ದಾಂಪತ್ಯವೆಂದರೆ ಎಲ್ಲವೂ ಯಾವತ್ತಿಗೂ ಸರಿ ಇರೋದಿಲ್ಲ. ಹಾಗಂಥ ದಂಪತಿಯಲ್ಲಿ ಪ್ರೀತಿ, ಪ್ರೇಮ, ಗೌರವಕ್ಕೆ ಎಂದಿಗೂ ಕೊರತೆಯಾಗುವುದಿಲ್ಲ. ನೋಡೋರ ಕಣ್ಣಿಗೆ ಎಲ್ಲವೂ ಚೆಂದ ಎನಿಸಿದರೆ, ಅವರಿಬ್ಬರ ನಡುವೆ ಯಾವುದೂ ಸರಿಯೇ ಇರೋಲ್ಲ. ನೋಡೋರಿಗ ಇದೆಂಥಾ ದಾಂಪತ್ಯವೆಂದು ಎನಿಸುತ್ತಿದ್ದರೆ, ಆ ಜೋಡಿ ಒಬ್ಬರಿಗೊಬ್ಬರು ಪ್ರೀತಿಸಿ, ಗೌರವಯುತವಾಗಿ ಸಂಸಾರ ನಡೆಸುತ್ತಿರುತ್ತಾರೆ. ಏನು, ಎಂಥವೆಂದು ವಿವರಿಸಲಾಗದ ದಾಂಪತ್ಯದಲ್ಲಿ ದಂಪತಿ ಮಲಗೋ ರೀತಿಯಿಂದಲೇ ಯಾರ ಮನಸ್ಸು ಹೇಗೆಂದು ಕಂಡು ಹಿಡಿಯಬಹುದು.

ಸಂಗಾತಿ ತಬ್ಬಿಕೊಂಡು ಮಲಗಬಹುದು, ಬೆನ್ನಿಗೆ ಬೆನ್ನು ಸೇರಿಸಿ ಮಲಗಬಹುದು ಅಥವಾ ನಿಮ್ಮ ಕೈ ಮೇಲೆ ತಲೆ ಇತ್ತು ಮಲಗಬಹುದು. ಇದೆಲ್ಲಾ ಸುಮ್ಮನೆ ಅಲ್ಲಾ. ಎಲ್ಲವಕ್ಕೂ ಒಂದೊಂದು ಅರ್ಥವಿದೆ. ಹೌದು. ಸಂಗಾತಿ ನಿಮ್ಮೊಂದಿಗೆ ಹೇಗೆ ಮಲಗುತ್ತಾರೆ ಅನ್ನೋದು ಇಬ್ಬರ ಸಂಬಂಧ ಎಷ್ಟು ಗಟ್ಟಿಯಾಗಿರುತ್ತದೆ ಎಂಬುದನ್ನು ತಿಳಿಸುತ್ತದೆ. 

ಬಿರುಕು ಬಿಟ್ಟ ಸಂಬಂಧಗಳನ್ನು ನಿಭಾಯಿಸೋದು ಹೇಗೆ? ಇಲ್ಲಿವೆ ಟಿಪ್ಸ್

  • ಪತಿ ಪತ್ನಿ ಇಬ್ಬರೂ ಬೆನ್ನಿಗೆ ಬೆನ್ನು ಹಾಕಿ ತುಂಬಾ ಅಂಟಿಕೊಂಡು ಮಲಗಿದರೆ, ಇಬ್ಬರೂ ಅವರದ್ದೇ ಆದ ಸ್ಪೇಸ್ ನಿರೀಕ್ಷಿಸುತ್ತಿದ್ದಾರೆಂದರ್ಥ. ಇದು ಇಬ್ಬರಿಗೂ ಸಮಾನತೆಯ ಮೇಲೆ ನಂಬಿಕೆ ಇದೆ ಎನ್ನುವುದನ್ನು ತೋರಿಸುತ್ತದೆ. 
  • ಬೆನ್ನಿಗೆ ಬೆನ್ನು ಹಾಕಿ ದೇಹದ ಸಂಪರ್ಕವಿಲ್ಲದೇ ದೂರದಲ್ಲಿ ಮಲಗಿದ್ದರೆ, ಜತೆಯಾಗಿ ಇರಬೇಕೆಂದು ಬಯಸುತ್ತೀರಿ. ಆದರೆ, ದೇಹ ಸಂಪರ್ಕದ ಬಗ್ಗೆ ಆಸಕ್ತಿ ಇಲ್ಲವೆಂದರ್ಥ. ಇದು ಇಬ್ಬರ ನಡುವಿನ ಅಂತರವನ್ನು ತೋರಿಸುತ್ತದೆ.
  • ಸಂಗಾತಿಯ ಬೆನ್ನಿಗೆ ಮುಖ ಮಾಡಿ ಮಲಗಿದರೆ ಇಬ್ಬರಲ್ಲೂ ತಾವು ಸೇಫ್ ಆಗಿದ್ದೇವೆ ಎನ್ನುವ ಭಾವವಿದೆ ಎಂದರ್ಥ. ಜೊತೆಗೆ ಇಬ್ಬರ  ಪ್ರೀತಿ, ಕೇರಿಂಗ್ ಎಲ್ಲವೂ ಇದೆ ಎಂದರ್ಥ. 
  • ಸಂಗಾತಿಯನ್ನು ಗಟ್ಟಿಯಾಗಿ ಪರಸ್ಪರ ತಬ್ಬಿಕೊಂಡು ಮಲಗಿದರೆ, ಇಬ್ಬರಲ್ಲೂ ಬೆಟ್ಟದಷ್ಟು ಪ್ರೀತಿ ಇದೆ, ಅದನ್ನು ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂದು ಕೊಳ್ಳಲು ಅಡ್ಡಿಯಿಲ್ಲ.