ಮಣ್ಣಿನ ಮಡಕೆಯಲ್ಲಿ ಆಹಾರವನ್ನು ತಯಾರಿಸಿ ಸೇವನೆ ಮಾಡುವುದು ಭಾರತದ ಪ್ರಾಚೀನವಾದ ಪದ್ಧತಿಯಾಗಿದೆ. ಇದರಿಂದ ಅನೇಕ ರೀತಿಯಾದ ಆರೋಗ್ಯಕರವಾದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಬೆಂಗಳೂರು : ಮಣ್ಣಿನ ಮಡಕೆಯಲ್ಲಿ ಆಹಾರವನ್ನು ತಯಾರಿಸಿ ಸೇವನೆ ಮಾಡುವುದು ಭಾರತದ ಪ್ರಾಚೀನವಾದ ಪದ್ಧತಿಯಾಗಿದೆ. ಇದರಿಂದ ಅನೇಕ ರೀತಿಯಾದ ಆರೋಗ್ಯಕರವಾದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

Add Asianetnews Kannada as a Preferred SourcegooglePreferred

ಯಾವುದೇ ರೀತಿಯಾದ ರಾಸಾಯನಿಕ ಅಂಶಗಳಿಲ್ಲದ ಮಣ್ಣಿನ ಪಾತ್ರೆ ಅಡುಗೆಯು ರುಚಿಯನ್ನು ನೀಡುತ್ತದೆ. ಇದರಲ್ಲಿ ವಿವಿಧ ರೀತಿಯಾದ ನೈಸರ್ಗಿಕ ಅಂಶಗಳೂ ಕೂಡ ಅಡಕವಾಗಿರುತ್ತದೆ.

ಮಣ್ಣಿನ ಮಡಕೆಯಲ್ಲಿ ಆಹಾರ ತಯಾರಿಸುವುದರಿಂದಾಗುವ ಆರೋಗ್ಯದ ಲಾಭಗಳು

*ಹೆಚ್ಚು ನ್ಯೂಟ್ರಿಶಿಯನ್ ಅಂಶಗಳು ಆಹಾರದಲ್ಲಿಯೇ ಉಳಿಯುತ್ತದೆ. ಯಾವುದೇ ರೀತಿಯಾದ ಆಹಾರವನ್ನೂ ಕೂಡ ಮಣ್ಣಿನ ಮಡಕೆಯ ಮೂಲಕವೇ ತಯಾರಿಸಬಹುದಾಗಿದೆ.

*ಆಯುರ್ವೇದದಲ್ಲಿ ಮಣ್ಣಿನ ಮಡಕೆಯ ಅಡುಗೆಯನ್ನೇ ಸೂಚಿಸಲಾಗುತ್ತದೆ. ಇನ್ನು ಆಹಾರದ ಗುಣಮಟ್ಟವನ್ನೂ ಕೂಡ ಹೆಚ್ಚಳ ಮಾಡುತ್ತದೆ.

*ಮಾನವನ ದೇಹಕ್ಕೆ ಹೆಚ್ಚು ಅನುಕೂಲರವಾಗಿರುತ್ತದೆ ಮಣ್ಣಿನ ಮಡಕೆಯಲ್ಲಿ ತಯಾರಿಸಿದ ಆಹಾರ. ಅಡುಗೆ ಮಾಡುವ ಹಂತದಲ್ಲಿ ಯಾವುದೇ ಉತ್ತಮ ಅಂಶಗಳು ನಷ್ಟವಾಗುವುದಿಲ್ಲ.

*ಮಣ್ಣಿನ ಮಡಕೆಯಲ್ಲಿ ಆಹಾರ ತಯಾರಿಸುವಾಗ ನೀವು ಎಣ್ಣೆಯನ್ನು ಬಳಸುವ ಅಗತ್ಯ ಇರುವುದಿಲ್ಲ.

*ಅದರಲ್ಲಿರುವ ನೈಸರ್ಗಿಕ ಅಂಶಗಳು ಆಹಾರವನ್ನು ಸೂಕ್ತ ಪ್ರಮಾಣದಲ್ಲಿ ಬೇಯಿಸಲು ಸಹಕಾರಿಯಾಗಿರುತ್ತದೆ.

*ಸೂಕ್ತವಾಗಿ ಆಹಾರವನ್ನು ಜೀರ್ಣಿಸಿಕೊಳ್ಳಲು ಉಪಯುಕ್ತವಾದ ಅಂಶಗಳು ಮಣ್ಣಿನ ಮಡಕೆಯಲ್ಲಿ ಆಹಾರ ತಯಾರಿಸುವುದರಿಂದ ಸೇರಲ್ಪಡುತ್ತದೆ.

*ನೀವು ಮಣ್ಣಿನ ಮಡಕೆಯಲ್ಲಿ ಆಹಾರ ತಯಾರಿಸಿ ತಿಂದಾಗ ಅದರಲ್ಲಿ ನೈಸರ್ಗಿಕವಾದ ಒಂದು ಸುವಾಸನೆ ಒಳಗೊಳ್ಳಲ್ಪಡುತ್ತದೆ.

*ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದಲ್ಲಿ ಮಣ್ಣಿನ ಪಾತ್ರೆಗಳು ದೊರೆಯುತ್ತದೆ.