ಆ ಹುಲಿ ಕೊನೆಗೂ ಗರ್ಜಿಸಿತು: ಓಶೋ ಹೇಳಿದ ಕಥೆ!
ಇದು ಓಶೋ ಹೇಳಿದ ಒಂದು ಕತೆ. ಅವರಿಗೆ ಈ ಕತೆ ತಿಳಿದದ್ದು ರಾಮಕೃಷ್ಣ ಪರಮಹಂಸರಿಂದ.
ಆ ಹುಲಿಮರಿ ಬಹಳ ಬೇಗ ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾಯ್ತು. ಒಂದು ಕಾಡು ಕುರಿಗಳ ಸಮೂಹ ಆ ಮರಿಯನ್ನು ತಮ್ಮ ಗುಂಪಿಗೆ ಸೇರಿಸಿಕೊಂಡಿತು. ಹುಲಿ ಮರಿಯೂ ಕುರಿಗಳೊಂದಿಗೆ ಸೇರಿ ಕುರಿಗಳಂತೆಯೇ ಆಡಲಾರಂಭಿಸಿತು. ಆ ಹಿಂಡಿನ ಜೊತೆಗೆ ಸೇರಿ ಹುಲ್ಲು ತಿನ್ನುತ್ತಿತ್ತು. ಕುರಿಗಳಂತೇ ಕೂಗುತ್ತಿತ್ತು. ತಾನೂ ಒಂದು ಕುರಿಯೆಂದೇ ತಿಳಿದು ಕುರಿ ಏನು ಮಾಡುತ್ತೋ ಹಾಗೆಲ್ಲಾ ಇದೂ ಮಾಡುತ್ತಿತ್ತು.
ಬೆಳೆಗೆ ನೀರು, ಪೋಷಕಾಂಶ ಒದಗಿಸುವ ಬಯೋಚಾರ್ ತಯಾರಿಸೋದು ಹೇಗೆ?
ಒಮ್ಮೆ ಆ ಕಾಡಿನಲ್ಲಿದ್ದ ವಯಸ್ಸಾದ ಹುಲಿ ಬಯಲಲ್ಲಿ ಅಡ್ಡಾಡುತ್ತಾ ಕುರಿಯ ಮೇಲೆರಗಲು ಹೊಂಚು ಹಾಕುತ್ತಿತ್ತು. ಏನಾಶ್ಚರ್ಯ! ಈ ಮೊದಲೇ ಹುಲಿಯೊಂದು ಆ ಹಿಂಡಿನೊಂದಿಗೆ ಸೇರಿಕೊಂಡಿದೆ. ಆ ಹುಲಿ ಕುರಿಯೊಂದನ್ನು ಬಲಿ ಹಾಕುತ್ತೆ ಅಂತ ನೋಡಿದರೆ, ಊಂ ಇಲ್ಲ. ಇನ್ನೂ ಹತ್ತಿರ ಹೋಗಿ ನೋಡಿತು. ಅರೆ, ಹುಲಿ ಕುರಿಯಂತೆ ಬಯಲಲ್ಲಿ ಹುಲ್ಲು ಮೇಯುತ್ತಿದೆ. ಈಗ ಹುಲಿಗೆ ತಡೆದುಕೊಳ್ಳಲಾಗಲಿಲ್ಲ. ನೇರ ಆ ಹಿಂಡಿಗೆ ಹೋಗಿ ಆ ಹುಲಿಯನ್ನು ಅಡ್ಡ ಹಾಕಿತು. ಆ ಹುಲಿಯೋ ಕುರಿಯೊಂದು ಹುಲಿಯನ್ನು ಕಂಡು ಹೇಗೆ ಪ್ರತಿಕ್ರಿಯಿಸುತ್ತೋ ಆ ಥರ ಕಿರುಚಾಡತೊಡಗಿತು. ಕೊನೆಗೆ ಆ ಹುಲಿಯನ್ನು ವಯಸ್ಕ ಹುಲಿ ಒಂದು ಕೆರೆಯ ಬಳಿ ತಂದು ನಿಲ್ಲಿಸಿತು.
ಕೆರೆ ನೀರಲ್ಲಿ ಈ ಹುಲಿ ಮರಿ ಮುಖ ನೋಡಿದ್ರೆ ಥೇಟ್ ಹುಲಿಯದೇ ಮುಖ. ಅರೆ ಇದೇನಿದು, ಮ್ಯಾಜಿಕ್, ಕುರಿಯಾದ ತಾನು ಕೊಳದ ಬಳಿ ಬಂದ ಕೂಡಲೇ ಹುಲಿ ಹೇಗಾದೆ.. ಅಂತಲೇ ಅದರ ಯೋಚನೆ ಸಾಗುತ್ತಿತ್ತು. ಕೊನೆಗೆ ಆ ವಯಸ್ಕ ಹುಲಿ ಈ ಯುವ ಹುಲಿಯನ್ನು ತನ್ನ ಗುಹೆಗೆ ಕರೆದುಕೊಂಡು ಹೋಯಿತು. ಆಗ ಈ ಹುಲಿಗೆ ಕೊಂಚ ಧೈರ್ಯ ಬಂದಿತ್ತು. ಗುಹೆಯಲ್ಲಿದ್ದ ಮಾಂಸವನ್ನು ಇದರ ಮುಂದಿಟ್ಟಿತು. ಆರಂಭದಲ್ಲಿ ಅನುಮಾನಿಸಿದ ಹುಲಿ ಮಾಂಸವನ್ನು ಅಘ್ರಾಣಿಸಿತು. ನಿಧಾನಕ್ಕೆ ಮಾಂಸದ ವಾಸನೆ ರುಚಿ ಮೂಗಿಗೆ ಹತ್ತಿತು. ಅಷ್ಟೊತ್ತಿಗೆ ಗಂಟಲಿಂದ ಅಚಾನಕ್ ಆಗಿ ಘರ್ಜನೆಯೊಂದು ಹೊರಹೊಮ್ಮಿತು. ಕುರಿಗಳೊಂದಿಗೆ ಎಂದೂ ಯಾವತ್ತೂ ಹಾಗೆ ಘರ್ಜಿಸದ ಹುಲಿ ಈಗ ಮಾಂಸದ ವಾಸನೆ ಹತ್ತಿದ ಕೂಡಲೇ ಘರ್ಜಿಸಿದ್ದು ಆ ದೊಡ್ಡ ಹುಲಿಯಲ್ಲಿ ಕೊಂಚವೂ ಅಚ್ಚರಿ ತರಿಸಲಿಲ್ಲ.
ಪುತ್ತೂರಿನಲ್ಲಿ ಶ್ರೀಗಂಧಕ್ಕಿಂತಲೂ ಲಾಭದಾಯಕ ಈ ಅಗರ್‌ವುಡ್!
ಇಷ್ಟುಹೇಳಿ ಓಶೋ ಕತೆ ಮುಗಿಸುತ್ತಾರೆ. ಈಗ ನಾವು ಯೋಚನೆ ಮಾಡಬೇಕಿರುವುದು- ನಾವು ಕುರಿಯೊಂದಿಗಿರುವ ಹುಲಿ ಹೌದೋ, ಅಲ್ಲವೋ ಅನ್ನೋದನ್ನು.