New Year 2022: ನ್ಯೂ ಇಯರ್ ರೆಸಲ್ಯೂಷನ್ಸ್ ಫೇಲ್ ಆಗೋದು ಯಾಕೆ..?

ಹೊಸ ವರ್ಷ (NewYear) ಎಂದರೆ ಎಲ್ಲರೂ ಹೊಸ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವ ಸಮಯ. ಈ ವರ್ಷನಾದ್ರೂ ಈ ರೀತಿ ಮಾಡ್ಲೇಕಪ್ಪಾ ಎಂದು ಹಲವರು ನಿರ್ಧರಿಸುತ್ತಾರೆ. ಆದ್ರೆ ಹೀಗೆ ಫುಲ್ ಪ್ಲಾನ್ (Plan) ಮಾಡಿದ್ರೂ ಇದ್ರಲ್ಲಿ ಸಕ್ಸಸ್ ಆಗೋರು ತುಂಬಾ ಕಡಿಮೆ. ಹಲವರ ಪಾಲಿಗೆ ಪ್ಲಾನ್ ಬರೀ ಮಾತಲ್ಲೇ ಉಳಿದುಬಿಡುತ್ತದೆ. ಹಾಗಿದ್ರೆ ನ್ಯೂ ಇಯರ್‌ಗೆ ಮಾಡೋ ರೆಸಲ್ಯೂಷನ್ಸ್ ಫೇಲ್ (Fail) ಆಗೋದು ಯಾಕೆ..?
 

Why We Fail to Keep our New Year Resolutions

ನ್ಯೂ ಇಯರ್ ಅಂದ್ರೆ ನ್ಯೂ ರೆಸಲ್ಯೂಷನ್ಸ್. ಹೊಸ ವರ್ಷಕ್ಕೆ ಇನ್ನೇನು 1 ತಿಂಗಳು ಇದೆ ಎನ್ನುವಾಗಲೇ ಎಲ್ಲರೂ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳಲು ಆರಂಭಿಸುತ್ತಾರೆ. ಈ ವರ್ಷದಿಂದಲಾದ್ರೂ ಜಿಮ್‌ಗೆ ಹೋಗ್ಬೇಕು, ಈ ವರ್ಷನಾದ್ರೂ ಸೇವಿಂಗ್ಸ್ ಮಾಡ್ಬೇಕು, ಈ ವರ್ಷನಾದ್ರೂ ಈಜು ಕಲೀಬೇಕು. ಈ ವರ್ಷನಾದ್ರೂ ಡ್ರೈವಿಂಗ್ ಕಲೀಬೇಕು. ಹೀಗೆ ಒಂದಾ ಎರಡಾ ಪಟ್ಟಿ ಉದ್ದಕ್ಕೆ ಹೋಗುತ್ತಲೇ ಇರುತ್ತದೆ. ಹೊಸ ವರ್ಷ ಎಂಬ ಉತ್ಸಾಹದಲ್ಲಿ ಎಲ್ಲರೂ ನಿರ್ಧಾರವನ್ನೇನೋ ತೆಗದುಕೊಳ್ಳುತ್ತಾರೆ. ಆದ್ರೆ ಇದ್ರಲ್ಲಿ ಸಕ್ಸಸ್ ಆಗೋರು ತುಂಬಾ ಕಡಿಮೆ. 

ಹೊಸ ವರ್ಷ ಎಂದರೆ ಹೊಸತರ ಆರಂಭ. ಎಲ್ಲವನ್ನೂ ಆಶಾದಾಯಕವಾಗಿ ಉತ್ಸಾಹದಿಂದ ಮತ್ತೆ ಆರಂಭಿಸುವ ದಿನ. ಹೊಸ ವರ್ಷದ ಮೊದಲ ದಿನ ಎಲ್ಲರೂ ತಾವು ತೆಗೆದುಕೊಂಡ ನಿರ್ಧಾರವನ್ನು ಕಟ್ಟುನಿಟ್ಟಾಗಿ ಪಾಲಿಸಿರುತ್ತಾರೆ. ಕೆಲವರು ಒಂದು ವಾರದ ವರೆಗೂ ಯಾವುದೇ ತೊಂದರೆಯಿಲ್ಲದೆ ತೆಗೆದುಕೊಂಡ ನಿರ್ಧಾರವನ್ನು ಪಾಲಿಸುತ್ತಾರೆ. ಆ ನಂತರ ಮತ್ತದೇ ಬಿಝಿ ಲೈಫ್, ಜಂಜಾಟದ ಜೀವನದಲ್ಲಿ ಎಲ್ಲವೂ ಮರೆತು ಹೋಗಿಬಿಡುತ್ತದೆ. ಹಲವರ ಪಾಲಿಗೆ ಪ್ಲಾನ್ ಬರೀ ಮಾತಲ್ಲೇ ಉಳಿದುಬಿಡುತ್ತದೆ. ಹಾಗಿದ್ರೆ ನ್ಯೂ ಇಯರ್‌ಗೆ ಮಾಡೋ ರೆಸಲ್ಯೂಷನ್ಸ್ ಫೇಲ್ ಆಗೋದು ಯಾಕೆ..?

ಜನರು ಸಾಮಾನ್ಯವಾಗಿ ತಮ್ಮ ಹೊಸ ವರ್ಷದ ನಿರ್ಣಯಗಳನ್ನು ಪಾಲಿಸಲು ವಿಫಲವಾಗುವುದು ಯಾಕೆ..? ಮತ್ತು ಅದನ್ನು ಸಮರ್ಪಕವಾಗಿ ಪಾಲಿಸಲು ಏನು ಮಾಡಬಹುದು ತಿಳಿದುಕೊಳ್ಳೋಣ.

New Year 2022 : ಜನವರಿ ಒಂದರಿಂದ್ಲೇ ಏಕೆ ಶುರುವಾಗುತ್ತೆ ಹೊಸ ವರ್ಷ?

ಅವಾಸ್ತವಿಕ ಗುರಿಗಳನ್ನು ಹೊಂದಿಸುವುದು
ಹೊಸ ವರ್ಷ (Newyear)ಕ್ಕೆ ರೆಸಲ್ಯೂಶನ್ ತೆಗೆದುಕೊಳ್ಳುವಾಗ ನೀವು ಏನು ಮಾಡಲು ಬಯಸುತ್ತೀರಿ ಎಂಬುದರ ಬದಲು, ನೀವೇನು ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ. ಜನರು ಹೆಚ್ಚಾಗಿ ತುಂಬಾ ಕಷ್ಟಕರವಾದ ಟಾಸ್ಕ್‌ನ್ನು ಹೊಸ ವರ್ಷಕ್ಕೆ ರೆಸಲ್ಯೂಷನ್ (Resolutions) ಆಗಿ ತೆಗೆದುಕೊಳ್ಳುತ್ತಾರೆ. ಹೀಗಾಗಿಯೇ ಅದನ್ನು ಸಾಧಿಸುವುದು ಕಷ್ಟ ಎಂದು ಈಗಾಗಲೇ ತಿಳಿದಿರುವ ಕಾರಣ ಅದನ್ನು ಪಾಲಿಸುವ ನಿರ್ಧಾರವೂ ಸಡಿಲಗೊಳ್ಳುತ್ತಾ ಹೋಗುತ್ತದೆ. ಇನ್ನು ಕೆಲವೊಬ್ಬರು ಹೊಸ ವರ್ಷಕ್ಕೆ ತುಂಬಾ ಸುಲಭವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗಿದ್ದಾಗ ಅದ್ಹೇಗು ನಂಗೆ ಗೊತ್ತಿದ್ಯಲ್ಲಾ ಅನ್ನೋ ಮನೋಭಾವವೇ ನಿರ್ಧಾರವನ್ನು ಪಾಲಿಸಲು ಉದಾಸೀನತೆ ತರಲು ಕಾರಣವಾಗುತ್ತದೆ.

ಹೀಗಾಗಿ ಹೊಸ ವರ್ಷಕ್ಕೆ ರೆಸಲ್ಯೂಷನ್ ತೆಗೆದುಕೊಳ್ಳುವ ಮೊದಲು ಇದು ನಿರ್ಧಿಷ್ಟ ಸಮಯದಲ್ಲಿ ಪಾಲಿಸಲು ಆಗುವಂಥದ್ದಾ ? ನೀವು ನಿಗದಿಪಡಿಸಿದ ಸಮಯದ ಚೌಕಟ್ಟಿನೊಳಗೆ ಅವುಗಳನ್ನು ಸಾಧಿಸಲು ಸಾಧ್ಯವೇ? ಎಂಬುದನ್ನು ತಿಳಿದುಕೊಳ್ಳಿ. ಹೊಸ ನಿರ್ಣಯವನ್ನು ಪಾಲಿಸಲು ನಿಮ್ಮನ್ನು ನೀವು ಬದಲಾಯಿಸಿಕೊಳ್ಳಬೇಕು. ನಿಮ್ಮ ದಿನಚರಿಯಲ್ಲಿಯೂ ಬದಲಾವಣೆ ಅಗತ್ಯ ಎಂಬುದನ್ನು ಅರಿತುಕೊಳ್ಳಿ. ಕಂಫರ್ಟ್ ಝೋನ್ ನಲ್ಲೇ ಇದ್ದುಕೊಂಡು ಯಾವ ನಿರ್ಧಾರಗಳನ್ನೂ ಸರಿಯಾಗಿ ಪಾಲಿಸುವುದು ಕಷ್ಟ.

ಹೊಣೆಗಾರಿಕೆಯ ಕೊರತೆ
ಸಮರ್ಪಕ ತರಬೇತುದಾರ ಅಥವಾ ಮಾರ್ಗದರ್ಶಕರೊಂದಿಗೆ ಕೆಲಸ ಮಾಡುವುದರಿಂದ ನಿಮಗೆ ನಿಮ್ಮ ಗುರಿಯನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗುತ್ತದೆ. ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ಅದನ್ನು ಬೆಂಬಲಿಸುವವರು, ಪ್ರೋತ್ಸಾಹಿಸುವವರ ಜತೆ ಹೆಚ್ಚು ಬೆರೆಯಿರಿ. ಯಾರು ನಿಮ್ಮ ನಿರ್ಧಾರವನ್ನು ಹೀಯಾಳಿಸುತ್ತಾರೋ, ಯಾರು ನಿಮ್ಮ ನಿರ್ಧಾರಕ್ಕೆ ನಿರುತ್ಸಾಹ ವ್ಯಕ್ತಪಡಿಸುತ್ತಾರೋ ಇಂಥವರಿಂದ ದೂರವಿರಿ. ಯಾಕೆಂದರೆ ಯಾವುದೇ ಹೊಸ ನಿರ್ಧಾರವನ್ನು ಪಾಲಿಸುವಾಗಲೂ ಪ್ರೇರಣೆ ಅಗತ್ಯ.

Happy New Year 2022: ಶುಭಾಶಯ ಕೋರಲು ವಾಟ್ಸಪ್ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡಿ ಬಳಸುವುದು ಹೇಗೆ?

ನೋ ಪ್ಲಾನಿಂಗ್
ಯಾವುದೇ ನಿರ್ಧಾರವನ್ನು ಸಮರ್ಪಕವಾಗಿ ಪಾಲಿಸಲು ಯಾವಾಗಲೂ ಉತ್ತಮ ಪ್ಲಾನಿಂಗ್ (Planning) ಅಗತ್ಯವಿದೆ. ಹೀಗಾಗಿ ನೀವು ತೆಗೆದುಕೊಂಡಿರುವ ನಿರ್ಣಯವನ್ನು ಯಾವ ರೀತಿ ಪಾಲಿಸಲು ನಿರ್ಧರಿಸಿದ್ದೀರಿ ಎಂಬ ಬಗ್ಗೆ ಯೋಜನೆ ಸಿದ್ಧಪಡಿಸಿ. ಯೋಜನೆಯನ್ನು ಹಂತ ಹಂತವಾಗಿ ಪಾಲಿಸಲು ಯೋಜನೆಯನ್ನು ರೂಪಿಸಿಕೊಳ್ಳಿ. ಕ್ಯಾಲೆಂಡರ್‌ನಲ್ಲಿ ಈ ಬಗ್ಗೆ ಗುರುತು ಹಾಕಿಕೊಳ್ಳಿ. ನಿರ್ಣಯವನ್ನು ಆರಂಭಿಸಲು ಪೂರ್ತಿ ವರ್ಷವಿದೆ, ಇನ್ಯಾವ ದಿನದಿಂದಲಾದರು ಯೋಜನೆಯನ್ನು ಮತ್ತೆ ಅರಂಭಿಸಬಹುದು ಎಂಬ ಅಸಡ್ಡೆ ಬಿಡಿ. ತೆಗೆದುಕೊಂಡ ನಿರ್ಧಾರವನ್ನು ಅಚ್ಚುಕಟ್ಟಾಗಿ ಪಾಲಿಸುವುದರತ್ತ ಗಮನಕೊಡಿ.

ಆತ್ಮವಿಶ್ವಾಸದ ಕೊರತೆ
ಪ್ರತಿಯೊಬ್ಬರೂ ಹೊಸ ವರ್ಷದ ರೆಸಲ್ಯೂಷನ್ ಪಾಲಿಸುವುದರಲ್ಲಿ ವಿಫಲವಾಗುವುದರಲ್ಲಿ ಆತ್ಮವಿಶ್ವಾಸ (Confidence)ದ ಕೊರತೆ ಮುಖ್ಯ ಪಾತ್ರ ವಹಿಸುತ್ತದೆ. ನಿಮ್ಮ ಹಿಂದಿನ ವೈಫಲ್ಯಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಬಿಡಬೇಡಿ. ನಿಮ್ಮ ವೈಫಲ್ಯಗಳಿಂದ ನೀವು ಕಲಿತ ಪಾಠ ನೀವು ನಿರ್ಣಯವನ್ನು ಪಾಲಿಸಲು ಪ್ರೇರಣೆ ನೀಡಲಿ.  ಸ್ವಯಂ ವಿಮರ್ಶಾತ್ಮಕವಾಗಿರುವುದು ಅಥವಾ ಅನುಮಾನಾಸ್ಪದವಾಗಿರುವುದು ಯಾವುದೇ ರೀತಿಯಲ್ಲೂ ಸಹಾಯ ಮಾಡುವುದಿಲ್ಲ. ಬದಲಾಗಿ ನಮ್ಮ ಕುರಿತಾದ ಆತ್ಮವಿಶ್ವಾಸವನ್ನು ಮತ್ತಷ್ಟು ಕುಗ್ಗಿಸುತ್ತದೆ. ನಿಮ್ಮನ್ನು ನೀವು ನಂಬಿದರೆ, ಸರಿಯಾದ ಯೋಜನೆ, ಕಾರ್ಯಗತಗೊಳಿಸುವಿಕೆ, ಕಲಿಕೆ, ಸಹಾಯವನ್ನು ಹುಡುಕುವುದು ಮತ್ತು ಸೂಕ್ತವಾದ ತರಬೇತಿಯೊಂದಿಗೆ ನೀವು ಬಹಳಷ್ಟು ಸಾಧಿಸಬಹುದು. 

Latest Videos
Follow Us:
Download App:
  • android
  • ios