ನಿಮ್ಮ ಬಟ್ಟೆಯ ಬಣ್ಣ, ಕಚೇರಿಯ ಹಾಗೂ ಮನೆಯ ಗೋಡೆಯ ಬಣ್ಣ, ಕಚೇರಿಯಲ್ಲಿ ಬಳಸುವ ವಸ್ತುಗಳ ಬಣ್ಣ ಎಲ್ಲವೂ ನಿಮ್ಮ ಉದ್ಯೋಗದ, ಅಧ್ಯಯನದ ಕ್ಷಮತೆ ಮೇಲೆ, ಸೃಜನಶೀಲತೆಯ ಮೇಲೆ ಪರಿಣಾಮ ಬೀರಬಲ್ಲವು. ಅಷ್ಟೇ ಅಲ್ಲ, ನಿಮ್ಮ ಅಂದಿನ ಮೂಡನ್ನು ನಿರ್ಧರಿಸಬಲ್ಲವು. ಹೀಗಾಗಿ, ಯಾವತ್ತು ಯಾವ ಬಣ್ಣ ಧರಿಸಿದರೆ ಒಳ್ಳೆಯದು ಎಂದು ಯೋಚಿಸಿ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. 

ಪಿಂಕ್

ಈ ಬಣ್ಣವು ರಿಲ್ಯಾಕ್ಸಿಂಗ್ ಎಫೆಕ್ಟ್ ಹೊಂದಿದ್ದು, ಆತಂಕ ಅಥವಾ ಶ್ರೀಘ್ರ ಕೋಪ ಹೊಂದಿರುವವರು ಧರಿಸಿದರೆ ಸಹಾಯಕವಾಗಬಹುದು. ಇದು ಹಸಿರು ಬಣ್ಣದ ಜೊತಂ ಚೆನ್ನಾಗಿ ಹೊಂದುವುದರಿಂದ ನೀವು ಟೆನ್ಷನ್‌ನಲ್ಲಿದ್ದ ದಿನ ಈ ಕಾಂಬಿನೇಶನ್ ಟ್ರೈ ಮಾಡಬಹುದು.

ನಿಮ್ಮ ವ್ಯಕ್ತಿತ್ವಕ್ಕೆ ಹೊಳಪು ನೀಡುವ 8 ಹವ್ಯಾಸಗಳು

ಹಸಿರು

ಇದು ಬಹಳಷ್ಟು ಸಮಾಧಾನ ನೀಡುತ್ತದೆಯಲ್ಲದೆ ರಿಲ್ಯಾಕ್ಸ್ ಮಾಡುತ್ತದೆ. ಹೀಗಾಗಿ, ಕಚೇರಿಯ ಬಣ್ಣ ಹಸಿರಾಗಿದ್ದರೆ ಉದ್ಯೋಗಿಗಳು ಹೆಚ್ಚು ಕಾಮ್ ಆಗಿದ್ದು ಕೆಲಸ ಮಾಡಬಲ್ಲರು. ಅಥವಾ ಕಚೇರಿಯಲ್ಲಿ ಹೆಚ್ಚು ಒಳಾಂಗಣ ಸಸ್ಯಗಳನ್ನು ಇಟ್ಟು ಪೋಷಿಸುವುದು ಕೂಡಾ ಉದ್ಯೋಗಿಗಳ ಮೂಡನ್ನು ಚೆನ್ನಾಗಿರಿಸುತ್ತದೆ. ಅವೆರಡೂ ನಿಮ್ಮ ಕೈಲಿಲ್ಲವಾದರೆ ಹಸಿರು ಬಟ್ಟೆ ಧರಿಸಿ. ಅದರಲ್ಲೂ ಸೋಮವಾರವೆಂದರೆ ಉದ್ಯೋಗಿಗಳಿಗೆ ತಲೆನೋವು ಜಾಸ್ತಿ. ವೀಕೆಂಡ್ ಮುಗಿಸಿ ಮನಸ್ಸಿಲ್ಲದ ಮನಸ್ಸಿನಲ್ಲಿ ಕಚೇರಿಗೆ ತೆರಳುವಾಗ ಹಸಿರನ್ನು ಧರಿಸಿದರೆ ಅದು ನಿಮ್ಮನ್ನು ರಿಲ್ಯಾಕ್ಸ್‌ನಲ್ಲಿರುವಂತೆ ನೋಡಿಕೊಳ್ಳಬಲ್ಲುದು. ಹಸಿರಿಗೆ ನಿಮ್ಮ ಹಸಿವನ್ನು ಕೂಡಾ ಕಡಿಮೆಗೊಳಿಸುವ ಶಕ್ತಿ ಇದೆ. 

ನೇರಳೆ

ಬಹಳ ಉತ್ತಮವಾದ ಬಣ್ಣ ಎಂದು ಪರಿಗಣಿಸಲಾಗುತ್ತದೆ. ಇದು ಶಾಂತಿ, ಬುದ್ಧಿವಂತಿಕೆ ಹೆಚ್ಚಿಸಿ, ಆರನೇ ಇಂದ್ರಿಯ ಜಾಗೃತಗೊಳಿಸಿ ಕಲಾಕೌಶಲ್ಯ ಹೆಚ್ಚಿಸುತ್ತದೆ. ಇದು ತಲೆನೋವನ್ನು ಕೂಡಾ ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ. ಹೀಗಾಗಿ, ತಲೆನೋವಿದ್ದ ದಿನ ಕಚೇರಿಗೆ ಪರ್ಪಲ್ ಬಣ್ಣದ ಬಟ್ಟೆ ಧರಿಸಿ ನೋಡಿ.

ಕಪ್ಪು

ಇದು ಬಲ ಹಾಗೂ ಆತ್ಮವಿಶ್ವಾಸದೊಂದಿಗೆ ಬೆಸೆದುಕೊಂಡಿದೆ. ಅದಕ್ಕಾಗಿಯೇ ಬ್ಲ್ಯಾಕ್ ಸೂಟ್ ಹಾಕಿದಾಗ ನೀವು ನಿಮಗೆ ಅಷ್ಟೊಂದು ಪವರ್‌ಫುಲ್ ಎನಿಸುವುದು. ಗ್ಲ್ಯಾಮರಸ್ ಆಫೀಸ್ ಲುಕ್ ಬೇಕೆಂದರೆ ಕಪ್ಪು ಹಾಗೂ ಸಿಲ್ವರ್ ಬಣ್ಣ ಮ್ಯಾಚ್ ಮಾಡಿ. 

ಮೊದಲ ನೋಟಕ್ಕೇ ಬೆಸ್ಟ್ ಅನಿಸಿಕೊಳ್ಳೋದು ಹೇಗೆ?

ಕೇಸರಿ

ಇದು ಸುಸ್ತನ್ನು ಹೋಗಲಾಡಿಸುತ್ತದಲ್ಲದೆ ಹಸಿವು ಜಾಸ್ತಿ ಮಾಡುವ ಗುಣ ಹೊಂದಿದೆ. ತುಂಬ ಚಳಿಯಿರುವ ಕಚೇರಿಗಳಲ್ಲಿ ಕೇಸರಿ ಬಣ್ಣದ ಬಟ್ಟೆ ಧರಿಸುವುದು ಉತ್ತಮ. ಏಕೆಂದರೆ ಕೇಸರಿಯು ನಿಮ್ಮನ್ನು ಹೆಚ್ಚು ಬೆಚ್ಚಗಿಡುತ್ತದೆ. 

ಕೆಂಪು

ಕೆಂಪು ಹೆಚ್ಚು ಎನರ್ಜಿ ಹಾಗೂ ಮಹತ್ವಾಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ. ಕೆಂಪು ಕೋಣೆಗಳಲ್ಲಿ ನಾವು ಹೆಚ್ಚು ಎಚ್ಚರದಿಂದಿರುವುದನ್ನು ಅಧ್ಯಯನಗಳು ದೃಢಪಡಿಸಿವೆ. ಇದು ಹೃದಯ ಬಡಿತ ಹಾಗೂ ರಕ್ತದೊತ್ತಡ ಹೆಚ್ಚಿಸುತ್ತದೆ. 

ಹಳದಿ

ಇದು ನೆನಪಿನ ಬಣ್ಣ ಎನ್ನಲಾಗುತ್ತದೆ. ಅದಕ್ಕೆನಾ ಸ್ಟಿಕ್ಕೀ ನೋಟ್ಸ್ ಹಳದಿ ಬಣ್ಣದಲ್ಲಿ ಬರುವುದು ಎಂದು ಕೇಳಬೇಡಿ ಮತ್ತೆ. ಇದು ಏಕಾಗ್ರತೆ ಹಾಗೂ ಸೆಲ್ಫ್ ಎಸ್ಟೀಮ್ ಹೆಚ್ಚಿಸುತ್ತದೆ. ಹೀಗಾಗಿ, ಅಧ್ಯಯನದ ಕೋಣೆಗಳಿಗೆ ಈ ಬಣ್ಣ ಹೇಳಿ ಮಾಡಿಸಿದ್ದು. ಹಳದಿ ಶೇಡ್ ಆರಿಸುವಾಗ ಸ್ಕೂಲ್ ಬಸ್ ಶೇಡ್ ಬದಲಿಗೆ ಸ್ವಲ್ಪ ತಿಳಿಯಾದ ಬಣ್ಣ ಆರಿಸಿ. 

ನೀಲಿ

ನೀಲಿಯಲ್ಲಿ ಮನಸ್ಸನ್ನು ಶಾಂತವಾಗಿಸುವ ಗುಣವಿದೆ. ಹಾಗಾಗಿಯೇ ಆಕಾಶ ಅಥವಾ ಸಮುದ್ರವನ್ನು ನೋಡಿದಾಗ ಮನಸ್ಸು ಶಾಂತವಾಗುತ್ತದೆ. ಇದು ರಕ್ತದೊತ್ತಡ, ಉಸಿರಾಟದ ವೇಗ ಹಾಗೂ ಹೃದಯಬಡಿತವನ್ನು ನಿಧಾನಗೊಳಿಸುತ್ತದೆ. ನೀಲಿ ಬಣ್ಣವನ್ನು ಆರೆಂಜ್‌ನೊಂದಿಗೆ ಮ್ಯಾಚ್ ಮಾಡಿ. ಕಚೇರಿಗೆ ಅತ್ಯುತ್ತಮ ಬಣ್ಣ.