Asianet Suvarna News Asianet Suvarna News

ನಮ್ಮ ವರ್ಕಿಂಗ್ ಶೆಡ್ಯೂಲ್‌ನಿಂದ ದೇಹಕ್ಕೆಷ್ಟು ಹಾನಿ ಗೊತ್ತಾ?

ಬೆಳಗ್ಗೆ ಹತ್ತೂವರೆಗೆ ಕಂಪ್ಯೂಟರ್ ಎದುರು ಕೂತರೆ ಮುಗೀತು, ಮಧ್ಯಾಹ್ನ ಊಟಕ್ಕೇ ಎದ್ದೇಳೋದು, ಟೈಂ ಇದ್ದರೆ ಮಾತ್ರ ಸಂಜೆ ಕಾಫಿ. ನಿಧಾನಕ್ಕೆ ಇಂತಿಪ್ಪ ನಮ್ಮ ವರ್ಕಿಂಗ್ ಶೆಡ್ಯೂಲ್‌ನಿಂದ ದೇಹಕ್ಕೆಷ್ಟು ಹಾನಿಯಿದೆ ಎಂದು ಯಾವತ್ತಾದ್ರೂ ಯೋಚ್ನೆ ಮಾಡಿದ್ದೀರಾ?

Working schedule has impact on life

ವಯಸ್ಸು 41. ಸಾಫ್ಟ್‌ವೇರ್ ಇಂಜಿನಿಯರ್. ಆಫೀಸ್‌ನಲ್ಲೂ, ಮನೆಗೆ ಬಂದ್ರೂ, ರಾತ್ರಿ ಮಲಗುವಾಗಲೂ ಲ್ಯಾಪ್‌ಟಾಪ್ ಜೊತೆಗಿರಲೇಬೇಕು, ಇದು ಅಲಿಖಿತ ನಿಯಮ. ಕನಸಿನಲ್ಲೂ ಬರುವ ಟಾರ್ಗೆಟ್ ಭೂತ! ಇಂತಿಪ್ಪ ಬ್ಯುಸಿಮ್ಯಾನ್ ಇತ್ತೀಚೆಗೆ ಫ್ಯಾಮಿಲಿ ಡಾಕ್ಟರ್ ಶಾಪ್‌ನಲ್ಲಿ ಲ್ಯಾಪ್‌ಟಾಪ್ ಹಿಡಿದು ಕೂತಿರುವ ದೃಶ್ಯ ಹೆಚ್ಚೆಚ್ಚು ಕಾಣ್ತಿದೆ. 

‘ಎಕ್ಸರ್‌ಸೈಸ್ ಮಾಡಿ, ಯೋಗ ಕ್ಲಾಸ್‌ಗೆ ಹೋಗಿ’ ಅಂತ ಡಾಕ್ಟರೇನೋ ಹೇಳ್ತಾರೆ, ಆದರೆ ಅದಕ್ಕೆಲ್ಲ ಸಮಯವಿರಬೇಕಲ್ಲ, ಒಂದು ಗುಳಿಗೆ ನುಂಗಿದ್ರೆ ವಾಸಿಯಾಗೋ ರೋಗಕ್ಕೆ ಅಷ್ಟೆಲ್ಲ ತಲೆಕೆಡಿಸಿಕೊಳ್ಳಬೇಕಾ? 

ಹೌದು, ತಲೆಕೆಡಿಸಿಕೊಳ್ಳಲೇಬೇಕು. ಇಲ್ಲವಾದರೆ ಬೇಗ ಈ ಲೋಕಕ್ಕೇ ಗುಡ್‌ಬೈ ಹೇಳೋ ಕಾಲ ಬಹಳ ಬೇಗ ಬರಬಹುದು. ಯಾಕೆಂದರೆ ಹೀಗೆ ಕುಳಿತೇ ಕೆಲಸ ಮಾಡುವುದರಿಂದ ಬೊಜ್ಜು ಹೆಚ್ಚಾಗುತ್ತೆ. ಇದರಿಂದ ಹೃದಯ ಸಂಬಂಧಿ ಗಂಭೀರ ರೋಗಗಳು ಬರುವ ಸಾಧ್ಯತೆ ಅಧಿಕವಾಗಿರೋದು ಇತ್ತೀಚಿನ ಸಂಶೋಧನೆಯಿಂದ ದೃಢಪಟ್ಟಿದೆ.

ಇತ್ತೀಚೆಗೆ ವಿದೇಶಿ ಮೂಲದ ಸಂಸ್ಥೆಯೊಂದು 1 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನಿಟ್ಟು ಸಮೀಕ್ಷೆ ನಡೆಸಿತು. ಈ ಅಧ್ಯಯನದಲ್ಲಿ ಬೆಳಕಿಗೆ ಬಂದ ವಿಷಯಗಳು ಹೀಗಿವೆ 

  • ಕೂತು ಕೆಲಸ ಮಾಡುವವರಲ್ಲಿ ಬೊಜ್ಜಿನ ಸಮಸ್ಯೆ ಅತ್ಯಧಿಕ. 
  • 30 -35 ೩೫ ವಯಸ್ಸಿನಲ್ಲೇ ಆರಂಭವಾಗುವ ಈ ಸಮಸ್ಯೆ ಸುಮಾರು 41ರ ಹರೆಯಕ್ಕೆ ಬರುವಾಗ ಅನೇಕ ದೈಹಿಕ ತೊಂದರೆಗಳಾಗಿ ಕಾಣಿಸಿಕೊಳ್ಳುತ್ತವೆ. 
  • ಶೇ.67 ರಷ್ಟು ಪುರುಷರು ಹಾಗೂ ಶೇ.49 ರಷ್ಟು ಮಹಿಳೆಯರು ಕೂತು ಕೆಲಸ ಮಾಡುವುದರಿಂದ ಬರುವ ಬೊಜ್ಜಿನ ಸಮಸ್ಯೆಗೆ

ತುತ್ತಾಗಿದ್ದರು. ಇದರಿಂದ ನಾನಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು ಪದೇ ಪದೇ ರಜೆ ಹಾಕುವ ಅನಿವಾರ್ಯತೆಗೆ ಸಿಲುಕಿದ್ದರು. ೩ಇಂಥವರಿಗೆ ಕೆಲವೇ ವರ್ಷಗಳಲ್ಲಿ ಡಯಾಬಿಟೀಸ್, ಹೈಪರ್ ಟೆನ್ಶನ್, ಹೃದಯ ಸಂಬಂಧಿ ರೋಗಗಳ ಸಾಧ್ಯತೆ ಹೆಚ್ಚಿತ್ತು. ೪ಕೆಲಸದ ಮೇಲೆ ಏಕಾಗ್ರತೆ ಕಡಿಮೆಯಾಗ್ತಿತ್ತು, ಫ್ರೆಶ್ ನೆಸ್ ಇಲ್ಲದೇ ತೂಕಡಿಸುವಂತಿರುತ್ತಿದ್ದರು. 

Follow Us:
Download App:
  • android
  • ios