೆಂಟ್‌ ಅಸೈನ್‌ಮೆಂಟ್‌ ಬೇರೆ ಸಬ್‌ ಮಿಷನ್‌ ಇತ್ತು. ಆದರೆ ಟಿಕ್‌ಟಾಕ್‌ ರಾದ್ಧಾಂತದಲ್ಲಿ ಅಸೈನ್‌ಮೆಂಟ್‌ ಪೇಪರ್‌ ತರಲು ಮರೆತೇ ಹೋದೆ. ಆದ್ರೆ ಸರ್‌ ನಿನಗೆ ಟಿಕ್‌ ಟಾಕ್‌ ಮಾಡಲ್ಲಿಕ್ಕೆ ನೆನಪು ಇರುತ್ತೆ, ಪುರುಸೊತ್ತು ಇರುತ್ತೆ ಅಸೈನ್‌ ಮೆಂಟ್‌ ಸಬ್‌ಮಿಷನ್‌ ಮಾಡಲಿಕ್ಕೆ ನೆನಪಿರಲ್ಲ ಅಲ್ವಾ ಐದು ಮಾರ್ಕ್ಸ್‌ ಮೈನಸ್‌ ಅಚಿದ್ರು. ಆಗಷ್ಟೆಮೋಡ ಕವಿದ ವಾತಾವರಣದಂತಿದ್ದ ಮನಸ್ಸಿಗೆ ಬರಸಿಡಿಲಿನಂತೆ ಬಡಿದ ಮಾತು ಕಣ್ಣಲ್ಲೇ ಮಳೆಯನ್ನು ತರಿಸಿತು. ಟಿಕ್‌ಟಾಕ್‌ ಕೆರಿಯರ್‌ ಪ್ರಾರಂಭ ಆಗೋ ಮೊದಲೆ ನೆಲಕಚ್ಚಿ ಬಿಟ್ಟಿತು. ಮನೆಗೆ ಹೋದೋಳೆ ಟಿಕ್‌ಟಾಕ್‌ ಗೆ ಒಂದಷ್ಟುಶಾಪ ಹಾಕಿ ಟಿಕ್‌ಟಾಕ್‌ ಅನ್‌ಇನ್‌ಸ್ಟಾಲ್‌ ಮಾಡಿಬಿಟ್ಟೆ. ಇನ್ನೆಂದಿಗೂ ಟಿಕ್‌ಟಾಕ್‌ ಮಾಡೋ ದುಸ್ಸಾಹಸಕ್ಕೆ ಕೈ ಹಾಕಲಾರೆ ಅನ್ನೋ ಶಪಥ ಮಾಡಿಯೇ ಬಿಟ್ಟೆ