ದೇವರ ಫೋಟೋ ನೋಡ್ತೀವೋ ಇಲ್ವೋ ಆದ್ರೆ ಕನ್ನಡಿ ಮೇಲಿನ ಲಿಪ್‌ಸ್ಟಿಕ್ ಅಂತೂ ನೋಡ್ತೀವಿ!
ಹಾಸ್ಟೆಲ್ ಜೀವನ ನೋಡುವವರು ಭಾವಿಸುವಷ್ಟುಸುಲಭವಾಗಿರುವುದಿಲ್ಲ. ಹಾಗಂತ ಕಷ್ಟದ ಜೀವನ ಅಂತಲ್ಲ. ಈ ಎರಡರ ನಡುವಿನ ಸಂಕೀರ್ಣ ಪರಿಸ್ಥಿತಿ.
ನಮ್ಮದೊಂದು ಪುಟ್ಟಕೊಠಡಿ. ಅದರಲ್ಲಿ ಹದಿಮೂರು ವಿಚಿತ್ರ ಹಾಗೂ ವಿಶಿಷ್ಟಮನಸ್ಸುಗಳು. ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯುತ್ತೆ ಅನ್ನೋ ಹಾಗೆ. ಒಬ್ಬರು ಪೂರ್ವ ಅಂದರೆ ಇನ್ನೊಬ್ಬರು ಪಶ್ಚಿಮ ಎನ್ನುವಷ್ಟುವಿರುದ್ಧ ಗುಣದವರು. ಈ ಎರಡು ಮನಸ್ಥಿತಿ ಗಳ ನಡುವೆ ಸಿಲುಕಿರುವ ನಮ್ಮ ಪಾಡು ಊಹಿಸಲು ಸಾದ್ಯವಿಲ್ಲ.
ಒಂದು ವಿಡಿಯೋ ಅವಾಂತರ; ನನ್ನ ಟಿಕ್‌ಟಾಕ್ ಸ್ಟೋರಿ!
ಬೆಳಗಾಗೆದ್ದರೆ ದೇವರ ಫೋಟೋವನ್ನು ನೋಡುತ್ತೇವೊ ಇಲ್ಲವೋ ಗೊತ್ತಿಲ್ಲ. ಆದರೆ ಗೋಡೆಯ ಮೇಲೆ ಅಂಟಿರುವ ಕಲರ್ ಕಲರ್ ಲಿಪ್‌ಸ್ಟಿಕ್ ಬಣ್ಣಗಳನ್ನಂತೂ ನೋಡುತ್ತೇವೆ. ಗೋಡೆಗೆ ನೇತು ಹಾಕಿರುವ ಕನ್ನಡಿಯ ಸುತ್ತಲೂ ಬರೀ ಲಿಪ್‌ಸ್ಟಿಕ್ ಮಾರ್ಕ್ಗಳೇ. ಅಂಗಡಿಯಲ್ಲಿ ಸಿಗುವ ಎಲ್ಲಾ ಕಲರ್ ಗಳೂ ನಮ್ಮ ಗೋಡೆಯ ಮೇಲೆ ಕಾಣಿಸಿಗುತ್ತವೆ. ಹಾಗಂತ ಇದು ನಮ್ಮ ಕೊಡುಗೆ ಮಾತ್ರವಲ್ಲ, ನಮ್ಮ ಸೀನಿಯರ್ಸ್ ಗಳ ಕೊಡುಗೆಯು ಇದೆ. ಅದರ ಜೊತೆಗೆ ಲಿಪ್‌ಸ್ಟಿಕ್ ಬಣ್ಣಗಳಿಗೆ ದೃಷ್ಟಿಯಾಗದಂತೆ ತಡೆಯಲು ಮಧ್ಯ ಮಧ್ಯದಲ್ಲಿ ಕಾಡಿಗೆಯ ಬೊಟ್ಟುಗಳು.
ಹೆಣ್ಣು ಮಕ್ಕಳು ಎಂದೂ ಒಂದೇ ವಸ್ತುವಿಗೆ ತೃಪ್ತಿ ಪಟ್ಟವರಲ್ಲ. ಹಾಗೆಯೇ ಅದು ಲಿಪ್‌ಸ್ಟಿಕ್ ವಿಷಯದಲ್ಲಂತೂ ಇನ್ನೂ ಹೆಚ್ಚು. ಒಬ್ಬೊಬ್ಬರ ಬಳಿ ಹೆಚ್ಚು ಕಡಿಮೆ ಎಂದರೆ ನಾಲ್ಕರಿಂದ ಐದು ಕಲರ್‌ಗಳಿವೆ. ಹಾಗೆಯೇ ಹದಿಮೂರು ಜನರ ಬಳಿಯದ್ದು ಸೇರಿದರೇ ಒಂದು ಆಂಗಡಿಯನ್ನೇ ಇಡುವಷ್ಟುಲಿಪ್‌ಸ್ಟಿಕ್‌ಗಳಾಗುತ್ತವೆ. ಹೀಗಿರುವಾಗ ದಿನಕ್ಕೆ ಹದಿಮೂರು ಬಣ್ಣಗಳಂತೆ ವರ್ಷಕ್ಕೆ ಅದೆಷ್ಟುಬಣ್ಣಗಳು.
ಕನ್ಫ್ಯೂಷನ್ನೇ ಜಾಸ್ತಿ, ಸೊಲ್ಯೂಷನ್ನು ನಾಸ್ತಿ;ಗರ್ಲ್ ಫ್ರೆಂಡಾ, ಬೆಸ್ಟ್ ಫ್ರೆಂಡಾ!
ಈ ಹುಡುಗಿಯರು ತಮ್ಮ ಬ್ಯುಸಿ ಓಡಾಟಗಳಲ್ಲಿ ತಮ್ಮ ಹೆಚ್ಚಾಗಿರುವ ಲಿಪ್‌ಸ್ಟಿಕ್‌ಗಳಿಗೆ ಗೋಡೆಯನ್ನೇ ಟಿಶ್ಯೂ ಪೇಪರ್‌ಗಳಾಗಿ ಬಳಸಿಕೊಳ್ಳುತ್ತಾರೆ. ಅಲ್ಲದೇ ಅದನ್ನು ಹಚ್ಚುವಾಗ ಅದರ ಮೇಲಿನ ಪ್ರೀತಿಯೋ, ದುರಾಸೆಯೋ ನನಗೆ ಗೊತ್ತಿಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ಮೆತ್ತಿಕೊಳ್ಳುತ್ತಾರೆ. ನಂತರ ಹೆಚ್ಚಾಯಿತು ಎಂದು ಕೈಯಿಂದ ಒರೆಸಿಕೊಳ್ಳುತ್ತಾರೆ. ನಂತರ ಅದನ್ನು ಡಿಸೈನ್ ಡಿಸೈನ್ ಆಗಿ ಗೋಡೆಯ ಮೇಲೆ ಒರೆಸುತ್ತಾರೆ. ಇದು ಗೋಡೆಯ ಮೇಲೆ ನೋಡಲು ಕೆಟ್ಟದಾಗಿ ಕಂಡರೂ ಬಹುಶಃ ಮುಂಬರುವ ಹುಡುಗಿಯರಿಗೆ ತಮ್ಮ ಲಿಪ್‌ಸ್ಟಿಕ್ ಕಲರ್ ಆಯ್ಕೆ ಮಾಡಿಕೊಳ್ಳಲು ಸಹಾಯವಾಗಬಹುದೋ ಏನೋ ನನಗೆ ತಿಳಿಯದು.
ಅಮೃತ ಚಂದ್ರಶೇಖರ್
ಕುವೆಂಪು ವಿವಿ, ಶಂಕರಘಟ್ಟ.