Asianet Suvarna News Asianet Suvarna News

ಮಕ್ಕಳ ಮಾತನ್ನು ತಡೀಬಾರ್ದು ಯಾಕೆ?

ಶ್... ದೊಡ್ಡವರು ಮಾತನಾಡುವಾಗ  ನಿನ್ನದೇನು?’ ‘ಪ್ರಶ್ನೆ ಕೇಳಿದ್ದು ಸಾಕು, ಮುಂದಿನ ಉತ್ತರ ಬರಿ’,‘ಮಧ್ಯ ಬಾಯಿ ಹಾಕಬೇಡ!’ ಹೀಗೆ ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು, ಎಲ್ಲರೂ ಮಕ್ಕಳ ಬಾಯಿ ಮುಚ್ಚಿಸುವವರೇ. ಒಂದು-ಎರಡು ವರ್ಷದ ಪುಟ್ಟ ಮಕ್ಕಳು, ಮೊದಲ ಬಾರಿ ತೊದಲ ನುಡಿಗಳನ್ನು ಆಡಿದಾಗ, ಎಲ್ಲರಿಗೂ ಸಂತಸ - ಆನಂದ. ಅದೇ ನಿಧಾನವಾಗಿ ಭಾಷೆ  ಬೆಳೆದು ಸಂವಹನವಾಗಿ ಮಾರ್ಪಾಡಾಗಿ, ಮಕ್ಕಳಿಗೆ ನಾಲ್ಕೈದು ವರ್ಷಗಳಾದಾಗ, ನಮಗೆ ಈ ಮಕ್ಕಳ ಪ್ರಶ್ನೆಗಳಿಗೆ ಉತ್ತರ ಕೊಡುವ ಸಹನೆ ಇಲ್ಲ. ಆದರೆ ಮಕ್ಕಳು  ಮಾತನಾಡುವುದರ ಬಗ್ಗೆ ನಾವು ವೈಜ್ಞಾನಿಕವಾಗಿ  ನೋಡಿದಾಗ ತಿಳಿದುಬರುವ ಸಂಗತಿಗಳು ಅಚ್ಚರಿಯೇ ಮೂಡಿಸಿತು.

Why we are not Stop Children

ಶ್... ದೊಡ್ಡವರು ಮಾತನಾಡುವಾಗ  ನಿನ್ನದೇನು?’ ‘ಪ್ರಶ್ನೆ ಕೇಳಿದ್ದು ಸಾಕು, ಮುಂದಿನ ಉತ್ತರ ಬರಿ’,‘ಮಧ್ಯ ಬಾಯಿ ಹಾಕಬೇಡ!’ ಹೀಗೆ ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು, ಎಲ್ಲರೂ ಮಕ್ಕಳ ಬಾಯಿ ಮುಚ್ಚಿಸುವವರೇ. ಒಂದು-ಎರಡು ವರ್ಷದ ಪುಟ್ಟ ಮಕ್ಕಳು, ಮೊದಲ ಬಾರಿ ತೊದಲ ನುಡಿಗಳನ್ನು ಆಡಿದಾಗ, ಎಲ್ಲರಿಗೂ ಸಂತಸ - ಆನಂದ. ಅದೇ ನಿಧಾನವಾಗಿ ಭಾಷೆ  ಬೆಳೆದು ಸಂವಹನವಾಗಿ ಮಾರ್ಪಾಡಾಗಿ, ಮಕ್ಕಳಿಗೆ ನಾಲ್ಕೈದು ವರ್ಷಗಳಾದಾಗ, ನಮಗೆ ಈ ಮಕ್ಕಳ ಪ್ರಶ್ನೆಗಳಿಗೆ ಉತ್ತರ ಕೊಡುವ ಸಹನೆ ಇಲ್ಲ. ಆದರೆ ಮಕ್ಕಳು  ಮಾತನಾಡುವುದರ ಬಗ್ಗೆ ನಾವು ವೈಜ್ಞಾನಿಕವಾಗಿ  ನೋಡಿದಾಗ ತಿಳಿದುಬರುವ ಸಂಗತಿಗಳು ಅಚ್ಚರಿಯೇ ಮೂಡಿಸಿತು.

ಮಕ್ಕಳ ಮಾತಿನಲ್ಲೇನಿರಬಹುದು?
ನಾಲ್ಕು ವರ್ಷ ವಯಸ್ಸಿನ ಎರಡು ಮಕ್ಕಳು ಮಾತನಾಡುತ್ತಿದ್ದಾರೆಂದು ಊಹಿಸಿಕೊಳ್ಳಿ. ಅವರ ಸಂಭಾಷಣೆಯಲ್ಲಿ ನಾವು ವಿವಿಧ ಉದ್ದೇಶಗಳನ್ನು ಕಾಣಬಹುದು. ಯಾವುದೋ ವಸ್ತುವಿನ ಬಗ್ಗೆ ಗಮನ ನೀಡುತ್ತಿರಬಹುದು, ತಾವು ನೋಡಿದ ಸಂಗತಿಗಳನ್ನು ಒಬ್ಬರಿಗೊಬ್ಬರು ಹೇಳುತ್ತಿರಬಹುದು, ಭವಿಷ್ಯದ ಬಗ್ಗೆ ಹೇಳುತ್ತಿರಬಹುದು.  ಆಸೆ-ಆಕಾಂಕ್ಷೆಗಳನ್ನು, ಭಾವನೆಗಳನ್ನು ವ್ಯಕ್ತಪಡಿಸುತ್ತಿರಬಹುದು,ತಮ್ಮ ತಮ್ಮಲ್ಲೇ ಚರ್ಚೆ ಮಾಡುತ್ತಿರಬಹುದು. ತಮ್ಮ ಪೂರ್ವ ಅನುಭವಗಳನ್ನು ಮೆಲುಕು ಹಾಕುತ್ತಿರಬಹುದು. ದೊಡ್ಡವರಾಗಿ ಮಕ್ಕಳಿಗೆ ಆದೇಶಗಳನ್ನು ಕೊಡುವುದೇ  ನಮ್ಮ ಕೆಲಸವೆಂದುಕೊಳ್ಳುತ್ತೇವೆ. ಆದರೆ ಒಂದು ಬಾರಿಯಾದರೂ, ಪುಟ್ಟ ಮಕ್ಕಳ ಸಂಭಾಷಣೆ ಕಿವಿಗೊಟ್ಟು ಆಲಿಸಿದರೆ, ಮೇಲೆ ಹೇಳಿದ ಎಲ್ಲವನ್ನೂ ಅವರ  ಸಂಭಾಷಣೆಯಲ್ಲಿ ಗಮನಿಸಬಹುದು.
 

ಮಾತಾಡೋ ಮಕ್ಕಳು ಹೀಗಿರ‌್ತಾರೆ ಹಾಗಾದರೆ, ಈ ಪುಟ್ಟ ಮಕ್ಕಳ ಭಾಷಾ ಸಾಮರ್ಥ್ಯವನ್ನು ನಾವು ಪೋಷಕರಾಗಿ ಇನ್ನೂ ಹೆಚ್ಚು ಬೆಳೆಸಲು ಸಾಧ್ಯವೇ?
ಹೌದು, ಎನ್ನುತ್ತದೆ ಮನೋವೈಜ್ಞಾನಿಕ ಶಾಸ್ತ್ರ. ಶಾಲೆ/ಕೆ.ಜಿ. ಸೇರಿಸುವಾಗ ಯಾವ ಮಕ್ಕಳ ಭಾಷಾ ಮತ್ತು ಸಂವಹನಾ ಸಾಮರ್ಥ್ಯ ಚೆನ್ನಾಗಿರುತ್ತದೋ ಅಂತಹ ಮಕ್ಕಳು ಶಾಲಾ ಕಲಿಕೆಯಲ್ಲಿ ಕೂಡ ಉನ್ನತ ಸಾಧನೆಗೈಯಬಲ್ಲರು ಎನ್ನುತ್ತವೆ ಅಧ್ಯಯನಗಳು. ಪೋಷಕರಾಗಿ ನಾವು ಮತ್ತು ಶಾಲೆಯಲ್ಲಿ ಶಿಕ್ಷಕರು ವೈಜ್ಞಾನಿಕವಾಗಿ ತಿಳಿದು ಪುಟ್ಟ ಮಕ್ಕಳಿಗೆ ಮಾತನಾಡಲು ಅವಕಾಶ ಕೊಟ್ಟರೆ ಅವರ ಬೆಳವಣಿಗೆ ಸಕಾರಾತ್ಮಕವಾಗಿ ಆಗಲು ಸಾಧ್ಯ. ನಾವು ಮನೆಗಳಲ್ಲಿ, ಶಾಲೆಯ ಕ್ಲಾಸ್‌ರೂಂನಲ್ಲಿ ಮಕ್ಕಳಿಗೆ  ಮಾತನಾಡುವುದಕ್ಕೆ, ತನ್ಮೂಲಕ ಭಾಷೆ/ಸಂವಹನ ಕಲಿಕೆಗೆ ಹಲವಾರು ಚಟುವಟಿಕೆಗಳನ್ನು/ ಅವಕಾಶಗಳನ್ನು ಕೊಡಬಹುದು.

ಮಕ್ಕಳ ಸಂವಹನಕ್ಕೆ ಏನೆಲ್ಲ ಮಾಡಬಹುದು?
ಕತೆ ಹೇಳಲೆ ಕಂದ ಕತೆಯನ್ನು ಮಕ್ಕಳಿಗೆ ಹೇಳಲು, ನಾವೇನೂ ಕತೆಗಾರರೇ ಆಗಬೇಕೆಂದಿಲ್ಲ. ಸಿಗುವ ಪುಸ್ತಕಗಳಲ್ಲಿ ಪುಟ್ಟ ಪುಟ್ಟ ಕತೆಗಳನ್ನು ಓದಿ, ನಿಮ್ಮ ಮಕ್ಕಳಿಗೆ ಇಷ್ಟವಾಗಬಹುದೆನ್ನಿಸುವ ವಿಷಯಗಳ ಕತೆಗಳನ್ನು ಹೇಳಿ. ನೀವು ಸಪ್ಪೆಯಾಗಿ ಒಂದೇ ಧ್ವನಿಯಲ್ಲಿ ನೀರಸವಾಗಿ ಹೇಳಿದರೆ ಮಕ್ಕಳ ಪ್ರತಿಕ್ರಿಯೆಯೂ ನೀರಸವಾಗಿರುತ್ತದೆ. ನಾವೂ ನಾಚಿಕೆಪಟ್ಟುಕೊಳ್ಳದೆ, ನಾಟಕೀಯವಾಗಿ, ಧ್ವನಿಯ ಏರಿಳಿತಗಳೊಂದಿಗೆ ಕತೆ ಹೇಳಬೇಕು. ಸಾಮಾನ್ಯವಾಗಿ ಕತೆಯ ನೀತಿಯನ್ನು  ಎಲ್ಲರೂ ಕೇಳುತ್ತಾರೆ. ಆದರೆ ಆ ನೀತಿಗಿಂತ, ಕತೆಯ  ವರ್ಣನೆ, ಮಧ್ಯ ಮಧ್ಯ ಮಕ್ಕಳ ಅನಿಸಿಕೆಯೇ ಮುಖ್ಯ. ನಿಧಾನವಾಗಿ ಮಕ್ಕಳೂ ಪುಟ್ಟ ಪುಟ್ಟ ಕತೆಗಳನ್ನು ತಮಗೆ ಬಂದಂತೆ ಹೇಳುವುದಕ್ಕೆ ಪ್ರೋತ್ಸಾಹಿಸಿ.

ಚಿತ್ರ-ಛಾಯಾಚಿತ್ರಗಳೊಂದಿಗೆ ಮಾತು-ಕತೆ ಮನೆಯಲ್ಲಿರುವ ಭಾವಚಿತ್ರಗಳು, ದಿನಪತ್ರಿಕೆಯಲ್ಲಿನ ಛಾಯಾಚಿತ್ರಗಳು ತೆಗೆದುಕೊಂಡು ಮಕ್ಕಳಿಗೆ ತೋರಿಸಿ. ಆದರ ಬಗ್ಗೆ ಕತೆ ಹೇಳಿ, ಪ್ರಶ್ನೆ ಕೇಳಿ, ವಿವರಿಸಿ. ಯಾರೋ ಗೊತ್ತಿರುವವರನ್ನು ಹುಡುಕಲು ಹೇಳಿ. ಅವರು ಧರಿಸಿರುವ ಬಟ್ಟೆಗಳ ಬಣ್ಣಗಳ ಕುರಿತು ಮಾತನಾಡಿ. ಆ ಚಿತ್ರದಲ್ಲಿನ  ಘಟನೆಗಳನ್ನು ವಿವರಿಸಿ.

ತಮ್ಮ ಬಗ್ಗೆ ಮಾತನಾಡಲು ಅವಕಾಶ ನೀಡಿ ಮನೆಯಲ್ಲಿ, ಶಾಲೆಯಲ್ಲಿ ಆದ ಘಟನೆಗಳಲ್ಲಿ, ಮಕ್ಕಳು ತಮ್ಮ ಬಗ್ಗೆ ಮಾತನಾಡಲು ಅವಕಾಶ ಕೊಡಿ. ಪುಟ್ಟ ಮಕ್ಕಳು ಪ್ರಾರಂಭಿಸುವಾಗ ಹೇಳುವುದೇ ಹೀಗೆ ‘ನಾನುಬರ್ತಿದ್ದೆನಲ್ಲಾ, ವ್ಯಾನನಲ್ಲಿ, ಆಗ ಏನಾಯಿತು ಗೊತ್ತಾ?’ ಎಂದು ಶುರುಮಾಡುತ್ತಾರೆ. ತನಗೆ ಯಾವ ಕಾರು/ಬಣ್ಣ ಇಷ್ಟ, ತನ್ನ ಸ್ನೇಹಿತರಾರು ಎಲ್ಲವನ್ನೂ ಹೇಳಲು ಪ್ರೋತ್ಸಾಹಿಸಿ. ಮನೆಯಲ್ಲಿನ ಸುತ್ತಮುತ್ತಲಿನ ಜಾಗಗಳಿಗೆ ಕರೆದೊಯ್ದು, ಮಕ್ಕಳಿಗೆ ಮಾತನಾಡಲು ಪ್ರೇರೇಪಿಸಿ. ಮೊದಮೊದಲಿಗೆ, ಮನೆಯಲ್ಲಿನ ವಸ್ತುಗಳಿರಬಹುದು, ನಂತರ ಹೊರಗಿನ ಪರಿಸರದ ಬಗ್ಗೆ ಮಾಡಬಹುದು. ಉದಾಹರಣೆಗೆ ಮಳೆ ಬರುತ್ತಿದೆ ಎಂದುಕೊಳ್ಳೋಣ. ಮಳೆಯ ಹನಿಗಳು ಮಾಡುವ ಶಬ್ದದ ಬಗ್ಗೆ, ಆಕಾಶದ ಮೋಡದ ಬಗ್ಗೆ, ಹೀಗೆ ನಮ್ಮ ಸೃಜನಶೀಲ ಮನಸ್ಸನ್ನೂ ಒರೆಗೆ ಹಚ್ಚಬೇಕು

Follow Us:
Download App:
  • android
  • ios