ಶ್ರೀಮಂತರು ಕಡು ಬಣ್ಣಗಳನ್ನು ದ್ವೇಷಿಸುತ್ತಾರಾ? ಸಾಮಾನ್ಯವಾಗಿ ಬಡವರ ಮನೆಗಳ ಪೇಂಟ್ಸ್ ಕಡು ಬಣ್ಣದಲ್ಲಿರುತ್ತದೆ. ನೀಲಿ ಸೇರಿದಂತೆ ಹಲವು ಬ್ರೈಟ್ ಬಣ್ಣ ಬಳಸುತ್ತಾರೆ. ಆದೆ ಶ್ರೀಮಂತರು ಲೈಟ್ ಕಲರ್ ಬಣ್ಣ ಬಳಸುತ್ತಾರೆ. ಇದರ ಹಿಂದಿನ ಕಾರಣವೇನು?
ಶ್ರೀಮಂತರು ಹಾಗೂ ಬಡವರ ಮನೆಗಳಿಗೆ ವ್ಯತ್ಯಾಸವಿರುತ್ತದೆ ನಿಜ. ಶ್ರೀಮಂತರು ದೊಡ್ಡ ಮನೆ, ಗಾರ್ಡನ್, ಐಷಾರಾಮಿ ಸೌಲಭ್ಯಗಳನ್ನು ಮಾಡಿರುತ್ತಾರೆ. ಬಡವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಣ್ಣದಾಗಿ, ಹಂಚಿನ ಮನೆ ಅಥವಾ ಇತರ ಕಡಿಮೆ ಖರ್ಚಿನ ಮನೆಗಳನ್ನು ಮಾಡಿರುತ್ತಾರೆ. ಈ ಮನೆಗಳಿಗೆ ಪೇಂಟ್ ಬಳಿಯುವ ವಿಚಾರ ಬಂದಾಗ ಕೆಲ ವಿಚಾರ ಭಾರಿ ಕುತೂಹಲ ಕೆರಳಿಸುತ್ತದೆ. ಸಾಮಾನ್ಯವಾಗಿ ಶ್ರೀಮಂತರ ಮನೆಯ ಪೇಂಟ್ಸ್ ಕಲರ್ ಕೊಂಚ ಲೈಟ್ ಆಗಿರುತ್ತದೆ. ಬಡವರ ಮನೆಯ ಪೇಂಟ್ಸ್ ಕಲರ್ ಕಡು ಬಣ್ಣದಲ್ಲಿರುತ್ತದೆ. ಇದರ ಹಿಂದೆ ಮನಶಾಸ್ತ್ರದ ಸೀಕ್ರೆಟ್ ಅಡಗಿದೆ.
ಶ್ರೀಮಂತರು ಹಾಗೂ ಬಡವರ ಬಣ್ಣದ ಆಯ್ಕೆಯಲ್ಲಿ ಭಾರಿ ವ್ಯತ್ಯಾಸ ಯಾಕೆ
ಶ್ರೀಮಂತರ ಮನೆಗಳು ಬಿಳಿ ಸೇರದಂತೆ ಲೈಟ್ ಬಣ್ಣಗಳ ಪೈಂಟ್ಸ್ ಬಳಿದಿರುತ್ತಾರೆ. ಅದೆ ಬಡವರ ಮನೆಗಳು ಸಾಮಾನ್ಯವಾಗಿ ನೀಲಿ, ಹಸಿರು, ಹಳದಿ ಸೇರಿದಂತೆ ಕಡು ಬಣ್ಣ ಬಳಸಿರುತಾರೆ. ಬಣ್ಣ ಒಬ್ಬ ವ್ಯಕ್ತಿಯ ಅಸ್ತಿತ್ವ ಅಥವಾ ಗುರುತು, ತೋರ್ಪಡಿಕೆಗೆ ಇರುವ ಸುಲಭ ಮಾರ್ಗ. ಹೀಗಾಗಿ ಇಬ್ಬರ ಆಯ್ಕೆಯಲ್ಲಿ ಬಣ್ಣ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಬಡವನಿಗೆ ಆತನ ಮನೆ ಬಣ್ಣವೇ ಐಡೆಂಟಿಟಿ
ಮುಂಬೈನ ಅತೀ ದೊಡ್ಡ ಸ್ಲಂ ಧಾರಾವಿ ಸೇರಿದಂತೆ ಯಾವುದೇ ಕಡು ಬಡವರ ಮನೆಗಳಿರುವ ಕಾಲೋನಿಗೆ ತೆರಳಿದಾಗ ಮನೆಗಳನ್ನು ಗಮನಿಸಿ. ಈ ಕಾಲೋನಿಗಳಲ್ಲಿ ಒಂದಕ್ಕೊಂದು ತಾಗಿದಂತೆ ಮನೆಗಳಿರುತ್ತದೆ. ಹೆಚ್ಚಿನ ಸ್ಥಳವಕಾಶವಿಲ್ಲ, ಖಾಲಿ ಜಾಗವಿಲ್ಲ. ಈ ಪ್ರದೇಶದಲ್ಲಿ ತಮ್ಮ ಮನೆ ಎದ್ದು ಕಾಣಲಿ, ಇತರರಿಗೆ ಗೊತ್ತಾಗುವಂತೆ ಮಾಡಲು ಕಡು ಬಣ್ಣ ಬಳಕೆ ಮಾಡುತ್ತಾರೆ. ಬಡವನಿಗೆ ಇದೇ ತನ್ನ ಐಡೆಂಟಿಯಾಗಿರುತ್ತದೆ. ಹಳ್ಳಿಗಳಲ್ಲಿರುವ ಬಡವರ ಮನೆಗಳು ಕೂಡ ಹೀಗೆ. ತನ್ನ ಮನೆ ಎದ್ದು ಕಾಣಬೇಕು, ತನ್ನ ಮನೆಯಿಂದ ತನ್ನ ಗುರುತು ಪ್ರಕಾಶಮಾನವಾಗಬೇಕು ಅನ್ನೋ ಮನಃಶಾಸ್ತ್ರದ ಕಾರಣಗಳೇ ಬಣ್ಣದ ಆಯ್ಕೆಯಲ್ಲಿ ಪ್ರಮುಖವಾಗುತ್ತದೆ.
ಶ್ರೀಮಂತನಿಗೆ ಬಣ್ಣದಿಂದ ಗುರುತಿಸಿಕೊಳ್ಳಬೇಕಿಲ್ಲ
ಶ್ರೀಮಂತನಿಗೆ ತನ್ನ ಮನೆಯ ಬಣ್ಣದಿಂದ, ತನ್ನ ಬಣ್ಣದಿಂದ ಗುರುತಿಸಿಕೊಳ್ಳಬೇಕಾಗಿಲ್ಲ. ಕಾರಣ ಆತನ ಮನೆ ದೊಡ್ಡಾಗಿರುತ್ತದೆ, ದುಬಾರಿ ಮಾರ್ಬಲ್, ಟೈಲ್ಸ್ ಬಳಸಿರುತ್ತಾರೆ. ಮನೆ ಮುಂದೆ ಗಾರ್ಡನ್, ಈಜುಕೊಳ ಸೇರಿದಂತೆ ಹಲವು ವಿಶೇಷತೆಗಳು, ಆಕರ್ಷಣೆಗಳು ಈ ಮನೆಗಿರುತ್ತದೆ. ಹೀಗಾಗಿ ಶ್ರೀಮಂತರು ತಮ್ಮ ಮನೆ ಎದ್ದುಕಾಣಲಿ, ಇತರರು ಗುರುತಿಸುವಂತೆ ಮಾಡುವ ಅವಶ್ಯಕತೆ ಇಲ್ಲ, ದುಬಾರಿ ವಸ್ತುಗಳಿಂದ ಈ ಮನೆಗಳು ಕಂಗೊಳಿಸುತ್ತಿರುತ್ತದೆ. ಹೀಗಾಗಿ ಮನೆಗೆ ಲೈಟ್ ಕಲರ್ ಪೈಂಟ್ಸ್ ಬಳಸುತ್ತಾರೆ ಎಂದು ಮನಃಶಾಸ್ತ್ರಗಳು ಹೇಳುತ್ತದೆ.
ಶ್ರೀಮಂತರ ಕೆಲಸ, ದುಡ್ಡು, ಆದಾಯ ಎಲ್ಲದರಲ್ಲೂ ಒತ್ತಡ ಹೆಚ್ಚಿರುತ್ತದೆ. ಹೀಗಾಗಿ ಮನೆಗೆ ಬಂದಾಗ ಮನಸ್ಸು ಶಾಂತವಾಗಿರವು ಲೈಟ್ ಕಲರ್ ಬಣ್ಣ ಬಳಸುತ್ತಾರೆ. ಇದೇ ಮನಃಶಾಸ್ತ್ರ ಐಷಾರಾಮಿ ಬ್ರ್ಯಾಂಡ್‌ಗಳಲ್ಲೂ ಇವೆ. ಲೋಕಲ್ ಬ್ರ್ಯಾಂಡ್ ಉತ್ಪನ್ನಗಳು ಕಡು ಬಣ್ಣದಲ್ಲಿ ಹೆಚ್ಚಿರುತ್ತದೆ. ಅದು ಬಟ್ಟೆ, ಡ್ರೆಸ್, ಲೈಫ್‌ಸ್ಟೈಲ್, ಮನೆ ಉತ್ಪನ್ನಗಳು ಸೇರಿದಂತೆ ಯಾವುದೇ ಆದರೂ ಲೋಕಲ್ ಬ್ರ್ಯಾಂಡ್ ಕಡು ಬಣ್ಣದಲ್ಲಿದ್ದರೆ, ಲೂಯಿಸ್ ವಿಟಾನ್, ಡಿಯೋರ್ ಸೇರಿದಂತೆ ಐಷಾರಾಮಿ ಬ್ರ್ಯಾಂಡ್‌ಗಳು ಲೈಟ್ ಬಣ್ಣದಲ್ಲೇ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತದೆ.


