Asianet Suvarna News Asianet Suvarna News

Viral video: ಭಲೇ ಅಜ್ಜಿ..80ರ ವಯಸ್ಸಿನಲ್ಲಿ ಸೀರೆಯುಟ್ಟು ಪ್ಯಾರಾಗ್ಲೈಡಿಂಗ್, ನೆಟ್ಟಿಗರು ಫಿದಾ

ಜೀವನ ಅನ್ನೋದೆ ಒಂದು ದೊಡ್ಡ ಸಾಹಸ..ಆದರೂ ಜೀವನದಲ್ಲಿ ಕೆಲವೊಂದು ಸಾಹಸದ ಕ್ಷಣಗಳನ್ನು ಅನುಭವಿಸುವುದು ಒಂದು ರೀತಿಯ ಥ್ರಿಲ್‌. ಆದ್ರೆ ಹೀಗೆಲ್ಲಾ ಮಾಡೋಕೆ ವಯಸ್ಸು, ಆರೋಗ್ಯ, ಧೈರ್ಯ ಎಲ್ಲವೂ ಇರಬೇಕು ಅಂತಾರೆ ತಿಳಿದವರು. ಆದ್ರೆ ಸಾಧನೆಗೆ, ಸಾಹಸಕ್ಕೆ ವಯಸ್ಸು ಅಡ್ಡಿಯಾಗಲ್ಲ ಅನ್ನೋದನ್ನು ಇಲ್ಲೊಬ್ಬ ಅಜ್ಜಿ ಸಾಬೀತುಪಡಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Woman shares video of her late 80-yr-old grandmother paragliding Vin
Author
First Published Jan 22, 2023, 12:37 PM IST

ಜೀವನದಲ್ಲಿ ಖುಷಿಯ-ದುಃಖದ ಕ್ಷಣಗಳು ಸಾಮಾನ್ಯವಾಗಿ ಬಂದೇ ಬರುತ್ತವೆ. ಆದರೆ ಇದಲ್ಲದೆಯೂ ಜೀವನದಲ್ಲಿ ಖುಷಿಖುಷಿಯಾಗಿ ಇರಬೇಕೆಂದರೆ ಟ್ರಾವೆಲ್ ಹೋಗಬೇಕು, ಊರು ಸುತ್ತಬೇಕು, ಸಾಹಸಮಯ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಜಂಜಡದ ಜೀವನದಿಂದ ರಿಲ್ಯಾಕ್ಸ್ ಆಗಲು ಇಂಥಾ ಅಡ್ವೆಂಚರ್ ನೆರವಾಗುತ್ತವೆ. ಹೀಗಾಗಿಯೇ ಇಂದಿನ ಯುವಜನತೆ ಟ್ರಕ್ಕಿಂಗ್, ಹಿಲ್ ಕ್ಲೈಬಿಂಗ್,  ಪ್ಯಾರಾಗ್ಲೈಡಿಂಗ್‌, ಬೋಟಿಂಗ್ ಮೊದಲಾದವುಗಳನ್ನು ಮಾಡುತ್ತಿರುತ್ತಾರೆ. ಆದ್ರೆ ಇಂಥದನ್ನೆಲ್ಲಾ ಮಾಡೋಕೆ ಆರೋಗ್ಯವಾಗಿರಬೇಕು. ಯಂಗ್‌ ಹುಡುಗರು, ಹುಡುಗಿಯರು ಮಾತ್ರ ಇವನ್ನೆಲ್ಲಾ ಮಾಡ್ಬೋದು ಅಂತ ಕೆಲವರು ಹೇಳ್ತಾರೆ. ಆದ್ರೆ ಇದು ಸುಳ್ಳು ಅನ್ನೋದನ್ನು ಇಲ್ಲೊಬ್ಬ ಅಜ್ಜಿ ಸಾಬೀತುಪಡಿಸಿದ್ದಾರೆ. ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬಂತೆ ಎಲ್ಲರೂ ಅಚ್ಚರಿಗೊಳ್ಳುವಂತೆ ಪ್ಯಾರಾಗ್ಲೈಡಿಂಗ್‌ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯೊಬ್ಬರು ತನ್ನ 80 ವರ್ಷ ವಯಸ್ಸಿನ ಅಜ್ಜಿ (Grandmother) ಪ್ಯಾರಾಗ್ಲೈಡಿಂಗ್‌ ಮಾಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಜ್ಜಿ ಸೀರೆಯುಟ್ಟು ಪ್ಯಾರಾಗ್ಲೈಡಿಂಗ್‌ ಮಾಡುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಈ ವೀಡಿಯೋ ಒಂದು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ (Views)ಗಳನ್ನು ಪಡೆದುಕೊಂಡಿದೆ.

Paragliding : ಅಧ್ಬುತ ಅನುಭವ ಪಡೆಯಲು travel tips

ಎಂಭತ್ತನೇ ವಯಸ್ಸಿನಲ್ಲಿ ಸೀರೆಯುಟ್ಟು ಪ್ಯಾರಾಗ್ಲೈಡಿಂಗ್‌ ಮಾಡಿದ ಅಜ್ಜಿ
ಎಲ್ಲೆಡೆ ವೈರಲ್ ಆಗಿರುವ ಈ ಕ್ಲಿಪ್‌ನ್ನು ಆಕೆಯ ಮೊಮ್ಮಗಳು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 'ಎಂಭತ್ತನೇ ವಯಸ್ಸಿನಲ್ಲಿ ನನ್ನ ಅಜ್ಜಿ ಪ್ಯಾರಾಗ್ಲೈಡಿಂಗ್‌ ಮಾಡಿದರು. ಏಳು ವರ್ಷಗಳ ಹಿಂದೆ ತನ್ನ ಅಜ್ಜಿ ನಿಧನ (Death)ರಾದರು. ಆದರೆ ಫೋನ್‌ನ ಗ್ಯಾಲರಿ ನೋಡುತ್ತಿರುವಾಗ ಈ ವೀಡಿಯೋ ಸಿಕ್ಕಿತು' ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.  ಸೆಲಿನಾ ಮೋಸೆಸ್ ಎಂಬವರು ಹಂಚಿಕೊಂಡಿರುವ ಈ ಚಿಕ್ಕ ವೀಡಿಯೋದಲ್ಲಿ ಅವರ 80 ವರ್ಷದ ಅಜ್ಜಿ ಸೀರೆ (Saree)ಯುಟ್ಟು ಪ್ಯಾರಾಗ್ಲೈಡಿಂಗ್ ಮಾಡುವುದನ್ನು ಕಾಣಬಹುದು. ಅವರು ಸಂಪೂರ್ಣವಾಗಿ ನಿರ್ಭೀತರಾಗಿದ್ದರು. ಮತ್ತು ಸಾಹಸ ಕ್ರೀಡೆ (Adventure)ಯಲ್ಲಿ ಉತ್ಸಾಹದಿಂದ ಭಾಗವಹಿಸಿದರು., ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದರು. ಎಲ್ಲಕ್ಕಿಂತ ವಿಭಿನ್ನವಾಗಿ ಪ್ಯಾರಾಗ್ಲೈಡಿಂಗ್ ಮಾಡುವಾಗ ವಯಸ್ಸಾದ ಮಹಿಳೆ ಸೀರೆಯನ್ನು ಧರಿಸಿದ್ದರು. 

' ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ. ಏಜ್‌ ಕೇವಲ ಒಂದು ಸಂಖ್ಯೆ ಮತ್ತು ನನ್ನ ಆಯಿ ಇದನ್ನು ಸಾಬೀತುಪಡಿಸಿದ್ದಾರೆ.. ನನ್ನ ಅಜ್ಜಿ 80 ವರ್ಷದವಳಿದ್ದಾಗ ಇದನ್ನು ಮಾಡಿದ್ದಾಳೆ. ಬಹಳ ಸಮಯದ ನಂತರ ನನ್ನ ಗ್ಯಾಲರಿಯಲ್ಲಿ ಈ ವೀಡಿಯೊ ಕಂಡುಬಂದಿದೆ ಮತ್ತು ಹಂಚಿಕೊಳ್ಳುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಅವಳು ನಮ್ಮನ್ನು ಬಿಟ್ಟು ಹೋಗಿ 7 ವರ್ಷಗಳು ಕಳೆದವು. ಆದರೆ ಅವಳು ನಮ್ಮಲ್ಲಿ ಬಿಟ್ಟುಹೋದ ನೆನಪುಗಳು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಮಿಸ್ ಯು. ಲವ್ ಯೂ' ಎಂದು ಮೊಮ್ಮಗಳು ಸೆಲಿನಾ ಮೋಸೆಸ್ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾಳೆ.

ಅಯ್ಯೋ ಒಮ್ಮೆ ಕೆಳಗಿಳ್ಸಿ... ಪ್ಯಾರಾಗ್ಲೈಡಿಂಗ್ ಮಾಡಲು ಹೋಗಿ ಏನಾಯ್ತು ನೋಡಿ

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ ಒಂದು ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಇನ್‌ಸ್ಟಾಗ್ರಾಮ್ ಬಳಕೆದಾರರು ಕ್ಲಿಪ್ ಅನ್ನು ವೀಕ್ಷಿಸಿದ ನಂತರ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ. 'ಇದು ಜೀವನದಲ್ಲಿ ಬದುಕಲು ಮತ್ತು ಸಾಧನೆ (Achievement) ಮಾಡಲು ಸ್ಪೂರ್ತಿಯಾಗಿದೆ' ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಅವಳು ಸೂಪರ್ ವುಮನ್' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಜೀವನದಲ್ಲಿ ನಮ್ಮ ಕನಸನ್ನು ಬೆನ್ನಟ್ಟಿ ಈಡೇರಿಸಿಕೊಳ್ಳಲು ಇದು ನಿಜಕ್ಕೂ ಅತ್ಯಂತ ಸ್ಪೂರ್ತಿದಾಯಕ ವೀಡಿಯೋವಾಗಿದೆ' ಎಂದು ತಿಳಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by Celina Moses (@celinamoses)

Follow Us:
Download App:
  • android
  • ios