ಸಹೋದ್ಯೋಗಿಯಿಂದ ಕಿರಿಕಿರಿಯಾಗ್ತಾ ಇದೆ; ಏನು ಮಾಡಲಿ?

women seeking help to overcome by harassment by her colleague
Highlights

ಮಹಿಳೆಯೊಬ್ಬರು  ಅವರ ಸಹೋದ್ಯೋಗಿಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ವಿವಾಹಿತೆಯಾಗಿದ್ದು ಪತಿಯ ಬಳಿಯೂ ಸಮಸ್ಯೆಯನ್ನು ಹೇಳಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಏನು ಮಾಡಬೇಕೆಂದು ತೋಚದೇ ಸಹಾಯ ಯಾಚಿಸಿದ್ದಾರೆ. ನಿಮ್ಮ ಉತ್ತರವನ್ನು suvarnanewsindia@gmail.com ಗೆ ಕಳುಹಿಸಿ. 

ನಾನು ಕೆಲಸ ಮಾಡುವ ಜಾಗದಲ್ಲಿ ನನ್ನ ಸಹೋದ್ಯೋಗಿಯಿಂದ ನಿತ್ಯವೂ ಕಿರಿಕಿರಿಯಾಗುತ್ತಿದೆ. ಕೆಲಸಕ್ಕೆ ಹೋಗುವುದೇ ನರಕ ಎನ್ನುವಂತಾಗಿದೆ. ಹೆಂಗಸಾದ ನನ್ನನ್ನು ಅವನು ಕೆಟ್ಟ ದೃಷ್ಟಿಯಿಂದಲೇ ನೋಡುತ್ತಾನೆ. ಇದನ್ನು ಮೇಲಿನ ಅಧಿಕಾರಿಗಳಿಗೆ ಹೇಳೋಣ ಎಂದರೆ ಭಯವಾಗುತ್ತೆ. ಅವರು ನನ್ನ ಮಾತನ್ನು ನಂಬುತ್ತಾರಾ ಎನ್ನಿಸುತ್ತೆ. ಇದನ್ನು ನನ್ನ ಗಂಡನ ಬಳಿಯೂ ಹೇಳಿಕೊಳ್ಳಲು ಮನಸ್ಸಾಗುತ್ತಿಲ್ಲ. ಒಮ್ಮೆ ಅವನಿಗೆ ನೇರವಾಗಿ ನನ್ನ ಜೊತೆಗೆ ಹೀಗೆಲ್ಲಾ ನಡೆದುಕೊಳ್ಳಬೇಡಿ ಎಂದು ಹೇಳಿದರೂ ಅವರ ವರ್ತನೆ ಬದಲಾಗಿಲ್ಲ. ಅವರು ನನಗಿಂತ ಹಿರಿಯ ಅಧಿಕಾರಿ ಆಗಿರುವುದರಿಂದ ನಾನು ಅಸಹಾಯಕ ಸ್ಥಿತಿಯಲ್ಲಿದ್ದೇನೆ. ಏನಾದರೂ ಸಲಹೆ ಇದ್ದರೆ ಕೊಡಿ.

-ಅನಾಮಿಕ 

ಈ ಮಹಿಳೆಗೆ ಸಲಹೆ ನೀಡಿ. ನಿಮ್ಮ ಸಲಹೆಯನ್ನು suvarnanewsindia@gmail.com ಗೆ ಕಳುಹಿಸಿ. 
 

-ಸಾಂದರ್ಭಿಕ ಚಿತ್ರ 

loader