Washing Machine Not Cleaning Clothes: ವಾಶಿಂಗ್ ಮಶಿನ್‌ನಲ್ಲಿ ಬಟ್ಟೆಗಳು ಸರಿಯಾಗಿ ಸ್ವಚ್ಛವಾಗದಿದ್ದರೆ, ದೋಷ ಮಶಿನ್‌ನದ್ದಲ್ಲ. ಅತಿಯಾಗಿ ಬಟ್ಟೆ ತುಂಬುವುದು, ತಪ್ಪಾದ ಡಿಟರ್ಜೆಂಟ್ ಬಳಕೆ, ಮತ್ತು ಮೆಷಿನ್ ಅನ್ನು ಸ್ವಚ್ಛವಾಗಿಡದಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಸಾಮಾನ್ಯ ತಪ್ಪುಗಳನ್ನು ಸರಿಪಡಿಸುವ ಮೂಲಕ ನಿಮ್ಮ ಬಟ್ಟೆಗಳನ್ನು ಹೊಸದರಂತೆ ಸ್ವಚ್ಛಗೊಳಿಸಬಹುದು.

Washing Machine Not Cleaning Clothes

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾಶಿಂಗ್‌ ಮಶಿನ್‌ಗೆ ಬಟ್ಟೆ ಹಾಕಿ ತುಂಬ ಹೊತ್ತು ಕ್ಲೀನ್‌ ಮಾಡಿದರೂ ಕೂಡ ಬಟ್ಟೆ ಕ್ಲೀನ್‌ ಆಗಿಲ್ಲ ಎಂದು ಕೆಲವರು ಗೊಣಗುತ್ತೀರಿ, ವಾಶಿಂಗ್‌ ಮಶಿನ್‌ ಸರಿಯಾಗಿಲ್ಲ ಎಂದು ಯೋಚಿಸಬೇಡಿ. ಇದನ್ನು ರಿಪೇರಿ ಮಾಡುವ ಬದಲು ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆ.

ಏನೇನು ಬದಲಾವಣೆ ಮಾಡಿಕೊಳ್ಳಬೇಕು?

1. ಅತಿಯಾಗಿ ಬಟ್ಟೆ ತುಂಬಿಸುವುದು (Overloading): ಡ್ರಮ್‌ನಲ್ಲಿ ಜಾಗವೇ ಇಲ್ಲದಂತೆ ಬಟ್ಟೆಗಳನ್ನು ತುರುಕುವುದರಿಂದ, ನೀರು ಮತ್ತು ಡಿಟರ್ಜೆಂಟ್ ಎಲ್ಲ ಕಡೆಗೂ ಸಮನಾಗಿ ಹರಡಲು ಸಾಧ್ಯವಾಗುವುದಿಲ್ಲ. ಬಟ್ಟೆಗಳು ಒಂದಕ್ಕೊಂದು ಉಜ್ಜಿಕೊಳ್ಳದ ಕಾರಣ ಕೊಳಕು ಹಾಗೇ ಉಳಿಯುತ್ತದೆ.

2. ಡಿಟರ್ಜೆಂಟ್ ಪ್ರಮಾಣದ ತಪ್ಪು: ಅತಿ ಹೆಚ್ಚು ಸೋಪ್ ಪುಡಿ ಬಳಸಿದರೆ ಮೆಷಿನ್‌ನಲ್ಲಿ ಜಿಗುಟಾದ ನೊರೆ ಉಳಿದು ಬಟ್ಟೆ ವಾಸನೆ ಬರುತ್ತದೆ. ಹಾಗೆಯೇ ತುಂಬಾ ಕಡಿಮೆ ಬಳಸಿದರೆ ಜಿಡ್ಡು, ಕಲೆಗಳು ಹೋಗುವುದೇ ಇಲ್ಲ.

3. ಮೆಷಿನ್ ಕ್ಲೀನ್ ಮಾಡದಿರುವುದು: ವಾಷಿಂಗ್ ಮೆಷಿನ್ ಕೂಡ ಕಾಲಕಾಲಕ್ಕೆ ಸ್ವಚ್ಛತೆ ಬಯಸುತ್ತದೆ. ಇದರ ಟಬ್, ರಬ್ಬರ್ ರಿಂಗ್ ಹಾಗೂ ಡಿಟರ್ಜೆಂಟ್ ಬಾಕ್ಸ್‌ನಲ್ಲಿ ಬ್ಯಾಕ್ಟೀರಿಯಾ ಮತ್ತು ಬೂಷ್ಟು (Mold) ಕಟ್ಟಿಕೊಳ್ಳುವುದರಿಂದ ಬಟ್ಟೆಗಳು ಕೊಳಕಾಗುತ್ತವೆ.

4. ತಪ್ಪು ತಾಪಮಾನದ ನೀರು: ಜಿಡ್ಡು ಹಾಗೂ ಗಟ್ಟಿಯಾದ ಕಲೆಗಳನ್ನು ಹೋಗಲಾಡಿಸಲು ಉಗುರುಬೆಚ್ಚಗಿನ ನೀರು ಬೇಕು. ತಣ್ಣೀರಿನಲ್ಲಿ ಇವು ಬೇಗನೆ ಕರಗುವುದಿಲ್ಲ. ಆದರೆ ಸೂಕ್ಷ್ಮ ಬಟ್ಟೆಗಳಿಗೆ ತಣ್ಣೀರು ಬಳಸಿ.

5. ಬ್ಲಾಕ್ ಆದ ಫಿಲ್ಟರ್: ಮೆಷಿನ್‌ನಲ್ಲಿರುವ ಕಸದ ಫಿಲ್ಟರ್‌ನಲ್ಲಿ ನೂಲು, ಕೂದಲು, ಕಾಯಿನ್‌ಗಳು ಸಿಕ್ಕಿಬಿದ್ದರೆ ಕೊಳಕು ನೀರು ಹೊರಹೋಗಲು ಕಷ್ಟವಾಗುತ್ತದೆ. ಪರಿಣಾಮ, ಬಟ್ಟೆಗಳು ಜಿಡ್ಡಿನಿಂದ ಕೂಡಿರುತ್ತವೆ.

6. ಸೂಕ್ತವಲ್ಲದ ವಾಶ್ ಮೋಡ್: ತುಂಬಾ ಕೊಳಕಾಗಿರುವ ಬಟ್ಟೆಗಳಿಗೆ 'ಕ್ವಿಕ್ ವಾಶ್' (Quick Wash) ಆಯ್ಕೆ ಮಾಡಿದರೆ ಸಾಲದು. ಬಟ್ಟೆಯ ದಪ್ಪ ಹಾಗೂ ಕಲೆಗಳಿಗೆ ತಕ್ಕಂತೆ ಸರಿಯಾದ ಪ್ರೋಗ್ರಾಂ ಸೆಟ್ ಮಾಡಿ.

7. ಹಾರ್ಡ್ ವಾಟರ್ (ಗಡಸು ನೀರು) ಸಮಸ್ಯೆ: ಉಪ್ಪು ನೀರು ಅಥವಾ ಗಡಸು ನೀರಿದ್ದರೆ ಡಿಟರ್ಜೆಂಟ್ ಸರಿಯಾಗಿ ನೊರೆ ಕೊಡುವುದಿಲ್ಲ. ಇದು ಮೆಷಿನ್ ಒಳಗಡೆ ಉಪ್ಪಿನ ಪದರವನ್ನು (Limescale) ಸೃಷ್ಟಿಸಿ ಅದರ ದಕ್ಷತೆಯನ್ನೇ ಕುಗ್ಗಿಸುತ್ತದೆ.

ಸಲಹೆ: ತಿಂಗಳಿಗೊಮ್ಮೆಯಾದರೂ ವಾಷಿಂಗ್ ಮೆಷಿನ್ ಕ್ಲೀನರ್ ಪುಡಿ ಅಥವಾ ಬಿಸಿ ನೀರನ್ನು ಬಳಸಿ ಮೆಷಿನ್ ಅನ್ನು 'ಡ್ರಮ್ ಕ್ಲೀನ್' ಮಾಡಿ.