ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ಇತ್ತೀಚಿನ ದಿನಗಳಲ್ಲಿ ಬಹುಚರ್ಚಿತಗೊಂಡ ಕಂಪ್ಯೂಟರ್‌ ತಂತ್ರಾಂಶ. ಶಿಕ್ಷಕರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಬರಹಗಾರರು- ಹೀಗೆ ಅವರಿವರೆನ್ನದೆ ಎಲ್ಲರಲ್ಲೂ ಕುತೂಹಲ ಉಂಟುಮಾಡಿರುವ ಯಂತ್ರಾಂಶ. ನಾವು ನೀವು ಮಾತಾಡುವ ಅಥವಾ ಬರೆಯುವ ರೀತಿಯಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ದೊರಕಿಸುವ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಆಧರಿತ ತಂತ್ರಾಂಶವಿದು.

About Artificial intelligence based transcribing hardware vcs

ಎ.ಎಸ್‌. ಬಾಲಸುಬ್ರಹ್ಮಣ್ಯ

‘ಚಾಟ್‌ ಜಿಪಿಟಿ’.

ಇತ್ತೀಚಿನ ದಿನಗಳಲ್ಲಿ ಬಹುಚರ್ಚಿತಗೊಂಡ ಕಂಪ್ಯೂಟರ್‌ ತಂತ್ರಾಂಶ. ಶಿಕ್ಷಕರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಬರಹಗಾರರು- ಹೀಗೆ ಅವರಿವರೆನ್ನದೆ ಎಲ್ಲರಲ್ಲೂ ಕುತೂಹಲ ಉಂಟುಮಾಡಿರುವ ಯಂತ್ರಾಂಶ. ನಾವು ನೀವು ಮಾತಾಡುವ ಅಥವಾ ಬರೆಯುವ ರೀತಿಯಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ದೊರಕಿಸುವ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಆಧರಿತ ತಂತ್ರಾಂಶವಿದು.

ನೀವು ಏನಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ಬೇಕಾದ ಉತ್ತರವನ್ನು ಈ ಚಾಟ್‌ ಜಿಪಿಟಿ ನೀಡುತ್ತದೆ. ಓಪನ್‌ಎಐ.ಕಾಮ್‌ ವೆಬ್‌ಸೈಟ್‌ಗೆ ಹೋದರೆ ನೀವೂ ಚಾಟ್‌ ಜಿಪಿಟಿ ಬಳಸಬಹುದು. ತನ್ನ ಒಂದು ಲಕ್ಷ ಪದಗಳ(ಘ್ಕಿಠಿಟkಛ್ಞಿsಘಿಖ) ಸಂಗ್ರಹದಿಂದ ನೀವು ಕೇಳುವ ಇಲ್ಲವೇ ನಿಮ್ಮ ವಾಕ್ಯ ರಚನೆಯಲ್ಲಿರುವ ಪದಗಳು ಹಾಗೂ ಇತರೆ ಅಂಶಗಳನ್ನು ಗಮನದಲ್ಲಿರಿಸಿ ಗಣಿತದ ಸಂಭಾವ್ಯತೆ ತತ್ವದ ಆಧಾರದ ಮೇಲೆ ವಾಕ್ಯಗಳನ್ನು ರಚಿಸುತ್ತದೆ. ನೀವು ಬಯಸುವ ಮಾಹಿತಿ ಹಾಗೂ ನಿಮಗೆ ನೀಡುವ ಮಾಹಿತಿ ಈ ಒಂದು ಲಕ್ಷ ಪದಗಳ ಗುರುತುಬಿಲ್ಲೆಗಳು(ಘ್ಕಿಠಿಟkಛ್ಞಿsಘಿಖ) ಸಂಗ್ರಹದ ರಚನೆಗಳನ್ನು ಒಳಗೊಂಡಿರುತ್ತದೆ. 2021ನೇ ವರ್ಷದವರೆಗಿನ ಜಗತ್ತಿನ ಎಲ್ಲಾ ಕ್ಷೇತ್ರಗಳ ಜ್ಞಾನಾಧಾರಿತ ಮಾಹಿತಿಗಳನ್ನು ಇದರಲ್ಲಿ ಅಡಕಗೊಳಿಸಲಾಗಿದೆ. ಆದರೆ ನೆನ್ನೆ ಮೊನ್ನೆ ಸಂಭವಿಸಿದ ಘಟನೆಗಳಿಗೆ ಇದರಲ್ಲಿ ಉತ್ತರ ಸಿಗಲಾರದು.

ಕೃತಕ ಬುದ್ಧಿಮತ್ತೆಯ ಪ್ರಮುಖ ಅಂಗ ಸ್ವಾಭಾವಿಕ ಭಾಷಾ ಪರಿಷ್ಕರಣೆ (ಘ್ಕಿNಔPಘಿಖ). ಅಂದರೆ ಅಪಾರ ಪ್ರಮಾಣದಲ್ಲಿ ಅಕ್ಷರ ರೂಪದಲ್ಲಿರುವ ಮಾಹಿತಿಯನ್ನು ಯಂತ್ರಗಳಿಗೆ ಒದಗಿಸಿ, ಅವುಗಳಿಂದ ಸಹಜವಾಗಿ ಮಾನವರು ಬಯಸುವ ರೀತಿಯಲ್ಲಿ ಉತ್ತರಗಳನ್ನು ಒದಗಿಸುವ ತಂತ್ರ. ಇದರಲ್ಲಿ ಎರಡು ವಿಶೇಷ ತಂತ್ರಜ್ಞಾನಗಳ ಬಳಕೆಯಾಗಿದೆ; ಒಂದು ಮಾನವನ ಮೆದುಳಿನಲ್ಲಿರುವಂತೆ, ನರಜಾಲಗಳ ಕೊಂಡಿಗಳು. ಎರಡನೆಯದು ಮಾನವನ ಮೇಲ್ವಿಚಾರಣೆಯಿಲ್ಲದೆ ಉತ್ತರ ರಚಿಸುವ ಯಂತ್ರ ಸಾಮರ್ಥ್ಯ. ಅಂದರೆ ನಿಮ್ಮ ಮೇಲ್ವಿಚಾರಣೆಯ ಅವಶ್ಯಕತೆ ಇಲ್ಲದೆ ತಂತಾನೇ ಉತ್ತರ ಸಿದ್ಧಪಡಿಸುವ ಪ್ರಭುತ್ವ. ಯಾರಾದರೂ ನಿಮಗೆ ಪ್ರಶ್ನೆ ಇಲ್ಲವೇ ಮಾಹಿತಿ ಕೇಳಿದರೆ, ಅದು ನಿಮಗೆ ಗೊತ್ತಿದ್ದರೆ ನೀವು ಉತ್ತರಿಸುವ ಮಾದರಿಯಲ್ಲಿ ಇಲ್ಲಿ ಯಂತ್ರ ಉತ್ತರಿಸುತ್ತದೆ. ಕಾಮನ್‌ ಕ್ರಾಲ್‌, ವಿಕಿಪೀಡಿಯಾ, ವೆಬ್‌ಟೆಕ್ಸ್ಟ್‌ಮುಂತಾದ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಮೂಲಗಳ ಮೂಲಕ ಹೇರಳವಾದ ಸಂಪನ್ಮೂಲಗಳಿಂದ ಪೂರ್ವ-ತರಬೇತಿಯನ್ನು ಈ ತಂತ್ರಾಂಶಕ್ಕೆ ನೀಡಲಾಗಿದೆ. ಇನ್ನೊಬ್ಬರ ಪ್ರಶ್ನೆಗಳನ್ನು ಅರ್ಥೈಸಿಕೊಂಡು, ಜ್ಞಾಪಕಶಕ್ತಿಯಲ್ಲಿರುವ ಮಾಹಿತಿಯನ್ನು ಮಾನವನ ಮೆದುಳು ಇನ್ನೊಬ್ಬರಿಗೆ ತಲುಪಿಸುವ ರೀತಿಯಲ್ಲಿಯೇ ಈ ತಂತ್ರಾಂಶ ಪ್ರತಿಕ್ರಿಯಿಸುತ್ತದೆ. ಹಾಗಾಗಿಯೇ ಈ ನೂತನ ಆವಿಷ್ಕಾರ ಜಗತ್ತಿನೆಲ್ಲೆಡೆ ಇಂದು ಚರ್ಚಿತವಾಗುತ್ತಿದೆ.

ಎಡ-ಬಲ ಚಿಂತನೆಗಳು ಎಂದೂ ಒಂದಾಗಲ್ಲ: ಜೋಗಿ

ಅಮೆರಿಕದ ಓಪನ್‌ ಏಐ ಸಂಸ್ಥೆ ಹೊರತಂದಿರುವ ಈ ‘ಚಾಟ್‌ ಜಿಪಿಟಿ’ ತಂತ್ರಾಂಶ, ಭಾಷಾ ಮಾದರಿಯ ಮೂರನೇ ಪೀಳಿಗೆಗೆ ಸೇರಿದೆ. ಪ್ರಸ್ತುತ ಲಭ್ಯವಿರುವ ಅತ್ಯಂತ ಶಕ್ತಿಶಾಲಿ ಭಾಷಾ ಮಾದರಿಗಳಲ್ಲಿ ಇದು ಒಂದಾಗಿದೆ. ಅನುವಾದ, ಬರಹಗಳನ್ನು ಸಾರಾಂಶಗೊಳಿಸುವುದು, ಪದ್ಯಗಳ ರಚನೆ, ಸರಳ ಕಂಪ್ಯೂಟರ್‌ ಕೋಡಿಂಗ್‌ ಮತ್ತು ನಿಮ್ಮ ಎಲ್ಲಾ ಬಗೆಯ ಪ್ರಶ್ನೆಗಳಿಗೆ ಉತ್ತರಿಸುವುದು ಸೇರಿದಂತೆ ಹಲವಾರು ಕೆಲಸಗಳಿಗೆ ಇದನ್ನು ಬಳಸಬಹುದಾಗಿದೆ.

ಗೂಗಲ್‌ ಅನ್ನು ಇದು ಸರಿಗಟ್ಟಿನಿಲ್ಲುತ್ತದೆ ಎಂದು ತಜ್ಞರು ಹೇಳುತ್ತಾರೆ. ಲಭ್ಯವಿರುವ ಮಾಹಿತಿ ಮೂಲಗಳನ್ನು ಮಾತ್ರ ಗೂಗಲ್‌ ಸೂಚಿಸಿದರೆ, ಚಾಟ್‌ ಜಿಪಿಟಿ ಎಲ್ಲಾ ಮಾಹಿತಿ ಮೂಲಗಳನ್ನು ಶೋಧಿಸಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಆ ಮಾಹಿತಿಯನ್ನು ನಿಮ್ಮ ಮುಂದೆ ಓದಬಲ್ಲ, ವ್ಯಾಕರಣಬದ್ಧವಾಗಿರುವ ಬರವಣಿಗೆ ರೂಪದಲ್ಲಿ ಮಂಡಿಸುತ್ತದೆ.

ನವೆಂಬರ್‌ 2022ರಲ್ಲಿ ಬಂದ ಈ ತಂತ್ರಾಂಶ, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಹೊಸ ತಲ್ಲಣಗಳನ್ನೇ ಸೃಷ್ಟಿಸಿದೆ. ಇದರ ಶಕ್ತಿ ದುರುಪಯೋಗವಾಗದೆ ಇರಲೆಂದು ಅಮೆರಿಕಾ, ಇಂಗ್ಲೆಂಡ್‌ ಮತ್ತು ಆಸ್ಪ್ರೇಲಿಯಾದ ಅನೇಕ ಶಿಕ್ಷಣ ಸಂಸ್ಥೆಗಳು ಇದರ ಬಳಕೆಯನ್ನು ಶಾಲಾ, ಕಾಲೇಜುಗಳಲ್ಲಿ ನಿಷೇಧಿಸಿದ್ದಾರೆ. ಆದರೆ ಇನ್ನೊಂದು ವರ್ಗದ ಶಿಕ್ಷಣ ತಜ್ಞರು, ಈ ತಂತ್ರಾಂಶವನ್ನು ಸೃಜನಾತ್ಮಕವಾಗಿ ಬಳಸಿ ಕಲಿಕೆಯಲ್ಲಿ ಏಕೆ ಅಳವಡಿಸಬಾರದು ಎಂದು ವಾದಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು ತಮ್ಮ ಹಲವಾರು ನಿಯಮಿತ ಕಾರ್ಯಗಳನ್ನು ಬಹು ಸುಲಭವಾಗಿ ಚಾಟ್‌ ಬಾಟ್‌ ಪ್ರಬಂಧ ರಚನೆ ಮೂಲಕ, ಪ್ರಶ್ನೆಗಳಿಗೆ ಉತ್ತರ ಪಡೆಯುವ ಮೂಲಕ ಮುಗಿಸಬಹುದು. ಹೀಗೆ ಮಾಡಿದರೆ ವಿದ್ಯಾರ್ಥಿ ಕಲಿಯುವುದಾದರೂ ಏನಿದೆ? ಆದುದರಿಂದ ಚಾಟ್‌ ಬಾಟ್‌ ನೀಡುವ ಎಲ್ಲಾ ಉತ್ತರಗಳಿಗೆ ವಾಟರ್‌ ಮಾರ್ಕ್ ಅಳವಡಿಸುವ ಪ್ರಯತ್ನಗಳೂ ನಡೆದಿವೆ.

ಯಾವುದೇ ರೀತಿಯ ಪ್ರಶ್ನೆಗಳನ್ನು, ಅದು ಮುಕ್ತವಾಗಿರಲಿ ಇಲ್ಲ ನಿರ್ದಿಷ್ಟವಾಗಿರಲಿ ಉತ್ತರ ಕೆಲವೇ ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಆದರೆ ಜನಾಂಗೀಯ ನಿಂದನೆ ಮತ್ತು ಲೈಂಗಿಕ ವಿಷಯಗಳ ಪ್ರಶ್ನೆಗಳಿಗೆ ಅದರ ಉತ್ತರ ಬಹು ಗಂಭೀರವಾಗಿರುತ್ತದೆ. ತಜ್ಞರ ಅನಿಸಿಕೆಯಂತೆ ಈ ಯಂತ್ರದಿಂದ ದೊರೆಯುವ ಉತ್ತರ ಬಹಳ ನೀರಸ ಮತ್ತು ಶುಷ್ಕ. ಇದರಲ್ಲಿ ಯಾವುದೇ ದುಗುಡ, ತಲ್ಲಣ, ಭಾವನೆಗಳಿಲ್ಲ. ಇದೇ ಅದರ ದೊಡ್ಡ ಮಿತಿ.

ಇಂತಹ ಭಾಷಾ ಮಾದರಿ ತಂತ್ರಾಂಶ ಸಿದ್ಧಪಡಿಸುವುದು ಬಹಳ ದುಬಾರಿ. ಅಪಾರ ಬಂಡವಾಳವನ್ನು ಇದರ ರಚನೆಯಲ್ಲಿ ತೊಡಗಿಸಲಾಗಿದೆ. ಈ ಚಾಟ್‌ ಬಾಟ್‌ನಿಂದ ಬರುವ ಆದಾಯ ಮಾದರಿ ಇನ್ನೂ ಧೃಢವಾಗಬೇಕಿದೆ. ಈ ತಂತ್ರಾಂಶ ಮಾರುಕಟ್ಟೆಗೆ ಬರುತ್ತಿದ್ದಂತೆ, ಹಲವಾರು ತಂತ್ರಜ್ಞಾನ ದಿಗ್ಗಜರು ಹೆಚ್ಚು ಸಕ್ರಿಯವಾಗಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಜನ ಉಪಯೋಗಿಸುವ ಗೂಗಲ್‌ ಇದೇ ಮಾದರಿಯ ತಂತ್ರಾಂಶ ತನ್ನಲ್ಲಿ ಇದೆ ಎಂದು ಘೋಷಿಸಿದೆ. ಅದರ ಹೆಸರು ಘ್ಕಿThಛಿ ಔa್ಞಜ್ಠaಜಛಿ ಋಟdಛ್ಝಿ ್ಛಟ್ಟಈಜಿa್ಝಟಜ ಅpp್ಝಜ್ಚಿaಠಿಜಿಟ್ಞs (ಔaಋಈಅಘಿಖ ಸಂಭಾಷಣೆ ಮಾದರಿಯ ಭಾಷಾ ಅನ್ವಯ). ಪ್ರಯೋಗ ಹಂತದಲ್ಲಿರುವ ಈ ತಂತ್ರಾಂಶ ಗೂಗಲ್‌ನ ಸಾರ್ವಭೌಮತೆ ಕಾಪಾಡಿಕೊಳ್ಳಲು ನೆರವಾಗಬಹುದು. ಅಲ್ಲದೆ ಚಾಟ್‌ ಬಾಟ್‌ನ ಹಲವಾರು ಮಿತಿಗಳನ್ನು ಇದು ಸರಿಪಡಿಸಬಹುದು. ಮಾರುಕಟ್ಟೆಗೆ ಬಂದಿರುವ ಇನ್ನೊಂದು ನೂತನ ತಂತ್ರಾಂಶ ಚಾಟ್‌ ಸೋನಿಕ್‌ (ಘ್ಕಿಇhaಠಿsಟ್ಞಜ್ಚಿಘಿಖ). ಇದು ಅಂತರ್ಜಾಲದ ಎಲ್ಲಾ ಇತ್ತೀಚಿನ ಮಾಹಿತಿಗಳನ್ನು ಒಳಗೊಂಡ ಉತ್ತರಗಳನ್ನು ತಕ್ಷಣವೇ ನೀಡುತ್ತದೆ.

ಅಳೆಯುವವರ ಕಥೆ ಬೆಳಕಿಗೆ ತರುತ್ತಿರುವೆ : ಗಜಾನನ ಶರ್ಮಾ

ಈ ಯಾಂತ್ರೀಕರಣದ (ಘ್ಕಿಅ್ಠಠಿಟಞaಠಿಜಿಟ್ಞಘಿಖ) ಯುಗದಲ್ಲಿ ಇಂತಹ ಹಲವು ತಂತ್ರಾಂಶಗಳು ಈಗಾಗಲೇ ಸದ್ದಿಲ್ಲದೇ ತಮ್ಮ ಕೆಲಸ ನಿರ್ವಹಿಸುತ್ತಿವೆ. ಉದಾಹರಣೆಗೆ 2015ರಿಂದಲೇ ಹೆಸರಾಂತ ಸುದ್ದಿಸಂಸ್ಥೆ ಅಸೋಸಿಯೇಟೆಡ್‌ ಪ್ರೆಸ್‌ ಬೃಹತ್‌ ಕಂಪನಿಗಳ ಲಾಭಾಂಶವನ್ನು ಯಾರದೇ ಸಹಾಯವಿಲ್ಲದೆ ಸುದ್ದಿಯಾಗಿ ಪ್ರಕಟಿಸುತ್ತಿವೆ. ನೀವು ಬರೆದ ವರದಿ/ಲೇಖನದ ವ್ಯಾಕರಣ ದೋಷಗಳನ್ನು ಗುರುತಿಸಿ ಸರಿಪಡಿಸುವ ಹತ್ತಾರು ತಂತ್ರಾಂಶಗಳು ಈಗಾಗಲೇ ಬಳಕೆಯಲ್ಲಿವೆ. ಆದರೆ ಇವೆಲ್ಲ ಸೌಲಭ್ಯಗಳು ಇಂಗ್ಲಿಷ್‌ ಸೇರಿದಂತೆ ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಮಾತ್ರ ಲಭ್ಯ.

ಕೃತಕ ಸಾರ್ವತ್ರಿಕ ಬುದ್ಧಿಮತ್ತೆ ಬೆಳವಣಿಗೆಯಲ್ಲಿ ಅಗ್ರ ಪಾತ್ರ ವಹಿಸುತ್ತಿರುವ ಓಪನ್‌ ಎಐ ಸಂಸ್ಥೆ, ಲಾಭರಹಿತ ಅಮೆರಿಕನ್‌ ಸಂಸ್ಥೆಯಾಗಿದೆ. ಈ ಸಂಸ್ಥೆ ಅಭಿವೃದ್ಧಿಪಡಿಸಿರುವ ಚಾಟ್‌ ಜಿಪಿಟಿ, ಡಾಲ್‌-ಈ, ಇಮಾಜಿನ್‌ ವಿಡಿಯೋ, ಮೇಕ್‌ ಎ ವಿಡಿಯೋ ತಂತ್ರಾಂಶಗಳು ಇಂದು ಎಲ್ಲೆಡೆ ಜನಪ್ರಿಯವಾಗಿವೆ. ಚಿತ್ರ ರಚಿಸುವ ಮಾಯಾಜಾಲ ‘ಡಾಲ್‌-ಈ’, ಚಿತ್ರ ಬಿಡಿಸುವ ಕಲಾವಿದರಿಗೆ ದುಃಸ್ವಪ್ನವಾಗಿದೆ. ನೀವು ಹೇಳಿದಂತೆ ಚಿತ್ರಗಳು ಯಂತ್ರಗಳಿಂದ ಮೂಡಿಬರುತ್ತವೆ. ಒಂದು ಸಣ್ಣ ಕಥೆ ನೀವು ಹೇಳಿದರೆ ಅದರ ಪಾತ್ರಗಳು ಮತ್ತು ಹಿನ್ನೆಲೆ ದೃಶ್ಯಗಳನ್ನೊಳಗೊಂಡ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಿದ್ಧ.

ಈ ಸಂಸ್ಥೆ ಅಭಿವೃದ್ಧಿಪಡಿಸಿರುವ ತಂತ್ರಾಂಶಗಳ ಪರಿಶೀಲನೆಗೆ ಅವರ ಘ್ಕಿ್ಚhaಠಿ.ಟpಛ್ಞಿaಜಿ.್ಚಟಞಘಿಖ ಜಾಲತಾಣಕ್ಕೆ ಹೋಗಿ ಈ ಆಧುನಿಕ ಮಾಂತ್ರಿಕ ವಿಕಸನಗಳನ್ನು ನೋಡಬಹುದು.

ಕಾಲೇಜುಗಳಲ್ಲಿ ಆತಂಕ

ಅಮೆರಿಕಾದ ಕೆಲವು ಯುನಿವರ್ಸಿಟಿಗಳಲ್ಲಿ ಪರೀಕ್ಷೆಗಳ ಪ್ರಶ್ನೆಗಳಿಗೆ ಚಾಟ್‌ ಜಿಪಿಟಿ ಕೊಟ್ಟಉತ್ತರಕ್ಕೆ ಪಾಸ್‌ ಆಗುವಷ್ಟುಅಂಕ ಸಿಕ್ಕಿರುವುದರಿಂದ ಕಾಲೇಜು ವಲಯದಲ್ಲಿ ಚಾಟ್‌ ಜಿಪಿಟಿ ಚಾಟ್‌ ಬೋಟ್‌ ಕುರಿತು ಆತಂಕ ಸೃಷ್ಟಿಯಾಗಿದೆ. ಅಮೆರಿಕಾದ, ಫ್ರಾನ್ಸ್‌ನ ಹಲವು ಯುನಿವರ್ಸಿಟಿಗಳು ಚಾಟ್‌ ಜಿಪಿಟಿಯನ್ನು ವಿದ್ಯಾರ್ಥಿಗಳಿಗೆ ನಿಷೇಧಿಸುವಷ್ಟರ ಮಟ್ಟಿಗೆ ಮುಂದುವರೆದಿದೆ. ಕರ್ನಾಟಕದ ಕೆಲವು ಯುನಿವರ್ಸಿಟಿಗಳು ಕೂಡ ಚಾಟ್‌ ಜಿಪಿಟಿ ನಿಷೇಧಿಸುವ ಕುರಿತ ಚಿಂತನೆ ನಡೆಸುತ್ತಿದೆ. ಚಾಟ್‌ ಜಿಪಿಟಿ ಬಳಸಿಕೊಂಡು ಅಸೈನ್‌ಮೆಂಟ್‌ಗಳನ್ನು ಸಿದ್ಧಪಡಿಸಬಹುದು, ಪ್ರಶ್ನೆಗಳಿಗೆ ಉತ್ತರ ಬರೆಯಬಹುದು ಅನ್ನುವುದೇ ಕಾಲೇಜು ಆಡಳಿತ ಮಂಡಳಿಯ ಚಿಂತೆಗೆ ಕಾರಣ. ಈ ಕಾರಣದಿಂದ ಪರೀಕ್ಷೆ, ಅಸೈನ್‌ಮೆಂಟ್‌ ಇತ್ಯಾದಿಗಳಿಗೆ ಚಾಟ್‌ ಜಿಪಿಟಿ ಬಳಸುವುದನ್ನು ತಡೆಯಬೇಕು ಅನ್ನುವುದು ಒಂದು ವಾದವಾದರೆ ಗೂಗಲ್‌ಗಿಂತ ಚಾಟ್‌ ಜಿಪಿಟಿ ಉತ್ತಮ ಆಯ್ಕೆ, ಅದರಿಂದಾಗಿ ಕಲಿಕೆ ಸುಲಭ ಅನ್ನುವುದು ಮತ್ತೊಂದು ವಾದ. ಈ ಕಾರಣದಿಂದ ಕೆಲವು ಕಾಲೇಜುಗಳು ನಿಷೇಧದ ಕುರಿತು ಆಲೋಚಿಸಿದರೆ ಮತ್ತೆ ಕೆಲವು ಕಾಲೇಜುಗಳು ಕಾದು ನೋಡುವ ತಂತ್ರ ಉಪಯೋಗಿಸುತ್ತಿದೆ. ಕೆಲವು ತಂತ್ರಜ್ಞರು ಇದೇ ಆತಂಕ ಗೂಗಲ್‌ ಬಂದಾಗಲೂ ಉಂಟಾಗಿತ್ತು, ಚಾಟ್‌ ಜಿಪಿಟಿ ಬಂದಾಗಲೂ ಅದೇ ಆಗಿದೆ. ಮುಂದೆ ಎಲ್ಲವೂ ಸರಿಹೋಗುತ್ತದೆ ಎಂಬ ಅಭಿಪ್ರಾಯ ನೀಡಿದ್ದಾರೆ. ಸದ್ಯ ಯಾವುದಕ್ಕೂ ಸ್ಪಷ್ಟತೆ ಸಿಕ್ಕಿಲ್ಲ. ಸ್ಪಷ್ಟಉತ್ತರಕ್ಕಾಗಿ ಕೆಲವು ತಿಂಗಳುಗಳು ಬೇಕಾಗಬಹುದು.

ಚಾಟ್‌ ಜಿಪಿಟಿ ಹೇಳಿದ ಕತೆ

ಚಾಟ್‌ ಜಿಪಿಟಿ ಏನು ಬೇಕಾದರೂ ಹೇಳುತ್ತದಾ ಎಂದು ಕೇಳಿದರೆ ಸದ್ಯಕ್ಕೆ ಚಾಟ್‌ ಜಿಪಿಟಿ ತನ್ನ ಮಿತಿಗೆ ತಕ್ಕಂತೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತದೆ. ಕೇಳುವ ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರ ಸಿಗುತ್ತದೆ ಎಂದು ಹೇಳುವುದು ಕಷ್ಟ. ಎಲ್ಲಾ ಉತ್ತರವನ್ನೂ ಕಣ್ಣುಮುಚ್ಚಿ ನಂಬಬಾರದು. ಅದರಲ್ಲೂ ಕರ್ನಾಟಕಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಕೇಳುವಾಗ ಹೆಚ್ಚು ಎಚ್ಚರಿಕೆ ಇದ್ದಷ್ಟುಒಳ್ಳೆಯದು.

ಚಾಟ್‌ ಜಿಪಿಟಿ ಬಳಿ ಕನ್ನಡಪ್ರಭ ಪತ್ರಿಕೆಯ ಕುರಿತು ಕೇಳಿದಾಗ, ‘ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಕನ್ನಡಪ್ರಭ ಒಂದು. 1967ರಲ್ಲಿ ಸ್ಥಾಪಿತಗೊಂಡ ಈ ಪತ್ರಿಕೆ, ಸಮಗ್ರ ವರದಿಗಾಗಿ ಹೆಸರುವಾಸಿಯಾಗಿದೆ’ ಎಂಬ ಮಾಹಿತಿ ಒದಗಿಸಿತು. ಒಂದು ಸಣ್ಣ ಕತೆ ಹೇಳು ಎಂದು ಕೇಳಿದ್ದಕ್ಕೆ ಚಾಟ್‌ ಜಿಪಿಟಿ ಕೊಟ್ಟಕತೆಯ ಹೃಸ್ವ ರೂಪ ಇಲ್ಲಿದೆ.

ಒಂದಾನೊಂದು ಕಾಲದಲ್ಲಿ ಸ್ನೇಹಿತರ ಬಳಗ ಜೊತೆಯಾಗಿ ಪ್ರಯಾಣ ಮಾಡುತ್ತಿತ್ತು. ಅವರು ದಟ್ಟಕಾಡಿನ ಮಧ್ಯೆ ಸಾಗುತ್ತಿದ್ದಾಗ ಕತ್ತಲಾಗಿತ್ತು. ಇದ್ದಕ್ಕಿದ್ದಂತೆ ಒಂದು ವಿಚಿತ್ರ ಸದ್ದು ಕೇಳಿಸಿತು. ಗೆಳೆಯರ ಬಳಗದಲ್ಲಿದ್ದ ಒಬ್ಬ ಧೈರ್ಯವಂತ ಆ ಸದ್ದು ಏನೆಂಬುದು ನೋಡಲು ತೆರಳಿದ. ಅಲ್ಲಿ ನೋಡಿದರೆ ಒಂದು ಡ್ರ್ಯಾಗನ್‌ ಬಂಗಾರ, ಆಭರಣ ತುಂಬಿದ ನಿಧಿಯನ್ನು ಕಾಯುತ್ತಿತ್ತು. ಆತ ಜಾಣತನದ ಮಾತುಗಳಿಂದ ತಮ್ಮನ್ನು ಅಲ್ಲಿಂದ ದಾಟಿ ಹೋಗಲು ಬಿಡುವಂತೆ ಡ್ರ್ಯಾಗನ್‌ನನ್ನು ಒಪ್ಪಿಸಿದ. ಅವನ ಮಾತುಗಳಿಂದ ಖುಷಿಯಾದ ಡ್ರ್ಯಾಗನ್‌ ನಿಧಿಯನ್ನೂ ಅವರಿಗೆ ಒಪ್ಪಿಸಿತು. ಸ್ನೇಹಿತರು ಸಂಪತ್ತಿನೊಂದಿಗೆ ಮನೆಗೆ ತೆರಳಿ ಸಂತೋಷವಾಗಿ ಬಾಳಿದರು.

ಷೇಕ್ಸ್‌ಪಿಯರ್‌ನಂತೆ ಕವನ ಬರೆಯುವ ಚಾಟ್‌ ಜಿಪಿಟಿ

ಚಾಟ್‌ ಜಿಪಿಟಿ ಎಷ್ಟುಅದ್ಭುತವಾದ ಸಾಮರ್ಥ್ಯ ಹೊಂದಿದೆ ಎಂದರೆ ಅದು ಷೇಕ್ಸ್‌ಪಿಯರ್‌ನಂತೆ ಕವನ ಬರೆಯಬಲ್ಲದು. ಟ್ರಂಪ್‌ ಥರ ಭಾಷಣ ಬರೆಯಬಲ್ಲದು. ಘ್ಕಿಡ್ಟಿಜಿಠಿಛಿ a pಟಛಿಞ ಟ್ಞ ಞಟdಜಿ ಜ್ಞಿ shakಛಿspಛಿa್ಟಛಿ sಠಿy್ಝಛಿಘಿಖ ಅಂತ ಬರೆದರೆ 12 ಸಾಲಿನ ಕವನ ಬರೆದುಕೊಟ್ಟಿತು. ಅದರ ಆರಂಭದ ನಾಲ್ಕು ಸಾಲು ಹೀಗಿದೆ-

 

Latest Videos
Follow Us:
Download App:
  • android
  • ios