ಫೈವ್ ಸ್ಟಾರ್ Hotels ನಲ್ಲಿ ಫ್ಯಾನ್ ಯಾಕೆ ಇರಲ್ಲ ಗೊತ್ತಾ?
ಫೈವ್ ಸ್ಟಾರ್ ಹೊಟೇಲ್ ನಲ್ಲಿ ರಾತ್ರಿ ಕಳಿಬೇಕು ಅಂತಾ ದುಬಾರಿ ಹಣ ಕೊಟ್ಟು ರೂಮ್ ಬುಕ್ ಮಾಡಿದೆ, ಇಲ್ಲಿ ನೋಡಿದ್ರೆ ಒಂದ್ ಫ್ಯಾನ್ ಕೂಡ ಇಲ್ಲ. ಏನ್ ಹೊಟೇಲ್ಲೋ ಅಂತಾ ನೀವು ಗೊಣಗಿರಬಹುದು. ಆದ್ರೆ ಹೊಟೇಲ್ ನಲ್ಲಿ ಫ್ಯಾನ್ ಅಳವಡಿಸದೆ ಇರಲು ಅನೇಕ ಕಾರಣವಿದೆ. ಅದೇನು ಅಂತಾ ನಾವಿಂದು ಹೇಳ್ತೇವೆ.
ಬೇಸಿಗೆ ಬಂತೆಂದ್ರೆ ಫ್ಯಾನ್ ಬೇಕೇಬೇಕು. ಕೆಲವರು ಮಳೆಗಾಲವಿರಲಿ, ಚಳಿಗಾಲವಿರಲಿ ಇಲ್ಲ ಬೇಸಿಗೆಯಿರಲಿ ಫ್ಯಾನ್ ಹಾಕಿ ಮಲಗ್ತಾರೆ. ಮಳೆಗಾಲದಲ್ಲಿ ಕೂಡ ಫ್ಯಾನ್ ಬೇಕು ಎನ್ನುವವರಿದ್ದಾರೆ. ಹೊಟೇಲ್ ಗೆ ಹೋದಾಗ ಕೂಡ ಜನರು ಫ್ಯಾನ್ ಇದ್ಯಾ ಅಂತಾ ನೋಡ್ತಾರೆ. ಸಾಮಾನ್ಯ ಹೊಟೇಲ್ ಗಳಲ್ಲಿ ನೀವು ಫ್ಯಾನ್ ನೋಡ್ಬಹುದು. ಆದ್ರೆ ಫೈವ್ ಸ್ಟಾರ್ ಹೊಟೇಲ್ ಗಳ ವಿಷಯಕ್ಕೆ ಬಂದಾಗ ಸ್ವಲ್ಪ ಭಿನ್ನತೆಯನ್ನು ನೀವು ನೋಡ್ಬಹುದು.
ಫೈವ್ ಸ್ಟಾರ್ (Five Star) ಹೊಟೇಲ್ ಗಳಲ್ಲಿ ನೀವು ಫ್ಯಾನ್ (Fan) ಗಳನ್ನು ನೋಡೋದಿಲ್ಲ. ಫ್ಯಾನ್ ಬೇಕೇಬೇಕು ಎನ್ನುವವರಿಗೆ ಫೈವ್ ಸ್ಟಾರ್ ಹೊಟೇಲ್ (Hotel) ಈ ಪದ್ಧತಿ ವಿಚಿತ್ರವೆನ್ನಿಸುತ್ತದೆ. ಇಷ್ಟು ದುಡ್ಡು ಕೊಟ್ಟು ರೂಮ್ ಬುಕ್ ಮಾಡಿದ್ರೆ ಒಂದು ಫ್ಯಾನ್ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುವವರಿದ್ದಾರೆ. ನಾವಿಂದು ಫೈವ್ ಸ್ಟಾರ್ ಹೊಟೇಲ್ ನಲ್ಲಿ ಫ್ಯಾನ್ ಯಾಕೆ ಇರೋದಿಲ್ಲ ಎಂಬುದನ್ನು ನಿಮಗೆ ಹೇಳ್ತೇವೆ. ಎಲ್ಲ ಹೊಟೇಲ್ ನಲ್ಲೂ ಫ್ಯಾನ್ ಇರಲ್ಲ ಅಂತಾ ನಾವು ಹೇಳ್ತಿಲ್ಲ, ಆದ್ರೆ ಬಹುತೇಕ ಫೈವ್ ಸ್ಟಾರ್ ಹೊಟೇಲ್ ನಲ್ಲಿ ನೀವು ಇದನ್ನು ನೋಡ್ಬಹುದು.
ಹೊಟೇಲ್ ನಲ್ಲಿ ಫ್ಯಾನ್ ಅಳವಡಿಸದಿರಲು ಅನೇಕ ಕಾರಣವಿದೆ.
ಫ್ಯಾನ್ ಮೆಂಟೇನೆನ್ಸ್ (Maintenance) ಕಷ್ಟ : ಫ್ಯಾನ್ ಮೆಂಟೇನ್ ಮಾಡೋದು ಕಷ್ಟ ಅಂದ್ರೆ ನಿಮಗೆ ವಿಚಿತ್ರ ಎನ್ನಿಸಬಹುದು. ಆದ್ರೆ ಇದು ಸತ್ಯ. ಫ್ಯಾನ್‌ನ ನಿರ್ವಹಣೆ ಹೆಚ್ಚು. ಮೋಟಾರ್ ಹಾಳಾಗುವುದು, ಬ್ಲೇಡ್ ಹಾಳಾಗುವುದು, ಹಾಳಾದ ಫ್ಯಾನ್ ದುರಸ್ತಿ ಇತ್ಯಾದಿಗಳಿಗೆ ಹೆಚ್ಚು ಖರ್ಚಾಗುತ್ತದೆ. ಹೋಟೆಲ್ ಗಳಲ್ಲಿ ಸೆಂಟ್ರಲ್ ಕೂಲಿಂಗ್ ಸಿಸ್ಟಂ ಬದಲಿಗೆ ಪ್ರತಿ ಕೊಠಡಿಯಲ್ಲಿ ಪ್ರತ್ಯೇಕ ಕೂಲಿಂಗ್ (Cooling) ವ್ಯವಸ್ಥೆ ಕಲ್ಪಿಸಿದರೆ ಫ್ಯಾನ್ ಇತ್ಯಾದಿಗಳು ನಿರಂತರವಾಗಿ ಓಡ್ತಿರುತ್ತವೆ. ಇದ್ರಿಂದ ಮೋಟರ್ ಸುಡುವ ಅಪಾಯ ಹೆಚ್ಚಿರುತ್ತದೆ.
ಎಸಿಗಿಂತ ಫ್ಯಾನ್ ದುಬಾರಿ : ಎಸಿ (Ac) ಇನ್ಸ್ಟಾಲ್ ಮಾಡುವ ವೆಚ್ಚಕ್ಕಿಂತ ಫ್ಯಾನ್ ಇನ್ಸ್ಟಾಲ್ ಮಾಡುವ ವೆಚ್ಚ ಹೆಚ್ಚಿರುತ್ತದೆ. 500 ಕೊಠಡಿಗೆ ಫ್ಯಾನ್ ಅಳವಡಿಸಿ ಅದನ್ನು ಮೆಂಟೇನ್ ಮಾಡುವುದಕ್ಕಿಂತ ಒಂದು ಸೆಂಟ್ರಲ್ ಎಸಿ ಅಳವಡಿಸಿ ಅದನ್ನು ಮೆಂಟೆನ್ ಮಾಡುವುದು ಸುಲಭದ ಕೆಲಸವಾಗಿದೆ.
ಫ್ಯಾನ್ ನಿಂದ ಅಪಾಯ ಹೆಚ್ಚು : ಯಸ್, ಫ್ಯಾನ್ ನಿಂದ ಅಪಾಯ ಹೆಚ್ಚು. ಹೊಟೇಲ್ ಕೊಠಡಿಗಳಲ್ಲಿ ಫ್ಯಾನ್ ಅಳವಡಿಸಿದ್ರೆ ಆತ್ಮಹತ್ಯೆ (Suicide) ಮಾಡಿಕೊಳ್ಳುವವರಿಗೆ ಸುಲಭವಾಗುತ್ತದೆ. ಬರೀ ಆತ್ಮಹತ್ಯೆ ಅಪಾಯ ಮಾತ್ರ ಇಲ್ಲ. ಬದಲಾಗಿ, ಫ್ಯಾನ್ ಕೆಳಗೆ ಬೀಳುವ ಅಪಾಯವೂ ಇದೆ. ಫ್ಯಾನ್ ನಿರ್ವಹಣೆ ಸರಿಯಾಗಿ ಮಾಡಿಲ್ಲದ ಸಂದರ್ಭದಲ್ಲಿ ಅಥವಾ ಅತಿ ವೇಗವಾಗಿ ಫ್ಯಾನ್ ಚಲಾಯಿಸಿದ್ದರಿಂದ ಫ್ಯಾನ್ ಮುರಿದು ಕೆಳಗೆ ಬೀಳುವ ಅಪಾಯವೂ ಇರುತ್ತದೆ.
Women Health: ಗರ್ಭಿಣಿಯರು ಸ್ಕೂಟರ್ ಓಡಿಸೋದು ಎಷ್ಟು ಸುರಕ್ಷಿತ?
ಪ್ರತಿ ನಿತ್ಯ ಫ್ಯಾನ್ ಸ್ವಚ್ಛತೆ (Clean) ಅಸಾಧ್ಯ : ಮನೆಯಲ್ಲಿರುವ ಫ್ಯಾನ್, ಪ್ರತಿ ದಿನ ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಇನ್ನು ಹೊಟೇಲ್ ಕೊಠಡಿಯಲ್ಲಿರುವ ಫ್ಯಾನ್ ಸ್ವಚ್ಛತೆ ಅಸಾಧ್ಯವಾದ ಮಾತು. ಪ್ರತಿ ದಿನ ಫ್ಯಾನ್ ಸ್ವಚ್ಛಗೊಳಿಸಲು ಹೊಟೇಲ್ ಸಿಬ್ಬಂದಿಗೆ ಸಮಯವಿರುವುದಿಲ್ಲ. ಸ್ವಚ್ಛವಾಗದೆ ಹೋದ್ರೆ ಫ್ಯಾನ್ ಮೇಲಿರುವ ಕೊಳಕು ಗ್ರಾಹಕರಿಗೆ ಖುಷಿ ನೀಡುವದಿಲ್ಲ. ಫ್ಯಾನ್ ಸ್ವಚ್ಛತೆಗಾಗಿಯೇ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡ್ರೆ ಹೊಟೇಲ್ ನಿರ್ವಹಣೆ ವೆಚ್ಛ ಹೆಚ್ಚಾಗುತ್ತದೆ.
ಬಿಸಿ ಆಹಾರಕ್ಕೆ ಅಪ್ಪಿತಪ್ಪಿಯೂ ನಿಂಬೆಹಣ್ಣಿನ ರಸ ಸೇರಿಸಬೇಡಿ !
ಒಂದೇ ತಾಪಮಾನ : ಸಾಮಾನ್ಯವಾಗಿ ಹೊಟೇಲ್ ನ ಕೊಠಡಿ ಹಾಗೂ ಹೊರಾಂಗಣದಲ್ಲಿ ಒಂದೇ ತಾಪಮಾನವನ್ನು ಮೆಂಟೆಲ್ ಮಾಡಲು ಆದ್ಯತೆ ನೀಡಲಾಗುತ್ತದೆ. ಫ್ಯಾನ್ ಅಳವಡಿಸಿದ್ರೆ ಈ ತಾಪಮಾನದಲ್ಲಿ ಏರುಪೇರಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಹೆಚ್ಚಿನ ಹೊಟೇಲ್ ಗಳಲ್ಲಿ ಫ್ಯಾನ್ ಅಳವಡಿಸುವ ಬದಲು ಎಸಿಗೆ ಮಹತ್ವ ನೀಡುತ್ತಾರೆ.