Asianet Suvarna News Asianet Suvarna News

ಘಾನಾ ದೇಶದ ಮೋ ಇಸ್ಸಾಗೆ ಭಗವದ್ಗೀತೆ ಯಾಕಿಷ್ಟ?

ನಾನು ಯೋಗ ಮಾಡೋದಿಲ್ಲ, ಧ್ಯಾನವೂ ನನಗೆ ಕಷ್ಟ. ಆದರೆ ದಿನಾ ಮುಂಜಾನೆ ಬಹಳ ಬೇಗ ಏಳುತ್ತೇನೆ. ನನ್ನ ಆತ್ಮಕ್ಕೆ ಸಣ್ಣ ಸೇತುವೆಯೊಂದನ್ನು ಕಟ್ಟಲು ಪ್ರಯತ್ನಿಸುತ್ತೇನೆ  ಎಂದು ತಮ್ಮ ಪರಿಚಯ ಮಾಡಿಕೊಳ್ಳುವ ಆಧ್ಯಾತ್ಮ ಚಿಂತಕ ಮೋ ಇಸ್ಸಾ ಘಾನಾ ದೇಶದವರು. ‘ನಾನು ನಾನು ಧರ್ಮ ವಿರೋಧಿ, ಆಧ್ಯಾತ್ಮ ಪ್ರಿಯ’ ಎನ್ನುವ ಇವರು ಭಗವದ್ಗೀತೆಯಿಂದ ತನಗೆ ಪ್ರೇರಣೆ ಸಿಕ್ಕಿದ್ದನ್ನು ಹೇಳಿಕೊಂಡಿದ್ದಾರೆ.

Why Mo issa Like Bhagavadgetha

ನಾನು ಯೋಗ ಮಾಡೋದಿಲ್ಲ, ಧ್ಯಾನವೂ ನನಗೆ ಕಷ್ಟ. ಆದರೆ ದಿನಾ ಮುಂಜಾನೆ ಬಹಳ ಬೇಗ ಏಳುತ್ತೇನೆ. ನನ್ನ ಆತ್ಮಕ್ಕೆ ಸಣ್ಣ ಸೇತುವೆಯೊಂದನ್ನು ಕಟ್ಟಲು ಪ್ರಯತ್ನಿಸುತ್ತೇನೆ  ಎಂದು ತಮ್ಮ ಪರಿಚಯ ಮಾಡಿಕೊಳ್ಳುವ ಆಧ್ಯಾತ್ಮ ಚಿಂತಕ ಮೋ ಇಸ್ಸಾ ಘಾನಾ ದೇಶದವರು. ‘ನಾನು ನಾನು ಧರ್ಮ ವಿರೋಧಿ, ಆಧ್ಯಾತ್ಮ ಪ್ರಿಯ’ ಎನ್ನುವ ಇವರು ಭಗವದ್ಗೀತೆಯಿಂದ ತನಗೆ ಪ್ರೇರಣೆ ಸಿಕ್ಕಿದ್ದನ್ನು ಹೇಳಿಕೊಂಡಿದ್ದಾರೆ.

"ನಾನು ಮೂಲತಃ ವರ್ತಕ, ಲೇಖಕ. ನನ್ನದು ಪ್ರಾಕ್ಟಿಕಲ್ ಆಧ್ಯಾತ್ಮ. ವೆಬ್‌ಸೈಟ್ ಹಾಗೂ ಬ್ಲಾಗ್‌ನಲ್ಲಿ ಬರೀತೀನಿ, ಅದು ಹೆಚ್ಚು ಜನಕ್ಕೆ ತಲುಪಬೇಕು ತಲುಪಬೇಕು ಎಂಬ ಆಸೆ ಇತ್ತು, ಈಗಿಲ್ಲ ಬಿಡಿ. ಬಹುಶಃ ನನ್ನ ಬರಹ ಅಷ್ಟಾಗಿ ಆಕರ್ಷಕವಾಗಿಲ್ಲದೇ ಹೋಯ್ತೋ, ಬಹಳ ಯಾಂತ್ರಿಕವಾಯ್ತೋ ಏನೋ, ಬ್ಲಾಗ್ ಓದುಗರ ಸಂಖ್ಯೆ ಮೊದಲೆಷ್ಟಿತ್ತೋ ಅಷ್ಟೇ ಇತ್ತು. ಯಾರೊಬ್ಬರೂ ನನ್ನ ಬ್ಲಾಗ್ ಬರಹವನ್ನು ಗಂಭೀರವಾಗಿ ಪರಿಗಣಿಸಿದಂತಿರಲಿಲ್ಲ, ಕಮೆಂಟ್‌ಗಳೂ ತೀರಾ ಸಾಮಾನ್ಯವಾಗಿದ್ದವು. ನನ್ನೊಳಗೇ ಕೀಳರಿಮೆ ಶುರುವಾಯ್ತು, ನನಗೆ ಉಳಿದವರಂತೆ ಅದ್ಭುತವಾಗಿ ಬರೆಯಲು ಬರುವುದಿಲ್ಲ, ಹೀಗೆಲ್ಲ ಲಘುವಾಗಿ ಗೀಚೋದರಿಂದ ಏನು ಪ್ರಯೋ ಜನ, ಬರವಣಿಗೆಯನ್ನೇ ನಿಲ್ಲಿಸಿಬಿಡೋದು ಒಳ್ಳೆಯದೇನೊ? ಅಂತೆಲ್ಲ ಅನಿಸತೊಡಗಿತು. ಹಾಗೆ ನಿದ್ದೆ ಹೋದೆ.

ಮಾರನೆಯ ದಿನ ಬಹಳ ಬೇಗ ಎದ್ದೆ. ಭಗವದ್ಗೀತೆ ಕೈಗೆತ್ತಿಕೊಂಡೆ. ಶಸ್ತ್ರಸಜ್ಜಿತ ಬೃಹತ್ ಕೌರವ ಸೇನೆ ಕಂಡು ಉಭಯಸಂಕಟದಲ್ಲಿದ್ದ ಅರ್ಜುನ. ಕೃಷ್ಣ ಅವನಿಗೆ ಯುದ್ಧ ಮಾಡುವಂತೆ ಪ್ರೇರೇಪಿಸುತ್ತಾ ಅವನ ಕರ್ತವ್ಯ ನೆನಪಿಸುತ್ತಿದ್ದ. ಯುದ್ಧಭೂಮಿಯಲ್ಲಿ ಹಿಂಸೆಯಿಂದ ಹಿಂದೆ ಸರಿಯುತ್ತೇನೆ ಎಂದವ ಅರ್ಜುನ. ಇಲ್ಲ, ನೀನು ಯುದ್ಧ ಮಾಡಲೇ ಬೇಕು ಎಂದು ಹಿಂಸೆಯತ್ತ ನಡೆಸಿದವ ಕೃಷ್ಣ.

ಅಂದರೆ ಭಗವದ್ಗೀತೆ ಹಿಂಸೆಗೆ ಪ್ರಚೋದನೆಯೇ? ಮೊದ ಮೊದಲಿಗೆ ಭಗವದ್ಗೀತೆ ಓದುವಾಗ ಈ ಪ್ರಶ್ನೆ ಬರುತ್ತಿತ್ತು. ಬಳಿಕ ಗೀತೆಯ ಅಂತರಾರ್ಥ ತಿಳಿಯಿತು. ಭಾರತ ಅಹಿಂಸೆಯ ನಾಡು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧಿಯ ಮೂಲಮಂತ್ರ ಅಹಿಂಸೆ. ಅವರ ಮನಸ್ಸಿಗೆ ಹತ್ತಿರವಾದದ್ದು ಭಗವದ್ಗೀತೆ. ಜಗತ್ತಿಗೆ ಅಹಿಂಸೆಯ ಸಂದೇಶ ಸಾರಿದ ಅನೇಕ ಮಹಾತ್ಮರು ಭಗವದ್ಗೀತೆಯನ್ನು ಇಷ್ಟಪಡುತ್ತಾರೆ. ನಾನು ಕವಿ ರಾಲ್ಫ್ ವಾಲ್ಟೊ ಎಮರ್ಸನ್ ಸೇರಿದಂತೆ ಹಲವರು ಭಗವದ್ಗೀತೆ ಬಗ್ಗೆ ಬರೆದ ವ್ಯಾಖ್ಯಾನಗಳನ್ನು ಓದಿದ್ದೇನೆ. ನನ್ನ ಗೊಂದಲಗಳಿಗೆ ಅಲ್ಲಿ ಪರಿಹಾರ ಸಿಕ್ಕಿದೆ. ಜಗತ್ತಿನಲ್ಲಿ ಇನ್ನೂ ನಾಗರಿಕತೆ ಆರಂಭವಾಗುತ್ತಿದ್ದ ಹೊತ್ತಿನಲ್ಲಿ ಪ್ರಚಂಡ ಬುದ್ಧಿವಂತನೊಬ್ಬ ಎಷ್ಟೋ ಸಹಸ್ರ ವರ್ಷಗಳ ನಂತರವೂ ಮನುಷ್ಯನಿಗೆ ಬರಬಹುದಾದ ಸಂದೇಹಗಳಿಗೆ ಉತ್ತರಿಸಿದ್ದು ಅದ್ಭುತ ಅನಿಸುತ್ತದೆ. ಅಂದು ಅರ್ಜುನನಿಗೆ ಬಂದ ಸಂದಿಗ್ಧತೆ ಅನ್ಯರೂಪದಲ್ಲಿ ನಮಗೂ ಬರುತ್ತದೆ. ಅರ್ಜುನನಿಗೆ ಕೃಷ್ಣ  ನೀಡಿದ ಉತ್ತರ ನನ್ನ ಸಂದೇಹಗಳನ್ನೂ ಪರಿಹರಿಸುತ್ತದೆ! ಹಿಂದಿನ ದಿನದ ನನ್ನ ಗೊಂದಲಕ್ಕೆ ಉತ್ತರ ಭಗವದ್ಗೀತೆಯಲ್ಲಿ ಸಿಕ್ಕಿತು. ನಾನು ಮುಖ್ಯವಾಹಿನಿಯ ಬ್ಲಾಗರ್ ಆಗ್ತಿಲ್ಲ ಅಂತ ಹತಾಶೆಯಾಗಿತ್ತು. ಫಾಲೋವರ್ಸ್ ಇಷ್ಟು ಕಡಿಮೆ ಇರುವಾಗ ಬರೀಬೇಕಾ ಬೇಡ್ವಾ ಅನ್ನುವ ಗೊಂದಲವಿತ್ತು. ಗೀತೆಯಲ್ಲಿ ಬಹಳ ಸ್ಟ್ರಾಂಗ್ ಆದ ಒಂದು ವಾಕ್ಯವಿತ್ತು,‘ಪ್ರೀತಿಯಿಂದ ಕೆಲಸ ಮಾಡು. ಗುರಿಯತ್ತ ಚಿತ್ತನೆಡು’  ಇಷ್ಟೇ ಅಲ್ಲ,ಆ ವಾಕ್ಯ ಮುಂದುವರಿದಿತ್ತು, ‘ಮಾಡುವ ಕೆಲಸದಲ್ಲಷ್ಟೇ ನಿನಗೆ ಅಧಿಕಾರ, ಪ್ರತಿಫಲದಲ್ಲಲ್ಲ’ ನಾನೊಬ್ಬ ಲೇಖಕ. ಬರೆಯೋದು ನನ್ನ ಪ್ರೀತಿಯ ಕೆಲಸ. ಬಹಳ ಆಳವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಆತ್ಮಕ್ಕೆ ಹತ್ತಿರವಾಗಿ ಬರೀಬೇಕು. ಹಾಗೆ ಬರೆದು ಮುಗಿಸಿದ ಮೇಲೆ ವರ್ಣಿಸಲಾಗದ ಖುಷಿ ನನ್ನೊಳಗೆ. ಈ ಬರಹ ಓದಿದ ಓದುಗರಲ್ಲೂ ಆ ಖುಷಿ ಇರುತ್ತದೆ. ಉಳಿದಂತೆ ಬೇರೆಲ್ಲ ಲೆಕ್ಕಾಚಾರಗಳು ನನಗೆ ಸಂಬಂಧಿಸಿದ್ದಲ್ಲ.

ನಾವು ಹೊಟ್ಟೆಪಾಡಿಗಾಗಿ ಮಾಡುವ ಕೆಲಸವನ್ನೇ ತಗೊಳ್ಳಿ, ಟಾರ್ಗೆಟ್, ರಿಸಲ್ಟ್‌ಗಳ ಹಂಗಿಲ್ಲದೇ ಕೆಲಸದಲ್ಲಿ ತೊಡಗಿಸಿದರೆ ಉದ್ಯೋಗದಲ್ಲಿ ಪ್ರೀತಿ ಹುಟ್ಟುತ್ತದೆ. ಅದರಲ್ಲೊಂದು ಸಿಂಪಲ್ ಬ್ಯೂಟಿ ಇದೆ. ನಾವು ರಿಸಲ್ಟ್‌ಯನ್ನೇ ಮುಖ್ಯವಾಗಿ ತೆಗೆದುಕೊಂಡರೆ ಆ ಬ್ಯೂಟಿ, ಪ್ರೀತಿ ಮಾಯವಾಗುತ್ತದೆ. ನಾನು ಬ್ಲಾಗ್ ಬರೆಯೋದನ್ನು ಮುಂದುವರಿಸಿದೆ. ಜನಪ್ರಿಯತೆಗೆ ಹಪಿಹಪಿ ಇರಲಿಲ್ಲ, ಯಾಂತ್ರಿಕತೆಯ ಲವಲೇಶವೂ ಇರಲಿಲ್ಲ, ನನ್ನ ಬರಹದೊಳಗೆ ಜೀವಂತಿಕೆ ಇತ್ತು. ಅದು ಇನ್ನೊಬ್ಬನೊಳಗೂ ಇಳಿಯುವಂತಿತ್ತು. ಭಗವದ್ಗೀತೆಯನ್ನು ಆಗಾಗ ಓದುತ್ತಿದ್ದೆ. ಬದುಕಿನ ಬಗ್ಗೆ ನನ್ನ ದೃಷ್ಟಿಕೋನ ಬದಲಾಯಿತು. ಗೊಂದಲಗಳ ಜಾಗದಲ್ಲಿ ನಿಖರತೆ ಮೂಡಲಾರಂಭಿಸಿತು. ನೀವು ಯಾವುದೇ ಉದ್ಯೋಗ ಮಾಡುತ್ತಿರಿ, ಆದರೆ ಒಮ್ಮೆ ಭಗವದ್ಗೀತೆ ಓದಿ"!

 

Follow Us:
Download App:
  • android
  • ios