Asianet Suvarna News Asianet Suvarna News

ಇಂಡಿಯಾ ಭಾರತವಾದರೆ? ದೇಶದ ಹೆಸರು ಬದಲಾದರೆ ಆಗೋದೇನು ಹೇಳ್ತಾರೆ ಸದ್ಗುರು!

ಇಂಡಿಯಾ ಎಂಬ ಹೆಸರು ಬದಲಾಗ್ತಿದೆ. ಅದನ್ನು ಭಾರತವೆಂದು ಬದಲಿಸುವ ಪ್ರಯತ್ನ ನಡೆದಿದೆ. ಇಂಡಿಯಾ ಹಾಗೂ ಭಾರತ ಈ ಎರಡೂ ಹೆಸರಿನ ಮಧ್ಯೆ ಸಾಕಷ್ಟು ಅಂತರವಿದೆ ಎಂಬುದನ್ನು ಸದ್ಗುರು ಕೂಡ ಒಪ್ಪಿಕೊಂಡಿದ್ದಾರೆ. ಈ ಹಿಂದೆಯೇ ಅವರು ಹೆಸರು ಬದಲಾವಣೆ ಬಗ್ಗೆ ಮಾತನಾಡಿದ್ದರು.
 

What Sadhguru Said About The British Who Changed Bharat To India roo
Author
First Published Sep 11, 2023, 12:17 PM IST

ನಮ್ಮ ದೇಶದ ಹೆಸರನ್ನು ಇಂಡಿಯಾದಿಂದ ಭಾರತವೆಂದು ಬದಲಿಸುವ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. ಇಂಡಿಯಾವನ್ನು ಭಾರತ ಎಂದು ಬದಲಿಸುವುದು ಎಷ್ಟು ಸರಿ, ಎಷ್ಟು ತಪ್ಪು ಎನ್ನುವ ಬಗ್ಗೆ ವಾದ – ವಿವಾದಗಳು ಶುರುವಾಗಿವೆ. ಸದ್ಗುರು ಜಗ್ಗಿ ವಾಸುದೇವ್ ಹಾಗೂ ನಿವೃತ್ತ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಕಿರಣ್ ಬೇಡಿ ಈ ಹಿಂದೆ ಇದ್ರ ಬಗ್ಗೆ ಮಾತನಾಡಿದ್ದರು. ಕಿರಣ್ ಬೇಡಿ ಕೇಳಿದ ಪ್ರಶ್ನೆಗೆ ಸದ್ಗುರು ಉತ್ತರ ನೀಡಿದ್ದರು. ನಾವಿಂದು ಇಂಡಿಯಾವನ್ನು ಭಾರತವಾಗಿ ಬದಲಿಸುವ ಬಗ್ಗೆ ಸದ್ಗುರು ಅಭಿಪ್ರಾಯವೇನು ಎಂಬುದನ್ನು ತಿಳಿಯೋಣ. 

2014ರಲ್ಲಿ ಸದ್ಗುರು (Sadhguru)  ಹಾಗೂ ಕಿರಣ್ ಬೇಡಿ (Kiran Bedi) ಮಧ್ಯೆ ನಡೆದ ಸಂದರ್ಶನದಲ್ಲಿ ಕಿರಣ್ ಬೇಡಿಯವರು, ಭಾರತ (Bharat ) ವನ್ನು ಇಂಡಿಯಾ (India) ಮಾಡಿ ದೊಡ್ಡ ತಪ್ಪು ಮಾಡಲಾಗಿದೆಯೇ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಸದ್ಗುರು ಉತ್ತರ ಹೀಗಿದೆ.

ಶಾಂತಿ, ನೆಮ್ಮದಿ ನೆಲೆಸಲು ಚಾಣಕ್ಯ ಹೇಳಿದ 5 ರಹಸ್ಯಗಳಿವು, ಬದಲಾಗುತ್ತೆ ನಿಮ್ಮ ಹಣೆಬರಹ..!

ಸದ್ಗುರು ಪ್ರಕಾರ, ಭಾರತವನ್ನು ಇಂಡಿಯಾ ಆಗಿ ಬದಲಿಸಿದ್ದು ಒಂದು ಗಂಭೀರ ತಪ್ಪು. ಯಾರಾದರೂ ರಾಷ್ಟ್ರವನ್ನು ಸ್ವಾಧೀನಪಡಿಸಿಕೊಂಡಾಗ, ಅವರು ಮಾಡುವ ಮೊದಲ ಕೆಲಸವೆಂದರೆ  ಹೆಸರನ್ನು ಬದಲಾಯಿಸುವುದು. ಇದು ಪ್ರಾಬಲ್ಯದ, ಗುಲಾಮಗಿರಿಯ ತಂತ್ರ. ಬ್ರಿಟಿಷರು ಇದನ್ನೇ ಮಾಡಿದ್ದಾರೆ. ಆಫ್ರಿಕನ್-ಅಮೆರಿಕನ್ ಇತಿಹಾಸವನ್ನು ನೋಡಿದರೆ, ಆಫ್ರಿಕನ್ ಜನರನ್ನು ಅಮೆರಿಕಕ್ಕೆ ಕರೆತಂದಾಗ, ಅವರು ಮಾಡಿದ ಮೊದಲ ಕೆಲಸವೆಂದರೆ ಅವರು ತಮ್ಮ ಆಫ್ರಿಕನ್ ಹೆಸರನ್ನು ತೆಗೆದು ಅವರಿಗೆ ಕೆಲವು ಮೂರ್ಖ ಹೆಸರನ್ನು ನೀಡಿದರು. ಹಾಗೆಯೇ ನಮ್ಮ ದೇಶದ ಹೆಸರಿನ ಜೊತೆ ಅನೇಕ ಊರಿನ ಹೆಸರನ್ನು ಬ್ರಿಟಿಷರು ಬದಲಿಸಿದರು. ತಿರುವನಂತಪುರಂ  ತ್ರಿವೇಂಡ್ರಂ ಎಂದು, ಚೆನ್ನೈಯನ್ನು ಮದ್ರಾಸ್ ಎಂದು ಈ ರೀತಿ ಭಾರತದವನ್ನು ಇಂಡಿಯಾ ಎಂದು ಬದಲಿಸಿದರು ಎನ್ನುತ್ತಾರೆ ಸದ್ಗುರು.

ಇಂಡಿಯಾ ಅರ್ಥವೇನು ಎಂದು ಪ್ರಶ್ನೆ ಮಾಡುವ ಸದ್ಗುರು, ಇದಕ್ಕೆ ಏನೂ ಅರ್ಥವಿಲ್ಲ ಎನ್ನುತ್ತಾರೆ. ನಾನು ನಿಮಗೆ ಅರ್ಥವಿಲ್ಲದ ಹೆಸರನ್ನು ಇಟ್ಟರೆ, ನೀವು ನನ್ನ ಮುಂದೆ ಅರ್ಥಹೀನ, ಮೂರ್ಖ ವ್ಯಕ್ತಿಯಾಗುತ್ತೀರಿ. ಇದನ್ನೇ ಬ್ರಿಟಿಷರು ನಮಗೆ ಮಾಡಿದ್ದಾರೆ.

Personality Test: ನೀವು ಶಕ್ತಿಶಾಲಿಯೋ, ಸಹಾನುಭೂತಿಯುಳ್ಳವರೋ? ಈ ಚಿತ್ರದಿಂದ ತಿಳ್ಕೊಳಿ

ನಮ್ಮ ದೇಶಕ್ಕೆ ಒಂದು ಅರ್ಥಪೂರ್ಣ ಹೆಸರು ಇದೆ. ನಮ್ಮ ದೇಶಕ್ಕೊಂದು ಸಂಪ್ರದಾಯವಿದೆ, ಸಂಸ್ಕೃತಿ ಇದೆ. ಆದ್ರೂ ನಾವು ಅರ್ಥಹೀನವಾದ ಇಂಡಿಯಾ ಎಂಬ ಹೆಸರನ್ನು ಹೊಂದಿದ್ದೇವೆ ಎನ್ನುತ್ತಾರೆ ಸದ್ಗುರು.
ರಾಷ್ಟ್ರದ ಪರಿಕಲ್ಪನೆಯು ಪ್ರತಿಯೊಬ್ಬರ ಮನಸ್ಸಿನಲ್ಲಿ ಬೇರೂರಬೇಕು. ಏಕೆಂದರೆ ರಾಷ್ಟ್ರವು ಕೇವಲ ಕಲ್ಪನೆಯಾಗಿದೆ. ಈ ಕಲ್ಪನೆಯು ನಿಮ್ಮ ಮನಸ್ಸಿ,ಹೃದಯದಲ್ಲಿ ಉಳಿದಾಗ, ನಮ್ಮ ದೇಶ ಎಂಬ ಉತ್ಸಾಹ ಬೆಳೆದಾಗ ನೀವು ನಿಜವಾದ ರಾಷ್ಟ್ರವನ್ನು ಹೊಂದಿದ್ದೀರಿ ಎಂದರ್ಥ ಎನ್ನುತ್ತಾರೆ ಸದ್ಗುರು. ಇಲ್ಲದಿದ್ದರೆ  ರಾಷ್ಟ್ರ ಕೇವಲ ಕಾಗದದ ಮೇಲೆ ಉಳಿಯುತ್ತದೆ.  

1947ರಲ್ಲಿ ಬ್ರಿಟಿಷರು ನಿರ್ಗಮಿಸಿದಾಗ ಮೊದಲು ಮಾಡಬೇಕಾಗಿದ್ದದ್ದು ಎಲ್ಲರ ಮನದಲ್ಲಿ ಪ್ರತಿಧ್ವನಿಸುವ ರೀತಿಯಲ್ಲಿ ಹೆಸರನ್ನು ಬದಲಾಯಿಸುವ ಕೆಲಸವಾಗಿತ್ತು. ಆದ್ರೆ ಅದು ಆಗಲಿಲ್ಲ. ನೀವು ಭಾರತೀಯ ರಾಷ್ಟ್ರಕ್ಕೆ ಇಂಗ್ಲಿಷ್ ಹೆಸರನ್ನು ಬಳಸುತ್ತಿದ್ದೀರಿ. ನಮ್ಮಲ್ಲಿ ಕೆಲವೇ ಪ್ರತಿಶತದಷ್ಟು ಜನರು ಮಾತ್ರ ಸರಿಯಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಅವರಿಗೆ ಮಾನ್ಯತೆ ನೀಡಲಾಗಿದೆ. ಉಳಿದವರನ್ನು ಕೈಬಿಡಲಾಗಿದೆ ಎಂದು ಸದ್ಗುರು ಹೇಳ್ತಾರೆ. ದೇಶದ ಹೆಸರನ್ನು ಪ್ರತಿಯೊಬ್ಬರ ಹೃದಯದಲ್ಲಿ ಪ್ರತಿಧ್ವನಿಸುವ ರೀತಿಯಲ್ಲಿ ಇಡಬೇಕೆಂದು ಅವರು ಸಲಹೆ ನೀಡ್ತಾರೆ. 

ಬಹಳಷ್ಟು ಬುದ್ಧಿಜೀವಿಗಳು ಹೆಸರಿನಲ್ಲಿ ಏನಿದೆ ಎಂದು ಹೇಳುತ್ತಾರೆ. ನಿಮ್ಮ ಹೆಸರನ್ನು ಹೇಳಿದಾಗ, ನೀವು ಆ ಧ್ವನಿಯನ್ನು ಅರ್ಥಮಾಡಿಕೊಳ್ಳಬೇಕು. ಧ್ವನಿಯು ಅಸ್ತಿತ್ವವಾಗಿದೆ. ಅಲ್ಲದೆ ಅದು ಶಕ್ತಿ ಹೊಂದಿದೆ. ಭಾರತ ಎಂಬ ಹೆಸರಿನಲ್ಲಿ ಶಕ್ತಿ ಇದೆ. ಈ ಶಕ್ತಿ ಈ ದೇಶದ ಪ್ರತಿಯೊಬ್ಬರ ಹೃದಯದಲ್ಲಿ ಅನುರಣಿಸಬೇಕಾಗಿದೆ.  ಭಾರತೀಯನಾಗುವುದರ ಅರ್ಥವೇನೆಂಬ ಕಲ್ಪನೆಯು ಪ್ರತಿಯೊಬ್ಬ ಮನುಷ್ಯನನ್ನು ತಲುಪಬೇಕು ಎನ್ನುತ್ತಾರೆ ಸದ್ಗುರು. 
 

Follow Us:
Download App:
  • android
  • ios