4,800ಕ್ಕೂ ಹೆಚ್ಚು ಹಾವುಗಳ ರಕ್ಷಿಸಿದ ಸ್ನೇಕ್ ಕಿರಣ್
- ಸುಮಾರು 4,800ಕ್ಕೂ ಹೆಚ್ಚು ಹಾವು ಮತ್ತು ವನ್ಯಜೀವಿಗಳನ್ನು ರಕ್ಷಿಸಿದ ಕಿರಣ್
- ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಬಾರಿ ಹಾವುಗಳಿಗೆ ಕೃತಕ ಕಾವು ನೀಡಿ ಮರಿ ಮಾಡಿಸಿ ಮತ್ತು ಚಿಕಿತ್ಸೆ ನೀಡಿದ ಕೀರ್ತಿ
- ಸುಕನ್ಯಾ ಎನ್. ಆರ್, ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು ಪುತ್ತೂರು
ಪ್ರಾಕೃತಿಕ ಸಮತೋಲನಕ್ಕೆ ವನ್ಯಜೀವಿಗಳ ಉಳಿವು ಇಂದಿನ ಅನಿವಾರ್ಯ. ಮನುಷ್ಯನ ಉಪಟಳದಿಂದ ಕ್ಷೀಣವಾಗುತ್ತಿರುವ ಜೀವವೈವಿಧ್ಯದ ರಕ್ಷಣೆಗೆ ಅಲ್ಲೋ-ಇಲ್ಲೋ ಒಬ್ಬೊಬ್ಬರು ಟೊಂಕ ಕಟ್ಟಿ ನಿಂತಿದ್ದಾರೆ ಎಂಬುದೇ ಸಮಾಧಾನ. ಇದುವರೆಗೆ ಅಪಾಯದಲ್ಲಿದ್ದ ಸುಮಾರು 4,800ಕ್ಕೂ ಹೆಚ್ಚು ಹಾವು(Snake) ಮತ್ತು ವನ್ಯಜೀವಿಗಳನ್ನು ಕಾಪಾಡುವ ಮೂಲಕ ಆ ಸಾಲಿಗೆ ಬಂಟ್ವಾಳದ ಕ್ಸೇವಿಯರ್ ಕಿರಣ್ ಪಿಂಟೋ ಸೇರ್ಪಡೆಗೊಂಡಿದ್ದಾರೆ.
ವಗ್ಗ ಎಂಬ ಸ್ಥಳದ ಜೋಕಿಂ ಪಿಂಟೋ ಮತ್ತು ಲೂಸಿ ಮೇರಿ ಡಿಸೋಜ ದಂಪತಿಯ ಪುತ್ರ ಕಿರಣ್ ಪಿಂಟೋ 7ನೇ ತರಗತಿಯಲ್ಲಿದ್ದಾಗಲೇ ವನ್ಯಜೀವಿ ರಕ್ಷಣೆ ಬಗ್ಗೆ ಒಲವು ಬೆಳೆಸಿಕೊಂಡಿದ್ದರು. ಆರಂಭದಲ್ಲಿ ತಂದೆಯ ಮಾರ್ಗದರ್ಶನ ಪಡೆದು ಹೆಬ್ಬಾವು ರಕ್ಷಣೆಗೆ ಇಳಿದರು.
ಹಾವಿನ ವಿಷದಿಂದ ಕೊರೋನಾಗೆ ಬ್ರೇಕ್: ಶೇ.75ರಷ್ಟು ಹರಡುವಿಕೆ ತಡೆಯುತ್ತದೆ!
'ಪ್ರಕೃತಿಯು ಮಾನವನಿಗೆ ಎಲ್ಲವನ್ನೂ ಕೊಡುತ್ತಿರುವಾಗ ನಾನೇನು ಕೊಡಲು ಸಾಧ್ಯ?' ಎಂದು ಪ್ರಶ್ನಿಸುವ ಕಿರಣ್, ವನ್ಯ ಜೀವಿಗಳನ್ನು ಅಪಾಯದಿಂದ ಪಾರು ಮಾಡುವ ಕಾಯಕದಲ್ಲೇ ಮಗ್ನರಾಗಿದ್ದಾರೆ.
ಲಯನ್ಸ್ ಕ್ಲಬ್ ಲಾರೆಟ್ಟೋ ಅಗ್ರರ್ ಸದಸ್ಯ, ಸಂಗಾತಿ ಸ್ವಸಹಾಯ ಸಹಕಾರಿ ಸಂಘದ ಇದರ ಅಧ್ಯಕ್ಷ, ಎನ್.ಈ.ಸಿ.ಆಫ್ "ರಾಷ್ಟ್ರೀಯ ಪರಿಸರ ರಕ್ಷಣೆಯ ಒಕ್ಕೂಟ"ದ ಸದಸ್ಯನಾಗಿ ಕಿರಣ್ ಕಾರ್ಯನಿರ್ವಹಿಸುತ್ತಿದ್ದಾರೆ.
ಜೂನ್ ಜುಲೈ ತಿಂಗಳಿನಲ್ಲಿ ಪ್ರತಿ ಭಾನುವಾರ ಎನ್.ಈ. ಸಿ.ಆಫ್ ತಂಡದ ಜೊತೆ ಕೈ ಜೋಡಿಸಿ ಪ್ರಕೃತಿಯ ಒಳಿತಿಗಾಗಿ ಕಾಲಿ ಜಾಗಗಳಲ್ಲಿ ಗಿಡಗಳನ್ನು ನೆಡುತ್ತಿದ್ದಾರೆ. ಮುಂದಿನ ವರ್ಷ ಒಂದು ಲಕ್ಷದ 16 ಸಾವಿರ ಗಿಡ ನೆಡುವ ಯೋಜನೆ ಈ ತಂಡದ್ದಾಗಿದೆ.
ತನಗೆ ಕಚ್ಚಿದ ಹಾವಿಗೆ ತಿರುಗಿ ಕಚ್ಚಿದ..! ಹಾವು ಸತ್ತೇ ಹೋಯ್ತು
ಅರಣ್ಯ ಇಲಾಖೆಯ ಸಹಕಾರದೊಂದಿಗೆ ಶಾಲಾಕಾಲೇಜು, ಸಂಘಸಂಸ್ಥೆ, ಎನ್.ಎಸ್.ಎಸ್ ಶಿಬಿರಗಳಲ್ಲಿ ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಗೆ ಸಂಬಂಧ ಪಟ್ಟ ವಿಷಯ ಕುರಿತು ಯುವ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಇಲ್ಲಿಯವರೆಗೂ 140 ಕಾರ್ಯ ಕ್ರಮದ ಮೂಲಕ ಜಾಗೃತಿಯನ್ನು ಜನರಲ್ಲಿ ಮೂಡಿಸುತ್ತಾರೆ .
ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಬಾರಿ ಹಾವುಗಳಿಗೆ ಕೃತಕ ಕಾವು ನೀಡಿ ಮರಿ ಮಾಡಿಸಿ ಮತ್ತು ಚಿಕಿತ್ಸೆ ನೀಡಿದ ಕೀರ್ತಿ ಕಿರಣ್ ಅವರಿಗೆ ಸಲ್ಲುತ್ತದೆ. ಹಾವಿನ ಮರಿಗಳು ಕೃತಕ ಕಾವಿನಿಂದ 600 ಕ್ಕಿಂತ ಅಧಿಕ ಮರಿಗಳು ಪುನರ್ ಜೀವನ ಪಡೆಯುವಂತೆ ಯಶಸ್ವಿಯಾಗಲು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಕೈ ಜೋಡಿಸಿದ್ದಾರೆ.
13.5 ಅಡಿ ಉದ್ದದ ಕಾಳಿಂಗ ಸರ್ಪ, ನಾಗರ ಹಾವು, ಕನ್ನಡಿ ಹಾವು, ಗುಳಿಮಂಡಲ ಹಾವು, ಕಟ್ಟುಕಡಂಬಳೆ ಮುಂತಾದ ವಿಷಯುಕ್ತ ಹಾವುಗಳನ್ನು ರಕ್ಷಣೆ ಮಾಡಿದ್ದಾರೆ.
ವಿಶೇಷವಾಗಿ ಸಿಕ್ಕಿದ ಹಾವುಗಳಲ್ಲಿ ಕಂದು ಬಳ್ಳಿ ಹಾವು, ಫಾರ್ಸ್ಟನ್ ಕ್ಯಾಟ್ ಸ್ನೇಕ್ , ಬಿಳಿ ಹೆಬ್ಬಾವು, ಬಂಟ್ವಾಳ ತಾಲೂಕಿನ ಪ್ರಥಮ ಬಾರಿಗೆ ಹಿಡಿದ ಕಾಳಿಂಗ ಸರ್ಪ ಇವುಗಳನ್ನೆಲ್ಲ ರಕ್ಷಿಸಿ, ಚಿಕಿತ್ಸೆ ನೀಡಿ ಅರಣ್ಯಕ್ಕೆ ಕ್ಷೇಮವಾಗಿ ಬಿಟ್ಟಿದ್ದಾರೆ. ಉಡ, ಗುಬೆ, ನವಿಲು, ಕಾಗೆ, ಹದ್ದು, ಕೆಂಬೂತ, ಮುಶಿಕ, ಜಿಂಕೆ, ಆಮೆ, ಕಾಡುಕೋಣ, ಚಿರತೆ ಹೀಗೆ ಅನೇಕ ವನ್ಯ ಜೀವಿಗಳ ರಕ್ಷಣೆಯನ್ನು ಮಾಡಿದ್ದಾರೆ.