Asianet Suvarna News Asianet Suvarna News

ಸೇಬು ಹಣ್ಣಿನಷ್ಟು ತೂಕವಿದ್ದ ಶಿಶು ಈಗ ಆರೋಗ್ಯಪೂರ್ಣ

ಸೇಬು ಹಣ್ಣಿನಷ್ಟುತೂಕವಿದ್ದ ಶಿಶು ಈಗ ಆರೋಗ್ಯಪೂರ್ಣ| ಜಪಾನ್‌ ವೈದ್ಯರ ಚಿಕಿತ್ಸೆಯಿಂದ 258 ಗ್ರಾಂ ಮಗು 3 ಕೇಜಿ ಆಯ್ತು| ಶೀಘ್ರದಲ್ಲೇ ಆಸ್ಪತ್ರೆಯಿಂದ ಮಗು ಬಿಡುಗಡೆ: ವೈದ್ಯರು

World s smallest baby boy weighing as much as apple set to go home
Author
Bangalore, First Published Apr 20, 2019, 11:05 AM IST

ಟೋಕಿಯೋ[ಏ.20]: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಜನಿಸಿದಾಗ ಬದುಕುಳಿಯುವುದೇ ಕಷ್ಟಎಂದು ಹೇಳಲಾಗಿದ್ದ ಸೇಬು ಹಣ್ಣಿನಷ್ಟೇ ತೂಕವಿದ್ದ ಮಗು ಇದೀಗ ಸಾಮಾನ್ಯ ಮಕ್ಕಳಂತೆ ಆಗಿದೆ ಎಂದು ಜಪಾನ್‌ ವೈದ್ಯರು ಘೋಷಿಸಿದ್ದಾರೆ. ಈ ಮಗು ಜನಿಸಿದಾಗ ಕೇವಲ 258 ಗ್ರಾಂ ಹಾಗೂ 22 ಸೆಂ.ಮೀ ಉದ್ದವಷ್ಟೇ ಇತ್ತು. ಹಾಗಾಗಿ, ಈ ಮಗುವಿಗೆ ಇದೇ ವರ್ಷದ ಫೆಬ್ರವರಿವರೆಗೂ ನವಜಾತು ಶಿಶು ವಿಭಾಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಪರಿಣಾಮವಾಗಿ 258 ಗ್ರಾಂ ಇದ್ದ ಮಗುವಿನ ತೂಕ ಇದೀಗ 3 ಕೇಜಿ ಆಗಿದೆ. ಈ ಮಗುವನ್ನು ಶೀಘ್ರದಲ್ಲೇ ನಗಾನೋ ಮಕ್ಕಳ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದರು.

24 ವಾರಗಳ ಹಾಗೂ 5 ದಿನಗಳಿಂದ ಗರ್ಭ ಧರಿಸಿದ್ದ ಟೋಶಿಕೋ ಎಂಬ ಮಹಿಳೆ ಭಾರೀ ರಕ್ತದೊತ್ತಡಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಟೋಶಿಕೋ ಅವರನ್ನು ಶಸ್ತ್ರಚಿಕಿತ್ಸೆಗೊಳಪಡಿಸುವ ಮೂಲಕ ಹೆರಿಗೆ ಮಾಡಿಸಲಾಯಿತು. ಈ ವೇಳೆ ಜನಿಸಿದ ರ್ಯುಸುಕೆ ಸುಕಿಯಾ ಎಂಬ ಮಗು ಕೇವಲ 258 ಗ್ರಾಂ ತೂಕ ಹೊಂದಿತ್ತು. ಈ ಮೂಲಕ ವಿಶ್ವದ ಅತಿ ಸಣ್ಣ ಮಗು ಎಂಬ ಕೀರ್ತಿಗೆ ಭಾಜನವಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಗುವಿನ ತಾಯಿ, ‘ಮಗು ಹುಟ್ಟಿದಾಗ ಮುಟ್ಟಿದರೆ, ಮಗು ಸತ್ತು ಹೋಗುತ್ತದೆ ಎಂಬ ಭೀತಿಯಿತ್ತು. ಆದರೆ, ಈಗ ನನ್ನ ಮಗ ಹಾಲು ಕುಡಿಯುತ್ತಾನೆ. ಸ್ನಾನ ಮಾಡಿಸಬಹುದಾಗಿದೆ. ನನ್ನ ಮಗುವಿನ ಬೆಳವಣಿಗೆ ಬಗ್ಗೆ ಹೆಮ್ಮೆಯಿದೆ,’ ಎಂದು ಹೇಳಿದರು.

Follow Us:
Download App:
  • android
  • ios